X

ಮೈತ್ರಿ ಸರಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಕೀಲ..! ಅಂತ್ಯದತ್ತ ಸಮ್ಮಿಶ್ರ ಸರಕಾರ..?

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಗಳು ಉಂಟಾಗುತ್ತಲೇ ಇದೆ. ಕುಮಾರಸ್ವಾಮಿ ಅವರು ನೆಮ್ಮದಿಯಿಂದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡು ಸಿಎಂ ಪಟ್ಟ ಏರಿದ್ದರು. ಆದರೆ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಕುಮಾರಸ್ವಾಮಿ ಅವರಿಗೆ ಅಡೆತಡೆ ಉಂಟಾಗುತ್ತಿದ್ದು, ಇದೀಗ ಮೈತ್ರಿ ಸರಕಾರಕ್ಕೆ ಕುತ್ತು ಬೀಳುವ ಸಂಭವ ಎದುರಾಗಿದೆ. ಯಾಕೆಂದರೆ ಈಗಾಗಲೇ ಸಚಿವ ಸಂಪುಟ ರಚನೆಯ ವಿಚಾರವಾಗಿ ಅಸಮಧಾನಗೊಂಡ ಶಾಸಕರು ಒಂದೆಡೆ ಸರಕಾರದ ವಿರುದ್ಧ ಬಂಡಾಯ ಎದ್ದಿದ್ದರೆ, ಇತ್ತ ವಕೀಲರೊಬ್ಬರು ಸರಕಾರದ ವಿರುದ್ಧ ನೇರವಾಗಿ ಕೋರ್ಟ್ ಮೆಟ್ಟಿಲು ಏರಿದ್ದಾರೆ.!

ಬಿಜೆಪಿಯನ್ನು ಬದಿಗಿಟ್ಟು ಸರಕಾರ ರಚನೆಗೆ ಅವಕಾಶಕ್ಕೆ ವಿರೋಧ..!

ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷವನ್ನು ಬದಿಗಿಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್‌ ಗೆ ಸರಕಾರ ರಚನೆ ಮಾಡಲು ಅವಕಾಶ ಕೊಟ್ಟಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ಕೋರ್ಟ್ ಮೊರೆ ಹೋದ ಧಾರವಾಡ ಮೂಲದ ವಕೀಲ ನಾಮದೇವ್ ಎಂಬವರು , ರಾಜ್ಯಪಾಲರ ಆದೇಶವನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.‌ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಮೈತ್ರಿ ಪಕ್ಷಕ್ಕೆ ಅವಕಾಶ ಮಾಡಿಕೊಡಲಾಗಿದೆ,ಆದರೆ ಇದು ಭಾರತದ ಸಂವಿಧಾನವನ್ನೇ ಅಣಕು ಮಾಡಿದಂತಿದೆ ಎಂದು ದೂರಿದ್ದಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ , ರಾಜ್ಯಪಾಲರ ಆದೇಶವನ್ನು ಹಿಂಪಡೆಯುಂತೆ ಕೋರಿದ್ದಾರೆ.!

ನಾಮದೇವ್ ನೀಡಿದ ದೂರಿನ ಪ್ರಕಾರ ಕೋರ್ಟ್ ತನಿಖೆ ಆರಂಭಿಸಿದ್ದೇ ಆದಲ್ಲಿ ಮೈತ್ರಿ ಸರಕಾರಕ್ಕೆ ಕೊಕ್ಕೆ ಬೀಳುವುದು ಗ್ಯಾರಂಟಿ. ಯಾಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಮಾಡಿಕೊಂಡಿರುವುದು ಅಪವಿತ್ರ ಮೈತ್ರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈತ್ರಿಯ ಬಗ್ಗೆ ಸ್ವತಃ ಈ ಎರಡೂ ಪಕ್ಷಗಳಲ್ಲೇ ಅಸಮಧಾನವಿದ್ದು, ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಈಗಾಗಲೇ ಅನೇಕ ಶಾಸಕರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದು, ಒಂದೊಂದೇ ಕಂಟಕಗಳು ಕುಮಾರಸ್ವಾಮಿ ಸರಕಾರಕ್ಕೆ ಎದುರಾಗುತ್ತಿದೆ. ಆದ್ದರಿಂದ ವಕೀಲ ನಾಮದೇವ್ ಅವರು ಸಲ್ಲಿಸಿದ ಅರ್ಜಿಯಿಂದಾಗಿ ಮೈತ್ರಿ ಸರಕಾರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ..!

–ಅರ್ಜುನ್

Editor Postcard Kannada:
Related Post