ಪ್ರಚಲಿತ

ಅಮಿತ್ ಶಾ ಕರ್ನಾಟಕದಲ್ಲಿ ಎಲ್ಲೇ ಕಾಲಿಟ್ಟರೂ ತಕ್ಷಣ ಬಂಧಿಸಿ ಜೈಲಿಗಟ್ಟಿ: ಸಿದ್ದರಾಮಯ್ಯನಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ?!

ರಾಜಕಾರಣದಲ್ಲಿ ಸೇಡಿನ ರಾಜಕಾರಣವೊಂದು ಪ್ರಜ್ವಲಿಸಿದೆ!!

ದೇಶದೆಲ್ಲೆಡೆ ಬಿಜೆಪಿ ಅಲೆಯನ್ನು ಸಹಿಸಲಾರದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ. ಅದೇನಪ್ಪಾ ಅಂದರೆ ಒಂದು ವೇಳೆ ಅಮಿತ್ ಶಾ ರಾಜ್ಯಕ್ಕೆ ಕಾಲಿಟ್ಟರೆ ಅವರನ್ನು ತಕ್ಷಣ ಬಂಧಿಸಬೇಕು ಎನ್ನುವ ಹುಕುಂ ಅನ್ನು ಸಿದ್ದರಾಮಯ್ಯ ಹೊರಡಿಸಿದ್ದು, ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಚುನಾವಣೆಯ ಸಮಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರಾಜ್ಯ ಪ್ರವೇಶವನ್ನು ನಿಷೇಧ ಮಾಡಲು ರಾಜ್ಯ ಸರಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯನವರ ಮಾಸ್ಟರ್ ಪ್ಲಾನ್ ಪ್ರಕಾರ, ವಿಶ್ವ ಹಿಂದೂ ಪರಿಷತ್‍ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾಗೆ ಹೇಗೆ ಈ ಹಿಂದೆ ಮಂಗಳೂರು ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತೋ ಅದೇ ರೀತಿಯಾಗಿ ಅಮಿತ್ ಶಾ ಅವರ ಕರ್ನಾಟಕ ಪ್ರವೇಶವನ್ನು ನಿಷೇಧಿಸಲು ಸರ್ಕಾರ ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆಯೋ ಎನ್ನುವ ಬಗ್ಗೆ ಬಲವಾದ ಅನುಮಾನವೊಂದು ಮೂಡಿದ್ದು, ರಾಜಕಾರಣದಲ್ಲಿ ಸೇಡಿನ ರಾಜಕಾರಣವೊಂದು ಪ್ರಜ್ವಲಿಸಿದೆಯೇ ಎನ್ನುವ ಬಗ್ಗೆ ಪ್ರಶ್ನೆಯೊಂದು ಮೂಡಿದೆ.

ಈ ಅನುಮಾನ ಮೂಡಲು ಕಾರಣವೂ ಇದೆ. ಅದೇನೆಂದರೆ ಪರಿಷತ್ ಸದಸ್ಯ ಉಗ್ರಪ್ಪನವರು ಮಂಗಳವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನೇರವಾಗಿ ಈ ವಿಚಾರವನ್ನು ತಿಳಿಸದೇ ಇದ್ದರೂ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಕರಣ, ಗುಜರಾತಿನ ಕೋಮು ಗಲಾಟೆಯ ವಿಚಾರವನ್ನು ಪ್ರಸ್ತಾಪ ಮತ್ತು ತೊಗಾಡಿಯ ಪ್ರಕರಣವನ್ನು ಉಲ್ಲೇಖಿಸಿ ಇದೇ ಅರ್ಥ ಬರುವಂತೆ ಉತ್ತರಿಸಿದ್ದರಿಂದ ಈ ಪ್ರಶ್ನೆಯೊಂದು ಎದ್ದಿದೆ. ಅಮಿತ್ ಶಾ ರಾಜ್ಯಕ್ಕೆ ಪ್ರವೇಶಿಸುತ್ತಿದ್ದಂತೆ ಅವರನ್ನು ಬಂಧಿಸಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಮಾಡಲು ತೆರೆಮರೆಯಲ್ಲಿ ರಹಸ್ಯ ಕಾರ್ಯವೊಂದು ನಡೆಯುತ್ತಿರುವ ಬಗ್ಗೆ ಅನುಮಾನವೊಂದು ಮೂಡಿದೆ.

ಅಷ್ಟಕ್ಕೂ ಅಮಿತ್ ಶಾ ಬಂಧನ ಯಾಕೆ ಗೊತ್ತೇ?

ಮೈಸೂರಿನಲ್ಲಿ ನಡೆದ ಘಟನೆಗೆ ಅಮಿತ್ ಶಾ ನೇರ ಕಾರಣವಾಗಿದ್ದಾರೆ ಎಂದು ನಂಬಿರುವ ಕಾಂಗ್ರೆಸಿಗರು ಅವರನ್ನೇ ಟಾರ್ಗೆಟ್ ಮಾಡಲು ಹೊರಟಿದ್ದಾರೆ.
ಗುಜರಾತ್‍ನಲ್ಲಿ ಬೆಂಕಿ ದೊಂಬಿ, ನಕಲಿ ಎನ್‍ಕೌಂಟರ್ ಕೋಮುಗಲಾಟೆ ನಡೆಸಲು ಕಾರಣರಾಗಿದ್ದಾರೆ ಎಂದು ಅಮಿತ್ ಶಾ ಅವರನ್ನು ಟಾರ್ಗೆಟ್ ಮಾಡಿ ಬಂಧನ ಬಾಣ ಹೂಡಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಬಿಜೆಪಿಯ ಅಧ್ಯಕ್ಷರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಪ್ರತಾಪ್ ಸಿಂಹ ಅವರೇ ಅಮಿತ್ ಶಾ ಅವರು ಟಿಯರ್ ಗ್ಯಾಸ್ ಬಗ್ಗೆ ಹೇಳಿರುವುದನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ. ಚುನಾವಣೆ ಸಮಯದಲ್ಲಿ ಶಾಂತಿ ಕದಡಲು ಅಮಿತ್ ಶಾ ರಾಜ್ಯ ನಾಯಕರಿಗೆ ಪ್ರೇರಣೆ ನೀಡುತ್ತಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ನಡೆದಿರುವ ಪ್ರತಿಭಟನೆಗೆ ಅಮಿತ್ ಶಾ ಕುಮ್ಮಕ್ಕು ಕಾರಣವಾಗಿದ್ದು, ಅವರ ಮೇಲೂ ಪ್ರಕರಣ ದಾಖಲಿಸಬೇಕು ಎನ್ನುವುದು ಉಗ್ರಪ್ಪನವರ ವಾದವಾಗಿದ್ದು, ಅದನ್ನೇ ಅಸ್ತ್ರವಾಗಿಸಿಕೊಂಡು ಅಮಿತ್ ಶಾ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಅಮಿತ್ ಶಾ ರಾಜ್ಯದ ಎಲ್ಲಾದರೂ ಕಾಲಿಟ್ಟರೆ ಜಿಲ್ಲಾಧಿಕಾರಿಗಳಿಗೆ ಬಂಧಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದೆ.

ಈ ವೇಳೆ ಅಮಿತ್ ಶಾ ಅವರ ರಾಜ್ಯ ಪ್ರವೇಶಕ್ಕೆ ನೀವು ನಿರ್ಬಂಧ ಹೇರುತ್ತಿರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ, ಉತ್ತರಿಸಿದ ಅವರು ತೊಗಾಡಿಯಾ ಪ್ರಕರಣದಲ್ಲಿ ಕೋಮು ಸೌಹಾರ್ದ ಕದಡುವ ವ್ಯಕ್ತಿಗಳಿಗೆ ಪ್ರವೇಶ ನೀಡುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಆಯಾ ಜಿಲ್ಲಾಡಳಿತ ಕೈಗೊಳ್ಳಬಹುದು ಎಂದು ಸ್ಪಷ್ಟವಾಗಿ ಸೂಚಿಸಿದೆ ಎಂದು ತಿಳಿದುಬಂದಿದೆ. ನಾವು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಜಿಲ್ಲಾಡಳಿತದ ಆ ನಿರ್ಧಾರವನ್ನು ಸರ್ಕಾರ ಮತ್ತು ಕೋರ್ಟ್ ಮಧ್ಯೆ ಪ್ರವೇಶಿಸಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಆದ್ದರಿಂದ ರಾಜ್ಯದ ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಬಳಸಿಕೊಂಡು ಅಮಿತ್ ಶಾ ಅವರನ್ನು ಬಂಧಿಸಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಉಗ್ರಪ್ಪ ನೀಡಿದ ಉತ್ತರದಂತೆಯೇ, ತೊಗಾಡಿಯಾಗೆ ಈ ಹಿಂದೆ ಮಂಗಳೂರು ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು, ಅದೇ ರೀತಿಯಾಗಿ ಅಮಿತ್ ಶಾಗೆ ನಿಷೇಧ ಹೇರುತ್ತಿರಾ ಎನ್ನುವ ಮರು ಪ್ರಶ್ನೆಗೆ, ಕೋಮುಗಲಾಟೆ ಸೃಷ್ಟಿಸುವ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸುವ ಅಧಿಕಾರ ಇರುವುದು ಜಿಲ್ಲಾಡಳಿತಕ್ಕೆ. ಈ ಕಾರಣಕ್ಕೆ ನಾನು ತೊಗಾಡಿಯಾ ಪ್ರಕರಣವನ್ನು ಉಲ್ಲೇಖಿಸಿದ್ದು ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಮಿತ್ ಶಾ ಅವರು ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ. ಇದರಿಂದ ರಾಜ್ಯದಲ್ಲಿ ಬಿಜೆಪಿ ಅಲೆ ಉಂಟಾಗಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವ ಸಲುವಾಗಿ ಅಮಿತ್ ಶಾ ಅವರ ಬಂಧನದ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದರಿಂದ ರಾಜ್ಯದಲ್ಲಿ ಮತ್ತೊಂದು ಗಲಾಟೆ ನಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಗುಜರಾತ್ ಗಲಭೆಯ ಬಗ್ಗೆ ಅಮಿತ್ ಶಾ ಅವರಿಗೆ ತನಿಖಾ ಸಂಸ್ಥೆಗಳು ಕ್ಲೀನ್‍ಚಿಟ್ ನೀಡಿದೆ. ಅಲ್ಲದೆ ಅಮಿತ್ ಶಾ ಅವರಿಗೆ ದೇಶದೆಲ್ಲೆಡೆ ಭಾರೀ ಜನಬೆಂಬಲ ಇದ್ದು, ಒಂದು ವೇಳೆ ಅವರನ್ನು ಬಂಧಿಸಿದ್ದೇ ಆದರೆ ರಾಜ್ಯದ ಸಾಮರಸ್ಯ ಕದಡುವ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಒಂದು ವೇಳೆ ಸಾಮರಸ್ಯ ಕದಡಿದರೆ ಅದನ್ನು ಬಿಜೆಪಿಯ ತಲೆಗೆ ಕಟ್ಟಿಕೊಂಡು ಜನರಿಗೆ ಬಿಜೆಪಿಯ ಬಗ್ಗೆ ನಿರ್ಲಕ್ಷ್ಯ ಉಂಟಾಗುವಂತೆ ಮಾಡಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹಗಲುಕನಸು ಕಾಣುತ್ತಿರುವುದು ಇದರಿಂದ ಬೆಳಕಿಗೆ ಬಂದಂತಾಗಿದೆ.

ಹನುಮ ಜಯಂತಿಯ ನೆಪದಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಟಾರ್ಗೆಟ್ ಮಾಡಿ ವಿನಾಕಾರಣ ಬಂಧಿಸಲಾಗಿತ್ತು. ಇದೇ ತಂತ್ರವನ್ನು ಅಮಿತ್ ಶಾ ಅವರ ಮೇಲೂ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ. ಆದರೆ ಕಾಂಗ್ರೆಸ್‍ನ ಈ ನಿರ್ಧಾರ ಕಾಂಗ್ರೆಸ್‍ಗೇ ಮುಳುವಾಗುವ ಸಾಧ್ಯತೆ ಇದ್ದು, ಇದರಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆ ಇದೆ. ಅಧಿಕಾರಿಗಳನ್ನು ಬಳಸಿಕೊಂಡು ಸೇಡಿನ ರಾಜಕಾರಣಕ್ಕೆ ಮುಂದಾಗಿರುವ ಕಾಂಗ್ರೆಸ್‍ನ ಈ ನಿರ್ಧಾರಕ್ಕೆ ಸರ್ವತ್ರ ಖಂಡನೆ ವ್ಯಕ್ತವಾಗಿದ್ದು, ಈ ಸ್ಫೋಟಕ ಸುದ್ದಿಯಿಂದ ಅಲ್ಲೋಲಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ಅಮಿತ್ ಶಾ ಅವರನ್ನು ಬಂಧಿಸುವ ತಾಖತ್ತು ಈ ಕಾಂಗ್ರೆಸ್‍ಗೆ ಇದೆಯಾ ಎನ್ನುವ ಇನ್ನೊಂದು ಪ್ರಶ್ನೆಯೂ ಮೂಡಿದೆ. ಒಟ್ಟಿನಲ್ಲಿ ಮುಂದೇನಾಗಬಹುದು ಎಂಬ ಪ್ರಶ್ನೆ ಉಂಟಾಗಿದ್ದು, ತೀವ್ರ ಕುತೂಹಲ ಉಂಟಾಗಿದೆ.

Source: http://publictv.in/cm-siddaramaiah-governments-plan-to-ban-amit-shah-entering-karnataka-during-assembly-elections/

-ಚೇಕಿತಾನ

Tags

Related Articles

Close