ಅಂಕಣಪ್ರಚಲಿತರಾಜ್ಯ

ಅಯ್ಯೋ ಮೂರ್ಖರೇ!!! ತಾನು ಓದಿದ ಶಾಲೆಯ ಸಮಸ್ಯೆಯನ್ನು ಪರಿಹರಿಸಲಾಗದ ಸಿದ್ದರಾಮಯ್ಯನವರು ರಾಜ್ಯದ ಸಮಸ್ಯೆಯನ್ನು ಆಲಿಸಿಯಾರೇ ??

ಅವರು ಬದುಕಲು ಶಕ್ತರಾಗಿರಲೀ, ಅಶಕ್ತರಾಗಿರಲಿ, ಆದರೆ ನಿಮ್ಮಿಂದ ಅವರಿಗೆ ಮತ ಸಿಗಬೇಕು ಅಷ್ಟೇ. ಹಾಗಿದ್ದರೆ ನಿಮಗೆ ಬೇಕಾದ ಎಲ್ಲಾ ಸೌಲಭ್ಯವೂ ಉಚಿತವಾಗಿ ಸಿಗುತ್ತದೆ. ಆದರೆ ಉಳಿದವರಿಗೆ ಖಾಲಿ ತಟ್ಟೆ, ಅವು ಹಸಿದ ಹೊಟ್ಟೆಯಲ್ಲೇ ಜೀವನವನ್ನು ಕಳೆಯಬೇಕು. ಇದು ಯಾವದೋ ಕಥೆಯಲ್ಲ ಸ್ವಾಮೀ, ನಮ್ಮ ಕರ್ನಾಟಕ ರಾಜ್ಯದ ಪ್ರಸ್ತುತ ಸನ್ನಿವೇಶದ ವಾಸ್ತವ ಸಂಗತಿ.

ನಮ್ಮ ರಾಜ್ಯದ ಘನ ಸರಕಾರ ಹಾಲಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯನವರ ಆಡಳಿತದ ವೈಖರಿಯಿದು. ಪ್ರತೀ ಭಾಷಣದಲ್ಲೂ, ಪ್ರತೀ ಸಂದರ್ಶನದಲ್ಲೂ ಮಾತಾಡುವುದು ಶೋಷಿತರ ವರ್ಗ, ದಲಿತರು, ಅಹಿಂದದ ಕುರಿತಾಗಿ ಹೊರತು ನಮ್ಮ ಪ್ರಜೆಗಳ ಪಾಲನೆ, ರಕ್ಷಣೆ ಇತ್ಯಾದಿ ವಾಕ್ಯಗಳು ಶಬ್ದಗಳು ಹೊರಬರುವುದೇ ಇಲ್ಲ. ಹೋಗಲಿ ಬಿಡಿ. ನಮಗೆಲ್ಲಾ ಅದರ ಬಗ್ಗೆ ಸಾಕಷ್ಟು ಅರಿವಿದೆ. ಆದರೆ ಈಗ ನಾವು ಹೇಳಹೊರಟಿರುವುದು ಅವರು ಕಲಿತ
ಶಾಲೆಯಲ್ಲೇ ಮೀಸಲಾತಿಯ ಕುರಿತಾಗು ಭುಗಿಲೆದ್ದ ವಿಚಾರದ ಕುರಿತು.!! ರಾಜ್ಯದಲ್ಲಿ ಮೀಸಲಾತಿಯ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿದ್ದೇವೆಂದು ಬೊಬ್ಬಿಡುವ ಸರಕಾರ, ತಾನು ಕಲಿತ ಶಾಲೆಯಲ್ಲಿ ಆ ವಿಚಾರದ ಕುರಿತಾಗಿಯೇ ವಿವಾದ .. ಎಂತಹ ವಿಪರ್ಯಾಸ ನೋಡಿ.

ಸಿಎಂ ಸಿದ್ದರಾಮಯ್ಯ ಓದಿದ ಶಾಲೆ ಮತ್ತೆ ಅಸ್ಪೃಶ್ಯತೆ ವಿಚಾರವಾಗಿ ಸುದ್ದಿಯಾಗುತ್ತಿದೆ. ಸಿಎಂ ಹುಟ್ಟೂರು ಸಿದ್ದರಾಮನಹುಂಡಿ ಪಕ್ಕದಲ್ಲಿನ ಕುಪ್ಪೆಗಾಲ ಸರ್ಕಾರಿ ಶಾಲೆಯಲ್ಲಿ ಸಿಎಂ ಓದಿದ್ದರು. ಇದೇ ಶಾಲೆಯಲ್ಲಿ ಈಗ ಮತ್ತೆ ಅಸ್ಪೃಶ್ಯತೆ ಮರುಕಳಿಸಿದೆ.

ಶಾಲೆಯ ಅಡುಗೆ ಸಹಾಯಕ ಹುದ್ದೆಗೆ ಪರಿಶಿಷ್ಟ ಜಾತಿಯವರು ಅರ್ಜಿಯನ್ನೇ ಹಾಕುತ್ತಿಲ್ಲ. ಅರ್ಜಿ ಹಾಕಲು ಮುಂದೆಯೂ ಬರುತ್ತಿಲ್ಲ. ಈ ಹುದ್ದೆ ಇರೋದು ಪರಿಶಿಷ್ಟ ಜಾತಿಯ ಮಹಿಳೆಯರಿಗಾಗಿ ಮಾತ್ರ. ಈ ವರ್ಷದ ಶೈಕ್ಷಣಿಕ ವರ್ಷದ ಆರಂಭದಿಂದಲೂ ಹುದ್ದೆ ಖಾಲಿಯಿದೆ.

ಜೂನ್ ತಿಂಗಳಿನಲ್ಲಿ ಅಡುಗೆ ಸಹಾಯಕಿ ಹುದ್ದೆ ತೊರೆದು ಹೋಗಿದ್ದರು. ನಂತರ ಆ ಜಾಗಕ್ಕೆ ಅನಧಿಕೃತವಾಗಿ ಸರ್ವಣಿಯ ಮಹಿಳೆಯನ್ನು ನೇಮಕ ಮಾಡಲಾಗಿತ್ತು. ಈ ವಿಚಾರಕ್ಕೆ ಅಸಮಾಧಾನಗೊಂಡ ಗ್ರಾಮದ ದಲಿತ ಸಮುದಾಯ ಅರ್ಜಿ ಹಾಕಲು ಮುಂದೆ ಬರುತ್ತಿಲ್ಲ. ಆದರೆ, ಕೆಲ ಮುಖಂಡರ ಪ್ರಕಾರ ಅರ್ಜಿ ಸಲ್ಲಿಸಲು ಕೆಲವರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. 1000 ದಲಿತರಿರುವ ಗ್ರಾಮದಿಂದ ಒಂದೂ ಅರ್ಜಿ ಬಂದಿಲ್ಲ. ನಾವು ದಲಿತರನ್ನು ಬಿಟ್ಟು ಬೇರೆ ಜಾತಿಯವರು ನೇಮಕಕ್ಕೆ ಮುಂದಾಗಿಲ್ಲ ಎಂದು ದಲಿತ ಮುಖಂಡರ ಆರೋಪವನ್ನು ಶಾಲಾ ಮುಖ್ಯ ಶಿಕ್ಷಕ ತಳ್ಳಿ ಹಾಕಿದ್ದಾರೆ.

ಈ ಹಿಂದೆ ದಲಿತರು ಅಡುಗೆ ಮಾಡಿ ಬಡಿಸುತ್ತಾರೆ ಎಂದು ಸರ್ವಣಿಯರು ತಕರಾರು ತೆಗೆದಿದ್ದರಿಂದ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಹಲವು ಬೆಳವಣಿಗೆ ನಂತರ ಪರಿಸ್ಥಿತಿ ತಿಳಿಗೊಂಡು ಶಾಲೆಯಲ್ಲಿ ದಲಿತ ಅಡುಗೆ ಸಹಾಯಕರು ಕೆಲಸ ನಿರ್ವಹಿಸಿದ್ದರು. 2014ರಲ್ಲಿ ನಡೆದಿದ್ದ ಘಟನೆಯಿಂದ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈಗ ಮತ್ತೆ ಸರ್ವಣಿಯರ ನೇಮಕದಿಂದ ಅಸ್ಪೃಶ್ಯತೆ ಆಚರಣೆಯ ಆರೋಪ ಕೇಳಿಬಂದಿದೆ.

ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಅವರು ಓದಿದ ಕುಪ್ಪೇಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಹಿಳೆಯೊಬ್ಬರು ಅಡುಗೆ ಸಹಾಯಕಿಯಾಗಿ ನೇಮಕಗೊಂಡ ಪರಿಣಾಮವಾಗಿ ಸವರ್ಣೀಯ ಮಕ್ಕಳು ಬಿಸಿಯೂಟ ಬಹಿಷ್ಕರಿಸಿದ್ದರು. ಕೆಲವು ಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿದ್ದರು. .

ಶಾಲೆಗೆ ಮಕ್ಕಳು ಗೈರು :

ಇದೇ ಕಾರಣಕ್ಕೆ ಕುಪ್ಪೇಗಾಲದ ಶಾಲೆಯಲ್ಲಿ ಸವರ್ಣೀಯ ಸಮುದಾಯದ ಬಹಳಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶಾಲೆಗೆ ಬಂದಿದ್ದ ಕೆಲವು ವಿದ್ಯಾರ್ಥಿಗಳು ಬಿಸಿಯೂಟ ಮಾಡಲಿಲ್ಲ. ಶಾಲೆಯ ಒಟ್ಟು 150 ವಿದ್ಯಾರ್ಥಿಗಳಲ್ಲಿ 110 ಮಕ್ಕಳು ಮಾತ್ರ ಹಾಜರಾಗಿದ್ದರು.ಈಗ ಮಗದೊಮ್ಮೆ ಆ ಸಮಸ್ಯೆಗಳು ಪ್ರಾರಂಭವಾಗಿವೆ. ಆದರೆ ಅದಕ್ಕೆ ಪರಿಹಾರ ಮಾತ್ರ ಇನ್ನೂ ಆಗಿಲ್ಲ.

ಒಟ್ಟಾರೆಯಾಗಿ ತನ್ನ ರಾಜ್ಯದ ಪ್ರಜೆಗಳಿಗೆ ಬಿಡಿ, ಕನಿಷ್ಠ ಪಕ್ಷ ತಾನು ಕಲಿತ ಶಾಲೆಗಾದರೂ ಒಳಿತನ್ನು ಮಾಡಿದ್ದಾರಾ ಎಂದು ಕೇಳಿದರೆ, ಅದಕ್ಕೆ ಉತ್ತರ ಇಲ್ಲವೆಂಬುದಾಗಿಯೇ ಆಗಿದೆ. ತಾನು ಕಲಿತ ಶಾಲೆಗೇ ನ್ಯಾಯವನ್ನು ಒದಗಿಸಲಾರದವರಿಂದ ನಾವು ಏನನ್ನು ತಾನೇ ನಿರೀಕ್ಷಿಸಬಹುದು?? ಮುಗ್ಧಮಕ್ಕಳನ್ನು ಹಸಿವಿನ ಕೂಪಕ್ಕೆ ತಳ್ಳುವಂತಹ ಮಹಾನ್ ಯೋಜನೆಗಳು ಮಾತ್ರ!!! ದುರಂತವೆಂದರೆ ಇದೇ ಅಲ್ವಾ??!!

– ಆತ್ಮಿಕಾ

Tags

Related Articles

Close