ಪ್ರಚಲಿತ

ಉತ್ತರ ಕೊರಿಯಾದ ಪರಮಾಣು ಬೆದರಿಕೆಯನ್ನು ಮುಂದಿಟ್ಟು ಭಾರತ ಪಾಕಿಸ್ತಾನದ ಮಾನ ಹರಾಜು ಹಾಕಿದ್ದು ಹೇಗೆ ಗೊತ್ತೇನು?!!!!

ಪಾಕಿಸ್ತಾನವನ್ನು ಭಯೋತ್ಪಾದಕರನ್ನು ಉತ್ಪಾದಿಸುವ ರಾಷ್ಟ್ರ ಎಂದು ಇಡೀ ಜಗತ್ತಿಗೆ ಗೊತ್ತುಪಡಿಸಿದ್ದ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಇದೀಗ
ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದೆ. ಸತತವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಇಡೀ ಜಗತ್ತಿಗೇ ಮಾರಕವಾಗಿರುವ `ಉತ್ತರ ಕೊರಿಯಾ’ವನ್ನು
ಮುಂದಿಟ್ಟುಕೊಂಡು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನವನ್ನು ಭಾರತ ಹರಾಜು ಮಾಡಿದೆ.

ನೂರಾರು ಉಗ್ರ ಸಂಘಟನೆಗಳನ್ನು ಪೋಷಿಸಿ ಅವರಿಂದ ಜಗತ್ತಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಮಾಡಿಸುವ ಪಾಕಿಸ್ತಾನದ ಕರಾಳ ಕೃತ್ಯದಿಂದ ಇಂದು ವಿಶ್ವವೇ
ಶಾಂತಿಯನ್ನು ಕಳೆದುಕೊಂಡಿದೆ. ಇಂತಹಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಜಗತ್ತಲ್ಲಿ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ.
ಭಯೋತ್ಪಾದನೆಯಿಂದಾಗಿ ಜಾಗತಿಕವಾಗಿ ಭಯದ ವಾತಾವರಣ ಇರುವಂತೆ ಇದೀಗ ಇಡೀ ಜಗತ್ತಿಗೆ ಮತ್ತೊಂದು ಕಂಟಕ ಎದುರಾಗಿದೆ. ಅದೇ ಉತ್ತರ ಕೊರಿಯಾ…

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಂಗ್ ಉನ್ ಪರಮಾಣು ತಂತ್ರಜ್ಞಾನವನ್ನು ಬಳಸಿಕೊಂಡು ಅಮೆರಿಕಾ, ಜಪಾನ್, ದಕ್ಷಿಣ ಸೇರಿ ಇಡೀ ಜಗತ್ತನೇ ಸುಡುತ್ತೇನೆ ಎಂದು ಭಯ ಹುಟ್ಸಿಸುತ್ತಲೇ ಇದ್ದಾನೆ. ಕಿಮ್ ಇಂಥಹಾ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಈ ಸತ್ಯವನ್ನು ಯಶಸ್ವಿಯಾಗಿ ಜಗತ್ತಿಗೆ ತಿಳಿಸುವ ಮೂಲಕ ಭಾರತ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವಂತೆ ಉತ್ತರ ಕೊರಿಯಾ ಹಾಗೂ ಪಾಕಿಸ್ತಾನವನ್ನು ಹೊಡೆಯಲು ಸಿದ್ಧವಾಗಿದೆ.

ಈ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದು ಯಾರು ಗೊತ್ತಾ? ಭಾರತದ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್….!

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲೆಂದು ಅಮೆರಿಕಕ್ಕೆ ತೆರಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಅಮೆರಿಕ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್ಸನ್ ಮತ್ತು ಜಪಾನ್ ವಿದೇಶಾಂಗ ಸಚಿವ ಟಾರೋ ಕೋನೋ ಜತೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಉತ್ತರ ಕೊರಿಯಾದ ಅಣ್ವಸ್ತ್ರ ನಿಗ್ರಹಕ್ಕೂ ಮುನ್ನ, ಆ ದೇಶಕ್ಕೆ ಅಣು ತಂತ್ರಜ್ಞಾನ ಕೊಟ್ಟವರ್ಯಾರು ಎಂಬ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚಬೇಕು. ಇಂದಿನ ಆತಂಕದ ಪರಿಸ್ಥಿತಿಗೆ “ಅವರನ್ನೇ’ ಹೊಣೆ ಮಾಡಿ, ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ರಾಜತಾಂತ್ರಿಕ ಸೂಕ್ಷ್ಮತೆಯಲ್ಲಿ ಪಾಕಿಸ್ತಾನದ ಹೆಸರೆತ್ತದೇ ಅಣು ತಂತ್ರಜ್ಞಾನ ಸೋರಿಕೆಯ ವಿಚಾರ ಪ್ರಸ್ತಾಪಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಯವಂಚಕ ಪಾಕಿಸ್ತಾನಕ್ಕೆ ಮತ್ತೂಂದು ಆಘಾತ ನೀಡಿದ್ದಾರೆ. ಈ ಬಗ್ಗೆ ಸ್ವತಃ ವಿದೇಶಾಂಗ ವಕ್ತಾರ ರವೀಶ್‍ಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್ 3 ರಂದು ಉತ್ತರ ಕೊರಿಯಾ ಪ್ರಬಲ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು, ಇದರಿಂದಾಗಿ ಕೃತಕವಾಗಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದು ಆ ದೇಶದ ಆರನೇ ಅಣ್ವಸ್ತ್ರ ಪರೀಕ್ಷೆಯಾಗಿದ್ದು, ಇದೇ ಅತ್ಯಂತ ಪ್ರಬಲ ಬಾಂಬ್ ಎಂದೇ ಪರಿಗಣಿಸಲಾಗಿದೆ. ಈ ಬಾಂಬ್‍ನ ಪರೀಕ್ಷೆ ನಂತರ, ವಿಶ್ವಸಂಸ್ಥೆ ಕೂಡ ಉತ್ತರ ಕೊರಿಯಾ ಮೇಲೆ ದಿಗ್ಬಂಧನ ಹೇರಿದೆ. ವಿಚಿತ್ರವೆಂದರೆ, ಚೀನಾ ಮತ್ತು ರಷ್ಯಾದ ಅಭಯ ಇರಿಸಿಕೊಂಡಿರುವ ಉತ್ತರ ಕೊರಿಯಾ ಈ ದಿಗ್ಬಂಧನಕ್ಕೆ ಕ್ಯಾರೇ ಎಂದಿಲ್ಲ.

ಜಾಗತಿಕವಾಗಿ ಸದ್ಯ ಉತ್ತರ ಕೊರಿಯಾ ಎಲ್ಲರ ತಲೆನೋವಾಗಿ ಪರಿಣಮಿಸಿದೆ. ರಷ್ಯಾ ಮತ್ತು ಚೀನಾ ಉತ್ತರ ಕೊರಿಯಾಗೆ ಬೆಂಬಲ ನೀಡಿದರೂ, ಅಣ್ವಸ್ತ್ರದ
ವಿಚಾರದಲ್ಲಿ ಏನೂ ಮಾಡುವಂತಿಲ್ಲ. ಹೀಗಾಗಿ ಇದೇ ಸರಿಯಾದ ವೇಳೆ ಎಂದು ಭಾವಿಸಿದ ಭಾರತ, ಪಾಕಿಸ್ತಾನದ ಬೆನ್ನುಮೂಳೆ ಮುರಿಯಲು ಹೊರಟಿದೆ. ಅಲ್ಲದೆ ಈ ಹಿಂದೆ ಪಾಕಿಸ್ತಾನ ಅಣು ಯೋಜನೆಯ ಮುಖ್ಯಸ್ಥ ಎ.ಕ್ಯೂ.ಖಾನ್, ಉತ್ತರ ಕೊರಿಯಾಗೆ ಅಣು ತಂತ್ರಜ್ಞಾನ ಮಾರಾಟ ಮಾಡಿದ್ದು, ಜಗಜ್ಜಾಹೀರಾಗಿದೆ. ಈಗ ಉತ್ತರ ಕೊರಿಯಾಗೆ ಅಣು ತಂತ್ರಜ್ಞಾನ ಸೋರಿಕೆ ಮಾಡಿದವರ ವಿರುದ್ಧ ತನಿಖೆ ನಡೆಸಿದರೆ, ಪಾಕಿಸ್ತಾನವೇ ಸಿಕ್ಕಿಬೀಳುವುದು ಗ್ಯಾರಂಟಿ. ಒಂದು ವೇಳೆ ತನಿಖೆ ನಡೆಸಿ, ಪಾಕ್ ತಪ್ಪಿತಸ್ಥನೆಂದು ಕಂಡು ಬಂದು ಶಿಕ್ಷೆಗೆ ಗುರಿಯಾದರೆ ಭಾರತಕ್ಕೆ ಅದು ಅಭೂತಪೂರ್ವ ಗೆಲುವಾಗುತ್ತದೆ. ಅಲ್ಲದೆ ಉತ್ತರ ಕೊರಿಯಾ ಮತ್ತು ಪಾಕಿಸ್ತಾನದಂಥ ದೇಶಗಳನ್ನು ರಾಜಾರೋಷವಾಗಿಯೇ ಬೆಳೆಸುತ್ತಿರುವ ಚೀನಾಗೂ ತಕ್ಕ ಉತ್ತರ ನೀಡಿದಂತೆ ಆಗುತ್ತದೆ.

1990ರಲ್ಲಿ ಮಾರಕ ಅಣ್ವಸ್ತ್ರ ತಂತ್ರಜ್ಞಾನವನ್ನು ಪಡೆಯಲು ಪಾಕಿಸ್ತಾನದ ಉನ್ನತ ಸೇನಾಧಿಕಾರಿಗಳಿಗೆ ಉತ್ತರ ಕೊರಿಯಾ ಲಂಚ ನೀಡಿದೆ ಎಂಬ ಸ್ಫೋಟಕ
ಸತ್ಯವನ್ನು ಪಾಕ್‍ನ ಅಣು-ಬಾಂಬ್ ಸಂಸ್ಥಾಪಕ ಅಬ್ದುಲ್ ಖಾದೀರ್ ಖಾನ್ 2011ರಲ್ಲಿ ಬಹಿರಂಗಗೊಳಿಸಿದ ಸಂಗತಿಯನ್ನು ವಾಷಿಂಗ್ಟನ್ ಫೆÇೀಸ್ಟ್ ವರದಿ ವರದಿ ಮಾಡಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಎಚ್ಚರಿಕೆ ನಡುವೆಯೂ ಈವರೆಗೆ ಐದು ಅಪಾಯಕಾರಿ ಅಣು-ಬಾಂಬ್ ಪರೀಕ್ಷೆಗಳನ್ನು ನಡೆಸಿ ಏಷ್ಯಾ ಪಾಂತ್ರದಲ್ಲಿ ಕಳವಳ ಸೃಷ್ಟಿಸುತ್ತಿರುವ ಉ. ಕೊರಿಯಾ ಇಂದು ಇಡೀ ವಿಶ್ವಕ್ಕೇ ಸವಾಲು ಒಡ್ಡುತ್ತಿದೆ.

ಎನ್‍ಎಸ್ ಜಿ ಸದಸ್ಯತ್ವ ಪಡೆಯಲು ಯತ್ನಿಸುತ್ತಿರುವ ಪಾಕಿಸ್ತಾನ ನಿಯಮ ಉಲ್ಲಂಘಿಸಿ ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ಮಾರಾಟ ಮಾಡಿದೆ. ಪಾಕಿಸ್ತಾನದ ಶಕ್ತಿ
ಆಯೋಗ (ಪಿಎಇಸಿ) ನಿರಂತರವಾಗಿ ಉತ್ತರ ಕೊರಿಯಾಕ್ಕೆ ಅಣ್ವಸ್ತ್ರ ತಯಾರಿ ವಸ್ತುಗಳ ಸರಬರಾಜು ಮಾಡುತ್ತಿದೆ ಎಂದು ಅಣ್ವಸ್ತ್ರಗಳ ಮಾರಾಟದ ಮೇಲೆ ನಿಗಾ ವಹಿಸುವ ವಿಶ್ವಸಂಸ್ಥೆಯ ತಂಡದಲ್ಲಿರುವ ಉನ್ನತ ಮೂಲಗಳು ತಿಳಿಸಿದ್ದವು. ಚೀನಾದ ಅಣು ಶಕ್ತಿ ಪ್ರಾಧಿಕಾರ (ಸಿಎಇಎ)ದಿಂದ ಪಾಕಿಸ್ತಾನದ ಪಿಎಇಸಿಗೆ
ಸರಬರಾಜಾಗುವ ವಸ್ತುಗಳು ಅಕ್ರಮ ಮಾರ್ಗದ ಮೂಲಕ ಉತ್ತರ ಕೊರಿಯಾ ತಲುಪುತ್ತಿದೆ. ಈ ಸಂಬಂಧ ಸಿಎಇಎಗೆ ಇತ್ತೀಚೆಗೆ ದೂರು ಸಹ ದಾಖಲಾಗಿತ್ತು.
ಚೀನಾದ ಬೀಜಿಂಗ್ ಸನ್‍ಟೆಕ್ ಟೆಕ್ನಾಲಜೀಸ್ ಕಂಪನಿ ಪಾಕಿಸ್ತಾನಕ್ಕೆ ಕಳುಹಿಸಿದ ಅಣ್ವಸ್ತ್ರ ತಯಾರಿ ವಸ್ತುಗಳನ್ನು ಪಾಕಿಸ್ತಾನದ ಅಧಿಕಾರಿಗಳು ಉತ್ತರ ಕೊರಿಯಾಕ್ಕೆ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಈ ವಿಷಯವನ್ನು ಚೀನಾ ಸರ್ಕಾರ ಗೋಪ್ಯವಾಗಿಟ್ಟಿದ್ದು, ಪಾಕಿಸ್ತಾನಕ್ಕೆ ಎನ್‍ಎಸ್‍ಜಿ ಸದಸ್ಯತ್ವ ದೊರೆಯಬೇಕು ಬೆಂಬಲಿಸುತ್ತಲೇ ಬರುತ್ತಿದೆ. ಆದರೆ ಪಾಕಿಸ್ತಾನದ ಇನ್ನೊಂದು ಮುಖ ಅನಾವರಣಗೊಂಡಿರುವುದರಿಂದ ಚೀನಾಕ್ಕೆ ಇರಿಸುಮುರಿಸಾಗಿದೆ.

ಪಾಕಿಸ್ತಾನದ ಖತರ್‍ನಾಕ್ ಬುದ್ಧಿ ಗೊತ್ತಿದ್ದರೂ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದ ಚೀನಾ ಇದೀಗ ಭಾರತ ಮಾಡಿದ ಗಂಭೀರ ಆರೋಪದಿಂದ ಮತ್ತೊಂದು ಹೊಡೆತ ತಿಂದಂತಾಗಿದೆ. ದೋಕಲಂ ಗಡಿ ವಿಚಾರದಲ್ಲಿ ಭಾರತದ ಜೊತೆ ಯುದ್ಧಕ್ಕೆ ಬಂದಿದ್ದ ಚೀನಾ, ಭಾರತದ ದಿಟ್ಟತನದಿಂದ ಗಡಿ ಪ್ರದೇಶದಿಂದ ಜಾಗ ಖಾಲಿ ಮಾಡಿತ್ತು. ಇದೀಗ ಭಾರತ ಪಾಕಿಸ್ತಾನಕ್ಕೆ ಶಾಕ್ ನೀಡಿದ್ದು, ಅದರ ತಾಪ ಚೀನಾಕ್ಕೂ ತಗುಲುವಂತಾಗಿದೆ.

-ಚೇಕಿತಾನ

Tags

Related Articles

Close