ಪ್ರಚಲಿತ

ಎ.ರಾಜ ಮತ್ತು ಕನಿಮೋಳಿಯನ್ನು ಕೇಸ್‍ನಿಂದ ಖುಲಾಸೆಗೊಳಿಸಿರುವ ರಹಸ್ಯ ಕೇಳಿದರೆ ಬೆಚ್ಚಿ ಬೀಳುವಿರಿ!! ಬಯಲಾಯಿತು 2ಜಿ ಹಗರಣದ ಪಬ್ಲಿಕ್ ಪ್ರಾಸಿಕ್ಯೂಟರ್‍ನ ಭಯಾನಕ ಮುಖ!!

ಯುಪಿಎ ಅಧಿಕಾರಾವಧಿಯಲ್ಲಿ ಹಗರಣಗಳ ಸುಳಿಗೆ ಸಿಲುಕಿ ನಲುಗಿದ್ದ ಕಾಂಗ್ರೆಸ್ ಇದೀಗ 2ಜಿ ಪ್ರಕರಣದಲ್ಲಿ ಎಲ್ಲ ಆರೋಪಿಗಳು ಖುಲಾಸೆಗೊಂಡಿರುವುದರಿಂದ ನಿರಾಳ ಭಾವ ಅನುಭವಿಸಿದೆ. ಆದರೆ ಸಿಬಿಐ ಮೇಲ್ಮನವಿ ಮೂಲಕ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದೆ. ಭಾರತೀಯ ರಾಜಕಾರಣದಲ್ಲಿ ಭಾರಿ ಕೋಲಾಹಲ ಮೂಡಿಸಿದ 2 ಜಿ ತರಂಗಾಂತರ ಹಂಚಿಕೆಯ ಆರೋಪಿಗಳು ಖುಲಾಸೆಯಾಗಲು ಕಾರಣ ಏನೆಂದು ತಿಳಿದರೆ ಶಾಕ್ ಆಗೋದಂತು ಖಂಡಿತಾ!!

2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ದೂರಸಂಪರ್ಕ ಮಾಜಿ ಸಚಿವ ಎ. ರಾಜಾ ಮತ್ತು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪುತ್ರಿ ಸೇರಿದಂತೆ ಕನಿಮೋಳಿ ಸೇರಿದಂತೆ 17 ಜನ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.

ಏಳು ವರ್ಷಗಳ ಹಿಂದೆ ಆಗಿನ ಸಿಎಜಿ ವಿನೋದ್ ರಾಯ್ ಸಲ್ಲಿಸಿದ ವರದಿ ಸಂಚಲನವನ್ನೇ ಸೃಷ್ಟಿಸಿತು. ಆಗಿನ ಟೆಲಿಕಾಂ ಸಚಿವ ಎ. ರಾಜಾ 2ಜಿ ಸ್ಪೆಕ್ಟ್ರಂ ಪರವಾನಗಿ ಹಂಚಿಕೆಯನ್ನು 2001ರ ಬೆಲೆಯನ್ನಾಧರಿಸಿ ಮಾಡಿರುವುದರಿಂದ ಸರ್ಕಾರದ ಖಜಾನೆಗೆ 1. 76 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆಯೆಂದು ವರದಿಯಲ್ಲಿ ನಮೂದಿಸಲಾಗಿತ್ತು.

ಆದರೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸಿಬಿಐ ವಿಫಲವಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ದೋಷಮುಕ್ತ ಗೊಳಿಸಿರುವುದಾಗಿ ತಿಳಿಸಿದೆ. ಆದರೆ 2ಜಿ ಸ್ಪೆಕ್ಟ್ರಂ ಹಂಚಿಕೆ ಕಾನೂನುಬಾಹಿರವಾದುದು ಮತ್ತು ಲೈಸೆನ್ಸ್ ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪಿನಲ್ಲಿ ಯಾವುದೇ ಬದಲಾವಣೆಯಾಗಲಾರದು ಎಂದು ಸಿಬಿಐ ವಿಶೇಷ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಎರಡು ಪ್ರಕರಣಗಳು ಸಿಬಿಐ ದಾಖಲಿಸಿದ್ದಾಗಿದ್ದರೆ ಒಂದು ಪ್ರಕರಣ ಜಾರಿ ನಿರ್ದೇಶನಾಲಯ ದಾಖಲಿಸಿತ್ತು. ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿರುವ ಹಲವು ಆರೋಪಗಳು ಆಧಾರರಹಿತವಾದುದು. ಎಂಟ್ರಿ ಫೀಸ್‍ನ ಬದಲಾವಣೆಗೆ ವಿತ್ತ ಕಾರ್ಯದರ್ಶಿ ಒತ್ತಾಯಿಸಿದ್ದರು ಎಂಬುದು ಮತ್ತು ಎಲ್‍ಒಐನ ಕರಡಿನಲ್ಲಿ ಕೆಲ ಷರತ್ತುಗಳನ್ನು ತೆಗೆದುಹಾಕಲು ಎ.ರಾಜಾ ಒತ್ತಾಯಿಸಿದ್ದರು ಎಂಬುದೆಲ್ಲ ಸುಳ್ಳು ಆರೋಪಗಳು.

ಕೆಲ ಆರೋಪಗಳು ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿದ್ದೇ ಹೊರತು ಇದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳಿಲ್ಲ ಎಂದು ನ್ಯಾಯಾಧೀಶ ಒಪಿ ಸಾಯ್ನಿ ಹೇಳಿದ್ದಾರೆ. ಅದಲ್ಲದೆ ಸಿಬಿಐ ಪರ ವಕೀಲ ಆನಂದ್ ಗ್ರೋವರ್ ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಈ 2ಜಿ ಹಗರಣದಲ್ಲಿ ಸಿಬಿಐ ಪರ ವಕೀಲ ಮೊದಲಿಗೆ ಎಲ್ಲಾ ರೀತಿ ಆಸಕ್ತಿ ಹೊಂದಿದ್ದರು.. ಆದರೆ ಕೇಸ್ ಕೊನೆಯ ಹಂತದಲ್ಲಿ ಯಾವುದೇ ಆಸಕ್ತಿಯನ್ನು ತೋರಸದೇ ಇದ್ದಿದ್ದು ಎಲ್ಲರಿಗೂ ಆಶ್ವರ್ಯಕರ ಮತ್ತು ಸಂಶಯಾಸ್ಪದವಾಗಿದೆ!!! ಕೆಲವೊಂದು ಹೇಳಿಕೆಗಳಿಗೆ ಯಾವುದೇ ಹೋಲಿಕೆಗಳು ಇಲ್ಲದಂತೆ ಹೇಳಿಕೆಗಳನ್ನು ಕೊಟ್ಟಿರುವುದು ಕೂಡಾ ಸಂಶಯಾಸ್ಪದವಾಗಿದೆ.!!!

ಆನಂದ್ ಗ್ರೋವರ್

ಆನಂದ್ ಗ್ರೋವರ್ ಸಿಬಿಐ ಪರ ವಕೀಲ ಆದರೂ ಈ ರೀತಯಾಗಿ ಸತ್ಯದ ಕಡೆ ನ್ಯಾಯವನ್ನು ಕೊಡುವ ಬದಲು ಜನರ ಕಣ್ಣಿಗೆ ಮಣ್ಣೆರಚಿರುವುದು ಎಲ್ಲರಿಗೂ ಸ್ಪಷ್ಟವಾಗಿ ಗೋಚರವಾಗುತ್ತದೆ.!!.. ನಮಗೆ ಆತನ ಹಿನ್ನಲೆ ಗಮನಿಸಿದಾಗ ಆತ ಭಯೋತ್ಪಾದಕರಿಗೆ ಬೆಂಬಲ ನೀಡಿದ ವ್ಯಕ್ತಿ!! ಸುಪ್ರಿಂ ಕೋರ್ಟ್ ಅನ್ನು ರಕ್ತ ಬಿಪಾಸು ಎಂದು ಕರೆದವನುನು ಈತನೇ!! ಅದಲ್ಲದೆ ಆನಂದ್ ಗ್ರೋವರ್‍ನ ಹೆಂಡತಿಗೆ ಸೋನಿಯಾ ಗಾಂಧಿಗೆ ತುಂಬಾ ಆಪ್ತೆ!! ಈಗ ಸ್ಪಷ್ಟವಾಗಿ ಅರ್ಥವಾಗುತ್ದೆ…

Related image

 

Image result for Anand grover and indira jaiswal

2ಜಿ ಹಗರಣದಲ್ಲಿ ಯಾಕೆ ದ್ರೋಹಿಗಳಿಗೆ ಜಯ ಸಿಕ್ಕಿದೆ ಎಂದು…. ಎಲ್ಲಾ ಕಾಂಗ್ರೆಸ್ ಕುತಂತ್ರ! ಈತನ ಕುಮ್ಮಕ್ಕು ಅಷ್ಟೇ!!… ಒಬ್ಬ ಪಬ್ಲಿಕ್ ಪ್ರಾಸೀಕ್ಯೂಟರ್ ಆಗಿ ಈ ರೀತಿ ಹಗರಣ ಮಾಡಿದವರಿಗೆ ಬೆಂಬಲ ನೀಡಿರುವು ದೇಶಕ್ಕೆ ಮಾಡಿದ ಅವಮಾನ ಮತ್ತು ತನ್ನ ವೃತ್ತಿಗೆ ಮಾಡಿದ ಅವಮಾನ…ಈಗ ಇಡೀ ಜನತೆಗೆ ಅರ್ಥವಾಗಿರಬಹುದು 2ಜಿ ಹಗರಣದಲ್ಲಿ ಯಾತಕ್ಕಾಗಿ ದೂರಸಂಪರ್ಕ ಮಾಜಿ ಸಚಿವ ಎ. ರಾಜಾ ಮತ್ತು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪುತ್ರಿ ಕನಿಮೋಳಿ ಸೇರಿದಂತೆ 17 ಜನ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ ಎಂದು ತಿಳಿಯಿತೇ?!

ನ್ಯಾಯಾಲಯ ಹೇಳಿದ್ದೇನು?

ನ್ಯಾಯಾಲಯ ಎ. ರಾಜಾ ಮತ್ತು ಕನಿಮೋಳಿ ಸೇರಿದಂತೆ 17 ಜನರನ್ನು ದೋಷಮುಕ್ತಗೊಳಿಸಿದೆಯಾದರೂ ಎಲ್ಲಿಯೂ 2ಜಿ ಹಂಚಿಕೆ ಹಗರಣ ನಡದೇ ಇಲ್ಲ ಎಂದು ತೀರ್ಪಿನಲ್ಲಿ ಹೇಳಿಲ್ಲ. ಆದರೆ ಸಿಬಿಐ ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಸೋತಿದೆ. ಸಿಎಜಿ ವರದಿಯಲ್ಲಿ 1.76 ಲಕ್ಷ ಕೋಟಿ ರೂಪಾಯಿ ಮೊತ್ತದ ಹಗರಣ ಎಂದು ಹೇಳಲಾಗಿತ್ತು. ಸಿಬಿಐ ವರದಿಯಲ್ಲಿ 30,895 ಕೋಟಿ ರೂಪಾಯಿ ಹಗರಣ ಎಂದು ಉಲ್ಲೇಖಿಸಲಾಗಿದೆ. ಇದರಲ್ಲೂ ಸರಿಯಾದ ಹೋಲಿಕೆಗಳು ಕಾಣುತ್ತಿಲ್ಲ ಎಂದು ಜಡ್ಜ್ ಒಪಿ ಸಾಯ್ನಿ ಹೇಳಿದರು.
ಕಾಂಗ್ರೆಸ್‍ನ ಅತ್ಯುತ್ಸಾಹ ಒಳ್ಳೆಯದಲ್ಲ

2ಜಿ ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಕಾಂಗ್ರ್ರೆಸ್ಸಿಗರು ಅತಿ ಉತ್ಸಾಹಪಡುವ ಅಗತ್ಯವಿಲ್ಲ. ಪ್ರಕರಣ ಇನ್ನೂ ತನಿಖೆಗೆ ಮುಕ್ತವಾಗಿರುವ ಹಂತದಲ್ಲಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ತನಿಖಾ ತಂಡವೂ ಅಗತ್ಯವಾದಂಥ ದಾಖಲೆ ಹಾಜರುಪಡಿಸಲು ವಿಫಲವಾಗಿದೆ ಮತ್ತು ಸೂಕ್ತ ರೀತಿಯಲ್ಲಿ ಪ್ರಸ್ತುಪಡಿಸಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಪ್ರಸ್ತಾಪಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿ ನಡೆಸಿರುವ ಕುರಿತಂತೆ ತನಿಖೆ ನಡೆಸಲು ಎಲ್ಲಾ ರೀತಿಯಲ್ಲೂ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತೀರ್ಪನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಸ್ಪಷ್ಟಪಡಿಸಿದೆ. ಹೀಗಿರುವಾಗ ಕಾಂಗ್ರೆಸ್ ಅತ್ಯುತ್ಸಾಹ ತೋರಿಸುತ್ತಿರುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಟ್ಟಿದ್ದಾರೆ.

2ಜಿ ಪ್ರಕರಣದ ವಿರುದ್ಧ ಮೊದಲು ದನಿ ಎತ್ತಿದವರ ಪೈಕಿ ರಾಜೀವ್ ಚಂದ್ರಶೇಖರ್ ಕೂಡ ಒಬ್ಬರು. ಈ ಹಿಂದೆ ಸುಳ್ಳು ಪ್ರಚಾರ ನಡೆಸಿದ್ದಕ್ಕಾಗಿ ಪ್ರಧಾನಿ ಹಾಗೂ ಬಿಜೆಪಿ ಕ್ಷಮೆ ಕೋರಬೇಕೆಂದು ಕಾಂಗ್ರೆಸ್ ನಾಯಕರು ಇದೀಗ ಒತ್ತಾಯಿಸುತ್ತಿದ್ದಾರೆ. ಆದರೆ, ಟೆಂಡರ್ ಕರೆಯದೆ ತರಂಗಾಂತರ ಹರಾಜು ಮಾಡಿ ಈ ಕ್ಷೇತ್ರದವರನ್ನು ಸಮಸ್ಯೆಗೆ ದೂಡಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆ ಕೋರಬೇಕು. ಜನ ಎಲ್ಲವನ್ನೂ ಮರೆತಿದ್ದಾರೆಂದು ಕಾಂಗ್ರೆಸಿಗರು ಅಂದುಕೊಂಡಿದ್ದಾರೆ. ಆದರೆ ಇಂದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಪ್ರಭಾವಶಾಲಿಯಾಗಿದ್ದು ನೈಜ ಸಂಗತಿ ಗೊತ್ತಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಾಲಿಗೆ ಹೊಸ ಚೈತನ್ಯ

ಎರಡು ಅವಧಿಗಳ ಆಡಳಿತದಲ್ಲಿ ಯುಪಿಎ ಸರ್ಕಾರ ನಡೆಸಿದ್ದ ಹಲವು ಹಗರಣಗಳು ಬೆಳಕಿಗೆ ಬಂದಿದ್ದವು. ಅದರಲ್ಲೂ 2012ರಲ್ಲಿ ಬೆಳಕಿಗೆ ಬಂದ 194 ಕಲ್ಲಿದ್ದಲ್ಲು ನಿಕ್ಷೇಪಗಳ ಅಕ್ರಮ ಹಂಚಿಕೆ, ಇದರಿಂದ ಸರ್ಕಾರಕ್ಕೆ 1.86 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.

2008ರಲ್ಲೇ ಸುದ್ದಿಯಾಗಿದ್ದ 2ಜಿ ಸ್ಪೆಕ್ಟ್ರಂ ಹಗರಣ ಅದರಲ್ಲಿ ಯುಪಿಎ ಸಚಿವರ ಭಾಗಿ ಸರ್ಕಾರದ ಖಜಾನೆಗಾದ 1.76 ಲಕ್ಷ ಕೋಟಿ ರೂಪಾಯಿ ನಷ್ಟ ಇವೆಲ್ಲವೂ ಯುಪಿಎ ಬಲ ಕುಂದುವಂತೆ ಮಾಡಿತು. ಆದರೆ, 2ಜಿ ಹಗರಣದಲ್ಲಿ ಆರೋಪಿತರು ಖುಲಾಸೆಗೊಂಡಿರುವುದರಿಂದ ಕಾಂಗ್ರೆಸ್ ರಾಜಕೀಯವಾಗಿ ಹೊಸ ಚೈತನ್ಯ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ. ಪಕ್ಷಕ್ಕೆ ಹೊಸ ಸಾರಥಿಯನ್ನು ಇತ್ತೀಚೆಗಷ್ಟೇ ಪಡೆದುಕೊಂಡಿರುವ ಕಾಂಗ್ರೆಸ್, ಈಗ ಆಡಳಿತ ಪಕ್ಷದ ವಿರುದ್ಧ ಸಮರ ಸಾರುವ ಸನ್ನಾಹದಲ್ಲಿದೆ. ಇದೀಗ ಮೋದಿ ಸರಕಾರ ಈ ರೀತಿಯಾಗಿ ತೀರ್ಪನ್ನು ಕೊಟ್ಟಿರುವುದಕ್ಕಾಗಿ ಪ್ರಶ್ನೆಯನ್ನು ಮಾಡಲೇ ಬೇಕಾಗಿದೆ.

source:http://postcard.news/is-this-why-d-raja-and-kanimozhi-got-acquitted-you-will-be-shocked-to-know-who-was-the-special-public-prosecutor-for-2g-scam-case/

vijayavani

-ಪವಿತ್ರ

Tags

Related Articles

Close