ಪ್ರಚಲಿತ

ಗುಜರಾತ್ ಚುನಾವಣೆಯ ಬಳಿಕ ಕಾಂಗ್ರೆಸ್ ನಾಯಕಿ ರಮ್ಯಾ ನಾಪತ್ತೆಯಾಗಿದ್ದಾರೆ..! ರಾಹುಲ್ ಗಾಂಧಿಯೂ ರಮ್ಯಾರ ಕೈ ಬಿಟ್ಟರಾ?

ಮೊನ್ನೆ ಮೊನ್ನೆವರೆಗೂ ದೇಶದ ರಾಜಕಾರಣದಲ್ಲಿ ಭಾರೀ ಹವಾ ಸೃಷ್ಟಿಸಿದ್ದ ಕರ್ನಾಟಕದ ಮಾಜಿ ಸಂಸದೆ, ಮೋಹಕ ತಾರೆ, ನಟಿ ರಮ್ಯಾ ಗುಜರಾತ್‍ನಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸೋತರೂ ರಾಹುಲ್ ಗಾಂಧಿಯ ಕೃಪಾ ಕಟಾಕ್ಷದಿಂದ ರಾಷ್ಟ್ರ ರಾಜಕಾರಣದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ ಮಾಜಿ ಸಂಸದೆ ರಮ್ಯಾ.

ಕಳೆದ ಬಾರಿ ಮಂಡ್ಯಾದಿಂದ ಸ್ಪರ್ಧಿಸಿ ಭಾರೀ ಸೋಲನ್ನನುಭವಿಸಿದ ಮಾಜಿ ಸಂಸದೆ ರಮ್ಯಾ ಅದೆಷ್ಟೋ ದಿನಗಳು ನಾಪತ್ತೆಯಾಗಿದ್ದರು. ರಾಜ್ಯ ಮಾತ್ರವಲ್ಲ ದೇಶದಿಂದಲೇ ನಾಪತ್ತೆಯಾಗಿದ್ದರು. ರಾಹುಲ್ ಗಾಂಧಿಯೂ ಹೀನಾಯ ಸೋಲಿನಿಂದ ತತ್ತರಿಸಿ ವಿದೇಶಕ್ಕೆ ಪಲಾಯನಗೈದಿದ್ದರು. ಆದರೆ ರಮ್ಯಾರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮತ್ತೆ ಯಶಸ್ವಿಯಾಗುತ್ತಾರೆ.

ರಾಜ್ಯ ರಾಜಕಾರಣದಲ್ಲಿ ತನ್ನ ಪಕ್ಷದವರೇ ತನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ವಿಷಯವನ್ನು ಮನಗಂಡ ರಮ್ಯಾ, ರಾಹುಲ್ ಗಾಂಧಿ ಬಳಿ ತೆರಳಿ ರಚ್ಚೆ ಹಿಡಿಯಲು ಆರಂಭಿಸುತ್ತಾರೆ. ತನಗೆ ಇನ್ನು ಸಿನಿಮಾ ಕ್ಷೇತ್ರದಲ್ಲೂ ಬೆಲೆ ಇಲ್ಲ. ಹೀಗಾಗಿ ಹೇಗಾದರೂ ಮಾಡಿ ರಾಜಕೀಯ ಕ್ಷೇತ್ರದಲ್ಲಾದರೂ ತನ್ನನ್ನು ಮುಂದುವರೆಸಿ ಎಂದು ಬೇಡಿಕೊಳ್ಳುತ್ತಾರೆ. ಇದರ ಫಲವಾಗಿಯೇ ಅವರಿಗೆ ರಾಹುಲ್ ಗಾಂಧಿಯಿಂದ ಒಲಿದು ಬಂದ ಸಾಮಾಜಿಕ ಜಾಲತಾಣದ ಪಟ್ಟ.

ರಮ್ಯಾಗೆ ಒಲಿದು ಬಂದಿತ್ತು ರಾಷ್ಟ್ರೀಯ ಜವಬ್ಧಾರಿ…

ರಾಜ್ಯ ಕಾಂಗ್ರೆಸ್ ನಾಯಕರು ಕಡೆಗಣಿಸಿದರೇನಂತೆ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಮ್ಯಾರ ಕೈ ಬಿಡಲಿಲ್ಲ. ರಮ್ಯಾಗೆ ಎಐಸಿಸಿ ಯ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯನ್ನಾಗಿ ನೇಮಿಸುತ್ತಾರೆ. ಈ ಮೂಲಕ ರಮ್ಯಾರ ವರ್ಚಸ್ಸನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದು ಬಿಟ್ಟಿತ್ತು. ರಾಹುಲ್ ಗಾಂಧಿಯ ಸಂಪೂರ್ಣ ಕೃಪೆ ರಮ್ಯಾ ಮೇಲೆ ಇತ್ತು ಅನ್ನೋದೇ ಇದಕ್ಕೆ ನಿದರ್ಶನ.

ತನಗೆ ನೀಡಿದ ಸ್ಥಾನಮಾವನ್ನೂ ರಮ್ಯಾ ಸಮರ್ಥವಾಗಿಯೇ ನಿರ್ವಹಿಸಿದ್ದರು. ತನ್ನ ಚಾಣಾಕ್ಷತೆಯ ಮೂಲಕ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಕ್ರಾಂತಿಯನ್ನು ಹಚ್ಚಿಸಿಬಿಟ್ಟಿದ್ದರು. ಇತಿಹಾಸದಲ್ಲೇ ಕಾಂಗ್ರೆಸ್, ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿ ನಿಂತುಬಿಟ್ಟಿತ್ತು. ರಾಹುಲ್ ಗಾಂಧಿ ಬಾದ್ ಶಾ ಆಗಿ ಬಿಟ್ಟಿದ್ದರು.

ಮಂಕಾಗಿದ್ದ ರಾಹುಲ್ ಗಾಂಧಿಯ ವರ್ಚಸ್ಸು ಎತ್ತರಕ್ಕೆ ಜಿಗಿಯಿತು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿ ಸ್ವಲ್ಪನೆ ಪ್ರಚಾರಕ್ಕೆ ಬಂದಿದ್ದರು. ಟ್ವೀಟರ್‍ನಲ್ಲಿ ಅತಿ ಹೆಚ್ಚು ಫಾಲೋ ಮಾಡೋದು ಪ್ರಧಾನಿ ಮೋದಿಯವರನ್ನು. ಆದರೆ ರಾಹುಲ್ ಗಾಂಧಿ ಮೋದಿಯನ್ನು ಮೀರಿಸಿಬಿಟ್ಟಿದ್ದರು. ಟ್ವೀಟರ್‍ನಲ್ಲಿ ಮೋದಿಯವರನ್ನು ಮೀರಿಸಿ ತಾನೇ ಹೀರೋ ಎಂಬಂತೆ ಬೀಗಿಕೊಂಡರು. ಇದರ ಹಿಂದೆ ರಮ್ಯಾರ ಕೆಲಸ ವರ್ಕೌಟ್ ಆಗಿತ್ತು. ರಮ್ಯಾರ ಕೆಲಸ ತುಂಬಾನೆ ವರ್ಕೌಟ್ ಆಗಿತ್ತು. ರಮ್ಯಾ ಕಾಂಗ್ರೆಸ್‍ನ ಕ್ವೀನ್ ಆಗಿಯೇ ಬಿಟ್ಟಿದ್ದರು.

ಆದರೆ ಈ ಗೌರವ ಬಹಳ ಸಮಯದಲ್ಲಿ ಉಳಿಯಲೇ ಇಲ್ಲ. ರಾಹುಲ್ ಗಾಂಧಿಯನ್ನು ಫಾಲೋ ಮಾಡುತ್ತಿದ್ದ ಟ್ವೀಟರ್ಸ್ ನಕಲಿಗಳು ಎಂಬ ವಿಚಾರ ಅದಾಗಲೇ ಬಯಲಿಗೆ ಬಂದಿತ್ತು. ರಮ್ಯಾ ಮಾಡಿದ ಎಲ್ಲಾ ಪ್ಲಾನ್‍ಗಳೂ ವಿಫಲವಾಗಿತ್ತು. ವಿದೇಶಿ ಸಂಸ್ಥೆಗಳ ಸಹಕಾರದಲ್ಲಿ ನಕಲಿ ಟ್ವೀಟರ್ಸ್‍ಗಳನ್ನು ಸೃಷ್ಟಿಸಿದ್ದ ರಮ್ಯಾ ಆಟ ಬಟಬಯಲಾಗಿತ್ತು. ಮೋದಿಯನ್ನು ಮೀರಿಸಲು ತಂತ್ರ ಹೆಣೆದಿದ್ದ ರಮ್ಯಾ ಪ್ಲಾನಿಂಗ್ ಉಲ್ಟಾ ಆಗಿತ್ತು.

ಸೋತು ಸುಸ್ತಾದ ರಮ್ಯಾ ಮತ್ತೆ ಮಂಕಾಗಿ ಹೋಗುತ್ತಾರೆ. ಮೋದಿಯನ್ನು ಬದಿಗೆ ಸರಿಸಿ, ರಾಹುಲ್ ಗಾಂಧಿಯನ್ನು ಹೀರೋ ಮಾಡಬೇಕೆಂಬ ರಮ್ಯಾ ಕನಸಿಗೆ ತಣ್ಣೀರು ಬಂದು ಬಿದ್ದಿತ್ತು. ರಮ್ಯಾ ಅಕ್ಷರಷಃ ಬೆಚ್ಚಿ ಬಿದ್ದಿದ್ದರು. ಆವಾಗ ರಮ್ಯಾ ಆರಿಸಿದ ನಿರ್ಧಾರವೇ ಮತ್ತೆ ರಾಜ್ಯ ರಾಜಕಾರಣ.

ರಾಷ್ಟ್ರ ರಾಜಕಾರಣದಲ್ಲಿ ಸುಸ್ತಾಗಿ ತೀವ್ರ ಮುಖಭಂಗ ಅನುಭವಿಸಿದ ರಮ್ಯಾ ರಾಜ್ಯಕ್ಕೆ ದಾಪುಗಾಲಿಡುತ್ತಾರೆ. ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅದ್ಯಾವಾಗ ರಮ್ಯಾ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟರೋ ಅಂದೇ ರಾಜ್ಯ ನಾಯಕರು ಗರಂ ಆಗಿಬಿಡುತ್ತಾರೆ. ಅಂಬಿ ಅಂಕಲ್ ಅಂತೂ ರೆಬೆಲ್ ಆಗಿಯೇ ಬಿಡುತ್ತಾರೆ. ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ರಮ್ಯಾಳಿಗೆ ಅವಕಾಶವೇ ಇಲ್ಲ ಅಂದುಬಿಡುತ್ತಾರೆ.

ಮತ್ತೆ ರಾಹುಲ್ ಗಾಂಧಿ ಮೊರೆ ಹೋದ ರಮ್ಯಾ…

ರಾಜ್ಯ ಕಾಂಗ್ರೆಸ್ ನಾಯಕರ ರೆಸ್ಪಾನ್ಸ್ ಕಂಡ ರಮ್ಯಾ ಬೆಚ್ಚಿ ಬೀಳುತ್ತಾರೆ. ನನ್ನನ್ನು ಇಷ್ಟು ವಿರೋಧಿಸುವವರೂ ಇದ್ದಾರಾ ಎಂದು ಮೂಗಿನ ಮೇಲೆ ಬೆರಳಿಡುತ್ತಾರೆ. ಹೀಗಾಗಿ ಮತ್ತೆ ರಾಹುಲ್ ಗಾಂಧಿಯ ಮೊರೆ ಹೋಗುತ್ತಾರೆ. ರಾಹುಲ್ ಗಾಂಧಿಯಿಂದಲೇ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂದೇಶವೊಂದು ರವಾನೆಯಾಗುತ್ತೆ. ಆವರೆಗೂ ಮಂಡ್ಯದಲ್ಲಿ ಸ್ಪರ್ಧಿಸುತ್ತಾರೆ ಎಂದು ಸುದ್ಧಿ ಹರಡಿತ್ತು. ಆದರೆ ಮಂಡ್ಯದ ನಾಯಕರು ಇದಕ್ಕೆ ಒಲ್ಲೆ ಎಂದ ಕಾರಣಕ್ಕೆ ರಮ್ಯಾ ಮತ್ತೆ ರಾಹುಲ್ ಗಾಂಧಿಯ ಮೊರೆ ಹೋಗುತ್ತಾರೆ. ಆವಾಗ ರಾಹುಲ್ ಗಾಂಧಿ ರಾಜ್ಯದ ನಾಯಕರಿಗೆ ಸೂಚನೆ ನೀಡುತ್ತಾರೆ. ರಾಜ್ಯದ ಯಾವುದೇ ಕಡೆಗಳಲ್ಲೂ ರಮ್ಯಾಗೆ ಟಿಕೆಟ್ ಕೊಡಿ ಎಂದು ನಿರ್ಧೇಶನ ಬರುತ್ತೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರು ರಮ್ಯಾಗೆ ಬೆಂಗಳೂರಿನಲ್ಲಿ ಟಿಕೆಟ್ ನೀಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ.

ಗುಜರಾತ್ ಚುನಾವಣೆಯಲ್ಲಿ ರಮ್ಯಾ ಕೆಲಸ ಕಡಿಮೆ..!

ಹೌದು. ಗುಜರಾತ್ ಚುನಾವಣೆಯಲ್ಲಿ ರಮ್ಯಾ ಕಾಣಿಸಿದ್ದೇ ಕಡಿಮೆ. ರಾಜ್ಯ ಕಾಂಗ್ರೆಸ್ ನಾಯಕರ ವರ್ತನೆಯಿಂದಲೋ ಏನೋ ಬೇಸತ್ತು ಮೂಲೆ ಸೇರಿದ್ದಾರೆ. ತನ್ನ ಎಂದಿನ ಶೈಲಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗದೆ ಮಂಕಾಗಿ ಹೋಗಿದ್ದರು. ಚುನಾವಣೆ ನಡೆದ ನಂತರ ಬಂದ ಚುನಾವಣಾ ಪೂರ್ವ ಸಮೀಕ್ಷೆಗಳ ಫಲಿತಾಂಶವೂ ಕಾಂಗ್ರೆಸ್ ಸೋಲುತ್ತೆ ಅನ್ನುವ ಸಂದೇಶವನ್ನು ಸಾರಿತ್ತು. ಈ ಬಾರಿಯೂ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಸಮೀಕ್ಷೆಗಳು ಭವಿಷ್ಯ ನುಡಿಯುತ್ತೆ. ಆವಾಗಲೂ ರಮ್ಯಾ ಮುಖ್ಯ ವೇದಿಕೆಗೆ ಬಾರಲೇ ಇಲ್ಲ. ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿಯನ್ನು ಸಮರ್ಥಿಸಿ ಮಾತನಾಡಲೇ ಇಲ್ಲ.

ರಾಹುಲ್ ಗಾಂಧಿನೂ ಕೈಚೆಲ್ಲಿ ಬಿಟ್ಟರಾ..?

ಇದನ್ನೆಲ್ಲ ಗಮನಿಸುವಾಗ ರಾಹುಲ್ ಗಾಂಧಿಯೂ ರಮ್ಯಾರನ್ನು ದೂರ ಮಾಡಿದರಾ ಅನ್ನುವ ಪ್ರಶ್ನೆಯೊಂದು ಸಹಜವಾಗಿ ಮೂಡುತ್ತೆ. ಕಳೆದ ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದ ರಾಜ್ಯ ನಾಯಕರು ಮತ್ತೆ ಅದರ ಬಗ್ಗೆ ಧ್ವನಿ ಎತ್ತಲೇ ಇಲ್ಲ. ರಮ್ಯಾ ಅದೆಷ್ಟೇ ಬಾರಿ ರಾಹುಲ್ ಗಾಂಧಿ ಮೊರೆ ಹೋದರೂ ರಮ್ಯಾ ಮಾತಿಗೆ ರಾಹುಲ್ ಸೊಪ್ಪು ಹಾಕಲೇ ಇಲ್ಲ. ಇದನ್ನೆಲ್ಲಾ ಮನಗಂಡ ರಮ್ಯಾ ಪೇಚಿಗೆ ಸಿಲುಕಿ ಪಕ್ಕಕ್ಕೆ ಸರಿದಿದ್ದಾರೆ.

ಒಟ್ಟಾರೆ ಗುಜರಾತ್ ಚುನಾವಣಾ ಫಲಿತಾಂಶವೂ ಕರ್ಣಾಟಕ ಚುನಾವಣಾ ಫಲಿತಾಂಶಕ್ಕೆ ದಿಕ್ಸೂಚಿಯಾಗಿದ್ದು ಕರ್ನಾಟಕದಲ್ಲಿಯೂ ಮೋದಿ ಶಾ ಜೋಡಿ ಕಮಾಲ್ ಮಾಡಲಿದೆ ಎಂಬುವುದು ಸ್ಪಷ್ಟವಾಗಿ ಅರಿವಾಗಿದೆ. ಹೀಗಾಗಿಯೇ ರಮ್ಯಾನೂ ತನಗೆ ರಾಜಕೀಯ ಬೇಡ ಅನ್ನುವ ನಿರ್ಧಾರಕ್ಕೆ ಬಂದರೂ ಅಚ್ಚರಿ ಪಡಬೇಕಾಗಿಲ್ಲ.

-ಸುನಿಲ್ ಪಣಪಿಲ

Tags

Related Articles

Close