ಪ್ರಚಲಿತ

ಗೌರೀ ಲಂಕೇಶ್ ಳ ದತ್ತುಪುತ್ರನಾದ ಜಿಗ್ನೇಶ್ ಮೇವಾನಿಗೆ ಕಾರ್ಯಕರ್ತರು ಮಾನ ಕಳೆದು ಮೂರಾಬಟ್ಟೆಯಾಗಿಸಿಬಿಟ್ಟಿದ್ದು ಹೀಗೆ!

ಈ ಘಟನೆಯೊಂದು ಜಿಗ್ನೇಶ್ ಮೇವಾನಿಗೆ ಕಪಾಳ ಮೋಕ್ಷ ಮಾಡಿದೆ!

ಭಾರತದಲ್ಲಿ ‘ಸೆಕ್ಯುಲಾರಿಸಮ್’ ಎನ್ನುವ ಸಿದ್ಧಾಂತವಾಗಲಿ, ಅಥವಾ ‘ಕಮ್ಯುನಿಸಮ್ ‘ ಎನ್ನುವ ಸಿದ್ಧಾಂತವಾಗಲಿ, ಯಾವತ್ತಿಗೂ ಅಪ್ರಸ್ತುತವೇ ಎನ್ನುವುದು ನೆನಪಿರಬೇಕಿತ್ತು! ಗೌರಿ ಲಂಕೇಶ್ ಎಂಬ ಸೆಕ್ಯುಲರ್ ಗಳ ಅಮ್ಮ, ಜಿಗ್ನೇಶ್ ಮೇವಾನಿ ಹಾಗೂ ಕನ್ಹಯ್ಯಾ ಕುಮಾರ್ ನಂತಹ ರಾಷ್ಟ್ರದ್ರೋಹಿಗಳನ್ನು ತನ್ನ ಮಕ್ಕಳೆಂದು ಕರೆದಾಗಲೇ, ಅರ್ಥವಾಗುವವರಿಗೆ ಅರ್ಥವಾಗೊ ಹೋಗಿತ್ತು! ರಾಷ್ಟ್ರದ್ರೋಹಿಗಳ ಗ್ಯಾಂಗೊಂದು ಈಗ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಹಾಗೂ, ಗೆಲ್ಲುವುದೇ ಇಲ್ಲ ಎಂಬ ಅರಿವಿದ್ದರೂ ಕೂಡ, ಮತದಾರರ ಮತಗಳನ್ನು ಭಾಗ ಮಾಡಬೇಕೆನ್ನುವ ಒಂದೇ ಒಂದು ಉದ್ದೇಶದಿಂದ, ಕಾಂಗ್ರೆಸ್ ಪಕ್ಷವೊಂದು ಹೀಗಾದರೂ ಮಾಡಿ ಮತಗಳನ್ನೊಡೆಯಬಹುದೆಂದು ತೀರ್ಮಾನಿಸಿಬಿಟ್ಟಿತ್ತಷ್ಡೇ!

ಅಪ್ರಸ್ತುತವಾದ ಹೇಳಿಕೆಗಳನ್ನು ನೀಡುತ್ತಾ, ಸುಮ್ಮನೇ ಕಣಕ್ಕಿಳಿದಿರುವ ಹಾರ್ದಿಕ್ ಪಟೇಲ್ ಹಾಗೂ ರಾಹುಲ್ ಗಾಂಧಿ ಜೊತೆ ಸ್ಪರ್ಧಿಸುತ್ತಿರುವ
ಜಿಗ್ನೇಶ್ ಮೇವಾನಿ, ಅದ್ಯಾವ ಅರ್ಹತೆಯನ್ನಿಟ್ಟು ಮೋದಿಯನ್ನು ಸೋಲಿಸುತ್ತೇನೆಂದರೋ ದೇವರೇ ಬಲ್ಲ! ಹಾ! ಬಹುಷಃ #ನಾನುಗೌರಿ ಎಂಬ ಭಿಕ್ಷಾಟನೆಯ ಕಾರ್ಯಕ್ರಮದಲ್ಲಿ ‘ಅಶ್ಲೀಲ ಶಬ್ದಗಳಿಂದ ಮೋದಿಯನ್ನು ಬೈದದ್ದೇ” ಈತನಿಗೆ ಕಾಂಗ್ರೆಸ್ಸಿಗರು ಅರ್ಹತಾ ಪತ್ರ ನೀಡುವುದಕ್ಕೆ ಕಾರಣವಾಗಿರಬಹುದು!

ಈ ಇಬ್ಬರು ನಾಯಕರಿಗೆ ಚುನಾವಣೆಯ ಪ್ರಚಾರಕ್ಕಾಗಿ ಸ್ವಂತ ದುಡ್ಡಿಲ್ಲದೇ ಇದ್ದರೂ ಸಹ, ರಾಷ್ಟ್ರವಿರೋಧಿಗಳು ದಾನ ಮಾಡುವ ಹಣಕ್ಕೇನೂ ಕೊರತೆಯಿಲ್ಲ ಬಿಡಿ! ಜೊತೆ ಜೊತೆಗೇ, ಪೇಯ್ಡ್ ಮಾಧ್ಯಮಗಳೆಂಬ ಒಂದಷ್ಟು ಅವಿವೇಕತನದ ಪರಮಾವಧಿ ಮುಟ್ಟಿರುವ ಒಂದಷ್ಟು ಮಾಧ್ಯಮಗಳು ಈ ಮೂವರು ನಾಯಕರೇ ಬಿಜೆಪಿಯ ನರೇಂದ್ರ ಮೋದಿಯವರ ಸಮಕ್ಕೆ ನಿಲ್ಲುವಂತಹ ನಾಯಕರೆಂದು ಸುಳ್ಳು ಸುದ್ದಿ ಹರಡಿಸಿ, ಮೋದಿಯವರಿಗಿಂತ ಹಾರ್ದಿಕ್ ಹಾಗೂ ಜಿಗ್ನೇಶ್ ಗೇ ಮತದಾರರು ಬೆಂಬಲ ನೀಡುತ್ತಿದ್ದಾರೆಂಬ ಸುದ್ದಿಯೊಂದು ಬಿಜೆಪಿಯವರಿಗೆ ತಲೆ ಕೆಡಿಸಿಕೊಳ್ಳುವಂತೆ ಮಾಡಿದ್ದು ಸತ್ಯ!

ಆದರೆ.. ಇಲ್ಲಿರುವ ವೀಡಿಯೋವೊಂದು ಜಿಗ್ನೇಶ್ ಮೇವಾನಿಯ ಅತ್ಯಂತ ಹೀನಾಯ ಮನಃ ಸ್ಥಿತಿ ಯನ್ನು ಅನಾವರಣಗೊಳಿಸಿದ್ದಲ್ಲದೇ, ನಿಜವಾಗಲೂ ಗುಜರಾತ್ ನಲ್ಲಿ ಯಾವ ಸ್ಥಿತಿಯಿದೆ ಎಂಬುದನ್ನು ತೋರಿಸಿಬಿಟ್ಟಿದೆ! ಇನ್ನೇನು?! ಹೋದ ಮರ್ಯಾದೆಯನ್ನು ಸರಿ ಮಾಡಿಕೊಳ್ಳಲು ಜಿಗ್ನೇಶ್ ಮತ್ತೆ ಮಾಧ್ಯಮದವರ ಎದುರು ಬಂದು ನಾಟಕ ಪ್ರಾರಂಭಿಸಿದ್ದಾನೆ!

ಜಿಗ್ನೇಶ್, ಪಕ್ಷದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ, ಜಾತಿಯಾಧಾರಿತವಾದ ಮತಗಳ ವಿಭಜನೆ ಮಾಡಹೊರಟಾಗ, ಇಡೀ ಸಭೆ ಜಿಗ್ನೇಶ್ ಮೇವಾನಿಗೆ ಐದು ಬಾರಿ ‘ಜೈ ಶ್ರೀರಾಮ್’ ಎಂದು ಕೂಗುವಂತೆ ಆಗ್ರಹಪಡಿಸಿದಾಗ ಜಿಗ್ನೇಶ್ ಪರಿಸ್ಥಿತಿ ಹೇಳತೀರದಾಗಿತ್ತು! ಆದರೂ, ಸಭೆಯ ಮುಂದೆ ನಾಚಿಕೆಗೆಟ್ಟು ನಿಂತ ಜಿಗ್ನೇಶ್ ಮತ್ತೆ, ‘ಅಲ್ಲಾಹು ಅಕ್ಬರ್’ ಎಂದು ನೀವೈದು ಸಲ ಕೂಗಿದರೆ ಮಾತ್ರ ನಾನೂ ಹೇಳುತ್ತೇನೆ ಎಂದು ಸಭೆಗೆ ಹೇಳಿದಾಗ,ಇಡೀ ಸಭೆಯೇ ರೊಚ್ಚಿಗೆದ್ದದ್ದು ನೋಡಿ ದಂಗಾಗಿ, ಜಾಗ ಖಾಲಿ ಮಾಡಿದ್ದಾನೆ ದತ್ತುಪುತ್ರ.

ಯಾವಾಗ, ಜಿಗ್ನೇಶ್ ‘ಜೈ ಶ್ರೀರಾಮ್’ ಎನ್ನಲು ನಿರಾಕರಿಸಿದನೋ, ಆಗ ಇಡೀ ಸಭೆ ‘ಮೋದಿ ಮೋದಿ’ ಎಂದು ಕೂಗಲು ಪ್ರಾರಂಭಿಸಿದೆ! ಜಿಗ್ನೇಶ್ ಎಷ್ಟೇ
ಸಭೆಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರೋ, ಸಭೆ ಇನ್ನೂ ಜೋರಾಗಿ ‘ಮೋದಿ ಮೋದಿ’ ಎಂದು ಕೂಗಿದ ರೀತಿಯೊಂದು, ಜಿಗ್ನೇಶ್ ನ ಮರ್ಯಾದೆಯನ್ನು ವೇದಿಕೆಯಲ್ಲಿಯೇ ಕಳೆದಿರುವುದು ಸುಳ್ಳಲ್ಲ.

ಈ ಘಟನೆಯೊಂದು ಪೇಯ್ಡ್ ಮಾಧ್ಯಮಗಳಿಗೂ ಕೂಡ ಕಪಾಳ ಮೋಕ್ಷ ಮಾಡಿದೆ! ಇನ್ನಾದರೂ ಸುಳ್ಳು ಹೇಳುವುದನ್ನು ಬಿಡುತ್ತಾರೋ ಕಾದು ನೋಡಬೇಕಿದೆ.

– ಪೃಥು ಅಗ್ನಿಹೋತ್ರಿ

Tags

Related Articles

Close