ಪ್ರಚಲಿತ

ದಿನ ಕಳೆದಂತೆ ಆಮ್ ಆದ್ಮಿ ಪಕ್ಷ ಹೀನಾಯವಾಗಿ ಸೋತಿದ್ದು ಈ ಒಬ್ಬನೇ ಒಬ್ಬ ರಾಜಕಾರಣಿಯಿಂದ!!

ಆಮ್ ಆದ್ಮಿ ಪಕ್ಷ ದಿನೇ ದಿನೇ ಸೋಲುತ್ತಲೇ ಹೋದದ್ದು ಸುಮ್ಮನೇ ಅಲ್ಲ. ಪಕ್ಷ ಪ್ರಾರಂಭವಾಗುತ್ತಿದ್ದ ಹಾಗೆ, ಬಹುದೊಡ್ಡ ಮುನ್ನಡೆ ತೆಗೆದುಕೊಳ್ಳುತ್ತ ಸಾಗಿದ್ದ ಪಕ್ಷದ ಅಸ್ತಿತ್ವವೇ ಇವತ್ತು ತಲೆ ಕೆಳಗಾಗುತ್ತಿದೆ ಯೆಂದರೆ ಅಚ್ಚರಿಯೇನಲ್ಲ! ಯಾಕೆಂದರೆ, ಕಾರಣಗಳು ಹಾಗಿವೆ!

ಮೊದಲನೆಯದಾಗಿ, ಪಕ್ಷ ಯಾವುದೇ ಕಾಲದಲ್ಲಿಯೂ ಸಹ ಉತ್ತಮವಾದ ಆಡಳಿತ ನೀಡಲಿಲ್ಲ! ಅದಲ್ಲದೇ, ಅಭಿವೃದ್ಧಿಯಂತೂ
ಶೂನ್ಯವೇ!

ಇವತ್ತಿನ ಪ್ರಸ್ತುತ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್! ಇವರ ಆಡಳಿತ ನೀತಿಯಿಂದ ಪಕ್ಷ ಯಶಸ್ವಿಯಾಗಿ ಸೋಲುಣ್ಣುತ್ತಲೇ ಹೋಯಿತು!
ಗೋವಾದಿಂದ ಪಂಜಾಬ್ ರವರೆಗೆ, ದೆಹಲಿಯಲ್ಲಿ, ನಡೆದ ಪ್ರತಿ ಚುನಾವಣೆಯಲ್ಲಿಯೂ ಆಮ್ ಆದ್ಮಿ ಪಕ್ಷವನ್ನು ಮತದಾರರು ಸೋಲಿಸಿದ್ದಾಗಿರಲಿಲ್ಲ, ಬದಲಿಗೆ ಕೆಡವಿದ್ದರು!

ಉದಾಹರಣೆಗೆ, ಗುಜರಾತ್ ಚುನಾವಣೆ ನಡೆದು ಬಿಜೆಪಿ ಜಯಭೇರಿ ಬಾರಿಸಿದೆ! ಗುಜರಾತ್ ನ ವಿಧಾನಸಭಾ ಚುನಾವಣೆ ಯಲ್ಲಾದ ಸೋಲನ್ನು
ಅವಲೋಕನ ಮಾಡಿದರೆ, ಆಪ್ ನ ಹೀನಾಯ ಪರಿಸ್ಥಿತಿ ಅರ್ಥವಾಗಿ ಬಿಡುತ್ತದೇನೋ!

ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸುವುದೋ ಬೇಡವೋ ಎಂಹ ಗೊಂದಲದಲ್ಲಿಯೇ ಕೊನೆಗೂ ಕಣಕ್ಕಿಳಿದಿತ್ತು ಆಪ್! 27 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಆಪ್ ನ ಪರಿಸ್ಥಿತಿಯನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಿ. ಆಮ್ ಆದ್ಮಿ ಪಕ್ಷಕ್ಕೆ ಬಂದ ಮತಗಳು ಹಾಗೂ ಅದೇ ಪ್ರದೇಶಗಳಲ್ಲಿ ನೋಟಾಗೆ ಹಾಕಿದ ಮತಗಳನ್ನು ಗಮನಿಸಿ! ಆಪ್ ನನ್ನು ಕೆಡಗಿದ್ದಾರೆಂಬ ಮಾತಿಗೆ ನಿಜಕ್ಕೂ ಪುಷ್ಟಿ ಸಿಗುತ್ತದೆ!

ಒಂದಷ್ಟು ಮುಖ್ಯಾಂಶಗಳು ಇಲ್ಲಿವೆ!

1. ಆಪ್ 27 ಕ್ಕೆ 27 ಸ್ಥಾನಗಳನ್ನೂ ಕಳೆದುಕೊಂಡಿದೆ. ವಾಸ್ತವವಾಗಿ, ಆಪ್ ತನ್ನ ಭಧ್ರತಾ ಠೇವಣಿಯನ್ನೇ ಕಳೆದುಕೊಂಡಿದೆ.

2. ಆಪ್, 26 ಪ್ರದೇಶಗಳಲ್ಲಿ, ನೋಟಾಗೆ ಬಂದ ಮತಗಳಿಗಿಂತಲೂ ಕಡಿಮೆ ಮತಗಳನ್ನು ಪಡೆದಿದೆ.

3. ಆಪ್ ಅಭ್ಯರ್ಥಿಗೆ ಗರಿಷ್ಟ ಮತ ಸಿಕ್ಕಿರುವುದು ಛೋಟಾ ಉದಯ್ ಪುರ್ ನಲ್ಲಿ! ಅದೂ ಸಹ, 4551 ಮತಗಳಷ್ಟೇ! ಬಹುತೇಕ ಅಭ್ಯರ್ಥಿಗಳು 500 ರ ಆಸುಪಾಸಿನಲ್ಲಿ ಮತ ಪಡೆದಿದ್ದಾರೆ. ಸಾಮಾನ್ಯವಾಗಿ ಗೆಲ್ಲುವ ಅಭ್ಯರ್ಥಿಗಳು 60,000 ಮತಗಳನ್ನಾದರೂ ತೆಗೆದುಕೊಳ್ಳುತ್ತಾರೆ.

4. ಒಟ್ಟಾರೆಯಾಗಿ ಗುಜರಾತ್ ನಲ್ಲಿ ಆಪ್ ಗೆ ಸಿಕ್ಕಿರುವುದು ಕೇವಲ 24,918 ಮತಗಳು ಮಾತ್ರ. ಅದೇ, ನೋಟಾಗೆ ಸಿಕ್ಕಿದ್ದು 5,51,615 ಮತಗಳು!

5. ಅಕಸ್ಮಾತ್, ಒಟ್ಟಾರೆಯಾಗಿ ಗುಜರಾತ್ ನಲ್ಲಿ ಆಪ್ ಗೆ ಸಿಕ್ಕಿರುವ ಮತಗಳು ಒಂದೇ ಪ್ರದೇಶದಿಂದ ಸಿಕ್ಕಿದ್ದರೂ ಸಹ, ಆಪ್ ಗೆಲ್ಲುತ್ತಿರಲಿಲ್ಲ. ಈ ವಾಸ್ತವ ಆಪ್ ನ ಹೀನಾಯ ಸ್ಥಿತಿಯನ್ನು ತೋರಿಸುತ್ತಿದೆಯಷ್ಟೇ!

6. ಒಟ್ಟಾರೆಯಾಗಿ, ಆಪ್ ನ ಶೇಕಡಾವಾರು ಮತ 00.08% , ಅಂದರೆ, ಪ್ರತಿ 10,000 ಮತದಾರರಲ್ಲಿ 8 ಮತದಾರರು ಮಾತ್ರ ಕೇಜ್ರಿವಾಲ್ ಗೆ ಬೆಂಬಲ ನೀಡುತ್ತಿದ್ದಾರೆ! ಅಷ್ಟೇ!!

ಒಂದಷ್ಟು ದಿನಗಳ ಹಿಂದೆಯೂ ಸಹ, ಗೋವಾ ಮತ್ತು ಪಂಜಾಬ್ ನಲ್ಲಿ ಆಪ್ ಗರಿಷ್ಟ ಮತ ತೆಗೆದುಕೊಳ್ಳುತ್ತಿದೆ ಎಂದು ಸಮೀಕ್ಷಾ ವರದಿ ಹೇಳಿತ್ತಾದರೂ ನಂಬುವುದು ಕಷ್ಟ ಸಾಧ್ಯವಲ್ಲವೇ?!

ಚುನಾವಣೆ ನಡೆದ ನಂತರ, ಗೋವಾದಲ್ಲಿದ್ದ ಆಪ್ ನ 39 ಅಭ್ಯರ್ಥಿಗಳಲ್ಲಿ 38 ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದರು. ಪಂಜಾಬ್ ನಲ್ಲಿಯೂ ಸಹ, ತನ್ನ ಠೇವಣಿ ಕಳೆದುಕೊಂಡ ಆಪ್ , ‘ತನ್ನ ವಿಫಲ ಆಡಳಿತ ನೀತಿ, ವಿಫಲ ಚುನಾವಣಾ ಪ್ರಚಾರ’ದಿಂದ ಸಂಪೂರ್ಣವಾಗಿ ಸ್ವೀಪ್ ಔಟ್ ಆಗಿತ್ತು.

ಅದೇ ರೀತಿ, ರಾಜೌರಿಯ ಬೈಪೋಲ್ ಚುನಾವಣೆಯಲ್ಲಿಯೂ ಸಹ ಆಪ್ ಗೆಲ್ಲಲಿಲ್ಲ. 2017, ಏಪ್ರಿಲ್ ನಲ್ಲಿ ನಡೆದ ಎಮ್ ಸಿ ಡಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು 181 ಸೀಟುಗಳಾದರೆ, ಆಪ್ ಗೆ ಸಿಕ್ಕಿದ್ದು 49 ಸೀಟುಗಳು! ತನ್ನ ಸ್ವಂತ ಪ್ರದೇಶದಲ್ಲಿಯೇ ವಿಫಲನಾಗುವವನು, ದೇಶವನ್ನು ಹೇಗೆ ಮುನ್ನಡೆಸಿಯಾನು?!

ಸೋಲನ್ನೊಪ್ಪಿಕೊಳ್ಳದ ಅರವಿಂದ್ ಕೊನೆಗೆ ಮತಯಂತ್ರಗಳ ದೋಷವೆಂದು ಜಿದ‌್ದಿಗೆ ಬಿದ‌್ದರಷ್ಟೇ ಹೊರತು ರಾಷ್ಟ್ರ ಹಿತಕ್ಕಾಗಿ ರಾಜಕೀಯ ಬಿಡಲಿಲ್ಲ !

ಉತ್ತರ ಪ್ರದೇಶದ ನಾಗರಿಕರ ಚುನಾವಣೆಯಲ್ಲಿಯೂ ಅದೇ ಗತಿ!

5433 ನಗರ ಪಂಚಾಯತ್ ಸೀಟುಗಳಲ್ಲಿ, ಆಪ್ ಗೆದ‌್ದಿದ್ದು ಕೇವಲ 8 ಸೀಟುಗಳನ್ನು.ಮಾತ್ರ! ಅಂದರೆ, 00.14% ಸಕ್ಸಸ್ ರೇಟ್!

ಪಂಜಾಬ್ ನ ಸಂಸದೀಯ ಚುನಾವಣೆಯಲ್ಲಿ ಸುಯ್ ಎಂದು ಜಾರಿ ಬಿದ‌್ದಿತ್ತು ಆಪ್!

ಎಲ್ಲರೂ ಈ ಸಲ ಆಪ್ ಗೆಲ್ಲುತ್ತದೆಂದಸ ಅಭಿಪ್ರಾಯ ಪಟ್ಟಿದ್ದರು.! ಆದರೆ, ಈ ಕೆಳಗಿನ ವರದಿ ನೋಡಿ!

ಆಪ್ ಗೆ ಸಿಕ್ಕಿದ್ದು ಕೇವಲ 23,579 ಮತಗಳು!

ಮುನಿಸಿಪಲ್ ಚುನಾವಣೆಯ ವರದಿ ಇದು! ಮೂರು ಕಡೆ ಶೂನ್ಯ!

ಇವಿಷ್ಟೂ ಸಹ, ಆಮ್ ಆದ್ಮಿ ಪಕ್ಷದ ಹೀನಾತಿ ಹೀನ ಸೋಲನ್ನೇ ಎತ್ತಿ ತೋರಿಸುತ್ತವೆ!

ಇದಕ್ಕೆಲ್ಲ ಕಾರಣ ಯಾರು?!

ಬೇರೆ ಯಾರೂ ಅಲ್ಲ! ಒನ್ ಆಂಡ್ ಒನ್ಲಿ ‘ಅರವಿಂದ್ ಕೇಜ್ರಿವಾಲ್!’

Image result for aravind kejrival

– ಪೃಥು ಅಗ್ನಿಹೋತ್ರಿ

Tags

Related Articles

Close