ಪ್ರಚಲಿತ

ನಿನ್ನ ಅಪ್ಪನಿಗೂ ವಯಸ್ಸಾಗಿದೆ, ಹಿಮಾಲಯಕ್ಕೆ ಕಳುಹಿಸುವೆಯಾ.? ಮೋದಿಗೆ ವಯಸ್ಸಾಗಿದೆ ಎಂದ ಜಿಗ್ನೇಶ್‍ಗೆ ಟಾಂಗ್ ಕೊಟ್ಟ ಜಗ್ಗೇಶ್

ಗುಜರಾತ್ ಚುನಾವಣೆಯೇನೋ ಮುಗಿಯಿತು. ಕಾಂಗ್ರೆಸ್ ಮತ್ತೆ ಸೋತು ಸುಣ್ಣವಾಗಿ ಹೋಯಿತು. ಭಾರತೀಯ ಜನತಾ ಪಕ್ಷ 22 ವರ್ಷಗಳ ನಂತರವೂ ತಮ್ಮ ಪಕ್ಷವನ್ನು ಗುಜರಾತಿನಲ್ಲಿ ನೆಲೆಕಳೆದುಕೊಳ್ಳದಂತೆ ಮಾಡಿ ಯಶಸ್ಸನ್ನೂ ಪಡೆಯಿತು. ಇತ್ತ ಭಾರತೀಯ ಜನತಾ ಪಕ್ಷವನ್ನು ಶತಾಯಗತಾಯ ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್, ಸ್ವಯಂ ಘೋಷಿತ ಜಾತಿ ನಾಯಕರನ್ನು ಹೆಣೆದು ಬಿಟ್ಟಿತು. ಕಾಂಗ್ರೆಸ್ ಬೀಸಿದ ಬಲೆಗೆ ಸಿಲುಕಿದ ಆ ಸ್ವಯಂಘೋಷಿತ ಜಾತಿ ನಾಯಕರು ಕಾಂಗ್ರೆಸ್ ಪಕ್ಷ ಗುಜರಾತ್‍ನಲ್ಲಿ ಗೆಲ್ಲಲು ಹರಸಾಹಸಪಟ್ಟಿದ್ದರು. ಅದರಲ್ಲಿ ಒಬ್ಬ ದಲಿತ ನಾಯಕ ಎಂದು ಪೋಸು ಕೊಡುತ್ತಿದ್ದ ಜಿಗ್ನೇಶ್ ಮೇವಾನಿ.

ಸ್ವಘೋಷಿತ ದಲಿತ ನಾಯಕ ಈ ಜಿಗ್ನೇಶ್ ಮೇವಾನಿ ಎಂಬ ಸೋಗಲಾಡಿ. ಹಿಂದಿನಿಂದಲೂ ತನಗೆ ಇರುವ ಜವಬ್ಧಾರಿಯನ್ನು ಮರೆತೇ ಆತ ಮಾತನಾಡುತ್ತಿದ್ದ. ಹೆಸರಿಗೆ ದಲಿತ ನಾಯಕ ಎಂದು ಕರೆಸಿಕೊಳ್ಳುತ್ತಿದ್ದ ಈತ ಚುನಾವಣೆಗೆ ನಿಂತಿದ್ದು ಮಾತ್ರ ಮುಸಲ್ಮಾನ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲಿ. ದಲಿತ ನಾಯಕನೆಂದು ಪೋಸು ಕೊಟ್ಟು ಚುನಾವಣೆ ಗೆದ್ದಿದ್ದು ಮಾತ್ರ ಮುಸ್ಲಿಂ ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ. ಅಷ್ಟೊಂದು ಕಾಳಜಿ ಇದ್ದಿದ್ದರೆ ದಲಿತರು ಅಧಿಕವಾಗಿರುವ ಕ್ಷೇತ್ರದಲ್ಲಿ ನಿಲ್ಲಬಹುದಿತ್ತಲ್ಲವೇ..?

ಮೋದೀಜಿಯನ್ನು ವಾಚಾಮಗೋಚರವಾಗಿ ನಿಂದಿಸಿದ ಜಿಗ್ನೇಶ್…

ರಾಜಕೀಯದಲ್ಲಿ ನಯಾ ಪೈಸೆಯ ಅನುಭವವಿಲ್ಲದಿದ್ದರೆ ಹೀಗೇ ಆಗೋದು. ಯಾರಿಗೆ ಯೇನು ಹೇಗೆ ಮಾತನಾಡಬೇಕು ಎಂಬ ಕನಿಷ್ಟ ಅರಿವೂ ಇಲ್ಲದ ಈ ಜಿಗ್ನೇಶ್ ಮೇವಾನಿಗೆ ರಾಜಕೀಯ ಅನ್ನೋದು ದೂರದ ಮಾತು. ಮೋದಿ ಏನು ಎಂಬುವುದು ಈ ದೇಶ ಮಾತ್ರವಲ್ಲದೆ ವಿಶ್ವಕ್ಕೆ ಗೊತ್ತಿದೆ. ಅವರು ಒಂದು ಮಾತೆತ್ತಿದರೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದೂ ಗೊತ್ತಿರುವ ವಿಷಯವೇ. ಆದರೂ ಅಂತಹ ಮಹಾನ್ ನಾಯಕನ ಬಗ್ಗೆ ಮೊನ್ನೆ ಮೊನ್ನೆ ಹುಟ್ಟಿದ ಈ ಸ್ವಯಂ ಘೋಷಿತ ಹೋರಾಟಗಾರರು ಬಾಯಿಗೆ ಬಂದ ಹಾಗೆ ಮಾತನಾಡೋದು ಅವರ ಯೋಗ್ಯತೆಗೆ ಹಿಡಿದ ಕೈಗನ್ನಡಿಯಲ್ಲದೆ ಮತ್ತೇನೂ ಅಲ್ಲ.

ಜಿಗ್ನೇಶ್ ಮೇವಾನಿ ಎಂಬ ಈ ಸೋಗಲಾಡಿ ನಾಯಕ ಮೋದಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. “ಮೋದಿಗೆ ವಯಸ್ಸಾಗಿದೆ. ಅವರು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹಿಮಾಲಯಕ್ಕೆ ಹೋಗಿ ಪೂಜೆ ಮಾಡಲಿ” ಎಂದು ಹೇಳಿದ್ದಾನೆ. ಓರ್ವ ಪ್ರಧಾನಿಗೆ ಈ ರೀತಿ ನಿಂದನೆಯನ್ನು ಮಾಡುವುದು ಎಷ್ಟು ಸರಿ. ಇದು ವ್ಯಾಪಕವಾಗಿ ಚರ್ಚೆಯಾಗಿ ಟೀಕೆಗೆ ಗುರಿಯಾಗಿದ್ದಾನೆ. ಕೇವಲ ಒಂದು ಸೀಟು ಗೆದ್ದು ಹೀಗೆ ವರ್ತಿಸುವ ಈ ವ್ಯಕ್ತಿ ಇನ್ನು ರಾಜಕೀಯದ ಉನ್ನತಕ್ಕೆ ಹೋದರೆ ಯಾವ ರೀತಿ ವರ್ತಿಸಬಹುದು ಎಂಬುವುದೇ ಈಗ ಇರುವ ವಿಷಯವಾಗಿದೆ.

ಜಿಗ್ನೇಶ್‍ಗೆ ಜಗ್ಗೇಶ್ ಕೊಟ್ಟರು ಟಾಂಗ್…

ಈ ರೀತಿ ಯೋಗ್ಯರಹಿತವಾದ ಹೇಳಿಕೆ ನೀಡಿದ್ದ ಜಿಗ್ನೇಶ್ ಮೇವಾನಿಗೆ ಕನ್ನಡದ ಸಿನಿಮಾದ ನವರಸ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ. ಅಸಭ್ಯ ಹೇಳಿಕೆ ನೀಡಿರುವ ಜಿಗ್ನೇಶ್ ಮೇವಾನಿಯ ಚಳಿಯನ್ನು ಬಿಡಿಸಿದ್ದಾರೆ ನವರಸ ನಾಯಕ ಜಗ್ಗೇಶ್.

“ನಿನಗೂ ಒಬ್ಬ ತಂದೆ ಇದ್ದಾರೆ. ನಿನ್ನ ತಂದೆಗೂ ವಯಸ್ಸಾಗಿರಬೇಕು. ಆಗಿರುತ್ತದೆ.! ಒಮ್ಮೆ ನಿನ್ನ ತಂದೆಗೂ ಈ ಮಾತು ಪ್ರಯೋಗಿಸು! ಆವಾಗ ನಿನ್ನನ್ನು ಹೆತ್ತ ಅವರ ಜನ್ಮವೂ ಸಾರ್ಥಕವಾಗುತ್ತದೆ! ಅಲ್ಪನಿಗೆ ಐಶ್ವರ್ಯ ಬಂದರೆ ಹೀಗೇ ಆಗೋದು. ಮೋದಿ ಈ ರಾಷ್ಟ್ರದ ಹೆಮ್ಮೆ. ಅವರ ಮಾಗಿದ ವಯಸ್ಸಿನ ಅನುಭವವೇ ರಾಷ್ಟ್ರ, ಅಂತರಾಷ್ಟ್ರ ಅವರನ್ನು ಒಪ್ಪಿ ಮೆಚ್ಚಿದ್ದು. ನಿಮ್ಮಂತಹ ಅರ್ಧ ಬೆಂದ ಮಡಕೆ ತೆಗಳಿದಷ್ಟು ಅವರಿಗೆ ಶ್ರೇಯಸ್ಸು ಅಲ್ವಾ..?” ಎಂದು ಜಗ್ಗೇಶ್ ಮಾರ್ಮಿಕವಾಗಿ ನುಡಿದಿದ್ದಾರೆ.

ಎಷ್ಟೊಂದು ಕಠೋರವಾದ ನೇರ ನುಡಿ ಅಲ್ವಾ… ಜಿಗ್ನೇಶ್ ಮೇವಾನಿ ಎಂಬ ನಾಲಾಯಕ್ ವ್ಯಕ್ತಿ ಅರೆ ಬೆಂದ ಮಡಕೆ ಎಂದು ಹೇಳಿದ್ದ ಜಗ್ಗೇಶ್ ಮಾತಿನಲ್ಲಿ ಪೂರ್ಣವಾದ ಅರ್ಥವಿದೆ. ಮೋದಿಯನ್ನು ತೆಗಳಿದರೆ ತಮಗೆ ಹೆಚ್ಚಿನ ಪ್ರಚಾರ ಸಿಗುತ್ತದೆ ಎಂಬ ಉದ್ದೇಶದಿಂದಲೇ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾನೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ನಾಲ್ಕು ಮಂದಿಯೂ ಗುರುತಿಸದ ಈ ವ್ಯಕ್ತಿಯನ್ನು ಗುರುತಿಸುವಂತೆ ಮಾಡಲು ಆತ ಉಪಯೋಗಿಸಿದ್ದೇ ಮೋದಿಯನ್ನು ವಾಚಾಮಗೋಚರವಾಗಿ ನಿಂದಿಸುವುದು. ಮೋದಿಯನ್ನು ನಿಂದಿಸಿದರೆ ಯಾವ ಬೀದಿ ಬಿಕ್ಷುಕನೂ ಮಾಧ್ಯಮಗಳು ಹಾಗೂ ಮೋದಿ ವಿರೋಧಿಗಳ ಕೃಪಾ ಕಟಾಕ್ಷದಿಂದ ಎತ್ತರಕ್ಕೆ ಹೋಗಿ ನಿಲ್ಲುತ್ತಾರೆ ಎಂದು ಗೊತ್ತಿದ್ದೇ ಈ ನಿರ್ಧಾರಕ್ಕೆ ಬರುತ್ತಾನೆ ಈ ಜಿಗ್ನೇಶ್ ಮೇವಾನಿ ಎಂಬ ತಲೆ ತಿರುಕ.

ರಾಜ್ಯಕ್ಕಿಂತ ಜಾತಿ ಮುಖ್ಯ ಎಂದ ಜಿಗ್ನೇಶ್ ಮೇವಾನಿ..!

ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳು ಜಿಗ್ನೇಶ್ ಬಳಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ನಿಮಗೆ ತುಂಬಾ ಮುಖ್ಯವಾದುದು ಹಾಗೂ ಹೆಮ್ಮೆಯಾಗಿರುವುದು ಯಾವುದು ಎಂದು. ಅದಕ್ಕೆ ಜಿಗ್ನೇಶ್ ಕೊಟ್ಟ ಉತ್ತರವೇ ಆತನ ನೈಜ ಮುಖವನ್ನು ಪರಿಚಯ ಮಾಡುತ್ತೆ. “ನನಗೆ ತುಂಬಾ ಮುಖ್ಯವಾದುದು ದಲಿತ ಜಾತಿ ಹಾಗೂ ತುಂಬಾ ಹೆಮ್ಮೆ ಅನಿಸಿರುವುದೂ ದಲಿತ ಜಾತಿಯವನೆಂಬುವುದು ಎಂದು ಉತ್ತರಿಸುತ್ತಾನೆ. ದಲಿತ ಎಂಬ ಪದದಿಂದ ಜನರನ್ನು ಮುಕ್ತಗೊಳಿಸಬೇಕೆಂದು ಜನರು ಬಯಸಿದ್ದರೋ ಅದೇ ಜನರನ್ನು ಮತ್ತೆ ದಲಿತರಾಗಿಯೇ ಕಾಣಿಸಲು ಈ ಸ್ವಘೋಷಿತ ನಾಯಕ ಟೊಂಕಕಟ್ಟಿ ನಿಂತಿರುವುದೂ ಇದಕ್ಕೆ ಸಾಕ್ಷಿಯಾಗಿದೆ. ದಲಿತರು ಮುಖ್ಯವೇದಿಕೆಗೆ ಬಂದರೆ ತಮ್ಮ ಹೋರಾಟಗಳು ವ್ಯರ್ಥವಾಗುತ್ತದೆ ಎಂಬುವುದು ಈ ಜಿಗ್ನೇಶನಿಗೆ ಗೊತ್ತಿಲ್ಲದೇನಿಲ್ಲ. ಈಕಾರಣಕ್ಕಾಗಿಯೇ ದಲಿತರು ದಲಿತರಾಗಿಯೇ ಇರಬೇಕು ಎನ್ನುವುದು ಇವನ ಆಶಯ ಅಷ್ಟೆ.

ಇವನ ಈ ತಲೆತಿರುಕ ಮಾತಿಗೆ ಅದೇ ಗುಜರಾತ್‍ನ ದಲಿತರೇ ತಕ್ಕ ತಿರುಗೇಟನ್ನು ನೀಡಿದ್ದಾರೆ. “ನಮ್ಮಲ್ಲೇನಾದರೂ ನಿಮಗೆ ಯಾವುದು ಮೊದಲು ಹಾಗೂ ಯಾವುದು ಹಮ್ಮೆ ಎಂದು ಕೇಳಿದರೆ, ನಾವು ಖಂಡಿತವಾಗಿಯೂ ಗುಜರಾತ್ ರಾಜ್ಯವೇ ಮೊದಲು ಹಾಗೂ ನಮ್ಮ ಗುಜರಾತ್ ರಾಜ್ಯದ ಸಮಗ್ರ ಅಭಿವೃದ್ಧಿಯೇ ಮುಖ್ಯ ಎಂದು ಹೇಳುತ್ತಿದ್ದೆವು. ಆದರೆ ತನ್ನ ಸ್ವಾರ್ಥಕ್ಕಾಗಿ ದಲಿತರನ್ನು ಎತ್ತಿಕಟ್ಟುವ ಜಿಗ್ನೇಶ್ ಮೇವಾನಿಗೆ ನಮ್ಮನ್ನು ಮತ್ತಷ್ಟು ಹೊರದೂಡಲೇ ಯತ್ನಿಸುತ್ತಾನೆ” ಎಂದು ಕಿಡಿಕಾರಿದ್ಧಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜಿಗ್ನೇಶ್ ಮೇವಾನಿಗೆ ಟಾಂಗ್…!!!

ಇನ್ನು ಮೋದಿಯನ್ನು ತೆಗಳಿದರೇ ಕೆಂಡಕಾರುವ ಜನತೆ, ಮೋದಿ ಬಗ್ಗೆ ಅಸಭ್ಯ ಮಾತುಗಳನ್ನಾಡಿದರೆ ಬಿಡುತ್ತರೆಯೇ. ಸ್ವತಂತ್ರ್ಯ ಮಾಧ್ಯಮ ಸಾಮಾಜಿಕ ಜಾಲತಾಣಗಳಲ್ಲಿ ಜಿಗ್ನೇಶ್ ಮೇವಾನಿಯನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಜಿಗ್ನೇಶ್ ಮೇವಾನಿ ಎಂಬ ಸೋಗಲಾಡಿ ನಾಯಕನಿಗೆ ಪ್ರಶ್ನೆಯ ಮೇಲೆ ಪ್ರಶ್ನೆಯನ್ನಿಟ್ಟು ಪೇಚಿಗೆ ಸಿಲುಕುವಂತೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಜಿಗ್ನೇಶ್‍ನನ್ನು ತರಾಟೆಗೆ ತೆಗೆದುಕೊಂಡ ಪರಿ ನೋಡಿ…,

“ಮಧ್ಯ ಕುಡಿದ ಕುಡುಕರಂತೆ ವರ್ತಿಸುವ ಜಿಗ್ನೇಶ್ ಮೇವಾನಿಯೇ ನಿನಗೆ ಸ್ವಲ್ಪಾನಾದರೂ ಬುದ್ದಿ ಇದಿಯಾ..? ಮೋದಿಗೆ ವಯಸ್ಸಾಗಿದೆ, ಅವರು ಹಿಮಾಲಯಕ್ಕೆ ತೆರಳಿ ಪೂಜೆ ಮಾಡಲಿ ಎಂದು ಬೊಗಳಿದ್ದೀಯಲ್ಲಾ, ನೆಹರೂ ಪ್ರಧಾನಿಯಾಗಿದ್ದಾಗ ಅವರಿಗೂ ವಯಸ್ಸಾಗಿತ್ತಲ್ವಾ..? ಅವರೇನು ಯುವಕರಾಗಿದ್ದರೇ..? ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ವಯಸ್ಸಾಗಿತ್ತಲ್ಲವೇ..? ಅವರೇನು ಯುವತಿಯಾಗಿದ್ದರೇ..? ಮನಮೋಹನ್ ಸಿಂಗ್ ಪ್ರಧಾನಿಯಗಿದ್ದಾಗ ವಯಸ್ಸಾಗಿತ್ತಲ್ಲವೇ..? ಅವರೇನು ಯುವಕರಾಗಿದ್ದರೇ..?ಇವರ್ಯಾರೂ ಬೇಡ. ಯಾವ ಪ್ರಧಾನಿ ಯುವಕನಾಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಮೋದಿಗೆ ನಿಮ್ಮ ಸೋನಿಯಾರಷ್ಟು ವಯಸ್ಸಾಗಿದೆಯೇ..? ಆರೋಗ್ಯ ಕೈಕೊಡದಿದ್ದರೆ ಅವರಿನ್ನೂ ಹತ್ತಿಪ್ಪತ್ತು ವರ್ಷ ಕಾಂಗ್ರೆಸ್ ಅಧಿನಾಯಕಿಯಾಗಿಯೇ ಮುಂದುವರೆಯುತ್ತಿರಲಿಲ್ಲವೇ..? ಇರಲಿ ಬಿಡಿ. ನಿಮ್ಮ ಯುವ ನಾಯಕ ರಾಹುಲ್ ಗಾಂಧಿ ಮೋದಿಗಿಂತ 20 ವರ್ಷ ಚಿಕ್ಕವರು. ಹಾಗಾದರೆ ಇನ್ನು 20 ವರ್ಷಗಳಲ್ಲಿ ರಾಹುಲ್ ಗಾಂಧಿ ಹಿಮಾಲಯಕ್ಕೆ ಹೋಗುತ್ತಾರಾ..? ನಿಮಗೊಂದು ಕಾನೂನು, ಬೇರೆಯವರಿಗೊಂದು ಕಾನೂನಾ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತಿಹಾಸ ಅರಿವಿದಿಯಾ ಜಿಗನೇಶ..?

ಸ್ವಾತಂತ್ರ್ಯ ಸಿಕ್ಕ ನಂತರ ಹುಟ್ಟಿದವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದಾರೆ. ಅವರೇ ನರೇಂದ್ರ ಮೋದಿ. ಮೋದಿಯವರು ಸ್ವಾತಂತ್ರ್ಯ ನಂತರ ಜನಿಸಿದವರು. ಅಂದರೆ ಈವರೆಗೆ ಪ್ರಧಾನಿಯಾಗಿದ್ದವರೆಲ್ಲರೂ ಸ್ವಾತಂತ್ರ್ಯ ಪೂರ್ವದವರು. ಅತಿ ಚಿಕ್ಕ ಪ್ರಾಯದವರು ನರೇಂದ್ರ ಮೋದೀಜಿ. ಇತಿಹಾಸ ಅರಿವಿದ್ದಿದ್ದರೆ ಈ ಬಗ್ಗೆ ಮಾಹಿತಿ ಇರಬೇಕಿತ್ತು. ಇತಿಹಾಸದ ಆಯಾಮಗಳೇ ಗೊತ್ತಿಲ್ಲದಿದ್ದರೆ ಹೀಗೇ ಆಗೋದು. ಮಾಧ್ಯಮಗಳು ವಿಜ್ರಂಭಿಸಿದವು ಎಂದು ಹೀರೋ ಆಗಲು ಹೋದರೆ ಇನ್ನೇನಾಗುತ್ತದೆ… ಅಲ್ವಾ..?

ಒಟ್ಟಾರೆ ಮೋದಿಯನ್ನು ಅಸಭ್ಯ ಮಾತುಗಳಿಂದ ನಿಂದಿಸಿದ ಈ ಸೋಗಲಾಡಿ ಜಿಗ್ನೇಶ್ ಮೇವಾನಿ ಎಂಬ ಸ್ವಘೋಷಿತ ನಾಯಕನಿಗೆ ನಮ್ಮ ಕರ್ನಾಟಕದ ನವರಸ ನಾಯಕ ಜಗ್ಗೇಶ್ ನೀಡಿದ ಉತ್ತರ ಮಾತ್ರ ಅದ್ಭುತವಾಗಿತ್ತು. “ಹಾಟ್ಸ್ ಅಪ್ ಟೂ ಯೂ ಜಗ್ಗೇಶ್ ಸರ್…”

-ಸುನಿಲ್ ಪಣಪಿಲ

Tags

Related Articles

Close