ಪ್ರಚಲಿತ

ಪೂನಾವಾಲಾ ಗಾಂಧಿ ಕುಟುಂಬದ ವಿರುದ್ಧ ಏಕಾಏಕಿ ತಿರುಗಿಬೀಳಲು ಕುತಂತ್ರ ಹೂಡಿದ್ದು ಯಾರು ಗೊತ್ತೇ?!

ಕುಟುಂಬ ಕಲಹವೊಂದು ಬೀದಿಗೆ ಬಂದಿದೆ!!

ಮೊನ್ನೆ ಮೊನ್ನೆವರೆಗೂ ಗಾಂಧಿ ಕುಟುಂಬದ ಬಾಲ ಹಿಡಿದುಕೊಂಡು ಹೋಗುತ್ತಿದ್ದ ಶೆಹಜದ್ ಪೂನಾವಾಲ ಇಂದು ಏಕಾಏಕಿ ಗಾಂಧಿ ಕುಟುಂಬದ ವಿರುದ್ಧ ತಿರುಗಿಬೀಳಲು ಕಾರಣವೇನು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಗಾಂಧಿ ಕುಟುಂಬದ ವಿರುದ್ಧ ಶೆಹಜದ್ ಪೂನಾವಾಲ ತಿರುಗಿಬೀಳಲು ಕುತಂತ್ರ ಹೂಡಿದ್ದು ಯಾರು ಎನ್ನವುದು ಇದುವರೆಗೂ ಬಹಿರಂಗಗೊಳ್ಳದ ಸುದ್ದಿಯಾಗಿತ್ತು. ಕಾಂಗ್ರೆಸ್‍ನಲ್ಲಿ ಗುಲಾಮ ಸಂಸ್ಕøತಿ ಎಷ್ಟು ಚೆನ್ನಾಗಿ ಬೇರುಬಿಟ್ಟಿದೆ ಎಂದರೆ ಗಾಂಧಿ ಕುಟುಂಬಿಕರು ಏನೆಲ್ಲಾ ಹೇಳುತ್ತಾರೋ ಅದನ್ನೇ ಪಾಲಿಸಬೇಕೆಂಬ ಅಲಿಖಿತ ನಿಯಮವೊಂದಿದೆ. ಒಂದುವೇಳೆ ಗಾಂಧಿ ಕುಟುಂಬದ ವಿರುದ್ಧ ತಿರುಗಿಬಿದ್ದರೆ ಅವನ ಕಥೆ ಅಷ್ಟೆ. ಆದರೂ ಶೆಹಜದ್ ಪೂನಾವಾಲಾ ಗಾಂಧೀ ಕುಟುಂಬದ ವಿರುದ್ಧ ತಿರುಗಿ ಬೀಳಲು ಕಾರಣವೇನು? ಈತನಿಗೂ ರಾಹುಲ್‍ಗಾಂಧಿಗೂ ಇರುವ ಸಂಬಂಧವೇನು?

ಗಾಂಧೀ ಕುಟುಂಬದ ಕಟ್ಟಾಳು ತರ ಮಾತಾಡುತ್ತಿದ್ದ ಶೆಹಜದ್ ಪೂನಾವಾಲ, ಕಾಂಗ್ರೆಸ್ ಪಕ್ಷವನ್ನು ಬೆಳೆಸಲು ಸಖತ್ ಪ್ಲಾನ್‍ಗಳನ್ನು ಹೊಂದಿದ್ದರು. ಗಾಂಧಿ ಕುಟುಂಬದ ಮುಖವಾಣಿಯಂತೆ ಮಾತಾಡುತ್ತಿದ್ದ ಪೂನಾವಾಲ ಮೊನ್ನೆ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷಗಾದಿಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಕೆಂಡವಾದರು. ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದ್ಕೊಂಡ್ರಾ? ನನ್ನ ಜೊತೆ ಮುಕ್ತ ಚರ್ಚೆಗೆ ಬನ್ನಿ. ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕಾಗಿ ನಮ್ಮ ಯೋಜನೆ ಏನು ಎಂಬುದನ್ನು ಮುಕ್ತವಾಗಿ ಮಾತನಾಡೋಣ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶೆಹಜದ್ ಪೂನವಾಲಾ ರಾಹುಲ್ ಗಾಂಧಿಯವರಿಗೆ ನೇರ ಸವಾಲೆಸೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು. ಇಷ್ಟೆಲ್ಲಾ ಧೈರ್ಯವಾಗಿ ಮಾತಾಡಬಲ್ಲ ಪೂನಾವಾಲನಿಗೂ ರಾಹುಲ್‍ಗಾಂಧಿಗೂ ಇರುವ ನೆಂಟಸ್ತಿಕೆಯ ಬಗ್ಗೆ ತಿಳಿದರೆ ಖಂಡಿತಾ ಅಚ್ಚರಿಯಾಗಬಲ್ಲುದು.

ಶೆಹಜದ್ ಪೂನಾವಾಲ ಕೂಡಾ ಸಾಮಾನ್ಯ ವ್ಯಕ್ತಿಯಲ್ಲ. ಆಗರ್ಭ ಶ್ರೀಮಂತನಾಗಿರುವ ಪೂನಾವಾಲ ರಾಜಕೀಯ ಪ್ರವೇಶ ಮಾಡುವಾಗ ಆತನ ವಯಸ್ಸು 15. `ರಾಜಕೀಯವೆಂದರೆ ನನ್ನ ಪ್ರಕಾರ ಚುನಾವಣೆಯಲ್ಲಿ ಜಯಭೇರಿ ಬಾರಿಸುವುದಲ್ಲ, ಸೀಟು ಗೆದ್ದು ಸರಕಾರವನ್ನು ರಚಿಸುವುದಲ್ಲ, ಬದಲಾಗಿ ಸಮಾಜ ಹೇಗಿರಬೇಕು ಎಂಬ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು’ ಎಂದು ಪಕ್ಕಾ ರಾಜಕಾರಣಿ ಸ್ಟೈಲಲ್ಲಿ ಹೇಳಿ ರಾಜಕೀಯಕ್ಕೆ ಧುಮುಕಿದ್ದರು.

ಪುಣೆಯ ಶ್ರೀಮಂತ ಕುಟುಂಬದಲ್ಲಿ ಹುಟ್ಟಿರುವ ಶೆಹಜಾದ್ ಪೂನಾವಾಲಾ ಅವರು, ಪುಣೆಯ ಎಂಐಟಿ ಸ್ಕೂಲ್ ಆಫ್ ಗವರ್ನಮೆಂಟ್‍ನಲ್ಲಿ ಪದವಿ, ಇಂಡಿಯನ್ ಲಾ ಸ್ಕೂಲ್‍ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ಪ್ರಸ್ತುತ ದೆಹಲಿಯಲ್ಲಿ ವಕೀಲರಾಗಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅಲ್ಲದೆ, ಅವರು ನಾಗರಿಕ ರಕ್ಷಣಾ ಕಾರ್ಯಕರ್ತರಾಗಿಯೂ ಹೆಸರು ಗಳಿಸಿದ್ದಾರೆ. ಹಾಗೆ ನೋಡಿದರೆ ಒಂದು ಪಕ್ಷವನ್ನು ಮುನ್ನಡೆಸುವ ಎಲ್ಲಾ ಸಾಮಥ್ರ್ಯ ಈತನಿಗೂ ಇತ್ತು. ತನ್ನನ್ನು ತಾನು ನೆಹರೂವಾದಿ, ಗಾಂಧೀವಾದಿ, ನಾಗರಿಕ ಹಕ್ಕು ಹೋರಾಟಗಾರ, ಅಂಕಣಕಾರ, ನನ್ನ ಧರ್ಮ ಮುಸ್ಲಿಂ ಆದರೂ, ನನ್ನ ಸಂಸ್ಕೃತಿ ಹಿಂದೂ, ವಿಚಾರವಾದ ಭಾರತೀಯವಾದದ್ದು ಎಂದು ಬಣ್ಣಿಸಿಕೊಂಡಿದ್ದ. ರೋಹಿತ್ ವೇಮುಲ ಆತ್ಮಹತ್ಯೆಯ ನಂತರ ಪ್ರತಿಭಟನೆ ಭುಗಿಲೆದ್ದಿದ್ದಾಗ, ವಕೀಲರಾಗಿರುವ ಈತ ಜೆಎನ್‍ಯು ಪರವಾಗಿ ವಕಾಲತ್ತು ವಹಿಸಿಕೊಂಡಿದ್ದ ಪೂನಾವಾಲ ಒಮ್ಮೆಲೆ ಗಾಂಧಿಕುಟುಂಬದ ವಿರುದ್ಧ ಯಾಕೆ ತಿರುಗಿಬಿದ್ದ ಎಂದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಹಾಗೆ ನೋಡಿದರೆ ಗಾಂಧಿ ಕುಟುಂಬದ ವಿರುದ್ಧ ಧ್ವನಿ ಎತ್ತಬೇಕಾದರೆ ಅದಕ್ಕೆ ಧೈರ್ಯವಿರಬೇಕು. ಆದರೂ ಸೆಟೆದುನಿಂತ ಪೂನಾವಾಲ ಯಾವುದಕ್ಕೂ ಕ್ಯಾರ್ ಎನ್ನದೆ ನನ್ನ ಟೀಕೆಗಳಿಗೆ ಉತ್ತರವಿದೆ ಎಂದು ಗತ್ತಿನಿಂದ ನುಡಿದಿದ್ದರು. ಇದಕ್ಕೆ ಒಂದು ನಿಗೂಢವಾದ ಕಾರಣವೂ ಇದೆ.

ಶೆಹಜದ್ ಪೂನಾವಾಲನ ರಿಮೋಟ್ ಕಂಟ್ರೋಲ್ ರಾಬರ್ಟ್ ವಾದ್ರಾ? ಹಾಗಾದರೆ ಪೂನಾವಾಲನಿಗೂ ರಾಹುಲ್‍ಗೂ ಇರುವ ಸಂಬಂಧವೇನು?

ರಾಬರ್ಟ್ ವಾದ್ರಾ ಸೋನಿಯಾ ಗಾಂಧಿಯ ಅಳಿಯ, ರಾಹುಲ್ ಗಾಂಧಿಯ ಭಾವಾ, ಅರ್ಥಾತ್ ಪ್ರಿಯಾಂಕಾ ಗಾಂಧಿಯ ಗಂಡ ಎಂದು ಎಲ್ಲರಿಗೂ ಗೊತ್ತೇ ಇದೆ. ಭೂಹಗರಣದಲ್ಲಿ ಸಿಲುಕಿದ ರಾಬರ್ಟ್ ವಾದ್ರಾನ ಮೇಲೆ ಕೋಟಿಗಟ್ಟಲೆ ಗೋಲ್‍ಮಾಲ್ ಮಾಡಿದ ಆರೋಪವಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ವಾದ್ರಾನನ್ನು ಮದುವೆಯಾದ ಪ್ರಿಯಾಂಕಾ ಆತನ ಹೆಸರಲ್ಲಿ ಗೋಲ್‍ಮಾಲ್ ನಡೆಸಿ ಆತನನ್ನು ಬಲಿಪಶು ಮಾಡಲಾಗಿದೆ ಎನ್ನುವ ಮಾತುಗಳೂ ಚಾಲ್ತಿಯಲ್ಲಿದೆ. ಇದಕ್ಕಾಗಿ ವಾದ್ರಾನಿಗೆ ಪ್ರಿಯಾಂಕಳನ್ನು ಯಾಕಾಗಿ ಮದುವೆಯಾಗಿದ್ದೇನೆ ಎನ್ನುವ ಬೇಸರವೂ ಇದೆ ಎನ್ನುವ ಗುಸುಗುಸು ಸುದ್ದಿಯೊಂದು ಹರಡುತ್ತಿದೆ.

ಇದೇ ರಾಬರ್ಟ್ ವಾದ್ರಾನ ತಂಗಿಯನ್ನು ಮದುವೆಯಾಗಿರುವುದು ಯಾರು ಗೊತ್ತೇ? ಶೆಹಜದ್ ಪೂನಾವಾಲನ ಸಹೋದರ ತೆಹೆಸಿನ್ ಪೂನಾವಾಲಾ! ಕಳೆದ ವರ್ಷ ತೆಹೆಸಿನ್ ಪೂನಾವಾಲಾನ ಮದುವೆಯ ಆರತಕ್ಷತೆ ನಡೆದಾಗ ಮುಂದೆ ನಿಂತು ಉಸ್ತುವಾರಿ ನೋಡಿಕೊಂಡಿದ್ದು ರಾಬರ್ಟ್ ವಾದ್ರಾ ಮತ್ತು ಈಗ ರಾಹುಲ್ ಮೇಲೆ ಮುಗಿ ಬಿದ್ದ ಇದೇ ಶೆಹೆಜಾದ್ ಪೂನಾವಾಲ. ಆದ್ದರಿಂದ ಈ ಶೆಹಜದ್ ಪೂನಾವಾಲನಿಗೂ ರಾಹುಲ್ ಗಾಂಧಿ ಕುಟುಂಬಕ್ಕೂ ನೆಂಟಸ್ತಿಕೆ ಇದೆ ಎನ್ನುವುದು ಸಾಬೀತಾಗಿದೆ. ಈ ರಾಬರ್ಟ್ ವಾದ್ರಾ ಅಂದರೆ ರಾಹುಲ್ ಗಾಂಧಿಗೆ ಯಾಕೋ ಹಿಡಿಸುವುದಿಲ್ಲ. ಭಾವನಿಗೆ ಭಾವನನ್ನು ಕಂಡರೆ ಆಗುವುದಿಲ್ಲ ಎನ್ನುವ ಗಾದೆ ಮಾತಿನಂತೆ ರಾಬರ್ಟ್ ವಾದ್ರಾನಿಗೂ ರಾಹುಲ್ ಗಾಂಧಿಗೂ ಇದೆ.

ಇದಕ್ಕೂ ಒಂದು ಕಾರಣವಿದೆ!!

ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನಿಲ್ಲಬೇಕೆಂದು ರಾಬರ್ಟ್ ವಾದ್ರಾ ಬಹಿರಂಗವಾಗಿಯೇ ಹೇಳಿದಾಗ ರಾಹುಲ್ ಗಾಂಧಿ ನೇರವಾಗಿ ರಾಬರ್ಟ್‍ಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಆಗಿನಿಂದ ಇಬ್ಬರ ನಡುವೆ ಸಂಬಂಧ ಮುರಿದುಬಿದ್ದಿದೆ. ಕಾಂಗ್ರೆಸ್ ಕಚೇರಿಯ ನೌಕರರು ಹೇಳುವ ಪ್ರಕಾರ ಪ್ರತಿ ಬಾರಿ ಕಾಂಗ್ರೆಸ್ ಚುನಾವಣೆ ಸೋತಾಗ ಅಕ್ಬರ್ ರೋಡ್‍ನಲ್ಲಿ ಕಾಣಿಸುವ ಪ್ರಿಯಾಂಕಾ ಲಾವೋ ದೇಶ ಬಚಾವೋ ಭಿತ್ತಿ ಪತ್ರಗಳ ಹಿಂದೆ ಕೂಡ ರಾಬರ್ಟ್ ವಾದ್ರಾ ಶಿಷ್ಯನೇ ಇರುತ್ತಾನಂತೆ. ಜಗದೀಶ್ ಶರ್ಮ ಎಂಬ ದಿಲ್ಲಿಯ ಫುಡಾರಿ, ಕಚೇರಿಯಲ್ಲಿ ಓಡಾಡುತ್ತಿದ್ದರೆ ಸಾಕು ಅಲ್ಲಿನ ನೌಕರರು ಬಂದಾ ನೋಡಿ ರಾಬರ್ಟ್ ಬಾತ್ಮಿದಾರ ಎಂದು ಹೇಳುತ್ತಿರುತ್ತಾರೆ.

ಇದೇ ರಾಬರ್ಟ್ ವಾದ್ರಾ ರಾಹುಲ್ ಗಾಂಧಿಯ ಮೇಲಿರುವ ಸಿಟ್ಟಿನಿಂದ ಶೆಹಜದ್ ಪೂನಾವಾಲನ ಮುಖಾಂತರ ರಾಹುಲ್ ಗಾಂಧಿಯ ವಿರುದ್ಧ ತಿರುಗಿಬೀಳುವಂತೆ ಮಾಡಿ, ಅಧ್ಯಕ್ಷ ಹುದ್ದೆಯನ್ನು ಪ್ರಶ್ನಿಸುವಂತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶೆಹಜದ್‍ನ ಹೇಳಿಕೆಯಿಂದ ಕಂಗಾಲಾಗಿರುವುದು ಸ್ವತಃ ಆತನ ಅಣ್ಣ ತಹಸೀನ್ ಪೂನಾವಾಲ. ಶೆಹಜದ್‍ನ ಹೇಳಿಕೆಯನ್ನು ಬಹಿರಂಗವಾಗಿಯೇ ಟೀಕಿಸಿದ ತೆಹಸೀನ್, ಶೆಹಜದ್‍ನನ್ನು ನಾನು ಮಗನಂತೆಯೇ ಬೆಳೆಸಿದ್ದೆ. ಆತನ ಬಗ್ಗೆ ಅತೀವ ಪ್ರೀತಿ, ಗೌರವ ಹೊಂದಿದ್ದೆ. ಆದರೆ ಆತನ ವರ್ತನೆ ನಾನು ತಲೆತಗ್ಗಿಸುವಂತೆ ಮಾಡಿದೆ. ನಾನು ಮಾಧ್ಯಮಗಳಿಗೆ ಸ್ಪಷ್ಟವಾಗಿ ಹೇಳುತ್ತೇನೆ. ಶೆಹ್ಜಾದ್ ಮಾತಿಗೆ ನಾನಾಗಲೀ, ನನ್ನ ತಾಯಿ ಮತ್ತು ಹೆಂಡತಿಯಾಗಲಿ ಹೊಣೆಗಾರರಲ್ಲ. ಆತನಿಗೆ ಯಾರದೇ ಮೇಲೆ ವೈಮನಸ್ಯವಿದ್ದಿದ್ದರೂ ಅದನ್ನು ಪಕ್ಷದ ಫೆÇೀರಂನಲ್ಲಿ ಚರ್ಚಿಸಬಹುದಿತ್ತು. ಅದನ್ನು ಬಿಟ್ಟು ಏಕಾಏಕಿ ಮಾಧ್ಯಮಗಳ ಮುಂದೆ ಹೋಗಿ ಹೇಳಿಕೊಳ್ಳುವ ಅಗತ್ಯವಿರಲಿಲ್ಲ ಎಂದು ಅವರು ಕಿಡಿಕಾರಿದ್ದರು. ಒಟ್ಟಾರೆ ಶೆಹಜದ್‍ನ ಹೇಳಿಕೆ ಗಾಂಧಿ ಫ್ಯಾಮಿಲಿಯಲ್ಲಿ ಅಲ್ಲೋಲ ಕಲ್ಲೋಲ ಶೃಷ್ಟಿಯಾಗಿದೆ ಎನ್ನಬಹುದು.

ಶೆಹೆಜಾದ್ ಪೂನಾವಾಲಾಗೆ ಮಹಾರಾಷ್ಟ್ರ ಕಾಂಗ್ರೆಸ್ ಜವಾಬ್ದಾರಿ ನೀಡಲಾಗಿತ್ತು. ಅಲ್ಲದೆ ವಾದ್ರಾನ ಶಿಫಾರಸ್ಸಿನಿಂದಲೇ ಶೆಹಜಾದ್‍ನನ್ನು ಯುಪಿಎ ಸರ್ಕಾರದ ಅವಧಿಯಲ್ಲಿಯೇ ಆಗಿನ ಸಂಸದೀಯ ವ್ಯವಹಾರಗಳ ಸಚಿವ ರಾಜೀವ್ ಶುಕ್ಲಾ ತಮ್ಮ ಬಳಿ ಇಲಾಖೆ ಕೆಲಸಕ್ಕಾಗಿ ಇಟ್ಟುಕೊಂಡಿದ್ದರು. ಆದರೆ ಇಂದು ರಾಬರ್ಟ್ ವಾದ್ರಾನೆ ಗಾಂಧಿ ಫ್ಯಾಮಿಲಿಯ ವಿರುದ್ಧ ತಿರುಗಿ ಬಿದ್ದಿರುವುದರಿಂದ ಶೆಹಜದ್ ಮುಖಾಂತರ ವಂಶಪಾರಂಪರ್ಯದ ಹೇಳಿಕೆ ಕೊಡಿಸಿದ್ದಾರೆ ಎನ್ನುವುದು ಸ್ವತಃ ಕಾಂಗ್ರೆಸಿಗರೇ ಆಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಹೇಳುವುದಾದರೆ ಶೆಹಜದ್ ಪೂನಾವಾಲ ಕೂಡಾ ರಾಹುಲ್ ಕುಟುಂಬದ ನೆಂಟಸ್ತಿಕೆ ಹೊಂದಿದ್ದಾರೆ. ಇದರಿಂದಾಗಿ ಒಂದು ಕುಟುಂಬದ ಕಲಹವೊಂದು ಕೊನೆಗೂ ಬೀದಿಗೆ ಬಿದ್ದಂತಾಗಿದೆ.

-ಚೇಕಿತಾನ

Tags

Related Articles

Close