ಪ್ರಚಲಿತ

ಪ್ರಧಾನಿ ಮೋದಿಗೆ ಬೋ** ಮತ್ತು ಬು** ಎಂದು ಸಂಬೋಧಿಸಿದ ಜಿಗ್ನೇಶ್ ಮೇವಾನಿ ವಿರುದ್ಧ ವ್ಯಾಪಕ ಆಕ್ರೋಶ!

ವಿಷಕಾರಿಯಾದ ಹಾವುಗಳು ಈಗ ಹೊರಬಿದ್ದಿವೆ! ಸಿಕ್ಕ ಚೂರು ಪಾರು ಗೆಲುವನ್ನೇ ಬೃಹತ್ತಾಗಿ ತಲೆಗೇರಿಸಿಕೊಂಡು ಸಿಕ್ಕಸಿಕ್ಕಲ್ಲಿ ವಿಷ ಕಾರುತ್ತಿವೆಯಷ್ಟೇ! ಹಾರ್ದಿಕ್, ಅಲ್ಪೇಶ್ ಹಾಗೂ ಜಿಗ್ನೇಶ್ ಮೇವಾನಿ ಎಂಬ ರಾಜಕೀಯ ಸಿದ್ಧಾಂತವೇ ಗೊತ್ತಿಲ್ಲದವರು ಕಾಂಗ್ರೆಸ್ ಬಲದ ಮೇಲೆ ಗುಜರಾತಿನ ಮತಗಳನ್ನು ವಿಭಜಿಸಿದರಷ್ಟೇ! ಅಷ್ಟಕ್ಕೇ ಬೀಗಿ ಆಕಾಶದೆತ್ತರಕ್ಕೆ ಏರಿರುವವರಿಗೆ ಪ್ರಧಾನಿ ಮೋದಿಗೂ ಕೂಡ ಬಾಯಿಗೆ ಬಂದ ಹಾಗೆ ಬೊಗಳುವಷ್ಟು ಎಲ್ಲೆ ಮೀರಿದ್ದಾರೆ!

ಜಿಗ್ನೇಶ್ ಮೇವಾನಿ ಎಂಬ ದತ್ತುಪುತ್ರ ಪ್ರಧಾನಿಯನ್ನು ಅವಮಾನಿಸಿರುವುದು….

ಹೊಸದಾಗಿ ಆಯ್ಕೆ ಆಗಿರುವ ಜಿಗ್ನೇಶ್ ಎಂಬುವವನಿಗಿದು ‘ಸೈದ್ಧಾಂತಿಕ ಗೆಲುವಂತೆ!’ ಅದ್ಹೇಗೆ ಸಿದ್ಧಾಂತವೇ ಇಲ್ಲದಿರುವವಗೂ ಇದು ಸೈದ್ದಾಂತಿಕ ಗೆಲುವು?! 1995 ರಿಂದ ನಿರಂತರವಾಗಿ ಸೋಲುತ್ತಿರುವ ಜಿಗ್ನೇಶ್ ಮೇವಾನಿ ಹಾಗೂ ಆತನ ಬಳಗಕ್ಕೆ ಹೇಗಿದು ಸೈದ್ಧಾಂತಿಕ ಗೆಲುವು ಸ್ವಾಮಿ?! ಕೇವಲ ರಾಹುಲ್ ಗಾಂಧಿಯಂತಹ ತೀರಾ ವಿಚಿತ್ರ ವ್ತಕ್ತಿಗಳಷ್ಟೇ ಈ ರೀತಿಯಾಗಿ ಸಮರ್ಥಿಸಿಕೊಳ್ಳಲು ಸಾಧ್ಯವೆಂಬುದು ಸತ್ಯವಾದರೂ ಸಹ, ಜಿಗ್ನೇಶ್ ಮೇವಾನಿ ಎಂಬುವವನೊಬ್ಬ ಮತ್ತದೇ ಸಮರ್ಥನೆಗಿಳಿದಿದ್ದಾನೆ.

ಹಿರಿಯ ಪತ್ರಕರ್ತೆಯಾಗಿದ್ದ ಗೌರೀ ಲಂಕೇಶ್ ನ ದತ್ತುಪುತ್ರನಾದ ಈ ಜಿಗ್ನೇಶ್ “ಮೋದಿಗೆ ಮಾತನಾಡುವುದಕ್ಕೆ ಏನೂ ಇಲ್ಲ! ಆತನೊಬ್ಬ ತೀರಾ ಬೋರಿಂಗ್ ಮತ್ತು ಬುಡ್ಡಾ! (ಬುಡ್ಡಾ ಎಂದು ತೀರಾ ಅವಮಾನಕರವಾಗಿ ವೃದ್ಧರನ್ನು ಸಂಬೋಧಿಸುವುದು)!” ಎಂದು ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿರುವ ಜಿಗ್ನೇಶ್, ಇನ್ನೂ ಮುಂದುವರೆದು, “ಮೋದಿ ಈ ರಾಜಕಾರಣವನ್ನು ಬಿಟ್ಟು ಹಿಮಾಲಯಕ್ಕೆ ತೆರಳಲಿ! ಭಾರತದ ರಾಜಕೀಯವನ್ನು ನನ್ನಂತಹ ಯುವ ಜನಾಂಗಕ್ಕೆ ನೀಡಬೇಕು!” ಎಂದು ಸ್ವ ಪ್ರಶಂಸೆ ಮಾಡಿಕೊಂಡ ಜಿಗ್ನೇಶ್ ಗೆ ಭಾರತೀಯ ರಾಜಕೀಯದ ಸಿದ್ಧಾಂತಗಳ ಅರಿವಿದೆಯೇ?!

ಯಾವಾಗ ಜಿಗ್ನೇಶ್ ಇದನ್ನೇ ಮುಂದುವರೆಸಿ ಪ್ರಧಾನಿಗೆ ಅವಮಾನ ಮಾಡತೊಡಗಿದನೋ, ಆಗ ಜೊತೆಯಲ್ಲಿದ್ದ ಸಿಡಿ ಗುರು ಹಾರ್ದಿಕ್ ಪಟೇಲ್ ಮತ್ತು ಮಶ್ರೂಮ್ ಹುಡುಗ ಅಲ್ಪೇಶ್ ಠಾಕೂರ್ ವಿರೋಧಿಸದೇ, ಬೆಂಬಲ ನೀಡುತ್ತಿದ್ದರಲ್ಲಿಯೇ ಅರ್ಥವಾಗಿ ಬಿಡುತ್ತದೆ! ರಾಹುಲ್ ಗಾಂಧಿಯ ಅಪ್ಪಟ ಶಿಷ್ಯ ವರ್ಗದವರೆಂದು!

‘ಒಂದು ನಗರದ MLA ಆದವನಿಗೆ, ದೇಶದ ಪ್ರಧಾನಿಯ ಬಗ್ಗೆ ಯಾವ ರೀತಿ ಗೌರವ ಕೊಡಬೇಕೆಂದು ಗೊತ್ತಿಲ್ಲದೇ ಇರುವುದನ್ನು ನೋಡಿದರೆ ನಿಜಕ್ಕೂ ಅಸಹ್ಯವಾಗುತ್ತದೆ. ಸಂದರ್ಶಕಿ ಈ ನಡೆಯನ್ನು ಬಲವಾಗಿ ವಿರೋಧಿಸಬೇಕು’ ಎಂದು ಟ್ವಿಟ್ಟರಾಯಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಲವೇ ನಿಮಿಷಗಳಲ್ಲಿ,ಬಿಜೆಪಿಯ ರಾಷ್ಟ್ರೀಯ ವಕ್ತಾರ ಜಿವಿ ಎಲ್ ನರಸಿಂಹ ರಾವ್, “ರಾಹುಲ್ ಗಾಂಧಿಯವರೇ, ಜಿಗ್ನೇಶ್ ಮೇವಾನಿ ದೇಶದ ಪ್ರಧಾನಿಗೆ ಅವಮಾನಕರವಾಗಿ ಮಾತನಾಡುತ್ತಿದ್ದಾನೆ. ನಾಚಿಕೆಗೆಟ್ಟರವಂತೆ ಮಾತನಾಡುತ್ತಿರುವ ಜಿಗ್ನೇಶ್ ಮೇವಾನಿ ಯ ನಡೆ ನೀವು ಹೊಸದಾಗಿ ಪರಿಚಯಿಸುತ್ತಿರುವ ‘ಪ್ರೀತಿಯ ರಾಜಕೀಯ’ವೇ?!” ನೀವೀಗ ನಿಮ್ಮ ನಾಯಕರನ್ನು ಐವತ್ತರ ಮೇಲ್ಪಟ್ಟ ಹಿರಿಯ ರಾಜಕಾರಣಿಯನ್ನು ನಿಂದಿಸುವಂತೆ ತರಬೇತಿ ನೀಡಲಾಗುತ್ತಿದೆಯೇ?! ನಿಮಗೇನಾದರೂ ಆದರ್ಶ ಸಿದ್ಧಾಂತಗಳೆಂಬುದೇನಾದರೂ ಇದ್ದರೆ, ನಿಮ್ಮ ಪಕ್ಷದ ನಾಯಕನ ತಪ್ಪಿಗೆ ಕ್ಷಮೆ ಕೇಳಿ!” ಎಂದು ಝಾಡಿಸಿದ್ದಾರೆ!

ಅಯ್ಯೋ ಜಿಗ್ನೇಶ್! ನಿನಗೆ ಮೋದಿಯನ್ನು ಹೋಲಿಕೆ ಮಾಡಲೂ ಸಾಧ್ಯವಾಗದಷ್ಟಿದೆ ನಿನ್ನ ಕೀಳು ವ್ಯಕ್ತಿತ್ವ!

1. ಈ ಜಿಗ್ನೇಶ್ ಎಂಬುವವ ‘ಭಯೋತ್ಪಾದಕರ ರಕ್ತಸಂಬಂಧಿ’ಗಳಿಂದ ಹಣ ತೆಗೆದುಕೊಳ್ಳುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ‌್ದು ಪೋಲಿಸರ ಅತಿಥಿಯಾಗಿದ್ದ!

2. ಇದೇ ಮನುಷ್ಯ, ಗೌರೀ ಲಂಕೇಶ್ ಹತ್ಯೆಯ ವಿಚಾರವಾಗಿ, ‘ಮೋದಿ ಎದೆಯ ಮೇಲೆ ಕುಳಿತು ನ್ಯಾಯ ಕೇಳೋಣ’ ಎಂದಿದ್ದ! ಆಹ್! ಗೌರೀ ಲಂಕೇಶ್ ಹತ್ಯೆಯಾಗುವುದಕ್ಕೂ, ಮೋದಿಗೂ ಎಲ್ಲಿಗೆ ಸಂಬಂಧ?! ಜಿಗ್ನೇಶ್ ಗೆ ಮತಿಭ್ರಮಣೆಯಾಗಿಲ್ಲವಲ್ಲವೇ?!

3. ಇವತ್ತಿನವರೆಗೂ, ಪ್ರಧಾನಿ ಮೋದಿ ಯಾವ ಕಾರಣಕ್ಕೂ ಕೂಡ ಜಾತಿಯನ್ನು ಎದುರಿಗಿಟ್ಟು ಮತ ಕೇಳಿದವರಲ್ಲ! ಆದರೆ, ಜಿಗ್ನೇಶ್ ಮೇವಾನಿ ಪ್ರಚಾರದುದ್ದಕ್ಕೂ ಜಾತಿಯನ್ನೇ ಇಟ್ಟುಕೊಂಡು ‘ಭವತಿ ಮತಂ ದೇಹಿ’ ಎಂದಿದ್ದ! ಇಂತಹ, ನಾಯಕ ಬೇಕೆ ಸಮಾಜಕ್ಕೆ?!

4. ಪ್ರಧಾನಿ ಮೋದಿ ಜಿಗ್ನೇಶ್ ಅಂದುಕೊಂಡ ಹಾಗೆ ಬೋರಿಂಗ್ ಅಲ್ಲ, ಬದಲಿಗೆ ‘ಆಸಕ್ತಿದಾಯಕ!’ ವಿಷಯ ಅರ್ಥವಾಗದಿದ್ದರೆ, ಅಥವಾ ವಿಷಯದ ಮೇಲೆ ದ್ವೇಷವಿದ್ದರೆ, ವಿದ್ಯಾರ್ಥಿಗದು ಬೇಸರ ಎನಿಸುತ್ತದೆಂಬುದನ್ನು ಜಿಗ್ನೇಶ್ ಸಾಬೀತು ಪಡಿಸಿದ್ದಾನೆ!

5. ಯಾರಿಗೆ ‘ಬುಡ್ಡಾ’ ಎಂದು ಕರೆಯಬೇಕಿತ್ತೋ, ಅವರು ಹತ್ಯೆಯಾಗಿ ಹೋಗಿದ‌್ದಾರೆ! ಅಸಹನೀಯತೆಯನ್ನು ತಡೆಯಲಾದರೇ ಪ್ರಧಾನಿ ಮೋದಿಯ ವಿರುದ್ಧ ತಿರುಗಿ ಬಿದ‌್ದನಷ್ಟೇ ದತ್ತುಪುತ್ರ!

ಅಶ್ಲೀಲವಾಗಿ ಮಾತನಾಡುವುದು ಹೊಸದಲ್ಲ ಈತನಿಗೆ!

ಈ ಹಿಂದೆ, ಪ್ರಧಾನಿ ಮೋದಿಯ ಹುಟ್ಟಿನ ಬಗ್ಗೆ ಪ್ರಶ್ನಿಸಿದ್ದ ಜಿಗ್ನೇಶ್ , ಮೋದಿಯ ತಾಯಿಯವರಿಗೂ ಸಹ ಅವಮಾನ ಮಾಡಿದಾಗಲೇ ಗೊತ್ತಾಗಿತ್ತು! ತಾಯಿಯಿಲ್ಲದವನಿಗೆ ‘ಭಯೋತ್ಪದಕ ರಕ್ತಸಂಬಂಧಿ’ ದತ್ತು ತೆಗೆದುಕೊಂಡಿದ್ದು ಯಡವಟ್ಟಾಗಿದೆ ಎಂದು!

ಜಿಗ್ನೇಶ್ ಮೇವಾನಿಯೊಬ್ಬ ಹಿಂದೂ ವಿರೋಧಿ ಎಂಬುದಕ್ಕೆ, ಸೋಗಲಾಡಿ ಜಾತ್ಯಾತೀತನೆಂಬುದಕೆ ಇಲ್ಲಿದೆ ಸಾಕ್ಷಿ!

ಆತನೊಬ್ಬ ಸೋಗಲಾಡಿ ಜಾತ್ಯಾತೀತನಷ್ಟೇ! ಜಾತ್ಯಾತೀತನೇ ಆಗಿದ್ದರೆ, ಹಿಂದೂಗಳ ಭಾವನೆಗೂ ಗೌರವ ಕೊಡಲೇಬೇಕಿತ್ತು. ಆದರೆ, ಹಾಗಾಗಲಿಲ್ಲ! ‘ಸಾರ್ವಜನಿಕ ಸಭೆಯಲ್ಲಿ ಸಾರ್ವಜನಿಕರು ‘ಜೈ ಶ್ರೀರಾಮ್’ ಎಂದು ಐದು ಬಾರಿ ಹೇಳಿ ಎಂದಾಗ, ‘ಅಲ್ಲಾಹು ಅಕ್ಬರ್’ ಎಂದು ನೀವೂ ಹೇಳಿ’ ಎಂದಿದ್ದ ಜಿಗ್ನೇಶ್ ನಿಜಕ್ಕೂ ಯಾರ ಮಡಿಲ ಮಗು?!

ಸಭೆ ‘ಅಲ್ಲಾಹ’ನ ಬದಲಿಗೆ ‘ಮೋದಿ’ ಎಂದು ಜಪಿಸಲು ಪ್ರಾರಂಭಿಸಿದಾಗ, ಜಿಗ್ಜೇಶ್ ನ. ಯಾವ ತಂತ್ರವೂ ನಡೆಯದೇ ವೇದಿಕೆಯಿಂದ ಕೆಳಗಿಳಿದಿದ್ದ!

ರಾಹುಲ್ ಗಾಂಧಿ ಕ್ಷಮೆ ಕೇಳಲೇ ಬೇಕು!

ಯಾವಾಗ ಅದ್ಯಾರೋ ಟ್ವಿಟ್ಟರಾಯಿ ಕಾಂಗ್ರೆಸ್ ನ ನಾಯಕನನ್ನು ನಿಂದಿಸಿದ್ದಕ್ಕೆ ಇದೇ ಕಾಂಗ್ರೆಸ್ ಮೋದಿಗೆ ಕ್ಷಮೆ ಕೇಳುವಂತೆ ಆಗ್ರಹಿಸಿತ್ತು. ಈಗಲೂ, ರಾಹುಲ್ ಗಾಂಧಿ ತನ್ನ ಪಕ್ಷದವನೊಬ್ಬ ಈ ರೀತಿ ದೇಶದ ಪ್ರಧಾನಿಯನ್ನು ನಿಂದಿಸಿದ್ದಕ್ಕೆ ಕ್ಷಮೆ ಕೇಳಲೇ ಬೇಕಲ್ಲವೇ?!

– ಪೃಥು ಅಗ್ನಿಹೋತ್ರಿ

Tags

Related Articles

Close