ಪ್ರಚಲಿತ

ಬಿಗ್ ಬ್ರೇಕಿಂಗ್!!! ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಭೀಮಾತೀರದ ಹಂತಕ ಶಶಿಧರ್, ಶಾರ್ಪ್‍ಶೂಟರ್ ತಾಹೀರ್ ಕೈವಾಡ ಶಂಕೆ!

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆಸಿದ್ದು ಯಾರು? ಇದೊಂದು ಬಗೆಹರಿಸಲಾಗದ ಒಗಟಿನಂತಿದ್ದು, ಇನ್ನೂ ಬಿಡಿಸಲು ಸಾಧ್ಯವಾಗಿಲ್ಲ. ಗೌರಿಯನ್ನು ಬಲಪಂಥೀಯ ಸಂಘಟನೆಯ ಕಾರ್ಯಕರ್ತರೇ ಹತ್ಯೆ ನಡೆಸಿದ್ದರು ಎಂದು ಕಾಂಗ್ರೆಸ್ ಹಾಗೂ ಕೆಲವು ಬುದ್ಧಿಜೀವಿಗಳ ವಾದ. ಆದರೆ ಇವರೆಲ್ಲರ ವಾದಕ್ಕೆ ಕೊಡಲಿಯೇಟು ನೀಡುವಂಥಾ ಸುದ್ದಿಯೊಂದು ಹೊರಬಿದ್ದಿದ್ದು, ಇದೆಲ್ಲಾ ನಿಜವಾದರೆ ರಾಜ್ಯದಲ್ಲೇ ಸಂಚಲನ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.

ಗೌರಿ ಹಂತಕರನ್ನು ಪತ್ತೆಹಚ್ಚಲು ಎಸ್‍ಐಟಿ ಹೆಣಗಾಡುತ್ತಿದ್ದು, ಹಲವರನ್ನು ವಿಚಾರಣೆ ನಡೆಸಿದ್ದರೂ ಯಾವೊಂದು ಸುಳಿವು ಕೂಡಾ ಸಿಕ್ಕಿಲ್ಲ. ಆದರೆ ಇದೀಗ ಗೌರಿ ಹತ್ಯೆಯಲ್ಲಿ ಭೀಮಾತೀರದ ಹಂತಕ ಶಶಿಧರ್ ಮುಂಡೇವಾಡಗಿ ಹಾಗೂ ಶಾರ್ಪ್‍ಶೂಟರ್ ತಾಹಿರ್ ಹುಸೇನ್ ಕೈವಾಡ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಎಸ್‍ಐಟಿ ತೀವ್ರ ವಿಚಾರಣೆಗೊಳಪಡಿಸಿದೆ.

ಭೀಮಾತೀರದ ಹಂತಕ ಶಶಿಧರ್ ಮುಂಡೇವಾಡಗಿ ಹಾಗೂ ಶಾರ್ಪ್‍ಶೂಟರ್ ತಾಹಿರ್ ಹುಸೇನ್‍ನನ್ನು ಎಸ್‍ಐಟಿ ತಂಡ ತೀವ್ರ ವಿಚಾರಣೆ ನಡೆಸುತ್ತಿದ್ದು, ಇವರಿಬ್ಬರನ್ನು ಗೌರಿ ನಿವಾಸಕ್ಕೆ ಕರೆತಂದು ತೀವ್ರ ವಿಚಾರಣೆ ನಡೆಸಿದೆ. ಗೌರಿ ಹತ್ಯೆ ನಡೆದ ದಿನ ಹಂತಕ ಶಶಿಧರ್ ಮುಂಡೇವಾಡಗಿ ಬೆಂಗಳೂರಲ್ಲೇ ಇದ್ದನೆಂಬ ಮಾಹಿತಿಯನ್ನು ಎಸ್‍ಐಟಿ ಕಲೆ ಹಾಕಿದ್ದು, ಈತನೇ ಹೆಲ್ಮೆಟ್ ಧರಿಸಿ ಹತ್ಯೆನಡೆಸಿರುವ ಬಗ್ಗೆ ಶಂಕೆಯನ್ನು ಎಸ್‍ಐಟಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗೌರಿ ಲಂಕೇಶ್‍ನನ್ನು ಹತ್ಯೆ ನಡೆಸಿದ್ದು, 7.65 ಎಂ.ಎಂ ಮಾದರಿಯ ಪಿಸ್ತೂಲ್‍ನಿಂದ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಇದೀಗ ಬಂದ ಸುದ್ದಿಯ ಪ್ರಕಾರ ಭೀಮಾತೀರದ ಹಂತಕ ಶಶಿಧರ್ ಮುಂಡೇವಾಡಗಿ ಬಳಿ 7.65 ಎಂ.ಎಂ ಮಾದರಿಯ ಎರಡು ಜೀವಂತ ನಾಡಪಿಸ್ತೂಲ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಹತ್ಯೆಯಲ್ಲಿ ಶಶಿಧರ್ ಹಾಗೂ ತಾಹಿರ್ ಕೈವಾಡ ಇರಬಹುದೇ ಎನ್ನುವ ಶಂಕೆ ಇದೆ.

ಆರೋಪಿಗಳಿಬ್ಬರನ್ನು ಗೌರಿ ಮನೆಗೆ ಕರೆಂತದ ಬಳಿಕ ಮನೆಯ ಸುತ್ತಮುತ್ತ ತೀವ್ರ ತಪಾಸಣೆ ನಡೆಸಲಾಗಿದೆ. ಶಶಿಧರ್ ಗೌರಿ ಮನೆಯ ಸಮೀಪ ಸಂಚರಿಸಿದ್ದನೇ ಎಂಬ ಬಗ್ಗೆ ಎಸ್‍ಐಟಿ ಮಾಹಿತಿ ಕಲೆಹಾಕಿದೆ. ಗೌರಿ ಹತ್ಯೆ ವಿಚಾರದಲ್ಲಿ ಶಶಿಧರ್ ಮುಂಡೇವಾಡಗಿ ಹಾಗೂ ತಾಹಿರ್‍ನನ್ನು ಈಚೆಗೆ ಬಂಧನಗೊಳಿಸಿದ್ದ ಎಸ್‍ಐಟಿ ತಂಡ ಲಂಕೇಶ್ ಹತ್ಯೆಯ ಬಗ್ಗೆ ಕೇಳಿತ್ತು. ಈ ವೇಳೆ ತಾಹಿರ್ ರವಿ ಬೆಳಗೆರೆಯವರು ಸುನಿಲ್ ಹೆಗ್ಗರವಳ್ಳಿ ಕೊಲೆಗೆ 30 ಲಕ್ಷ ಸುಪಾರಿ ನೀಡಿದ್ದರು ಎಂಬ ವಿಷಯ ಬಹಿರಂಗಪಡಿಸಿದ್ದ. ಆದರೆ ಗೌರಿ ವಿಚಾರ ತನಗೇನೂ ಗೊತ್ತಿಲ್ಲ ಎಂಬ ಹೇಳಿಕೆ ನೀಡಿದ್ದ. ಆದರೆ ಇದೀಗ ತೀವ್ರ ತಪಾಸಣೆ ನಡೆಸಿದಾಗ 7.65 ಎಂ ಎಂ ಮಾದರಿಯ ಪಿಸ್ತೂಲ್ ಪತ್ತೆಯಾದ ಕಾರಣ ಗೌರಿ ಲಂಕೇಶ್ ಹತ್ಯೆಯಲ್ಲಿ ಇವರಿಬ್ಬರ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಒಂದು ವೇಳೆ ಗೌರಿ ಹತ್ಯೆಯಲ್ಲಿ ಭೀಮಾತೀರದ ಹಂತಕ ಶಶಿಧರ್ ಮುಂಡೇವಾಡಗಿ ಹಾಗೂ ಶಾರ್ಪ್‍ಶೂಟರ್ ತಾಹಿರ್ ಹುಸೇನ್ ಪಾತ್ರ ಇದ್ದಿರುವುದೇ ಆಗಿದ್ದರೆ ಆಕೆಯನ್ನು ಕೊಲ್ಲಲು ಯಾರು ಸುಪಾರಿ ನೀಡಿರಬಹುದು ಎನ್ನುವುದರ ಬಗ್ಗೆ ತೀವ್ರ ಕುತೂಹಲ ಸೃಷ್ಟಿಸಿದೆ. ಈ ಮುಂಚೆ ಭೀಮಾತೀರದ ಹಂತಕ ಶಶಿಧರ್ ಮುಂಡೇವಾಡಗಿ ಹಾಗೂ ಶಾರ್ಪ್‍ಶೂಟರ್ ತಾಹಿರ್ ಹುಸೇನ್ ಇವರಿಬ್ಬರಿಗೆ ನಕ್ಸಲ್ ನಂಟು ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಇದು ನಿಜವೇ ಆಗಿದ್ದರೆ ಗೌರಿ ಲಂಕೇಶ್ ಹತ್ಯೆಯು ಕೊನೆಗೆ ನಕ್ಸಲೈಟ್ ಬಳಿಗೆ ಕೊಂಡೊಯ್ಯುತ್ತದೆ. ಒಂದು ವೇಳೆ ಕುಟುಂಬದೊಳಗಿನ ಅಥವಾ ಆಸ್ತಿ ವಿಚಾರದಲ್ಲಿ ಕೊಲೆ ನಡೆದಿದ್ದರೆ ಇವರಿಗೆ ಸುಪಾರಿ ನೀಡಿದ್ದು ಯಾರಿರಬಹುದು ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಗೌರಿಯನ್ನು ಕೊಲೆ ನಡೆಸಿರುವುದು ಯಾರೆಂದು ಇದುವರೆಗೂ ತನಿಖಾ ದಳಕ್ಕೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಯಾಕೆಂದರೆ ಅವರೆಲ್ಲಾ ಇದುವರೆಗೆ ಬಲಪಂಥೀಯ ಸಂಘಟನೆಯ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಅದೇ ರೀತಿ ತನಿಖೆ ನಡೆಸುತ್ತಾ ಇರುವುದರಿಂದ ಗೌರಿ ಹಂತಕರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಭ್ರಮೆಯನ್ನು ಬಿಟ್ಟು ತನಿಖೆ ನಡೆಸಿದ್ದರೆ ಗೌರಿ ಹಂತಕ ಎಲ್ಲೇ ಅಡಗಿದ್ದರೂ ಪತ್ತೆಹಚ್ಚಲು ಸಾಧ್ಯವಾಗಿರುತ್ತಿತ್ತು. ಆದರೆ ಸರಕಾರದ ಒತ್ತಡದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ತನಿಖೆಯ ಮೇಲೆ ಪ್ರಭಾವ ಬೀರುವುದರಿಂದ ಹಂತಕರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ.

-ಚೇಕಿತಾನ

Tags

Related Articles

Close