ಪ್ರಚಲಿತ

ಭಾರತದ ಹೆಸರಾಂತ ರಾಜಕಾರಣಿ ಅರುಣ್ ಜೇಟ್ಲಿಯವರ ಬಗ್ಗೆ ನಿಮಗೆಷ್ಟು ಗೊತ್ತು?!

ಕೇಂದ್ರ ಬಜೆಟ್ ಮಂಡನೆ ಎಂದಾಕ್ಷಣ ನೆನಪಾಗುವುದೇ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ!!

ಕೇಂದ್ರ ಬಜೆಟ್ ಮಂಡನೆ ಎಂದಾಕ್ಷಣ ನೆನಪಾಗುವುದೇ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ!! ನೋಟು ರದ್ಧತಿ, ಬ್ಯಾಂಕ್ ಖಾತೆಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳಿಗೆ ಆಧಾರ್ ಸಂಖ್ಯೆ ಜೋಡಣೆ, ಜಿಎಸ್‍ಟಿ ಜಾರಿಯಂಥ ಕ್ರಮಗಳನ್ನು ಪ್ರಮುಖ ಆರ್ಥಿಕ ಸುಧಾರಣಾ ಕಾರ್ಯಗಳೆಂದು ಮೂಡೀಸ್ ಗುರುತಿಸಿದ್ದು ತಿಳಿದೇ ಇದೆ!! ಅಷ್ಟೇ ಅಲ್ಲದೇ ಆರ್ಥಿಕ ಸುಧಾರಣೆಯನ್ನು ತರಲು ಹಗಲಿರುಳು ಶ್ರಮಿಸುತ್ತಿರುವ ಅರುಣ್ ಜೇಟ್ಲಿಯವರ ಕಾರ್ಯವೈಖರಿಯನ್ನು ಮೆಚ್ಚಲೇಬೇಕು!!

ಯುಪಿಎ ಸರಕಾರದ ಅವಧಿಯಲ್ಲಿ 2ಜಿ ಸ್ಪೆಕ್ಟ್ರಂ, ಕಾಮನ್’ವೆಲ್ತ್ ಗೇಮ್ಸ್, ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳ ಮೂಲಕ ಮಾಡಿದ್ದು ಲೂಟಿ, ಆದರೆ ನೋಟು ಅಮಾನ್ಯೀಕರಣವು ನೈತಿಕತೆಯ ಆಧಾರದ ಮೇಲೆ ಮಾಡಿದ ಆರ್ಥಿಕ ಪ್ರಯೋಗವಾಗಿದೆಯಲ್ಲದೇ ನೈತಿಕವಾಗಿ ಯಾವುದು ಸರಿಯೋ ಅದು ರಾಜಕೀಯವಾಗಿಯೂ ಸರಿಯೇ ಎಂದಿರುವ ಅರುಣ್ ಜೇಟ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತರುವ ಮೋದಿ ಸರಕಾರದ ನಿಷ್ಠಾವಂತ ಮಂತ್ರಿಗಳಲೊಬ್ಬರಾಗಿದ್ದಾರೆ.

ಹೌದು… ಅರುಣ್ ಜೇಟ್ಲಿ ಭಾರತದ ಹೆಸರಾಂತ ರಾಜಕಾರಣಿ ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರು (ಬಿಜೆಪಿ)ರಾಗಿರುವ ಇವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಅಷ್ಟೇ ಅಲ್ಲದೇ ಭಾರತ ಸರ್ಕಾರದಲ್ಲಿ ವಾಣಿಜ್ಯ, ಕೈಗಾರಿಕೆ, ಕಾನೂನು ಹಾಗೂ ನ್ಯಾಯಂಗದ ಯೂನಿಯನ್ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಹಿರಿಮೆ ಇವರದ್ದಾಗಿದೆ!!

ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಗಳ ಮಗನಾಗಿರುವ ಅರುಣ್ ಜೇಟ್ಲಿ ನವ ದೆಹಲಿಯಲ್ಲಿ ಡಿಸೆಂಬರ್ 28, 1952ರಂದು ಜನಿಸಿದರು!! 1977ರಿಂದ ದೇಶದ ಹಲವಾರು ಹೈಕೋರ್ಟ್‍ಗಳಲ್ಲಿ ಹಾಗೂ ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಇವರು ನಿಯೋಜನೆಗೊಂಡ ಹಿರಿಯ ವಕೀಲರಾಗಿದ್ದರು. ಅಷ್ಟೇ ಅಲ್ಲದೇ, 1989ರ ವಿ.ಪಿ. ಸಿಂಗ್ ಸರ್ಕಾರದಲ್ಲಿ ಅವರನ್ನು ಅಡಿಷನಲ್ ಸಾಲಿಸಿಟರ್ ಜನರಲ್ ಎಂದು ನೇಮಕ ಮಾಡಲಾಯಿತು ಹಾಗೂ ಅವರು ಬೋಫೆÇೀರ್ಸ್ ಹಗರಣದ ಎಲ್ಲಾ ಕಾಗದ ವ್ಯವಹಾರಗಳ ಕೆಲಸವನ್ನು ಮಾಡಿ ಹೆಸರುವಾಸಿಯಾಗಿರುವಂತಹ ವ್ಯಕ್ತಿಯಾಗಿದ್ದಾರೆ!!

ಇವರು ಬಾಲ್ಯವನ್ನು ನವದೆಹಲಿಯಲ್ಲಿ ಕಳೆದಿದ್ದು, ಪ್ರಾಥಮಿಕ ಶಿಕ್ಷಣವನ್ನು 1969-70ರ ಅವಧಿಯಲ್ಲಿ ನವದೆಹಲಿಯಲ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದರು ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ, 1973ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡು, 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ.

ಎಪ್ಪತ್ತರ ದಶಕದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ಜೇಟ್ಲಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ವಿದ್ಯಾರ್ಥಿ ನಾಯಕರಾಗಿದ್ದ ಅರುಣ್ ಜೇಟ್ಲಿ ನಾಗರೀಕರ ಅನಿರ್ಬಂಧಿತ ಸ್ಥಿತಿಯಲ್ಲಿ ಆಂತರಿಕ ತುರ್ತು ಪರಿಸ್ಥಿತಿಯ (1975-77) ಘೋಷಣೆಯಾದಾಗ, 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು. 1973ರಲ್ಲಿ ರಾಜ್ ನರೇನ್ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರ ವಿರುದ್ಢದ ಚಳುವಳಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಜಯ ಪ್ರಕಾಶ್ ನಾರಾಯಣ್ ಅವರು ಇವರನ್ನು ವಿದ್ಯಾರ್ಥಿಗಳ ನ್ಯಾಷನಲ್ ಕಮಿಟಿಯ ಹಾಗೂ ಯೂತ್ ಆರ್ಗನೈಸೇಶನ್ ನ ಸಂಯೋಜಕರಾಗಿ ನೇಮಕಗೊಳಿಸಿದರು. ಸತೀಶ್ ಝಾ ಹಾಗೂ ಸ್ಮಿತು ಕೋಠಾರಿ ಅವರೊಂದಿಗೆ ಸೇರಿ ನಾಗರೀಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರಲ್ಲದೇ ಪಿಯುಸಿಎಲ್ ಬುಲೆಟಿನ್ ಹೊರತಂದರು. ಜೈಲಿನಿಂದ ಹೊರಬಂದ ಮೇಲೆ ಅವರು ಜನ ಸಂಘವನ್ನು ಸೇರಿಕೊಂಡರು ಅರುಣ್ ಜೇಟ್ಲಿ!!

1977ರಿಂದ ದೇಶದ ಹಲವಾರು ಹೈಕೋರ್ಟ್‍ಗಳಲ್ಲಿ ಹಾಗೂ ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಇವರು ನಿಯೋಜನೆಗೊಂಡ ಹಿರಿಯ ವಕೀಲರಾಗಿದ್ದರು. ರಾಜಕೀಯ ವ್ಯಾಪ್ತಿಯ ಜನತಾ ದಳದ ಶರದ್ ಯಾದವ್ರಿಂದ ಹಿಡಿದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮಾಧವ್‍ರಾವ್ ಸಿಂಧ್ಯಾ ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಎಲ್.ಕೆ. ಅಡ್ವಾಣಿಯವರವರೆಗೆ ಇವರ ಕಕ್ಷಿದಾರರಾಗಿದ್ದಾರೆ. ಅರುಣ್ ಜೇಟ್ಲಿ ಕಾನೂನು ಹಾಗೂ ಪ್ರಸಕ್ತ ವ್ಯವಹಾರಗಳ ಬಗ್ಗೆ ಹಲವಾರು ಪ್ರಕಟಣೆಗಳ ಲೇಖಕರಾಗಿದ್ದಾರಲ್ಲದೇ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ “ಭಾರತದಲ್ಲಿ ಅಪರಾಧಗಳು” ಎಂಬ ವಿಷಯದ ಪತ್ರಗಳನ್ನು ಇಂಡೋ-ಬ್ರಿಟಿಷ್ ಲೀಗಲ್ ಫೆÇೀರಂ ಎದುರಿಗೆ ಮಂಡಿಸಿರುವ ಕೀರ್ತಿ ಇವರಿಗಿದೆ. ಜೂನ್ 1998ರಲ್ಲಿ ಡ್ರಗ್ಸ್ ಹಾಗೂ ಮನಿ ಲಾಂಡರಿಂಗ್ ಹಗರಣಗಳಿಗೆ ಸಂಬಂಧಿಸಿದಂತೆ ನಡೆದ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸಭೆಯಲ್ಲಿ ಇವರು ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಅರುಣ್ ಜೇಟ್ಲಿಯವರು ತಮ್ಮ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್)ದ ವಿದ್ಯಾರ್ಥಿ ವಿಭಾಗವಾದ ಎಬಿವಿಪಿಯ ಸಕ್ರಿಯ ಸದಸ್ಯರಾಗಿದ್ದರು!! ಹಾಗಾಗಿ 1999ರ ಚುನಾವಣೆಯ ಸಮಯದಲ್ಲಿ ಇವರು ಬಿಜೆಪಿ ಪಕ್ಷದ ಪರವಾಗಿ ಮಾತನಾಡುವ ವಕ್ತಾರರಾಗಿದ್ದಲ್ಲದೇ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಡಿಯಲ್ಲಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, 1999 ಅಕ್ಟೋಬರ್ 13 ರಲ್ಲಿ ಇವರು ಮಾಹಿತಿ ಹಾಗೂ ಪ್ರಸಾರದ ರಾಜ್ಯ ಮಂತ್ರಿಯಾಗಿ (ಸ್ವತಂತ್ರ ಹೊಣೆಗಾರಿಕೆ)ನೇಮಕಗೊಂಡರು.

ಅಲ್ಲದೆ ಅವರು ಬಂಡವಾಳಹರಣದ ರಾಜ್ಯ ಮಂತ್ರಿಯಾಗಿ (ಸ್ವತಂತ್ರ ಹೊಣೆಗಾರಿಕೆ) ನೇಮಕಗೊಂಡರು. ಹಾಗಾಗಿ ಹೊಸ ಮಂತ್ರಿಮಂಡಲವು ಮೊದಲಬಾರಿಗೆ ವರ್ಲ್ಡ್ ಟ್ರೇಡ್ ಆರ್ಗನೈಸೇಶನ್ (ಡಬ್ಲುಟಿಒ) ಆಳ್ವಿಕೆಯಡಿಯಲ್ಲಿ ಬಂಡವಾಳಹರಣ ನಿಯಮಕ್ಕೆ ಮಂತ್ರಿ ಪದವಿಯನ್ನು ನಿರ್ಮಿಸಿತು. ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರದ ಯೂನಿಯನ್ ಕ್ಯಾಬಿನೆಟ್ ಮಂತ್ರಿ ರಾಮ್ ಜೇಟ್ಮಲಾನಿ ಅವರು ರಾಜೀನಾಮೆ ನೀಡಿದ ನಂತರ ಜೇಟ್ಲಿಯವರು ಜುಲೈ 23, 2000ರಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರ ಖಾತೆಯನ್ನು ವಹಿಸಿಕೊಂಡು ಹೆಚ್ಚಿನ ಹೊಣೆಗಾರಿಕೆ ತೆಗೆದುಕೊಂಡರು.

ನವೆಂಬರ್ 2000ರಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಆಯ್ಕೆಯಾದ ಜೇಟ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳು ಹಾಗೂ ಶಿಪ್ಪಿಂಗ್ ಮಂತ್ರಿಯಾಗಿ ನೇಮಕಗೊಂಡರ ಹಿರಿಮೆ ಇವರದ್ದಾಗಿದೆ!! ಸಾರಿಗೆ ವಿಧಾನಗಳಿಂದ ಮಂತ್ರಿ ಪದವಿಯ ವಿಂಗಡಣೆಯಾದ ಮೇಲೆ ಮೊದಲಬಾರಿಗೆ ಶಿಪ್ಪಿಂಗ್ ಮಂತ್ರಿ ಪದವಿಯು ಇವರಿಗೆ ಲಭಿಸಿತು. ಸೆಪ್ಟೆಂಬರ್ 1, 2001ರಲ್ಲಿ ಶಿಪ್ಪಿಂಗ್ ಮಂತ್ರಿ ಪದವಿಯನ್ನು ತೊರೆದರು ಹಾಗೂ ಜುಲೈ 1, 2002ರಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳ ಖಾತೆಯನ್ನು ತೊರೆದು ಬಿಜೆಪಿಯ ಜನರಲ್ ಸೆಕ್ರೆಟರಿಯಾದರು ಹಾಗೂ ಅದರ ರಾಷ್ಟ್ರೀಯ ವಕ್ತಾರರಾದರು.

ತದನಂತರದಲ್ಲಿ ಜನವರಿ 2003ರವರೆಗೆ ರಾಷ್ಟ್ರೀಯ ವಕ್ತಾರರಾಗಿ ಮುಂದುವರೆದ ಇವರು 29 ಜನವರಿ 2003ರಲ್ಲಿ ಮತ್ತೊಮ್ಮೆ ಯೂನಿಯನ್ ಕ್ಯಾಬಿನೆಟ್ ಅನ್ನು ವಾಣಿಜ್ಯ & ಕೈಗಾರಿಕೆ ಹಾಗೂ ಕಾನೂನು & ನ್ಯಾಯಾಂಗ ಖಾತೆಯನ್ನು ವಹಿಸಿಕೊಳ್ಳುವುದರ ಮೂಲಕ ಸೇರಿದರು. ಮೇ 2004ರಲ್ಲಿ ನ್ಯಾಷನಲ್ ಡೆಮೋಕ್ರಟಿಕ್ ಅಲಯನ್ಸ್ ಸೋಲನ್ನನುಭವಿಸಿದಾಗ, ಜೇಟ್ಲಿಯವರು ಬಿಜೆಪಿಯ ಜನರಲ್ ಸೆಕ್ರೆಟರಿ ಸ್ಥಾನಕ್ಕೆ ಹಿಂದಿರುಗಿದರು ಹಾಗೂ ಕಾನೂನು ವೃತ್ತಿಯನ್ನು ಮುಂದುವರೆಸಿದರು. ಜೂನ್ 3, 2009ರಲ್ಲಿ ಎಲ್.ಕೆ.ಅಡ್ವಾಣಿಯವರಿಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಗೊಂಡರು. ಜೂನ್ 16, 2009ರಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಪಕ್ಷದ ನಿಯಮಕ್ಕೆ ಬದ್ಧರಾಗಿ ಬಿಜೆಪಿಯ ಜನರಲ್ ಸೆಕ್ರೆಟರಿ ಹುದ್ದೆಗೆ ರಾಜೀನಾಮೆ ನೀಡಿದರು.

84ನೇಯ ತಿದ್ದುಪಡಿಯಲ್ಲಿ, 2026ರವರೆಗೆ ಪಾರ್ಲಿಮೆಂಟರಿ ಸ್ಥಾನಗಳ ಲಭ್ಯತೆಯನ್ನು ಸ್ಥಿರವಾಗಿಸಲು ಎಂಭತ್ತ-ನಾಲ್ಕನೇ ತಿದ್ದುಪಡಿಯನ್ನು ಭಾರತ ಸಂವಿಧಾನದಲ್ಲಿ ತಂದರು. ಅಷ್ಟೇ ಅಲ್ಲದೇ, 91ನೇಯ ತಿದ್ದುಪಡಿಯಲ್ಲಿ 2004ರಲ್ಲಿ ಪಕ್ಷಾಂತರ ಮಾಡುವವರನ್ನು ಶಿಕ್ಷಿಸುವವರನ್ನು ಭಾರತ ಸಂವಿಧಾನದಲ್ಲಿ ತೊಂಬತ್ತನೆಯ ತಿದ್ದುಪಡಿಯನ್ನು ಯಶಸ್ವಿಯಾಗಿ ಪರಿಚಯಿಸಿರುವ ಗೌರವ ಇವರಿಗೆ ಸಲ್ಲುತ್ತದೆ!!

ಇವರ ಬಹು ದೊಡ್ಡ ಸಾಧನೆ ಏನೆಂದರೆ, ಬಿರ್ಲಾ ಕಾಪೆರ್Çರೇಶನ್ ಲಿಮಿಟೆಡ್ ಒಡೆತನದ ಸುಮಾರು 5000 ಕೋಟಿಗೂ ಹೆಚ್ಚಿನ ಆಸ್ತಿಯ ವಿರುದ್ಧ ಆರ್. ಎಸ್. ಲೋಧಾ ಅವರ ಕಾನೂನು ಸಮರದಲ್ಲಿ ಬಿರ್ಲಾ ಕುಟುಂಬದ ಪರವಾಗಿ ಅರುಣ್ ಜೇಟ್ಲಿಯವರು ವಾದ ಮಾಡಿದ್ದರು. “ರಣ್” ಚಿತ್ರದಲ್ಲಿ ರಾಷ್ಟ್ರಗೀತೆಯನ್ನು ತಿರುಚಿ ಬಳಸಿದ್ದಕ್ಕಾಗಿ ರಾಮ್ ಗೋಪಾಲ್ ವರ್ಮಾ ಅವರ ವಿರುದ್ಧದ ಮೊಕದ್ದಮೆಯಲ್ಲಿ ವರ್ಮಾ ಅವರ ಪರವಾಗಿ ವಾದ ಮಾಡಿದ್ದರು. ಆದರೆ ಆ ಹಾಡನ್ನು ನಂತರದಲ್ಲಿ ಚಿತ್ರದಿಂದ ಕೈಬಿಡಲಾಯಿತು.

ಇನ್ನು ಅರುಣ್ ಜೇಟ್ಲಿಯವರನ್ನು ಬಿಜೆಪಿಯ ರಾಜ್ಯ ಅಸೆಂಬ್ಲಿ ಚುನಾವಣೆಯ ಗೆಲುವುಗಳನ್ನು ತಂದುಕೊಟ್ಟುದಕ್ಕಾಗಿ ಚುನಾವಣಾ ತಂತ್ರಗಳನ್ನು ರೂಪಿಸುವ ರೂವಾರಿಯಾಗಿ ನೇಮಿಸಿದರು. ಅರುಣ್ ಜೇಟ್ಲಿಯವರು ಜನರಲ್ ಸೆಕ್ರೆಟರಿಯಾಗಿ ಮೇ 2008ರವರೆಗೆ 8 ಚುನಾವಣೆಗಳನ್ನು ನಿರ್ವಹಿಸಿದ್ದಾರೆ. ತೀರಾ ಇತ್ತೀಚೆಗೆ, ಕರ್ನಾಟಕದಲ್ಲಿ ಬಿಜೆಪಿಯ ಅತಿ ಯಶಸ್ಸನ್ನು ಅವರು ತಂದುಕೊಟ್ಟಿದ್ದಾರೆ.

2002ರಲ್ಲಿ, ಅರುಣ್ ಜೇಟ್ಲಿಯವರು ಅವರ ಹತ್ತಿರದ ಸಹಯೋಗಿ ನರೇಂದ್ರ ಮೋದಿಯವರಿಗೆ ಸಹಾಯ ನೀಡಿದರು, ಬಿಜೆಪಿಯು ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳಲ್ಲಿ 126 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಸಹಯೋಗವು ಅವರನ್ನು ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿತು. ಡಿಸೆಂಬರ್ 2007ರಲ್ಲಿ, ಅರುಣ್ ಜೇಟ್ಲಿಯವರು ಒಂದು ಚಳುವಳಿಯನ್ನು ನಡೆಸಿ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದರು. ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 117 ಸ್ಥಾನ ಪಡೆದುಕೊಂಡಿತು. ನರೇಂದ್ರ ಮೋದಿಯವರು ಅರುಣ್ ಜೇಟ್ಲಿಯವರನ್ನು ಗುಜರಾತ್‍ಗೆ ವರ್ಗಾಯಿಸುವಂತೆ ವಿಶೇಷವಾಗಿ ಪಕ್ಷದ ಹೈಕಮಾಂಡ್ ಅನ್ನು ಕೇಳಿಕೊಂಡರು. ಮತದಾನದ ಪ್ರಾಥಮಿಕ ವಿಷಯಗಳೆಂದರೆ ನರೇಂದ್ರ ಮೋದಿಯವರ ಅಧಿಕಾರತ್ವ ಹಾಗೂ ರಾಜ್ಯಾಡಳಿತದಿಂದ ಉತ್ತಮ ಸರ್ಕಾರದ ನಿರ್ವಹಣೆ.

Related image

2003ರಲ್ಲಿ, ಮಧ್ಯ ಪ್ರದೇಶದ ಅಸೆಂಬ್ಲಿ ಚುನಾವಣೆಯನ್ನು ಅರುಣ್ ಜೇಟ್ಲಿಯವರು ನಿರ್ವಹಿಸಿದರು. ಅವರು ಉಮಾ ಭಾರತಿಯವರ ಜೊತೆಗೂಡಿ ಎಮ್‍ಪಿ ಅಸೆಂಬ್ಲಿಯ ಒಟ್ಟು 230 ಸ್ಥಾನಗಳಲ್ಲಿ 173 ಸ್ಥಾನಗಳನ್ನು ಪಡೆದುಕೊಳ್ಳುವುದರ ಮೂಲಕ ಯಶಸ್ಸು ಸಾಧಿಸಿದರು. ಮುಖ್ಯ ಮಂತ್ರಿ ಉಮಾಭಾರತಿ ಹಾಗೂ ಅರುಣ್ ಜೇಟ್ಲಿಯವರು ರೈತರ ಉಚ್ಛಾಟನೆಯಿಂದಾಗಿ ಪಕ್ಷವು ಕೆಳಗೆ ಬಿತ್ತು.

ಮೇ 2004ರ ಲೋಕಸಭಾ ಚುನಾವಣೆಯಲ್ಲಿ ಅರುಣ್ ಜೇಟ್ಲಿಯವರಿಗೆ ಕರ್ನಾಟಕದ ವಿಶೇಷ ಹೊಣೆಯನ್ನು ನೀಡಲಾಗಿತ್ತು. ದೇಶದ ದಕ್ಷಿಣ ಭಾಗದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಉತ್ತಮ ಸ್ಥಾನದಲ್ಲಿದೆ ಹಾಗೂ ಉತ್ತಮ ನಿರೀಕ್ಷೆಕೂಡಾ ಮಾಡಬಹುದಾಗಿತ್ತು. ಒಟ್ಟು 26 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿಯು 18 ಸ್ಥಾನಗಳನ್ನು ಗೆದ್ದುಕೊಂಡಿತು, ರಾಜ್ಯದಲ್ಲಿ ಒಟ್ಟು 83 ಸ್ಥಾನಗಳನ್ನು ಪಡೆದುಕೊಂಡು ಅಸೆಂಬ್ಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಎದುರಾಳಿಗಳಾದ ಕಾಂಗ್ರೆಸ್ 68 ಹಾಗೂ ಜನತಾ ದಳ (ಸೆಕ್ಯುಲರ್) 59 ಸ್ಥಾನಗಳನ್ನು ಪಡೆದುಕೊಂಡಿದ್ದವು. ಕಾಂಗ್ರೆಸ್ ಹಾಗೂ ಜೆಡಿ(ಎಸ್) ಮೈತ್ರಿಕೂಟ ರಚಿಸಿ ಕಾಂಗ್ರೆಸ್‍ನ ಧರಂ ಸಿಂಗ್ ಮುಖ್ಯಮಂತ್ರಿಯಾದರು. ಜನವರಿ 2006ರಲ್ಲಿ, ಅಸಮಾಧಾನಗೊಂಡ ಜೆಡಿಎಸ್ ನಾಯಕರು, ಎಚ್. ಡಿ. ಕುಮಾರಸ್ವಾಮಿಯ ನೇತೃತ್ವದಲ್ಲಿ ಬಿಜೆಪಿಯೊಂದಿಗೆ ಒಕ್ಕೂಟ ಮಾಡಿಕೊಂಡು ಸರ್ಕಾರ ಸ್ಥಾಪಿಸಲು ನಿರ್ಧರಿಸಿದರು.

ಮೊದಲರ್ಧ ಅವಧಿಯಲ್ಲಿ ಜೆಡಿಎಸ್‍ನ ಮುಖ್ಯಮಂತ್ರಿ ಹಾಗೂ ಉಳಿದರ್ಧ ಅವಧಿಗೆ ಬಿಜೆಪಿಯು ತನ್ನದೇ ಪಕ್ಷದ ಮುಖ್ಯಮಂತ್ರಿಯನ್ನು ಹೊಂದಬಹುದು ಎಂದು ಒಪ್ಪಂದ ಮಾಡಿಕೊಂಡರು. ನವೆಂಬರ್ 2007ರಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಬಿಜೆಪಿಯ ಬಿ. ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ನಿರಾಕರಿಸಿದರು. ಮೇ 2008ರಲ್ಲಿ, ಅರುಣ್ ಜೇಟ್ಲಿಯವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುವಂತಹ ಜವಾಬ್ಧಾರಿ ತೆಗೆದುಕೊಂಡರು. 224-ಸದಸ್ಯರ ಅಸೆಂಬ್ಲಿಯಲ್ಲಿ, ಬಿಜೆಪಿಯು 110 ಸ್ಥಾನಗಳನ್ನು ಪಡೆದುಕೊಂಡು ಬಹುಮತ ಸಾಧಿಸಲು 3 ಸ್ಥಾನಗಳು ಕಡಿಮೆಯಾದವು.

ಆ ನಂತರ, ಅರುಣ್ ಜೇಟ್ಲಿಯವರು 5 ಜನ ಸ್ವತಂತ್ರ ಎಮ್‍ಎಲ್‍ಎಗಳ ಬೆಂಬಲ ಯಾಚಿಸಿ ಬಿಜೆಪಿಯ ಬಲವನ್ನು 115 ಸ್ಥಾನಗಳಿಗೆ ತಂದರು. ಪಕ್ಷದ ಅಧ್ಯಕ್ಷ ರಣಜಿತ್ ಸಿಂಗ್ರವರಿಂದ ಹಿಡಿದು ಸಹೋದ್ಯೋಗಿ ಸುಷ್ಮಾ ಸ್ವರಾಜ್ ಹಾಗೂ ಬಿಜೆಪಿಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪನವರವರೆಗೆ ಪಕ್ಷದ ಎಲ್ಲಾ ನಾಯಕರುಗಳು ಈ ಗೆಲುವಿನ ರೂವಾರಿ ಅರುಣ್ ಜೇಟ್ಲಿ ಎಂದು ಹೇಳಿದರು. ಕರ್ನಾಟಕದ ಜಯ ಹಾಗೂ ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡದ್ದು ದಕ್ಷಿಣ ಭಾರತದಲ್ಲಿ ಬಿಜೆಪಿಯ ಉತ್ತಮವಾದ ಪ್ರವೇಶ ಎನ್ನಲಾಗಿದೆ.

ಇನ್ನು, ಬಿಹಾರದಲ್ಲಿ 2005ರ, ಫೆಬ್ರವರಿಯಲ್ಲಿ ನಡೆದ ಚುನಾವಣೆಗಳು ಅನಿಶ್ಚಿತತೆಯಿಂದ ಕೂಡಿದ್ದರಿಂದ, ನವೆಂಬರ್‍ನಲ್ಲಿ ಮರುಚುನಾವಣೆಗಳು ನಡೆದವು. ಈ ಚುನಾವಣೆಯನ್ನು ಬಿಜೆಪಿಯು ಜೆಡಿ (ಯು)ನೊಂದಿಗೆ ಒಂದುಗೂಡಿ ಎದುರಿಸಿದವು. ಎನ್‍ಡಿಎಯ ಒಗ್ಗಟ್ಟಿಗೆ ಜೇಟ್ಲಿಯವರೇ ಮುಖ್ಯ ಯೋಜನಾ ರೂಪುಗಾರರಾಗಿದ್ದರು. ಬಿಜೆಪಿ ಅತಿ ಹೆಚ್ಚು ಸಂಖ್ಯೆಯ 58 ಸ್ಥಾನಗಳನ್ನು ಜೊತೆಗೆ ಜೆಡಿ(ಯು)ನ 88 ಸ್ಥಾನಗಳು ಸರ್ಕಾರವನ್ನು ರಚಿಸಲು ಸಹಕಾರಿಯಾಯಿತು ಜೆಡಿ (ಯು)ನ ನೀತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾದರು ಹಾಗೂ ಬಿಜೆಪಿಯ ಸುಶೀಲ್ ಕುಮಾರ್ ಮೋದಿಯವರು ಉಪ ಮುಖ್ಯಮಂತ್ರಿಯಾದರು.

ಫೆಬ್ರವರಿ 2007ರಲ್ಲಿ, ಅರುಣ್ ಅವರು ಪಂಜಾಬ್‍ನಲ್ಲಿ ನಡೆದ ಬಿಜೆಪಿ ಚಳುವಳಿಯ ನೇತೃತ್ವ ವಹಿಸಿದ್ದರು ಹಾಗೂ ಪಕ್ಷ ಹಾಗೂ ಅದರ ಒಕ್ಕೂಟ ಶಿರೋಮಣಿ ಅಕಾಲಿ ದಳದ ನಡುವಿನ ತಂತ್ರಗಳನ್ನು ಸಹಯೋಜಿಸಿದರು. ಸ್ಪರ್ಧಿಸಿದ 23 ಸ್ಥಾನಗಳಲ್ಲಿ, ಅದು 19ರಲ್ಲಿ ಜಯಗಳಿಸಿತು, ಆದರೆ ರಾಜ್ಯದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನದನ್ನು ಪಕ್ಷವು ಸಾಧಿಸಿತು. ಅಷ್ಟೇ ಅಲ್ಲದೇ, 2007ರ ಕೊನೆಯ ಭಾಗದಲ್ಲಿ, ಮುನಿಸಿಪಲ್ ಕಾಪೆರ್Çರೇಷನ್ ಆಫ್ ದೆಹಲಿ (ಎಮ್‍ಸಿಡಿ)ಯ ಚುನಾವಣೆಗಳ ಅಧಿಕಾರಿಯಾಗಿ ಅರುಣ್ ಜೇಟ್ಲಿಯವರನ್ನು ನೇಮಕಗೊಳಿಸಲಾಯಿತು. ಕಾಪೆರ್Çರೇಶನ್‍ನ 272 ಸದಸ್ಯತ್ವದಲ್ಲಿ, ಬಿಜೆಪಿಯು 164 ವಾರ್ಡ್‍ಗಳನ್ನು ತನ್ನದಾಗಿಸಿಕೊಂಡಿತು.

ಅರುಣ್ ಜೇಟ್ಲಿ ನೇತೃತ್ವದಲ್ಲಿ ಹಣಕಾಸಿನ ವ್ಯವಹಾರವು ಉತ್ತಮವಾಗಿ ಸಾಗುತ್ತಿದ್ದಲ್ಲದೇ, ಅವರ ಕಾರ್ಯವೈಖರಿಯನ್ನೂ ಎಲ್ಲರೂ ಮೆಚ್ಚುವಂತಹದ್ದು!! ಭಾರತವು ಹೆಚ್ಚು ಮಹತ್ವಾಕಾಂಕ್ಷೆಯ ರಾಷ್ಟ್ರವಾಗಿ ಬದಲಾಗುತ್ತಿರುವುದಲ್ಲದೇ, ಇದೊಂದು ಸಕಾರಾತ್ಮಕ ಬದಲಾವಣೆಯಾಗಿ ಕಾಣುತ್ತಿದೆ. ಅಷ್ಟೇ ಅಲ್ಲದೇ, ಪ್ರಸ್ತುತ ಸರ್ಕಾರವು 2007 ರಿಂದ 2017 ರವರೆಗೆ ಮೂಲಭೂತ ಸೌಕರ್ಯಗಳ ಮೇಲೆ ರೂ. 60,000 ಲಕ್ಷ ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಿದೆ ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ!!

– ಅಲೋಖಾ

Tags

Related Articles

Close