ಪ್ರಚಲಿತ

ಭಾರತೀಯ ಸೇನೆ ಪಡೆಯಲಿದೆ ಅತ್ಯಾಧುನಿಕ ಎಫ್.ಆರ್.ಸಿ.ವಿ ಟ್ಯಾಂಕ್!! ಮೋದಿ ಸರಕಾರದಿಂದ ಸಿಕ್ಕಿದೆ ಗ್ರೀನ್ ಸಿಗ್ನಲ್!!

ಭಾರತೀಯ ಸೇನೆಯನ್ನು ಬಲಿಷ್ಠ ಸೇನೆಯನ್ನಾಗಿ ಮಾಡಲು ಮುಂದಾಗುತ್ತಿರುವ ಕೇಂದ್ರ ಸರಕಾರ ಇದೀಗಾಗಲೇ ಸಾಕಷ್ಟು ಸವಲತ್ತುಗಳನ್ನು ನೀಡುತ್ತಲೇ ಬರುತ್ತಿದೆ. ಈ ಬೆನ್ನಲ್ಲೇ, ಯುದ್ಧದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗಡಿಯಲ್ಲಿ “ತ್ವರಿತ ಪ್ರಾಬಲ್ಯ” ಕ್ಕಾಗಿ, ರಾತ್ರಿಯ ಸಮಯದಲ್ಲಿಯೂ ಕೂಡ ಕಾರ್ಯಾಚರಣೆಗಳನ್ನು ನಡೆಸಲು ಸಾಧ್ಯವಾಗುವಂತೆ ಹಾಗೂ ಇನ್ನಿತರ ಸಂದರ್ಭದಲ್ಲಿ ನೆರವಾಗುವಂತೆ, ಭಾರತೀಯ ಸೇನೆಯು ಶೀಘ್ರದಲ್ಲೇ ಹೊಸ ಅತ್ಯಾಧುನಿಕ ಟ್ಯಾಂಕ್ ಗಳನ್ನು ಪಡೆಯಲಿದೆ!!

ಈಗಾಗಲೇ, ಗಡಿಯಲ್ಲಿ ಪಾಕಿಸ್ತಾನ ಹಾಗೂ ಚೀನಾ ಉಪಟಳ ನಡುವೆಯೇ ಹಳೆಯ ಶಸ್ತ್ರಾಸ್ತ್ರಗಳಿಗೆ ವಿದಾಯ ಹೇಳಲು ಬಯಸಿರುವ ಭಾರತೀಯ ಸೇನೆ, ಶೀಘ್ರದಲ್ಲೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲಿದ್ದು, ಇದಕ್ಕಾಗಿ 40 ಸಾವಿರ ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.. ಅಷ್ಟೇ ಅಲ್ಲದೇ, ಅತ್ಯಾಧುನಿಕ ಮಾದರಿಯ ಹಗುರ ಮಷಿನ್ ಗನ್ ಗಳು, ಕಾರ್ಬೆನ್ ಗಳು, ರೈಫಲ್ ಮತ್ತು ಮದ್ದುಗುಂಡುಗಳನ್ನು ಸೇನೆ ಖರೀದಿಸಲಿದೆ. ಹಾಗಾಗಿ ಈ ಪ್ರಸ್ತಾವನೆಯ ಪ್ರಕಾರ, ಸೇನೆ 7 ಲಕ್ಷ ರೈಫಲ್, 44,000 ಹಗುರ ಮಷಿನ್ ಗನ್ ಮತ್ತು 44,600 ಕಾರ್ಬೆನ್‍ಗಳನ್ನು ಖರೀದಿಸಲಿದೆ. ಈಗಾಗಲೇ ಖರೀದಿ ಪ್ರಕ್ರಿಯೆ ಆರಂಭವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದ್ದು, ಇದೀಗ ಅತ್ಯಾಧುನಿಕ ಟ್ಯಾಂಕ್ ಗಳನ್ನು ಪಡೆದುಕೊಳ್ಳುವ ಭರದಲ್ಲಿದೆ ಭಾರತೀಯ ಸೇನೆ!!

ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಳ್ಳಲಿದೆ ಅತ್ಯಾಧುನಿಕ ಟ್ಯಾಂಕ್ ಗಳು!!

ಇದೀಗ ಸೋವಿಯತ್ ಕಾಲದ ಟಿ-72 ಟ್ಯಾಂಕ್ ಗಳನ್ನು ಬದಲಿಸಲು, 1700 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆ ಶೀಘ್ರದಲ್ಲೇ, ಭಾರತದಲ್ಲಿಯೇ ನಿರ್ಮಿಸಿದ ಅತ್ಯಾಧುನಿಕ ಟ್ಯಾಂಕ್ ಗಳನ್ನು ಪಡೆಯಲಿದೆ!! ಅಷ್ಟೇ ಅಲ್ಲದೇ, ಇದು ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವುದು ಇನ್ನೊಂದು ಸಂತಸದ ವಿಚಾರವಾಗಿದೆ!! ಹಾಗಾದರೆ, ಯಾವುದಿದು ಅತ್ಯಾಧುನಿಕ ಟ್ಯಾಂಕ್ ಅಂತೀರಾ?? ಅದುವೇ… ಫ್ಯೂಚರ್ ರೆಡಿ ಕಾಂಬಟ್ ವೆಹಿಕಲ್ (ಎಫ್.ಆರ್.ಸಿ.ವಿ)!!!

ಹೌದು… ಎಫ್.ಆರ್.ಸಿ.ವಿ ಎಂದು ಕರೆಯಲ್ಪಡುವ ಈ ಟ್ಯಾಂಕ್ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಉತ್ಪಾದನೆಯಾಗಲಿದೆ. ಹಾಗಾಗಿ ಭಾರತೀಯ ಪಾಲುದಾರರ ಸಹಯೋಗದೊಂದಿಗೆ ಟ್ಯಾಂಕಿನ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ರಕ್ಷಣಾ ಸಚಿವಾಲಯ ಜಾಗತಿಕ ಆದೇಶವನ್ನು ಜಾರಿಗೊಳಿಸಿದೆ. ಜಂಟಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ, ಅಗತ್ಯ ಮೂಲ ವಿನ್ಯಾಸಗಳು ಮತ್ತು ಸಲಕರಣೆಗಳನ್ನು ಆಮದು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ!!

ಈ ಹಿಂದೆ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿಯ ಬೆದರಿಕೆಗೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಿರುವ ಮೋದಿ ಸರಕಾರ ಸೇನೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುಬಲ್ಲ ಅತ್ಯಾಧುನಿಕ ಪಿನಾಕಾ ರಾಕೆಟ್ ಗಳನ್ನು ನಿಯೋಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿತ್ತು. ಅಲ್ಲದೇ, ಅಬ್ಬಾಸಿ ತನ್ನ ದೇಶ ಭಾರತೀಯ ಸೇನೆಯನ್ನು ಎದುರಿಸಲು ಸಣ್ಣ ವ್ಯಾಪ್ತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದಾಗಿ ಎಚ್ಚರಿಸಿದ್ದರು!! ಹಾಗಾಗಿ ಮೋದಿ ಸರಕಾರ ಅತ್ಯಾಧುನಿಕ ಪಿನಾಕಾ ರಾಕೆಟ್ ಗಳನ್ನು ನಿಯೋಜಿಸುವ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ!! ಇದೀಗ ಮೋದಿ ಸರಕಾರ ಎಫ್.ಆರ್.ಸಿ.ವಿಯ ಪ್ರಸ್ತಾವನೆಗೆ ಅಂಗೀಕರಿಸಿದ್ದು, ಸೇನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ತೀರ್ಮಾನಿಸಿದಂತಿದೆ!!

 

ತಯಾರಾಗಲಿದೆ 2,000 ಕ್ಕಿಂತಲೂ ಹೆಚ್ಚು ವಾಹನಗಳು…!!!

ಕೇಂದ್ರ ಸರ್ಕಾರ ಭಾರತದ ಗಡಿ ಪ್ರದೇಶದಲ್ಲಿನ “ತ್ವರಿತ ಪ್ರಾಬಲ್ಯ”ಕ್ಕಾಗಿ ಫ್ಯೂಚರ್ ರೆಡಿ ಕಾಂಬಟ್ ವೆಹಿಕಲ್ (ಎಫ್.ಆರ್.ಸಿ.ವಿ)ನ್ನು ತರಲಿರುವುದು ಹೆಮ್ಮೆಯ ವಿಚಾರವಾಗಿದೆ!! ಇನ್ನು, ಈ ಅಭಿವೃದ್ಧಿಯ ನಂತರ ಪಾಕಿಸ್ತಾನ ಮತ್ತು ಚೀನಾ ಗಡಿ ಪ್ರದೇಶದಲ್ಲಿ ಈ ಅತ್ಯಾಧುನಿಕ ಎಫ್.ಆರ್.ಸಿ.ವಿ ಟ್ಯಾಂಕ್ ಗಳನ್ನು ನಿಯೋಜಿಸಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಒಟ್ಟಾರೆಯಾಗಿ 2,000 ಕ್ಕಿಂತಲೂ ಹೆಚ್ಚು ವಾಹನಗಳನ್ನು ತಯಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಸರ್ಕಾರ ಇತ್ತೀಚೆಗೆ ವಿದೇಶೀ ಶಸ್ತ್ರಾಸ್ತ್ರಗಳ ಮೇಲೆ ಭಾರತೀಯ ಸೇನೆಯ ಅವಲಂಬನೆಯನ್ನು ಕಡಿತಗೊಳಿಸಲು ಮೇಕ್ ಇನ್ ಇಂಡಿಯಾ ಯೋಜನೆಯ ಸಾಕಾರಕ್ಕಾಗಿ ರಕ್ಷಣಾ ವಲಯದಲ್ಲಿ ವಿದೇಶೀ ನೇರ ಹೂಡಿಕೆಯನ್ನು ಹೆಚ್ಚಿಸಿತ್ತು. ಇದರ ಪರಿಣಾಮವಾಗಿ ಜಗತ್ತಿನ ಅತೀದೊಡ್ಡ ಯುದ್ದ ತಯಾರಿಕ ಸಂಸ್ಥೆಯಾದ ಮಾರ್ಟಿನ್ ಭಾರತದಲ್ಲಿ ಎಫ್ 16 ಫೈಟರ್ ಜೆಟ್ ಉತ್ಪಾದನಾ ಘಟಕಗಳನ್ನು ನಿರ್ಮಿಸುವುದಾಗಿ ಘೋಷಿಸಿತ್ತು. ಹಾಗೆಯೇ, ಅಮೆರಿಕಾದ ದೈತ್ಯ ರಕ್ಷಣಾ ಸಂಸ್ಥೆ ಮಾರ್ಟಿನ್ ಮತ್ತು ಸ್ವೀಡನ್ ನ ಸಾಬ್ ಸಂಸ್ಥೆ ಕನಿಷ್ಠ 100 ಸಿಂಗಲ್-ಇಂಜಿನ್ ಜೆಟ್ ಗಳನ್ನು ವಾಯುಪಡೆ ಗೆ ಅಗತ್ಯವಿರುವಂತೆ ತಯಾರಿಸಲು ಪ್ರಧಾನಿ ನರೇಂದ್ರ ಮೋದಿಯವರ “ಮೇಕ್ ಇನ್-ಇಂಡಿಯಾ” ಯೋಜನೆಯಲ್ಲಿ ಸ್ಥಳೀಯವಾಗಿ ಉತ್ಪಾದಿಸಲು ಒಪ್ಪಿವೆ!!

ಭಾರತ ಸರ್ಕಾರದ ಈ ಯೋಜನೆ ರಷ್ಯಾದ-ಮೂಲ ಮಿಲಿಟರಿ ವಾಹನಗಳ ಮೇಲೆ ಭಾರತದ ಅವಲಂಬನೆಯನ್ನು ಕಡಿತಗೊಳಿಸುವುದನ್ನು ಸೂಚಿಸುತ್ತದೆ. ಹಾಗಾಗಿ ಯುದ್ಧದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗಡಿಯಲ್ಲಿ “ತ್ವರಿತ ಪ್ರಾಬಲ್ಯ”ಕ್ಕಾಗಿ ಎಫ್.ಆರ್.ಸಿ.ವಿ ಟ್ಯಾಂಕ್ ಗಳನ್ನು ನಿಯೋಜಿಸಲಾಗುತ್ತದೆ. ಇದರಿಂದ ಭಾರತೀಯ ಸೇನೆ ರಾತ್ರಿಯ ಸಮಯದಲ್ಲಿಯೂ ಕೂಡ ಕಾರ್ಯಾಚರಣೆಗಳನ್ನು ನಡೆಸಲು ಸಾಧ್ಯವಾಗಲಿದೆ!!! ಎತ್ತರದ ಪ್ರದೇಶಗಳು, ಮರುಭೂಮಿಗಳು ಮತ್ತು ಪರ್ವತ ಭೂಪ್ರದೇಶ ಸೇರಿದಂತೆ ವಿಭಿನ್ನ ಭೂಪ್ರದೇಶಗಳಲ್ಲಿಯೂ ಕೂಡ ಇದನ್ನು ಬಳಸಬಹುದಾಗಿದೆ!!ಇದಷ್ಟೆ ಅಲ್ಲದೇ, -30 ಡಿಗ್ರೀ ಸೆಲ್ಸಿಯಸ್ ನಿಂದ +50 ಡಿಗ್ರಿ ಸೆಲ್ಸಿಯಸ್ ವರೆಗಿನ ಉಷ್ಣಾಂಶದಲ್ಲಿ ಕಾರ್ಯಾಚರಣೆಗಳನ್ನು ನಡೆಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಮೋದಿ ಸರ್ಕಾರ ಭಾರತವನ್ನು ಆಮದು ರಾಷ್ಟ್ರದಿಂದ ರಫ್ತುಗಾರ ರಾಷ್ಟ್ರವನ್ನಾಗಿ ಮಾಡಲು “ಮೇಕ್ ಇನ್ ಇಂಡಿಯಾ” ಯೋಜನೆಯ ಅಡಿಯಲ್ಲಿ ವಿದೇಶೀ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡುತ್ತಿದೆ. ಈ ಯೋಜನೆಯು ಆರಂಭಿಕ ಹಂತದಲ್ಲಿದ್ದು ಲಾಕ್ಹೀಡ್ ಮಾರ್ಟಿನ್ ಯುದ್ದ ವಿಮಾನ ಸಂಸ್ಥೆ ಭಾರತವನ್ನು ಏಕೈಕ ಎಫ್ -16 ಉತ್ಪಾದನಾ ಕೇಂದ್ರವಾಗಿಸುವ ಉದ್ದೇಶವನ್ನು ಹೊಂದಿದೆ, ಆದ್ದರಿಂದ ಅಂತಿಮವಾಗಿ ವಿಮಾನಗಳು ಭಾರತಕ್ಕೆ ಮಾತ್ರವಲ್ಲ, ಇತರ ದೇಶಗಳಿಗೂ ಕೂಡ ರಫ್ತು ಮಾಡಲಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಸದ್ಯ ಭಾರತ ತನ್ನ ಬೃಹತ್ ಸೈನ್ಯದಿಂದ ವಿಶ್ವದ ನಾಲ್ಕನೇ ಪ್ರಭಲ ರಾಷ್ಟ್ರವಾಗಿದ್ದು, 1.325 ದಶಲಕ್ಷ ಸಕ್ರಿಯ ಮಿಲಿಟರಿ ಸೇರಿದಂತೆ ,3.5 ಮಿಲಿಯನ್ ಸೈನ್ಯವನ್ನು ಭಾರತ ಹೊಂದಿದೆ. ಈಗಾಗಲೇ ವಿಶ್ವದ ಅತ್ಯುತ್ತಮ ಸೈನ್ಯದ ದೇಶಗಳಲ್ಲಿ ಯಾವಾಗಲೂ ಉಳಿದಿರುವ ಕಾರಣ, ಭಾರತೀಯ ಮಿಲಿಟರಿಯ ಪ್ರಭಲ ಸೈನ್ಯವು ಸುಮಾರು 16,000 ಭೂ ವಾಹನಗಳನ್ನು ಹೊಂದಿದೆ. ಇದರಲ್ಲಿ 3,500 ಟ್ಯಾಂಕ್ ಗಳು ಮತ್ತು 1,785 ಯುದ್ಧ ವಿಮಾನಗಳು, ಪರಮಾಣು ಶಸ್ತ್ರಾಸ್ತ್ರಗಳು ಭಾರತದ ಜೊತೆಯಲ್ಲಿ ಸೇರಿವೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ.

 

– ಅಲೋಖಾ

 

Tags

Related Articles

Close