ಪ್ರಚಲಿತ

ಮಹದಾಯಿ ಗೊಂದಲ ನಿವಾರಿಸಿದ ಯಡಿಯೂರಪ್ಪ!!! ಪರಿವರ್ತನಾ ಯಾತ್ರೆಯಲ್ಲಿ ಗೋವಾ ಸಿಎಂ ಒಪ್ಪಿಗೆ ಪತ್ರ ಓದಿ ಮೈನವಿರೇಳಿಸಿದ ಬಿಎಸ್‍ವೈ!!!

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿಲು ಒಪ್ಪಿಗೆ ನೀಡಿ ಕೊನೆಗೆ ಒಪ್ಪಿಗೆ ನೀಡದೆ ಉಲ್ಟಾ ಹೊಡೆದಿದ್ದಾರೆ ಎನ್ನವವರಿಗೆ ಶಾಕಿಂಗ್ ನ್ಯೂಸ್ ಇದೆ.

ಯಾಕೆಂದರೆ ಮಹದಾಯಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ಮನೋಹರ್ ಪಾರಿಕ್ಕರ್ ಒಪ್ಪಿಗೆ ನೀಡಿದ್ದು ಮಾತುಕತೆಗೆ ವೇದಿಕೆ ನಿರ್ಮಿಸಿದ್ದಾರೆ ಎನ್ನುವುದು ಕೊನೆಗೂ ಸಾಬೀತಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮನೋಹರ್ ಪಾರಿಕ್ಕರ್ ಅವರು ಮಾತುಕತೆಗೆ ಒಪ್ಪಿಗೆ ಸೂಚಿಸಿ ಬರೆದ ಪತ್ರವನ್ನು ಬಹಿರಂಗ ಸಮಾವೇಶದಲ್ಲಿ ಓದಿ ಎಲ್ಲರ ಮೈನವಿರೇಳಿಸಿದ್ದಾರೆ. ಆದ್ದರಿಂದ ಮಹಾದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ತಾತ್ವಿಕ ಮುಕ್ತಿ ಸಿಕ್ಕಂತಾಗಿದೆ.

ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿಯಾಗಿ ಮಹದಾಯಿ-ಕಳಸಾಬಂಡೂರಿ ನಾಳಾ ಯೋಜನೆಯ ಕುರಿತು ಮಾತುಕತೆ ನಡೆಸಿ ಕರ್ನಾಟಕಕ್ಕೆ ನೀರುಬಿಡುವಂತೆ ತಿಳಿಸಿದ್ದು, ಇದಕ್ಕೆ ಗೋವಾ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದರು.

ಈ ಬಗ್ಗೆ ಬಿಎಸ್ ಯಡಿಯೂರಪ್ಪ ಅವರು ಮಹದಾಯಿ ಬಗ್ಗೆ ಕನ್ನಡಿಗರಿಗೆ ಗುಡ್‍ನ್ಯೂಸ್ ಇದೆ, ಗೋವಾ ನೀರು ಹಂಚಿಕೆಗೆ ಒಪ್ಪಿದೆ ಎಂದು ತಿಳಿಸಿದ್ದರು. ಇದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಪರಿವರ್ತನಾ ಯಾತ್ರೆಯಲ್ಲಿ ಅಧಿಕೃತ ಹೇಳಿಕೆ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಈ ನಡುವೆ ವಿಚಿತ್ರ ವಿದ್ಯಾಮಾನವೊಂದು ಜರುಗಿತು.

ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಇಂದು ತೆರೆ ಬೀಳಲಿದೆ ಎಂಬ ಕುತೂಹಲದ ನಡುವೆಯೇ ಗೋವಾ ಸಿಎಂ ಮನೋಹರ್ ಪರ್ರೀಕರ್ ಅವರು, ಗೋವಾ ಹಿತ ಬಲಿಕೊಡುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಯನ್ನು ಎಲ್ಲಾ ಮಾಧ್ಯಮಗಳು ತಾಮುಂದು ತಾಮುಂದು ಎಂದು ಪ್ರಸಾರ ಮಾಡಿದ್ದವು.

ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಗೋವಾ ಜನರ ಹಿತ ಬಲಿಕೊಡಲ್ಲ. ಗೋವಾ ಜನರು ಯಾವುದೇ ರೀತಿಯಲ್ಲೂ ಆತಂಕಪಡುವ ಅಗತ್ಯವಿಲ್ಲ. ಗೋವಾ ಜನರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮನೋಹರ್ ಪರಿಕರ್ ಅವರು ತರುಣ್ ಭಾರತ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ ಎಂದು ಸುದ್ದಿಯೊಂದು ಹಬ್ಬಿತ್ತು.

ಆದರೆ ಈ ಸುದ್ದಿಯ ಕುರಿತು ವ್ಯತಿರಿಕ್ತವಾದ ಹೇಳಿಕೆಯೊಂದನ್ನು ಯಡಿಯೂರಪ್ಪ ನೀಡಿದ್ದಾರೆ.

ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಮನೋಹರ್ ಪರ್ರೀಕರ್ ಅವರು ವಿರೋಧಿಸಿಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಠಿ, ಯಾವುದೇ ಊಹಾಪೆÇೀಹಗಳಿಗೆ ಕಿವಿಗೊಡಬೇಡಿ ಎಂದು ಹೇಳಿ ಇಡೀ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಿದ್ದರು.

ಆದರೂ ಮಹದಾಯಿ ವಿಚಾರದಲ್ಲಿ ಗೋವಾ ಜನರ ಹಿತ ಬಲಿಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ತರುಣ್ ಭಾರತ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದರು ಎಂಬ ಸುದ್ದಿಯಿಂದ ಬೆಚ್ಚಿಬಿದ್ದಿದ್ದ ಕರ್ನಾಟಕ ಬಿಜೆಪಿ ಮುಖಂಡರು ತಕ್ಷಣ ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ತುರ್ತು ಸಭೆ ನಡೆಸಿದ್ದರು

ಇದಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಇದೆಲ್ಲಾ ಮಾಧ್ಯಮಗಳ ಸೃಷ್ಠಿ, ಪರಿವರ್ತನಾ ರಾಲಿಯ ಭಾಷಣದವರೆಗೂ ಕಾದು ನೋಡಿ. ಆ ರಾಜ್ಯದ ಹಿತ ಕಾಪಾಡುವ ಬಗ್ಗೆ ಮಾತನಾಡುವುದು ಸಹಜ, ಗೋವಾ ಸಿಎಂ ಜತೆ ಮಾತನಾಡುತ್ತೇವೆ. ಏನು ಮಾತಾಡಿದ್ದೇವೆ, ಮಾತುಕತೆ ವಿವರ ಸಂಜೆ ಘೋಷಿಸುವುದಾಗಿ ಬಿಎಸ್‍ವೈ ತಿಳಿಸಿ ಕುತೂಹಲ ಮೂಡಿಸಿದ್ದರು.

ನುಡಿದಂತೆ ನಡೆದ ಬಿಎಸ್‍ವೈ!

ಎಲ್ಲಾ ಗೊಂದಲಗಳನ್ನು ಬುಡಮೇಲುಗೊಳಿವಂತೆ ಹೇಳಿಕೆಯನ್ನು ಯಡಿಯೂರಪ್ಪ ಅವರು ಹುಬ್ಬಳ್ಳಿಯ ಪರಿವರ್ತನಾ ಯಾತ್ರೆಯಲ್ಲಿ ಬಹಿರಂಗಗೊಳಿಸಿದ್ದರು. ಮನೋಹರ್ ಪಾರಿಕ್ಕರ್ ಅವರು ಮಹದಾಯಿ ವಿವಾದದ ಕುರಿತು ಮಾತುಕತೆಗೆ ಮುಂದಾಗಿ ನೀರು ಬಿಡಲು ಒಪ್ಪಿರುವ ಬಗ್ಗೆ ಯಡಿಯೂರಪ್ಪಗೆ ಪತ್ರ ಬರೆದಿರುವುದನ್ನು ಬಹಿರಂಗಪಡಿಸಿ ಅದರಲ್ಲಿ ಬರೆದಿರುವುದನ್ನು ಬಹಿರಂಗವಾಗಿ ಓದಿದ್ದಾರೆ.

ಯಡಿಯೂರಪ್ಪ ಅವರು ಪರಿಕ್ಕರ್ ಹೇಳಿಕೆಯನ್ನು ಓದುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಇನ್ನು ಕೆಲವೇ ದಿನಗಳಲ್ಲಿ ನದಿನೀರು ಹಂಚಿಕೆ ವಿವಾದ ಬಗೆಹರಿಯುವುದು ನಿಜ ಎನ್ನುವುದು ಸಾಬೀತಾಗಿದೆ.

ಮಹಾದಾಯಿ ಸಮಸ್ಯೆ ಎನ್ನುವುದು ಕಳೆದ ಹಲವಾರು ದಶಕಗಳಿಂದ ಗೋವಾ ಮತ್ತು ಕರ್ನಾಟಕದ ಮಧ್ಯೆ ಸಮಸ್ಯೆ ಸೃಷ್ಟಿಸಿದೆ. ಈ ನದಿನೀರಿಗಾಗಿ ಅನೇಕ ಹೋರಾಟಗಳು ನಡೆದಿದೆ. ಸೋನಿಯಾ ಗಾಂಧಿ ಕೂಡಾ ಗೋವಾ ಪರವಾಗಿ ಹೇಳಿಕೆ ನೀಡಿದ್ದರು. ಕರ್ನಾಟಕದಲ್ಲಿ ಇದುವರೆಗೆ ಕಾಂಗ್ರೆಸ್ ಸಾಕಷ್ಟು ಬಾರಿ ಅಧಿಕಾರ ವಹಿಸಿದ್ದರೂ ಮಹದಾಯಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿರಲಿಲ್ಲ.

ಚೇಕಿತಾನ

Tags

Related Articles

Close