ಪ್ರಚಲಿತ

ಮಹದಾಯಿ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಮಾಡಿದ ಪ್ರಯತ್ನದ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾದ ಸಿದ್ದರಾಮಯ್ಯ ಸರ್ಕಾರ..!!!

ಎಂ.ಬಿ.ಪಾಟೀಲ್ ವರಸೆ ಬದಲಾಗಿದ್ದು ಯಾಕೆ ಗೊತ್ತಾ..?

ಅದು ಇಂದು ನಿನ್ನೆಯ ಹೋರಾಟವಲ್ಲ. 1972ರಿಂದ ನಿರಂತರವಾದ ಹೋರಾಟದಲ್ಲಿ ಉತ್ತರ ಕರ್ನಾಟಕದ ಭಾಗದ ಜನತೆ ಕುಡಿಯುವ ನೀರಿಗಾಗಿ ಹಪಹಪಿಸುತ್ತಿದ್ದರು. ಅವರಿಗೋಂದೇ ಮಾರ್ಗವಿದ್ದುದು. ಅದು ಗೋವಾದಿಂದ ಹರಿದು ಬರುವ ಮಹಾದಾಯಿ ಎಂಬ ನದಿಯ ನೀರು.

ಆದರೆ ಗೋವಾ ರಾಜ್ಯ ಮಾತ್ರ ನೀರು ಬಿಡಲು ಸುತಾರಾಮ್ ಒಪ್ಪಿಕೊಳ್ಳುತ್ತಿರಲಿಲ್ಲ. ಗೋವಾದಿಂದ ಕರ್ನಾಟಕಕ್ಕೆ ಮಹಾದಾಯಿ ನೀರು ಬಿಟ್ಟರೆ ಇನ್ನು ತಮ್ಮ ರಾಜ್ಯದ ಜನತೆಗೆ ಯಾವ ರೀತಿ ಉತ್ತರಿಸುವುದು ಎಂಬ ಸಹಜವಾದ ಮನಸ್ಥಿತಿ ಗೋವಾ ಸರ್ಕಾರದ್ದು. ಆದರೆ ರಾಜ್ಯದಲ್ಲಿ ಮಾತ್ರ ಪ್ರತಿಭಟನೆಯ ಕಾವು ಜೋರಾಗುತ್ತಲೇ ಇದೆ. ದಶಕಗಳ ಆಚೆಯಿಂದ ನಡೆಯುತ್ತಿರುವ ಮಹದಾಯಿ ಪ್ರತಿಭಟನೆಯ ಕಾವು ಇನ್ನೂ ಆರಿಲ್ಲವೆಂದರೆ ಇದೊಂದು ಇತಿಹಾಸವೇ ಸರಿ.

ಇಷ್ಟು ವರ್ಷ ಸಮಸ್ಯೆ ಪರಿಹಾರವಾಗಿಲ್ಲ ಯಾಕೆ..?

ಹಲವಾರು ದಶಕಗಳಿಂದಲೂ ಈ ಸಮಸ್ಯೆ ಉತ್ತರ ಕರ್ನಾಟಕ ಭಾಗದ ಜನತೆ ಎದುರಿಸುತ್ತಿದ್ದರೂ ಈ ಭಾಗದ ಜನರಿಗೆ ನ್ಯಾಯ ದೊರಕಿಸುವಲ್ಲಿ ಇಲ್ಲಿನ ಇಷ್ಟು ವರ್ಷಗಳ ಕಾಂಗ್ರೆಸ್ ಸರ್ಕಾರ ವಿಫಲವಾಗಿತ್ತು. ಈವರೆಗೂ ಗೋವಾ ಹಾಗೂ ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರ ಇದ್ದಿದ್ದರೂ ಈ ಸಮಸ್ಯೆಯನ್ನು ಬಗೆಹರಿಸಲು ಇಚ್ಚಾಶಕ್ತಿಯನ್ನು ಪ್ರದರ್ಶನ ಮಾಡಿಲ್ಲ. ಒಂದು ವೇಳೆ ಇಷ್ಟರವರೆಗೆ ಈ ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ಆಸಕ್ತಿ ವಹಿಸಿದ್ದರೆ ಈ ಸಮಸ್ಯೆಗೆ ಎಂದೋ ಮುಕ್ತಿ ಸಿಗುತ್ತಿತ್ತು.

ಬಿಜೆಪಿ ತಲೆ ಮೇಲೆ ಬಿತ್ತು ಮಹದಾಯಿ ಉರುಳು…

ಏನೇ ಮಾಡಿದರೂ ಮೋದಿಯನ್ನು ತೆಗಳುವ ಈ ಕಾಂಗ್ರೆಸ್ ಹಾಗೂ ಪ್ರಗತಿಪರ ಬುದ್ದಿ ಜೀವಿಗಳು ಮಹದಾಯಿ ವಿಚಾರದಲ್ಲೂ ಮೋದಿಯನ್ನು ಎಳೆದು ತಂದಿದ್ದಾರೆ. ಕರ್ಣಾಟಕದ ಸರ್ಕಾರವನ್ನು ಪ್ರಶ್ನಿಸುವ ಬದಲು ಇಲ್ಲಿರುವ ಭಾರತೀಯ ಜನತಾ ಪಕ್ಷವನ್ನು ದೂರುವ ಕೆಲಸವನ್ನು ಕೆಲವು ಬುದ್ದಿಜೀವಿಗಳು ಮಾಡುತ್ತಿದ್ದಾರೆ. ಆದರೂ ಇಲ್ಲಿನ ಭಾರತೀಯ ಜನತಾ ಪಕ್ಷದ ನಾಯಕರು ಇತ್ತೀಚೆಗೆ ಅಮಿತ್ ಶಾ ನೇತೃತ್ವದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

ನನ್ನನ್ನು ಕರೆದೇ ಇಲ್ಲ ಎಂದ ಸಿದ್ದರಾಮಯ್ಯ…

ಈ ಮುಖ್ಯಮಂತ್ರಿಗಳಿಗೆ ಯಾವುದಾರೊಂದು ತಗಾದೆ ತೆಗೆಯುತ್ತಲೇ ಇರಬೇಕು ಅಂತ ಅನ್ನಿಸುತ್ತೆ. ಪ್ರತಿಯೊಂದು ವಿಚಾರದಲ್ಲೂ ಖ್ಯಾತೆ ತೆಗೆಯುತ್ತಲೇ ಇರುತ್ತಾರೆ ನಮ್ಮ ಮುಖ್ಯಮಂತ್ರಿಗಳು. ಈಗ ಮಹದಾಯಿ ವಿಚಾರದಲ್ಲೂ ಖ್ಯಾತೆ ತೆಗೆದಿದ್ದಾರೆ. “ಕೇವಲ ಭಾರತೀಯ ಜನತಾ ಪಕ್ಷದ ನಾಯಕರು ಮಾತುಕತೆ ನಡೆಸಿದರೆ ಸಾಕಾ. ನನ್ನನ್ನು ಯಾಕೆ ಕರೆದಿಲ್ಲ. ಇದನ್ನು ನಾನು ಒಪ್ಪುವುದಿಲ್ಲ” ಎಂದು ಮತ್ತೆ ತನ್ನ ಉದ್ಧಟತನವನ್ನು ಮೆರೆದಿದ್ದಾರೆ. ಮಾತ್ರವಲ್ಲದೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ನಿಜವಾಗಿಯೂ ಓರ್ವ ಮುಖ್ಯಮಂತ್ರಿಯಾದವನು ಹೀಗೆ ಹೇಳಿಕೆ ನೀಡೋದು ಎಷ್ಟು ಸರಿ? ಭಾರತೀಯ ಜನತಾ ಪಕ್ಷದ ನಾಯಕರು ಸಂಧಾನ ನಡೆಸಿದ್ದಾರೆ. ಅವರ ಸಹಕಾರವನ್ನು ತೆಗೆದುಕೊಂಡು ನಾವು ಒಗ್ಗಟ್ಟಾಗಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳಬೇಕಾಗಿದ್ದ ಮುಖ್ಯಮಂತ್ರಿಗಳು ಭಾರತೀಯ ಜನತಾ ಪಕ್ಷದ ನಾಯಕರು ಮಾತನಾಡಿದ್ದೇ ತಪ್ಪು ಎಂದು ಹೇಳಿದ್ದಾರೆಂದರೆ ಏನರ್ಥ..?

ಯಶಸ್ವಿಯಾದ ಬಿಜೆಪಿ…

ಮಹದಾಯಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ. ಹೇಗಾದರೂ ಸರಿ, ಈ ಬಾರಿ ಮಹದಾಯಿ ನದಿ ನೀರಿಗೆ ಶಾಶ್ವತ ಪರಿಹಾರವನ್ನು ಕಂಡಿಕೊಡುತ್ತೇವೆ ಎಂದು ಪಣ ತೊಟ್ಟಿದ್ದಾರೆ. ಭಾರತೀಯ ಜನತಾ ಪಕ್ಷ ಕರ್ನಾಟಕದ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ನೇತೃತ್ವದ ತಂಡವು ಇದರ ಬಗ್ಗೆ ನಿರಂತರವಾಗಿ ಕೆಲಸ ಮಾಡುತ್ತಲೇ ಇದೆ. ಆದರೆ ಕಾಂಗ್ರೆಸ್ ಮಾತ್ರ ತನ್ನ ರಾಜಕೀಯ ಬೇಳೆಯನ್ನು ಬೇಯಿಸುತ್ತಲೇ ಇದ್ದಾರೆ. ನಿನ್ನೆಯ ಹುಬ್ಬಳ್ಳಿಯ ಪರಿವರ್ತನಾ ಯಾತ್ರೆಯ ಸಂದರ್ಭ ಗೋವಾ ಸಿಎಂ ಮನೋಹರ್ ಪರಿಕ್ಕರ್ ಕಳಿಸಿರುವ ಪತ್ರವನ್ನು ಓದಿ ಮಹದಾಯಿ ನೀರಿನ ಸಮಸ್ಯೆಗೆ ಮುಕ್ತಿ ಸಿಗುವ ಸೂಚನೆಯನ್ನೂ ನೀಡಿದ್ದಾರೆ.

ಮಾತುಕತೆಗೆ ಸಿದ್ದ ಎಂದ ಕಾಂಗ್ರೆಸ್ ಸರ್ಕಾರ…!

ರಾಜ್ಯ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸುವ ಲಕ್ಷಣಗಳು ಗೋಚರಿಸಲೇ ಇಲ್ಲ. ಈ ಕಾರಣದಿಂದಾಗಿಯೇ ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರು ಈ ಬಗ್ಗೆ ಗಮನ ಹರಿಸುತ್ತಾರೆ. ತಂಡವೊಂದನ್ನು ರಚಿಸಿ ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ತಾವು ಮಾಡಲು ಮುಂದಾಗುತ್ತಾರೆ. ಯಾವಾಗ ಮಹದಾಯಿ ವಿಚಾರದಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷ ಚುರುಕ್ಕಾಗುತ್ತೋ ಅಂದಿನಿಂದ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಉಂಟಾಗಿದೆ. ಮಹದಾಯಿ ವಿಚಾರದಲ್ಲಿ ಎಲ್ಲಿ ಕ್ರೆಡಿಟ್ ಭಾರತೀಯ ಜನತಾ ಪಕ್ಷದ ಪಾಲಾಗುತ್ತೋ ಎಂಬ ಭಯದಿಂದ ತರಾತುರಿಯಲ್ಲಿ ಮಾತುಕತೆಗೆ ಸಿದ್ದ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ “ನಾವು ಯಾವುದೇ ಕ್ಷಣದಲ್ಲೂ ಮಾತುಕತೆಗೆ ಸಿದ್ದರಿದ್ದೇವೆ. ನಾಳೆಯೇ ಸಭೆ ಕರೆದರೂ ಮುಖ್ಯಮಂತ್ರಿಗಳು ತಮ್ಮೆಲ್ಲಾ ಕಾರ್ಯಕ್ರಮಗಳನ್ನೂ ರದ್ದು ಮಾಡಿ ಸಭೆಗೆ ಹಾಜರಾಗುತ್ತಾರೆ” ಎಂದು ಹೇಳಿದ್ದಾರೆ. ಈ ಮೂಲಕ ತಾವೂ ಮಹದಾಯಿ ಬಗ್ಗೆ ಕಾಳಜಿ ಹೊಂದಿದ್ದೇವೆ ಎಂಬ ತೋರಿಕೆಯನ್ನು ವ್ಯಕ್ತಪಡಿಸಿದ್ದಾರೆ. ನೀಡಿದ್ದಾರೆ.

ಇಷ್ಟು ದಿನ ಎಲ್ಲಿದ್ರಿ ಪಾಟೀಲರೇ..?

ಮಹದಾಯಿ ಹೋರಾಟ ಹೊತ್ತಿ ಉರಿಯುತ್ತಿತ್ತು. ಕಾಂಗ್ರೆಸ್ ಸರ್ಕಾರಕ್ಕೆ ಈ ಸಮಸ್ಯೆಯನ್ನು ಬಗೆಹರಿಸುವ ಯಾವುದೇ ಕಾಳಜಿನೂ ಇರಲಿಲ್ಲ. ಆದರೆ ಭಾರತೀಯ ಜನತಾ ಪಕ್ಷ ಯಾವಾಗ ಈ ಬಗ್ಗೆ ಆಸಕ್ತಿ ವಹಿಸಿ ಮುಂದುವರೆದಿತ್ತೋ ಅಂದಿನಿಂದ ಇಲ್ಲಿನ ಕಾಂಗ್ರೆಸ್ ನಾಯಕರಿಗೆ ತಲೆಬಿಸಿ ಆರಂಭವಾಗಿದೆ. ಭಾರತೀಯ ಜನತಾ ಪಕ್ಷ ಕೈಗೊಂಡಿರುವ ಈ ತೀರ್ಮಾನದಿಂದ ಅವರು ಯಶಸ್ವಿಯಾದರೆ ಇದರ ಸಂಪೂರ್ಣ ಲಾಭ ಭಾರತೀಯ ಜನತಾ ಪಕ್ಷದ ಪಾಲಾಗಲಿದೆ ಎಂಬ ಸ್ಪಷ್ಟ ಅರಿವು ಕಾಂಗ್ರೆಸ್‍ಗೆ ಇತ್ತು. ಹೀಗಾಗಿಯೇ ತರಾತುರಿಯಲ್ಲಿ ಮಾತುಕತೆಗೆ ಸಿದ್ದ ಎಂದು ಹೇಳಿದ್ದಾರೆ.

ಕಳೆದ ಬಾರಿಯ ಗೋವಾ ವಿಧಾನ ಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ಅಧಿ ನಾಯಕಿ ಸೋನಿಯಾ ಗಾಂಧಿ “ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯಕ್ಕೆ ನೀರನ್ನು ಹರಿಸಲು ನನ್ನ ಜೀವ ಇರುವವರೆಗೂ ಬಿಡೋದಿಲ್ಲ” ಎಂದು ಆರ್ಭಟಿಸಿದ್ದರು. ಆದರೆ ಆ ಸಮಯದಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರು ಯಾರೂ ತುಟಿ ಬಿಚ್ಚಿಲ್ಲ. ಅದೇ ಅಮಿತ್ ಶಾ ಹಾಗೆ ಹೇಳುತ್ತಿದ್ದರೆ ಇಂದು ಕರ್ನಾಟಕದಲ್ಲಿ ಪ್ರತಿಭಟನೆಯ ಮೇಲೆ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ ಅಮಿತ್ ಶಾ ಕರ್ನಾಟಕದ ಏಳಿಗೆಗಾಗಿ ಗೋವಾ ಹಾಗೂ ಕರ್ನಾಟಕದ ನಾಯಕರನ್ನು ಕೂರಿಸಿ ಮಾತುಕತೆ ನಡೆಸಿದರು.

ಕರ್ನಾಟಕಕ್ಕೆ ನೀರು ಬಿಡುವ ಬಗ್ಗೆ ಭಾರತೀಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆಸಿರುವ ಸಂಧಾನದ ವಿರುದ್ಧ ಪ್ರತಿಭಟನೆ ನಡೆಸಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ಈಗಲೂ ಕಾಲ ಮಿಂಚಿಲ್ಲ. ಕರ್ನಾಟಕದ ಕಾಂಗ್ರೆಸ್ ನಾಯಕರು ಹಾಗೂ ಮುಖ್ಯಮಂತ್ರಿಗಳು ಗೋವಾಗೆ ತೆರಳಿ ಅಲ್ಲಿನ ಕಾಂಗ್ರೆಸ್ ನಾಯಕರ ಮನವೊಲಿಸಿ. ಅವರನ್ನು ಪ್ರತಿಭಟಿಸದಂತೆ ಸಂಧಾನ ನಡೆಸಿ. ಕರ್ನಾಟಕಕ್ಕೆ ಮಹದಾಯಿ ನದಿ ನೀರು ಬಿಡುವಂತೆ ಅಲ್ಲಿನ ಸರ್ಕಾರಕ್ಕೆ ನಿರಾಪೇಕ್ಷಣೆಯನ್ನು ಸಲ್ಲಿಸಲಿ. ಆವಾಗ ನಿಮ್ಮ ಮಹದಾಯಿ ಬಗ್ಗೆ ಇರುವ ಕಾಳಜಿಯನ್ನು ಒಪ್ಪಿಕೊಳ್ಳುತ್ತೇವೆ.

ಒಟ್ಟಾರೆ ಮಹದಾಯಿ ನೀರಿನ ಸಮಸ್ಯೆಯನ್ನು ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಬಗೆಹರಿಸಲು ಸಾಧ್ಯವಿದ್ದು ರಾಜಕೀಯ ಹಿತಾಸಕ್ತಿಯನ್ನು ಬದಿಗಿಟ್ಟು ಉತ್ತರ ಕರ್ನಾಟಕದ ಭಾಗದ ಜನತೆಗೆ ನ್ಯಾಯ ಒದಗಿಸಿಕೊಬೇಕೆನ್ನುವುದೇ ಸಮಸ್ತ ಕರ್ನಾಟಕದ ಜನತೆಯ ಒಕ್ಕೊರಲ ಆಗ್ರಹವಾಗಿದೆ.

-ಸುನಿಲ್ ಪಣಪಿಲ

Tags

Related Articles

Close