ಪ್ರಚಲಿತ

ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ನಿಂದ ಭಾರತದ ಪ್ರಧಾನಿ ಮೋದಿಗೆ ಬಹಿರಂಗ ಕೊಲೆ ಬೆದರಿಕೆ! ಪಾಕಿಸ್ಥಾನದಲ್ಲಿ ನೆಲೆ ನಿಂತ ಉಗ್ರ ಹೇಳಿದ್ದೇನು ಗೊತ್ತೇ?!

ಪದೇ ಪದೇ ಭಾರತದ ವಿರುದ್ಧ ಯುದ್ಧಕ್ಕೆ ಕಾಲ್ಕೆರೆದು ಬರುವ ಪಾಕಿಸ್ತಾನಕ್ಕೆ ಈಗ ಸಂಕಷ್ಟ ಎದುರಾಗಿದೆ ಎಂದೇ ಹೇಳಬಹುದು.. ಯಾಕೆಂದರೆ ಭಾರತದ ಸಿಂಧು ನದಿಗೆ ಅಣೆಕಟ್ಟು ಕಟ್ಟಲು ಈಗ ಮೋದಿಜೀಯವರು ಸಜ್ಜಾಗಿದ್ದಾರೆ..ಸಿಂಧು ನದಿಗೆ ಅಣೆಕಟ್ಟನ್ನು ಕಟ್ಟಿದರೆ ಪಾಕಿಸ್ತಾನಕ್ಕೆ ಹೋಗುವ ನೀರನ್ನು ಸಂಪೂರ್ಣ ತಡೆಯುತ್ತದೆ.. ಈ ವಿಷಯ ತಿಳಿದ ಮುಂಬೈ ಮಾರಣ ಹೋಮದ ಮಾಸ್ಟರ್ ಮೈಂಡ್ ಹಪೀಜ್ ಸಯೀದ್ ಜೈಲಿನಿಂದ ಹೊರಬರುತ್ತಿದ್ದಂತೆ ಹುಚ್ಚನಂತೆ ವರ್ತಿಸಲು ಶುರು ಮಾಡಿದ್ದಾನೆ…!!

ಹಿಂದೆ ಪಾಕ್ ಭಯೋತ್ಪಾದನೆ ಬೃಹತ್ ಒಳಾಂಗಣ ನೀರಿನ ಒಡಂಬಡಿಕೆಯ ವಿಷಯವಾಗಿ ಪ್ರಧಾನಿ ಮೋದಿ ತಮ್ಮ ಉಗ್ರ ಭಾಷಣವನ್ನು ಮಾಡಿದ್ದರು. ಅವರ ಭಾಷಣ ಕೇವಲ ಜನ ಸಮೂಹವನ್ನು ಪ್ರಚೋದಿಸುವ ಉದ್ಧೇಶವಾಗಿರಲಿಲ್ಲ, ಹೊರತಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವತ್ತ ತಮ್ಮ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು. ಆ ಭಾಷಣದಲ್ಲಿ ಅನೇಕ ರಾಜತಾಂತ್ರಿಕ ವಿಷಯಗಳ ಬಗೆ ಚರ್ಚಿಸಲಾಗಿತ್ತು..

ಪಾಕಿಸ್ತಾನಕ್ಕೆ ಹೋಗುವ ಸಿಂಧು ನದಿಗೆ ಅಣೆಕಟ್ಟಿನ ನಿರ್ಮಾಣದ ಬಗ್ಗೆ ಶೀಘ್ರವಾಗಿ ಕೆಲಸ ನಿರ್ವಹಿಸುವಂತೆ ಯೋಜನೆಯನ್ನು ಕೂಡಾ ರೂಪಿಸಿದ್ದರು.. ಭಾರತಕ್ಕೆ ವಿಶ್ವಬ್ಯಾಂಕ್‍ನಿಂದ ಯೋಚನೆಗಳನ್ನು ನಿರ್ಮಿಸಲು ಅನುಮತಿ ನೀಡಿತ್ತು. ಆದರೆ ವಿಶ್ವ ಬ್ಯಾಂಕ್ ಅನುಮತಿ ನೀಡಿದ್ದರೂ, ಇದಕ್ಕೆ ಪಾಕಿಸ್ತಾನ ಮಾತ್ರ ಈ ಯೋಜನೆಗಳನ್ನು ನಿರ್ಮಿಸದಂತೆ ವಿರೋಧ ಮಾಡಿತ್ತು ಮತ್ತು ಯೋಜನೆಗಳನ್ನು ನಿರ್ಮಿಸದಂತೆ ಕಡಿವಾಣ ಹಾಕಿತ್ತು.

ಅದಲ್ಲದೆ ಈಗ ಶ್ರೀಗಂಗಾನಗರದಲ್ಲಿರುವ ಇಂದಿರಾಗಾಂಧಿ ಕಾಲುವೆಯಿಂದ ಕೂಡಾ ಪಾಕ್ ರೈತರಿಗೆ ನೀರು ಸರಬರಾಜು ಆಗದಂತೆ ತಡೆಯಲು ಭಾರತ ಪ್ರಯತ್ನಿಸುತ್ತಿದೆ… ಈ ಕಾಲುವೆಯಿಂದ ಪಾಕ್‍ಗೆ ಅದೆಷ್ಟೋ ನೀರು ಸರಬರಾಜು ಆಗುತ್ತಿದೆ. ಇದನ್ನು ಖಂಡಿಸಿ ಮೋದಿ ಈಗಾಗಲೇ ನೀರು ಸರಬರಾಜು ಆಗದಂತೆ ಕಡಿವಾಣ ಹಾಕಿದ್ದಾರೆ. ಅದನ್ನು ಪಾಕ್ ಈಗ ಪರಿಣಾಮಕಾರಿಯಾಗಿ ತೆಗೆದುಕೊಂಡಿದೆ. ಪಾಕ್ ರೈತರಿಗೆ ನೀರು ಸರಬರಾಜು ಮಾಡುವ ಅಗತ್ಯ ನಮಗೇನಿಲ್ಲ. ಇತ್ತ ಪಾಕ್ ಈ ಯೋಜನೆಯನ್ನು ಖಂಡಿಸಿದರೂ, ಪ್ರಧಾನಿ ಮೋದಿ ಮಾತ್ರ ನೀರು ಪೂರೈಕೆ ಮಾಡುದನ್ನು ಖಂಡಿಸಿದ್ದಾರೆ. ಇದರ ಬಗ್ಗೆ ಇಡೀ ಭಾರತ ಎಚ್ಚೆತ್ತುಕೊಳ್ಳಬೇಕಾಗಿದೆ. ಕೊನೆಗೂ ಸರಕಾರ ಗಡಿ ಪ್ರದೇಶದಲ್ಲಿರುವ ಪಾಕ್ ರೈತರಿಗೆ ಉಚಿತವಾಗಿ ನೀರು ಸರಬರಾಜು ಆಗುದನ್ನು ನಿಲ್ಲಿಸಲು ಮುಂದಾಗಿದೆ.

ಅನೇಕ ವರ್ಷಗಳಿಂದ ಗಡಿಯಲ್ಲಿರುವ ಪಾಕ್ ರೈತರು ಭಾರತದಿಂದ ಸರಬರಾಜಗುವ ನೀರಿನಿಂದ ಸ್ಥಳೀಯ ಹತ್ತಿ, ಅಮೇರಿಕಾದ ಹತ್ತಿ, ಕಬ್ಬು, ಗೋದಿ ಹಾಗು ಸಾಸಿಸೆ ಮುಂತಾದ ಪ್ರಮುಖ ಬೆಳೆಗಳನ್ನು ಬೆಳೆಯುತ್ತಿದ್ದರು. ತಮ್ಮ ಜೀವನವನ್ನು ಸರಾಗವಾಗಿ ಸಾಗಿಸುತ್ತಿದ್ದರು. ಅದೇ ನಾವು ಮಾತ್ರ ಇಲ್ಲಿ ನೀರಿಗಾಗಿ ಪರದಾಡ್ತಾನೆ ಇದ್ದೇವೆ. ಯಾವಾಗ ಇಲ್ಲಿ ಮಳೆ ಜಾಸ್ತಿ ಇರುತ್ತೊ, ಅ ಸಮಯದಲ್ಲಿ ಶ್ರಿಗಂಗಾನಗರ ಹಾಗೂ ಹನುಮಗ್ರಹ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತೆ. ಈ ಕಾಲುವೆ ಹರಿಯುವ ನೀರಿನಿಂದ ಪಾಕ್ ಗಡಿಗೆ ನೀರು ಸರಾಗವಾಗಿ ಹರಿಯೋದರಿಂದ ಹೆಚ್ಚಿನ ಬೆಳೆಗಳನ್ನು ಬೆಳೇಯೋದಕ್ಕೆ ಪಾಕ್ ರೈತರಿಗೆ ಸಹಕಾರಿಯಾಗುತ್ತದೆ.!!

ಇದು ನಮ್ಮ ಭಾರತೀಯರಿಗೆ ಅತ್ಯಂತ ದುರದೃಷ್ಟಕರ ವಿಷಯ. ನಾವು ಅವರಿಗೆ ನೀರು ಸರಬರಾಜು ಮಾಡುವ ಬದಲು ನಮ್ಮಲ್ಲೇ ನೀರಿನ ಸಮಸ್ಯೆ ಕಾಡ್ತಾನೇ ಇದೆ. ಇದನ್ನೆಲ್ಲಾ ಮನವರಿತ ಪ್ರಧಾನಿ ಮೋದಿ ಕಾಲುವೆಯಿಂದ ಸರಬರಾಜಾಗುವ ನೀರನ್ನು ಸ್ಥಗಿತಗೊಳಿಸಲು ಮುಂದಾಗಿದ್ದಾರೆ. ನೀರು ಸರಬರಾಜು ಮಾಡಿದವರಲ್ಲಿ ಜವಹರ್ಲಾಲ್ ನೆಹರೂರವರು ಬಬ್ಬರಾಗಿದ್ದರು. ಪಾಕ್ ರೈತರಿಗೆ ನೀರು ಸರಬರಾಜು ಮಾಡಿ ನಾವು ತುಂಬಾ ದೊಡ್ಡ ತಪ್ಪು ಮಾಡಿದ್ದೇವೆ. ಜವಹರ್‍ಲಾಲ್ ನೆಹರು ನೆರೆಹೊರೆ ದೇಶದಲ್ಲಿ ಶಾಂತಿ ಕಾಪಾಡಲು ಹೋಗಿ ತಮ್ಮ ಸ್ವಂತ ಜನರ ಹಿತಾಸಕ್ತಿಗಳನ್ನು ಬಿಟ್ಟುಬಿಡಬಹುದೆಂದು ಅವರು ಜಗತ್ತಿಗೆ ತೋರಿಸಿ ಕೊಟ್ಟರು. ಇಲ್ಲಿ ಮೊದಲು ನಮ್ಮವರ ಬಗ್ಗೆ ಆಲೋಚಿಸಬೇಕಾಗುತ್ತದೆ. ಇಂತಹ ವಿಷಯಗಳನ್ನು ಇನ್ನಾದರೂ ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತ್ರ ಅನಗತ್ಯ ಸವಲತ್ತುಗಳನ್ನು ಕೊಡಲು ಯಾವತ್ತೂ ಸಹಕರಿಸುವವರಲ್ಲ. ದ್ರೋಹಿ ಪಾಕ್‍ಗೆ ಯಾವತ್ತೂ ಸಹಕರಿಸಲ್ಲ.

ಇತ್ತೀಚಿಗೆ ಜೈಲಿನಿಂದ ಬಿಡುಗಡೆಯಾದ ಮುಂಬೈನ ಮಾರಣ ಹೋಮದ ಮಾಸ್ಟರ್ ಮೈಂಡ್ ಹಪೀಜ್ ಸಯೀದ್ ನಾಲಗೆಯನ್ನು ಹರಿಯ ಬಿಟ್ಟಿದ್ದಾನೆ…ಬಾಯಿಗೆ ಬಂದ ಹಾಗೆ ಮಾತುಗಳನ್ನಾಡುತ್ತಿದ್ದಾನೆ.. ಹೌದು ಇತ್ತೀಚೆಗೆ ನರೇಂದ್ರ ಮೋದಿಯನ್ನು ಬಾಯಿಗೆ ಬಂದ ರೀತಿ ಏನೇನೋ ಅವಾಚ್ಯ ಶಬ್ಭಗಳಿಂದ ನಿಂದಿಸಿರುವ ವಿಡೀಯೋವೊಂದು ಬಿಡುಗಡೆಯಾಗಿದೆ.!! ಕಾಶ್ಮೀರವನ್ನು ತೆಗೆದುಕೊಳ್ಳುವ ತಾಕತ್ತು ನಮಗಿದೆ!! ಕಾಶ್ಮೀರ ನಮ್ಮದು..(ಪಾಕಿಸ್ತಾನ) ನಿಮ್ಮಿಂದ ನಮಗೆ ಹೇಗೆ ಕಸಿದುಕೊಳ್ಳಬೇಕು ಎಂಬುವುದು ನಮಗೆ ತಿಳಿದಿದೆ… ಕಾಶ್ಮೀರ ಮುಂದೊಂದು ದಿನ ಪಾಕಿಸ್ತಾನಕ್ಕೆ ಸೇರುವುದನ್ನು ನಿಮ್ಮ ಕಣ್ಣಾರೆ ನೋಡಿ ಆನಂದಿಸಿ ಎಂಬ ಮಾತನ್ನು ಹೇಳಿದ್ದಾನೆ…

ಮೋದಿ ನಿನೇನಾದರೂ ಡಾಕಾದಲ್ಲಿ ಬಂದು ಕಾಶ್ಮೀರ ಭಾರತದ್ದು ಎಂದು ಹೇಳಿದೆಯೋ ಅಂದೇ ನಿನಗೆ ಗ್ರಹಚಾರ ಕಾದಿದೆ ಎಂದು ಬೊಗಳೆ ಬಿಟ್ಟಿದ್ದಾನೆ… ಒಂದು ವೇಳೆ ಪಾಕಿಸ್ತಾನಕ್ಕೆ ಬರುವಂತಹ ನೀರನ್ನು ತಡೆದು ಪಾಕಿಸ್ತಾನಕ್ಕೆ ಅವಮಾನಿಸಿದೆಯೋ ಅಂದು ನೀನು ಕಾಲಿಟ್ಟಿರುವಲ್ಲೆಲ್ಲಾ ರಕ್ತದ ಓಕುಳಿಯೇ ಹರಿಸಿಬಿಡುತ್ತೇವೆ!! ಏನೇ ಮಾಡಿದರೂ ಪಾಕಿಸ್ತಾನಕ್ಕೆ ಬರುವ ನೀರನ್ನು ತಡೆಯಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿ ಸ್ವತಃ ಮೋದಿಜೀಯವರಿಗೆ ಸವಾಲೆಸೆದಿದ್ದಾನೆ… ಇಡೀ ದೇಶ ವಿದೇಶಗಳ್ಲಿ ಮೋದಿ ಜೀ ಎಂದರೆ ಪಂಚ ಪ್ರಾಣ!! ನಿನಗೆ ಮೋದಿಯ ಉಗುರನ್ನು ಕೂಡಾ ಮುಟ್ಟಲು ಸಾಧ್ಯವಿಲ್ಲ ಎಂಬುವುದನ್ನು ಅವನು ಅರಿಯ ಬೇಕಾಗಿದೆ..

https://www.youtube.com/watch?v=pRrO8r_KANY

ಇದು ಖಂಡಾಂತರ ಕ್ಷಿಪಣಿಗಳ ಕಾಲ; ಅಣುಯುಗ. ಕೇವಲ ಒಂದು ಗುಂಡಿ ಅದುಮುವ ಮೂಲಕ ಜಗತ್ತಿನ ಯಾವುದೋ ತುದಿಯಲ್ಲಿರುವ ನಿರ್ಧಿಷ್ಟ ಜಾಗವನ್ನು ಕುಳಿತಲ್ಲೇ ಬೂದಿ ಮಾಡಬಲ್ಲ ತಾಂತ್ರಿಕತೆಯೀಗ ಮನುಷ್ಯನ ಬತ್ತಳಿಕೆಯಲ್ಲಿದೆ. ಹಾಗಾಗಿ ಈಗ ಸಂಯಮದ ಬಗ್ಗೆಯೇ ಹೆಚ್ಚೆಚ್ಚು ಮಾತಾಡಬೇಕಾಗಿದೆ. ಅದರಲ್ಲೂ ಭಯೋತ್ಪಾದನೆಯ ಟಂಕಶಾಲೆಯಂತಿರುವ ಪಾಕಿಸ್ತಾನದ ವಿರುದ್ಧದ ಪ್ರತಿ ನಡೆಯೂ ಹಗ್ಗದ ಮೇಲಿನ ನಡಿಗೆಯೇ..ಭಾರತವೀಗ ಪಂಚತಂತ್ರದ ಜಾಣ್ಮೆಯಡಿ ಜಲಯುದ್ಧಕ್ಕೆ ಮುಂದಾಗಿದೆ.

ಭಾರತವೀಗ ತನ್ನ ನೆಲದಲ್ಲಿ ಹರಿಯುವ ಸಿಂಧು ನದಿಯ ತನ್ನ ಪಾಲಿನ ಸಂಪೂರ್ಣ ನೀರನ್ನು ಬಳಸಿಕೊಳ್ಳುವ ಬಗ್ಗೆ ತಜ್ನರ ಸಲಹೆ ಪಡೆಯುತ್ತಿದೆ.. 1960 ರಲ್ಲಿ ಆಗಿನ ನಮ್ಮ ಪ್ರಾಧಾನಿ ಜವಹರಲಾಲ್ ನೆಹರು ಮತ್ತು ಪಾಕಿಸ್ತಾನದ ಪ್ರಧಾನಿ ಅಯೂಬ್ ಖಾನ್ ನಡುವೆ ನಡೆದ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಲು ಮುಂದಾಗಿತ್ತು.. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಾದ ‘ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದ’ ವನ್ನು ಉಲ್ಲಂಘಿಸುತ್ತಿಲ್ಲ.

ಬದಲಾಗಿ ತನ್ನ ಪಾಲಿನ ನೀರಿನ ಹಕ್ಕನ್ನು ಪೂರ್ತಿಯಾಗಿ ಬಳಸಿಕೊಳ್ಳುವ ನಿರ್ಧಾರ ಮಾಡುತ್ತಿದೆ. ಭಾರತವೇನಾದರೂ ಈ ಕಠಿಣ ನಿರ್ಧಾರ ತೆಗೆದುಕೊಂಡರೆ ಪಾಕಿಸ್ತಾನ ಸಂಪೂರ್ಣ ಬರಡಾಗಲಿದೆ. ಯಾಕೇಂದರೆ ಪಾಕಿಸ್ತಾನಕ್ಕೆ ತನ್ನ ದೇಶದಲ್ಲಿ ಹುಟ್ಟಿ ಹರಿಯುವ ಪ್ರಮುಖ ನದಿಗಳಿಲ್ಲ.. ಭಾರತದಲ್ಲಿ ಹುಟ್ಟಿ, ಅಥವಾ ಭಾರತದ ನೆಲದ ಮುಖಾಂತರ ಹರಿದು ಬರುವ ನದಿಗಳೇ ಆ ದೇಶದ ಜೀವದಾಯಿನಿಗಳು. ಅಲ್ಲಿಯ ಕ್ರುಷಿ, ಕೈಗಾರಿಕೆ, ಮೀನುಗಾರಿಕೆ, ಜಲವಿದ್ಯುತ್ ಯೋಜನೆಗಳು, ಕುಡಿಯುವ ನೀರಿನ ಮೂಲ ಎಲ್ಲವೂ ಭಾರತದಿಂದ ಹರಿದು ಬರುವ ನೀರನ್ನೇ ಸಂಪೂರ್ಣವಾಗಿ ಅವಲಂಬಿಸಿದೆ. ಈ ನದಿಗಳೇ ಅವರ ಅರ್ಥಿಕತೆಯ ಬೆನ್ನೆಲುಬು. ಭಾರತವೀಗ ಪಾಕಿಸ್ತಾನದೊಡನೆ ನೇರ ಯುದ್ದದಲ್ಲಿ ತೊಡಗದೆ ಅದರ ಬೆನ್ನುಲುಬಿಗೆ ಚಿಕ್ಕ ಪ್ರಹಾರ ಕೊಡಲು ತೀರ್ಮಾನಿಸಿದೆ.
ಸಿಂಧು,ಚಿನಾಬ್ ಮತ್ತು ಝೇಲಂ ನದಿಗಳು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಸೇರುತ್ತವೆ. ಇವು ಪಶ್ಚಿಮದ ನದಿಗಳು. ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಪ್ರಕಾರ ಇದರ ಒಡೆತನ ಪಾಕಿಸ್ತಾನಕ್ಕೆ ಸೇರಿದ್ದರೂ ಇದರ ಮೇಲೆ ಭಾರತಕ್ಕೆ ಸಿಂಹ ಪಾಲಿದೆ. ಹಾಗಿದ್ದರೂ ತನ್ನ ಹಕ್ಕಿನ ನೀರನ್ನು ಭಾರತ ಇದುವರೆಗೂ ಸಂಪೂರ್ಣ ಬಳಕೆ ಮಾಡಿಕೊಂಡಿರಲಿಲ್ಲ. ಅದು ಯಾವುದೇ ನಿಯಂತ್ರಣವಿಲ್ಲದೆ ಪಾಕ್ ನೆಡೆಗೆ ಹರಿದು ಹೋಗುತ್ತಿತ್ತು.

ಈ ಆರೂ ನದಿಗಳು ಮತ್ತದರ ಉಪನದಿಗಳು ಸೇರಿ ಸಿಂಧು ಎಂಬ ಮಹಾನದಿಯಾಗಿ ಪಾಕಿಸ್ತಾನದ ಜೀವ ನದಿಯಾಗಿ ಅಲ್ಲಿನ ಜನತೆಯ ಬಾಳನ್ನು ಸಮ್ರುದ್ಧಗೊಳಿಸುತ್ತಾಳೆ. ತನ್ನ ಪಾಲಿನ ನೀರನ್ನೂ ಭಾರತ ತನ್ನ ನೆರೆಯ ರಾಷ್ಟ್ರಕ್ಕೆ ಉದಾರತೆಯಿಂದ ಬಿಟ್ಟು ಕೊಟ್ಟಿದ್ದು ಆ ದೇಶಕ್ಕೆ ತೋರಿದ ಔದಾರ್ಯವಾಗಿತ್ತು. ಆದರೆ ಪಾಕಿಸ್ತಾನ ಈ ಉದಾರತೆಗೆ ಎಂದೂ ಕೊಡಬೇಕಾದ ಗೌರವವನ್ನು ಕೊಟ್ಟಿಲ್ಲ. ಆದರೆ ಬದಲಾದ ಸನ್ನಿವೇಶದಲ್ಲಿ ಭಾರತವೀಗ ತನ್ನ ಹಕ್ಕಿನ ನೀರನ್ನು ಬಳಸಿಕೊಳ್ಳಲು ಮುಂದಾಗಿದೆ. ಅದು ಈಗ ಚರ್ಚೆಯಲ್ಲಿರುವ ಸಂಗತಿ.

1960ರಲ್ಲಿ ಆಗಿನ ಭಾರತದ ಪ್ರಧಾನಿ ಜವಹರಲಾಲ್ ನೆಹರು ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿಗಳಾದ ಅಯೂಬ್ ಖಾನ್ ಅವರ ನಡುವೆ ವಿಶ್ವಸಂಸ್ಥೆಯ ನೇತ್ರುತ್ವದಲ್ಲಿ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದಕ್ಕೆ ಪರಸ್ಪರ ಸಹಿ ಮಾಡಿದ್ದವು. ಪ್ರಮುಖ ನದಿಗಳಿಲ್ಲದ ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ನೀರಿನ ಕೊರತೆಯಾಗಬಾರದೆಂಬ ದೂರದರ್ಶಿತ್ವದಲ್ಲಿ ಮಾಡಿಕೊಂಡ ಒಪ್ಪಂದವಾಗಿತ್ತದು. ಇದರ ಪ್ರಕಾರ ಭಾರತಕ್ಕೆ 9.12 ಲಕ್ಷ ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸುವ ಹಕ್ಕಿದೆ. ಆ ಹಕ್ಕನ್ನು ಮತ್ತೆ 4.2 ಲಕ್ಷಕ್ಕೆ ವಿಸ್ತರಿಸಲೂ ಬಹುದು. ಆದರೆ ಭಾರತ ಕೇವಲ 8ಲಕ್ಷ ಎಕರೆಗೆ ಮಾತ್ರ ನೀರಾವರಿ ಸೌಕರ್ಯವನ್ನು ಮಾಡಿಕೊಂಡಿದೆ. ಹಾಗೆಯೇ ಈ ಮೂರು ನದಿ ನೀರನ್ನು ಬಳಸಿಕೊಂಡು 18,600 ಮೆಗಾವಾಟ್ ವಿದ್ಯುತ್ತನ್ನು ಉತ್ಪಾದಿಸಿಕೊಳ್ಳಬಹುದು. ಆದರೆ ಈಗ ಕೇವಲ 3,034 ಮೆಗಾವ್ಯಾಟ್ ವಿದ್ಯುತ್ ಮಾತ್ರ ಉತ್ಪಾದಿಸುತ್ತಿದೆ.

ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳ ಅಭಿವೃದ್ದಿಗೆ ಯಾವ ಸರಕಾರಗಳು ಒತ್ತನ್ನು ಕೊಟ್ಟಿಲ್ಲ. ಕನಿಷ್ಟ ಮೂಲಭೂತ ಅವಶ್ಯಕತೆಯಾದ ನೀರು ಮತ್ತು ರಸ್ತೆಯ ವ್ಯವಸ್ಥೆಯನ್ನೂ ಮಾಡಿಲ್ಲ. ಕೃಷಿಗೆ ಉತ್ತೇಜನ ನೀಡಿಲ್ಲ. ಕರ ಕುಶಲ ಕಲೆಗಳಿಗೆ ಪೆÇ್ರೀತ್ಸಾಹ ನೀಡಿಲ್ಲ. ಹಾಗಾಗಿ ಸಾಂಸ್ಕøತಿಕ ಅನನ್ಯತೆಯನ್ನು ಉಳಿಸಿಕೊಂಡಿರುವ ಅಲ್ಲಿಯ ಜನರಲ್ಲಿ ಪರಕೀಯತೆಯ ಭಾವನೆಯಿದೆ. ಆ ರಾಜ್ಯಗಳಲ್ಲಿ ಪ್ರತ್ಯೇಕತೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ.

ಅವರನ್ನು ದೇಶದ ಮುಖ್ಯ ಧಾರೆಯಲ್ಲಿ ಸೇರಿಸಿಕೊಳ್ಳಲು ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ನಮ್ಮ ಪ್ರಧಾನಿ ನರೇಂದ್ರ ಮೋದಿಜೀಯವರ ಕನಸು…ಈಗ ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದದ ಸದ್ವಿನಿಯೋಗ ಮಾಡಿಕೊಂಡರೆ ಬಹುಶಃ ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ರಾಜ್ಯಗಳು ಭಾರತದ ಮುಖ್ಯ ಧಾರೆಯೊಳಗೆ ತಮ್ಮನ್ನು ತಾವು ಗುರುತಿಸಿಸಿಕೊಳ್ಳಬಲ್ಲರು ಅನ್ನಿಸುತ್ತಿದೆ. ಭಾರತವೀಗ ಜಲಯುದ್ಧಕ್ಕೆ ಸನ್ನದ್ದವಾಗಿ ನಿಂತಿದೆ.

ಈ ನೆಪದಲ್ಲಾದರೂ ಕಾಶ್ಮೀರದಲ್ಲಿ ಅಬಿವೃದ್ಧಿ ಕಾರ್ಯಗಳು ನಡೆಯಲಿ. ಕಾಶ್ಮೀರಿಗಳು ಭಾರತ ತನುಜಾತೆಯಾಗಲಿ ಎಂಬುದು ಎಲ್ಲರ ಆಶಯ… ಯಾವ ಪರಿಸ್ಥಿತಿ ಬಂದರೂ ಪಾಕಿಸ್ತಾನಕ್ಕೆ ಮಾತ್ರ ಸಿಂಧು ನೀರನ್ನು ಕೊಡದೆ ಅಣೆಕಟ್ಟನ್ನು ಕಟ್ಟಲು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ನಾವು ಕೈಗೂಡ ಬೇಕಾಗಿದೆ.

ಪವಿತ್ರ

Tags

Related Articles

Close