ಪ್ರಚಲಿತ

ರಕ್ಷಣಾ ಪಡೆಗಳ ಬಲವರ್ಧನೆಗೆ ತೇಜಸ್ಸು ನೀಡಿರುವ ಕೇಂದ್ರ ಸರಕಾರ!! 83 ತೇಜಸ್ ವಿಮಾನಗಳ ಖರೀದಿಗೆ ಗ್ರೀನ್ ಸಿಗ್ನಲ್!!

ರಕ್ಷಣಾ ಪಡೆಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರಕಾರ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 83 ತೇಜಸ್ ವಿಮಾನಗಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ.

ಭಾರತೀಯ ವಾಯುಪಡೆ 50,025 ಕೋಟಿ ರೂ. ವೆಚ್ಚದಲ್ಲಿ ಯುದ್ಧವಿಮಾನಗಳ ಖರೀದಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ವಾಯುಪಡೆ ಈಗಾಗಲೇ ಎಚ್‍ಎಎಲ್‍ನಿಂದ 40 ತೇಜಸ್ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ.

ಪ್ರಸ್ತುತ ವಾಯುಪಡೆಯ ಬಳಿ 33 ಯುದ್ಧ ವಿಮಾನಗಳ ಸ್ಕ್ವಾಡ್ರನ್‍ಗಳಿವೆ. ಇವುಗಳ ಪೈಕಿ ಮುಂದಿನ 10 ವರ್ಷಗಳಲ್ಲಿ ಮಿಗ್ 21, ಮಿಗ್ 27 ಮತ್ತು ಮಿಗ್ 29 ಯುದ್ಧವಿಮಾನಗಳ 14 ಸ್ಕ್ವಾಡ್ರನ್‍ಗಳು ನಿವೃತ್ತಿ ಹೊಂದಲಿವೆ. ಹಾಗಾಗಿ ಅವುಗಳ ಸ್ಥಾನವನ್ನು ತುಂಬಲು ತೇಜಸ್ ವಿಮಾನ ಖರೀದಿಸಲಾಗುತ್ತಿದೆ ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ತೇಜಸ್ (ಸಂಸ್ಕೃತದಲ್ಲಿ ತೇಜಸ್ ಅಂದರೆ “ಪ್ರಕಾಶಮಾನವಾದ” ಎಂದು, ಇದು ಭಾರತದಲ್ಲಿ ತಯಾರಾಗುತ್ತಿರುವ ಎರಡು ರೀತಿಯಲ್ಲಿ ಉಪಯೋಗಿಸಬಹುದಾದ ಹಗುರವಾದ ಕದನ/ಯುದ್ದ ವಿಮಾನ. ಇದಕ್ಕೆ ಬಾಲವಿಲ್ಲ, ಒಂದು ಎಂಜಿನ್‍ನಿಂದ ನಡೆಯುವಂತೆ ಡೆಲ್ಟಾ ರೆಕ್ಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಮೂಲತಃ ಲೈಟ್ ಕಂಬ್ಯಾಟ್ ಏರ್‍ಕ್ರಾಫ್ಟ್ (ಎಲ್‍ಸಿಎ) ಎನ್ನುವರು, ಈ ಹೆಸರು ನಿರಂತರ ಬಳಕೆಯಲ್ಲಿ ಜನಪ್ರಿಯವಾಯಿತು- 04 ಮೇ 2003ರಂದು ಆಗಿನ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಯವರಿಂದ ಈ ವಿಮಾನವು “ತೇಜಸ್ “ಎಂದು ಅಧಿಕೃತವಾಗಿ ನಾಮಕರಣಗೊಂಡಿತು.

ತೇಜಸ್‍ನ ಸೀಮಿತ ಸರಣಿಯ ಉತ್ಪಾದನೆ 2007ರಲ್ಲಿ ಪ್ರಾರಂಭವಾಯಿತು. ಎರಡು ಆಸನದ ಟ್ರೇನರ್ ವೇರಿಯಂಟ್ ನ್ನು ಸಹ ವಿಕಾಸ ಗೊಳಿಸಲಾಗುತ್ತಿದೆ (ನವೆಂಬರ್ 2008ರಲ್ಲಿ ಉತ್ಪಾದನೆಯ ಕೆಲಸ ಮುಗಿದಿದೆ), ಏಕೆಂದರೆ ಅದು ನೇವಲ್ ವೇರಿಯಂಟ್‍ನಂತೆ ಭಾರತೀಯ ನೌಕಾಪಡೆಯ ವಿಮಾನ ವಾಹಕಗಳಿಂದ ಕಾರ್ಯ ನಿರ್ವಹಿಸಲು ಯೋಗ್ಯವಾಗಿದೆ. 200 ಏಕ-ಆಸನದ ಮತ್ತು 20 ಎರಡು-ಆಸನದ ರೂಪಾಂತರ ಟ್ರೇನರ್‍ಗಳನ್ನೂ ಹೊಂದುವ ಅವಶ್ಯಕತೆ ಇದೆ ಎಂದು ಐಎಎಫ್ ಹೇಳಿದೆ, ಭಾರತೀಯ ನೌಕಾಪಡೆ ಅದರ ಸೀ ಹರಿಯರ್ ಎಫ್ ಆರ್ ಎಸ್.51 ಮತ್ತು ಹರಿಯರ್ ಟಿ.60 ಗಳನ್ನು ಬದಲಾಯಿಸಲು 40 ಏಕ-ಆಸನಗಳವರೆಗೆ ಆರ್ಡರ್ ಕೊಡಬಹುದು.

ಎಲ್‍ಸಿಎ ನೇವಲ್ ವೇರಿಯಂಟ್ ನ್ನು 2009ರಲ್ಲಿ ಉಡಾವಣೆ ಮಾಡಲು ನಿರೀಕ್ಷಿಸಲಾಗಿದೆ. ವಿಮಾನವನ್ನು 2010ರ ಕೊನೆಯಲ್ಲಿ ಅಥವಾ 2011ರ ಪ್ರಾರಂಭದಲ್ಲಿ ಭಾರತೀಯ ವಾಯು ಸೇನೆಯ ಸ್ವಾಧೀನಕ್ಕೆ ಕೊಡಲಾಗುವುದು ಎಂದು ಇತ್ತೀಚಿನ ಬೆಳವಣಿಗೆಗಳು ತಿಳಿಸುತ್ತವೆ. . 2009ರಲ್ಲಿ ಸಮುದ್ರದಲ್ಲಿ ಇದರ ಗೋವಾದ ಪರೀಕ್ಷಾ ಉಡಾವಣೆಯ ಸಮಯದಲ್ಲಿ, ತೇಜಸ್ ಘಂಟೆಗೆ 1.350 ಕಿಲೋಮೀಟರ್ ಗಿಂತ ಅಧಿಕ ವೇಗವನ್ನು ದಾಖಲಿಸಿದೆ, ಇದರಿಂದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅವರಿಂದ ಸ್ಥಳೀಯವಾಗಿ ತಯಾರಾಗುತ್ತಿರುವ ಮೊದಲ ಧ್ವನಿ ವೇಗಾಧಿಕ (ಸೂಪರ್‍ಸೋನಾರ್) ಕದನ ವಿಮಾನ ಇದಾಗಿದೆ.

ಎಚ್.ಎ.ಎಲ್ ತಯಾರಿಸಿದ ಲಘು ಯುದ್ಧ ವಿಮಾನ ತೇಜಸ್ 2ನೇ ಹಂತದ ಪರೀಕ್ಷಾರ್ಥ ಹಾರಾಟವನ್ನು ದಿನಾಂಕ 20-12-2013 ರ ಶುಕ್ರವಾರ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಿತ್ತು. ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದಂತಾಗಿದೆ. ಇದು ನಾಲ್ಕನೆಯ ಪೀಳಿಗೆಯ ಯುದ್ಧ ವಿಮಾನ .ಈ ತೇಜಸ್ ಯುದ್ಧ ವಿಮಾನದ ಪ್ರಯೋಗವನ್ನು ಹಾಲಿ ರಕ್ಷಣಾ ಸಚಿವ ಎ.ಕೆ. ಆಂಟನಿ, ವಾಯು ಪಡೆ ಮುಖ್ಯಸ್ಥ ಎನ್.ಎ.ಕೆ.ಬ್ರೌನ್, ವೈಮಾನಿಕ ಅಭಿವೃದಿ ಸಂಸ್ಥೆ ನಿರ್ದೇಶಕ (ಎಡಿಎ) ಪಿ.ಎಸ್. ಸುಬ್ರಮಣಿಯನ್, ರಕ್ಷಣಾ ಸಚಿವ ವೈಜ್ಞಾನಿಕ ಸಲಹೆಗಾರ. ಅವಿನಾಶ ಚಂದರ್ , ಎಚ್,ಎ,ಎಲ್. ಅಧ್ಯಕ್ಷ ಡಾ.ಆರ್.ಕೆ.ತ್ಯಾಗಿ, ರಕ್ಷಣಾ ಉನ್ನತ ಇಲಾಖೆಯ ಕಾರ್ಯದರ್ಶಿ ಜಿ.ಸಿ ಪತಿ ಮೊದಲಾದವರು ವೀಕ್ಷಿಸಿದ್ದರು. 1983 ರಲ್ಲಿ ಸ್ವದೇಶಿ ಲಘು ಯುದ್ಧ ವಿಮಾನವನ್ನು ತಯಾರಿಸುವುದನ್ನು ಆರಂಭಿಸಿತು.

ತಂತ್ರಜ್ಞರ ಸತತ ಪರಿಶ್ರಮದ ನಂತರ 2011 ರ ಜನವರಿ 10 ರಂದು ತೇಜಸ್ ಗೆ ಮೊದಲ ಹಾರಾಟದ ಅನುಮತಿ ದೊರೆಯಿತು. ಈಗಿನದು ಎರಡನೆಯ ಹಾರಾಟ. ಮಿಗ್ ವಿಮಾನಗಳು ಹಳೆಯದಾಗಿ ಅದರ ಬದಲಿಗೆ ಈ ವಿಮಾನಗಳನ್ನು ಸೇರ್ಪಡೆ ಮಾಡುವುದು ಉದ್ದೇಶ. ಈ ವಿಮಾನವನ್ನು ಎಚ್.ಎ.ಎಲ್. ಸಹಭಾಗಿತ್ವದಲ್ಲಿ ವೈಮಾನಿಕ ಅಭಿವೃದ್ಧಿ ಸಂಸ್ಥೆ ಈ ವಿಮಾನವನ್ನು ಅಭಿವೃದ್ಧಿ ಪಡಿಸಿದೆ. ಕೇಂದ್ರೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ (ಸಿಎಸ್ ಐಆರ್) ಮತ್ತು ಹಲವು ಖಾಸಗಿ, ಸಾರ್ವಜನಿಕ ಸಂಸ್ಥೆಗಳು ಈ ಕಾರ್ಯದಲ್ಲಿ ಸಹಕರಿಸಿವೆ.

ಸಣ್ಣ ಗಾತ್ರದ ತೇಜಸ್ , ಹಗುರ ವಿಮಾನ, ಒಂದೇ ಇಂಜಿನ್; ಒಂದೇ ಆಸನ; ಉತ್ತಮ ಶಬ್ದ ವೇಗ ಮೀರಿದ ವೇಗವುಳ್ಳದ್ದು; ಎಲ್ಲಾ ಬಗೆಯ ಹವಾಮಾನದಲ್ಲೂ ಬಳಸಬಹುದು ; ಈ ಎರಡನೇ ಪರೀಕ್ಷೆಗೆ ಮುನ್ನ 2450 ಬಾರಿ ಹಾರಾಟ ನಡೆಸಿದೆ. ನಾನಾ ವಿಧದ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲು ಅನುಕೂಲವಾಗಿದೆ. ಲೇಸರ್ ನಿರ್ದೇಶಿತ ಬಾಂಬ್ ದಾಳಿ ನಡೆಸಲು ಸಮರ್ಥವಾಗಿದೆ. ಈ ವಿಮಾನ ಗಂಟೆಗೆ 1350 ಕಿ.ಮೀ. ವೇಗದೊಂದಿಗೆ 3000 ಕೆ.ಜಿ. ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು. ಮತ್ತು 1700 ಕಿಮೀ. ದೂರ ಕ್ರಮಿಸಬಲ್ಲದು. ಇದರಲ್ಲಿ ಅಮೇರಿಕಾ ದ ಜನರಲ್ ಎಲೆಕ್ಟ್ರಿಕ್ ಏರ್ ಕ್ರಾಫ್ಟ್ ಇಂಜಿನುಗಳನ್ನು ಬಳಸಲಾಗಿದೆ.

ಈ ವಿಮಾನಗಳನ್ನು ಎಚ್.ಎ.ಎಲ್.ನಲ್ಲಿ ತಯಾರಿಸ ಬಹುದು/ತಯಾರಿಸಲಾಗುವುದು . ಇದೊಂದು ಅತ್ಯುತ್ತಮ ಸ್ವದೇಶೀ ಸೂಪರ್ ಸಾನಿಕ್ ಲಘು ಯುದ್ಧ ವಿಮಾನ.. ಇದು 2014 ರಿಂದ ವಾಯು ಪಡೆಯ ಸೇವೆಗೆ ಸಿದ್ಧವಾಗುವುದೆಂದು ಹೇಳಲಾಗಿದೆ. ಸದ್ಯಕ್ಕೆ ಪ್ರತಿ ವರ್ಷ 8 ವಿಮಾನಗಳನ್ನು ತಯಾರಿಸುವುದು ಮತ್ತು ನಂತರ ಕ್ರಮೇಣ ಅದನ್ನು ವರ್ಷಕ್ಕೆ 16 ವಿಮಾನ ತಯಾರಿಸುವ ಯೋಜನೆ ಇದೆಯೆಂದು ಎಚ್.ಎ.ಎಲ್ ನ ಅಧ್ಯಕ್ಷ ಡಾ.ತ್ಯಾಗಿ ಹೇಳಿದ್ದಾರೆ.

ಸರ್ಕಾರವು ಈಗ ಸದ್ಯಕ್ಕೆ 200 ತೇಜಸ್ಸ್ ವಿಮಾನಕ್ಕೆ ಬೇಡಿಕೆ ಇಡುವುದು, ಅದರಲ್ಲಿ ಈಗಾಗಲೇ ಇರುವ 160 ವಿಮಾನದಲ್ಲಿ 120 ನ್ನು ವಿಮಾನದಳಕ್ಕೂ , 40 ನ್ನು ನೌಕದಳಕ್ಕೂ ನೀಡುವುದು. ಈ ಯೋಜನೆಯ ಅಭಿವೃದ್ಧಿಗೆ ರೂ. 17,269/- ಕೋಟಿ ಯೂ ಸೇರಿ ಒಟ್ಟು ರೂ.50,000/- ಕೋಟಿಗೂ ಹೆಚ್ಚು ಹಣವನ್ನು ಇದರ ಉತ್ಪಾದನಾ ಮತ್ತು ಅಭಿವೃದ್ಧಿ ಕ್ರಿಯಾ ಯೋಜನೆಗೆ ತೊಡಗಿಸಲಾಗುವುದೆಂದು ಹೇಳಿದ್ದರು. ಇದರಲ್ಲಿ ಮೊದಲಿನ 160 ವಿಮಾನಗಳೂ ಸೇರಿರುವುದು . ಪ್ರತಿ ವಿಮಾನಕ್ಕೆ ಅಂದಾಜು ರೂ.220/- ರಿಂದ 250/- ಕೋಟಿ ರೂಪಾಯಿ ಉತ್ಪದನಾ ವೆಚ್ಚ ಬೀಳಬಹುದೆಂದು ಅಂದಾಜಿಲಾಗಿದೆ .

ಇದೇ ಬಗೆಯ ರಷ್ಯಾದ ಯುದ್ಧ ವಿಮಾನವನ್ನು ಆಮದು ಮಾಡಿ ಕೊಂಡಲ್ಲಿ , ತಲಾ (ಒಂದಕ್ಕೆ) ಸುಮಾರು 450 ರಿಂದ 500 ಕೋಟಿ ಬೀಳಬಹುದೆಂಬ ಅಂದಾಜಿಸಿತ್ತು. ಈ ತೇಜಸ್ ವಿಮಾನವನ್ನು ಹೆಚ್ಚು ಉತ್ಪಾದನೆ ಮಾಡಿ ಮಿತ್ರ ರಾಷ್ಟ್ರಗಳಿಗೆ ಮಾರಾಟ ಮಾಡುವ ಯೋಜನೆಯೂ ಇದೆಯೆಂದು ರಕ್ಷಣಾ ಮಂತ್ರಿಗಳು ಈ ಮೊದಲೇ ತಿಳಿಸಿದ್ದರು..

1983 ರಿಂದ ಅನೇಕ ಅಡೆತಡೆಗಳನ್ನು ದಾಟಿ 30 ವರ್ಷಗಳ ಪರಿಶ್ರಮದಿಂದ ಈ ವಿಮಾನಗಳನ್ನು ತಯಾರಿಸಲಾಗಿದೆ. ಇದರಿಂದ ಭಾರತವು ತನ್ನ ತಾತ್ರಿಕ ಶಕ್ತಿಯನ್ನು ಜಗತ್ತಿಗೆ ತೋರಿಸಿದಂತಾಗಿದೆ. ಅಲ್ಲದೆ ಯುದ್ಧ ವಿಮಾನ ತಯಾರಿಸುವ ದೇಶಗಳ ಸಾಲಿಗೆ ಭಾರತ ಸೇರಿದಂತಾಗಿದೆ…ಅದಲ್ಲದೆ ಇದೀಗ ಕೇಂದ್ರ ಸರಕಾರ ಇದರ ಬಗ್ಗೆ ಅತ್ಯಂತ ದೊಡ್ಡ ಮಟ್ಟದ ಕಾಳಜಿಯನ್ನು ವಹಿಸಿ ದೇಶಕ್ಕೆ ಉಪಯುಕ್ತವಾಗುತ್ತದೆ ಎನ್ನುವ ಉದ್ಧೇಶವನ್ನಿಟ್ಟುಕೊಂಡು 83 ತೇಜಸ್ ವಿಮಾನಗಳನ್ನು ಕೊಳ್ಳಲು ಹಸಿರು ನಿಶಾನೆಯನ್ನು ತೋರಿಸಿದೆ.

-ಪವಿತ್ರ

Tags

Related Articles

Close