ಪ್ರಚಲಿತ

ರಮ್ಯಾ ಜತೆ ರಹಸ್ಯ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಸಭೆ ಆರಂಭಕ್ಕೂ ಮುನ್ನ ಹೊರ ನಡೆದಿದ್ದೇಕೆ? ಹಿರಿಯರಿಗೆ ಮುಜುಗರ ತಂದಿಟ್ಟ ರಾಹುಲ್ ನಡೆ…!!

ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಕಾವು ಏರುತ್ತಿದ್ದಂತೆ ವಿವಿಧ ಪಕ್ಷಗಳ ಮತಭೇಟೆ ಭರ್ಜರಿಯಾಗಿ ಸಾಗುತ್ತಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ರಾಜ್ಯದಲ್ಲಿ ಪರಿವರ್ತನಾ ರ್ಯಾಲಿ ಸಹಿತ ಇನ್ನಿತರ ಪ್ರಚಾರಗಳನ್ನು ನಡೆಸುತ್ತಿದ್ದರೆ ಅತ್ತ ಬಿಜೆಪಿ ನಾಯಕರ ಯಾತ್ರೆಯನ್ನೇ ನಕಲು ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಜನಾಶಿರ್ವಾದ ಯಾತ್ರೆಯು ರಾಜ್ಯದ ಅಲ್ಲಲ್ಲಿ ನಡೆಸುತ್ತಿದ್ದಾರೆ. ಇನ್ನು ಜಾತ್ಯಾತೀತ ಜನತಾ ದಳದ ನಾಯಕರು ನಾವೂ ಏನು ಕಡಿಮೆ ಇಲ್ಲ ಎಂಬಂತೆ ಅಲ್ಲಲ್ಲಿ ವಿಕಾಸಯಾತ್ರೆಯನ್ನು ಹಮ್ಮಿಕೊಂಡಿದೆ. ಹೀಗೆ ಚುನಾವಣೆಗೆ ಇನ್ನೂ 3-4 ತಿಂಗಳುಗಳು ಇದ್ದರೂ ರಾಜಕೀಯ ಪಕ್ಷಗಳು ಈಗಿನಿಂದಲೇ ತಮ್ಮ ಅಬ್ಬರದ ಪ್ರಚಾರವನ್ನು ಆರಂಭಿಸಿದ್ದು ಜನರ ಮನವೊಲಿಸಲು ಮುಂದಾಗಿದೆ.

ತಾನು ಜವಬ್ಧಾರಿ ವಹಿಸಿದ ಎಲ್ಲಾ ಚುನಾವಣೆಗಳನ್ನೂ ಸೋತು ಈಗ ಕರ್ನಾಟಕಕ್ಕೆ ಲಗ್ಗೆ ಇಟ್ಟಿರುವ ಸೋಲಿನ ಸರದಾರ ಕಾಂಗ್ರೇಸ್ ಮಹಾರಾಜ ರಾಹುಲ್ ಗಾಂಧಿಯವರು ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.ನಿನ್ನೆ ನಡೆದ ರಾಜ್ಯ ಕಾಂಗ್ರೇಸ್ ನ ಹಿರಿಯ ನಾಯಕರ ಸಭೆಯಿಂದ ಆರಂಭವಾಗುವ ಮುನ್ನವೇ ಹೊರನಡೆದು ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ.

ಪಕ್ಷದ ಹಿರಿಯ ಮುಖಂಡರೊಂದಿಗೆ ನಿಗಧಿಯಾಗಿದ್ದ ಸಭೆ…

ನಿನ್ನೆ ರಾಜ್ಯದ ಪ್ರಮುಖ ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಭೆ ನಿಗಧಿಯಾಗಿತ್ತು. ಇನ್ನೇನು ಸಭೆ ಆರಂಭ ಆಗಬೇಕು ಅನ್ನುವಷ್ಟರ ಹೊತ್ತಿಗೆ ರಾಹುಲ್ ಗಾಂಧಿ ನೇರವಾಗಿ ಮಾಜಿ ಸಂಸದೆ,ಕಾಂಗ್ರೇಸ್ ನಾಯಕಿ ರಮ್ಯಾರನ್ನು ಭೇಟಿಯಾಗುತ್ತಾರೆ. ರಮ್ಯಾರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಸುಮಾರು ಸಮಯಗಳ ಕಾಲ ಮಾತುಕತೆ ನಡೆಸಿದ್ದಾರೆ. ರಮ್ಯಾರನ್ನು ಗುಪ್ತವಾಗಿ ಭೇಟಿ ಮಾಡಿದ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸಭೆಗೂ ಮುನ್ನ ಹೊರನಡೆದ ರಾಹುಲ್ ಗಾಂಧಿ…

ಅದೇನೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಒಡೆದ ಮನೆಯಂತಾಗಿದೆ. ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಅದಾಗಲೇ ಜಗದ್ಜಾಹೀರು ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾಶಿರ್ವಾದ ಯಾತ್ರೆ ಎಂಬ ಯಾತ್ರೆಯನ್ನು ಹಮ್ಮಿಕೊಂಡಾಗಲೇ ರಾಜ್ಯ ಕಾಂಗ್ರೆಸ್ಸಿನಲ್ಲಿ ಅಲ್ಲೋಲ ಕಲ್ಲೋಲ ಭುಗಿಲೆದ್ದಿತ್ತು. ಬಿಜೆಪಿಯವರು ಮಾಡುತ್ತಿರುವ ಪರಿವರ್ತನಾ ಯಾತ್ರೆಯನ್ನು ನಕಲಿ ಮಾಡುವುದು ಬೇಡ ಎಂಬ ವಾದ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಅವರದ್ದಾದರೆ, ಜನಾಶಿರ್ವಾದ ಯಾತ್ರೆಯನ್ನು ಮಾಡಲೇಬೇಕು ಎನ್ನುವ ಹಠ ಮುಖ್ಯಮಂತ್ರಿ ಸಿದ್ದರಾಮಯ್ಯರದ್ದು. ಈ ರೀತಿಯ ಮೊಂಡುವಾದಗಳಿಂದಲೇ ಹೆಸರಾಗುತ್ತಾ ಬಂದಿದ್ದಾರೆ.

 

ನಿನ್ನೆ ನಡೆದ ಸಭೆಯಲ್ಲೂ ಕಾಂಗ್ರೆಸ್ ಅಸಮಧಾನ ಭುಗಿಲೆದ್ದಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಇದ್ದಂತಹ ಆ ಸಭೆಗೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷ ಸಭೆ ಆರಂಭವಾಗುವುದಕ್ಕೂ ಮುನ್ನವೇ ಸಭೆಯಿಂದ ನಿರ್ಗಮಿಸುತ್ತಾರೆ. ಇದರಿಂದ ಸಂಪೂರ್ಣ ಗಲಿಬಿಲಿಗೆ ಒಳಗಾದ ಕಾಂಗ್ರೆಸ್ ನಾಯಕರು ಇರಿಸುಮುರಿಸಿಗೆ ಒಳಗಾಗಿದ್ದಾರೆ. ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹಿತ ಅನೇಕ ಮುಖಂಡರು ಉಪಸ್ಥಿತರಿದ್ದ ಈ ಸಭೆಯನ್ನು ಖ್ಯಾರೇ ಎನ್ನದ ರಾಹುಲ್ ಗಾಂಧಿ ಸಭೆ ಆರಂಭಕ್ಕೂ ಮುನ್ನವೇ ಎದ್ದುಕೊಂಡು ಹೋಗುತ್ತಾರೆ. ಇದು ಕಾಂಗ್ರೆಸ್ ನಾಯಕರಿಗೆ ತೀವ್ರ ಮುಜುಗರವನ್ನು ತಂದಿಟ್ಟಿದೆ.

ರಾಹುಲ್ ಬಳಿ ಹುಳಿ ಹಿಂಡಿದ ರಮ್ಯಾ…!

ರಾಹುಲ್ ಗಾಂಧಿ ಹಿರಿಯ ಕಾಂಗ್ರೆಸ್ ನಾಯಕರ ಸಭೆಗೂ ಮುನ್ನ ಮಾಜಿ ಸಂಸದೆ,ಕಾಂಗ್ರೆಸ್ ನಾಯಕಿ ರಮ್ಯಾ ಜೊತೆ ಗುಪ್ತ ಮಾತುಕತೆ ನಡೆಸಿದ್ದೇ ಈ ಎಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಮುಂಚೆಯೂ ರಮ್ಯಾ ರಾಜ್ಯ ನಾಯಕರ ದೂರುಗಳನ್ನು ರಾಹುಲ್ ಗಾಂಧಿ ಬಳಿ ಹೇಳಿಕೊಳ್ಳುತ್ತಿದ್ದರು.ರಾಜ್ಯದ ಯಾವೊಬ್ಬ ಕಾಂಗ್ರೇಸ್ ನಾಯಕನಿಗೂ ರಮ್ಯಾ ಕಂಡರೆ ಕೆಂಡದಂತಹ ಕೋಪ ಬರುತ್ತೆ. ರಮ್ಯಾರನ್ನು ಬೆಳೆಸಿದ ನಾಯಕರನ್ನೇ ಕಡೆಗಣಿಸಿಕೊಂಡು ಹೋಗುತ್ತಿರುವ ರಮ್ಯಾ ದೆಹಲಿಯ ಹಾದಿ ಹಿಡಿದ ನಂತರ ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರನ್ನು ರಾಹುಲ್ ಕಡೆಗಣಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳುತ್ತಿದೆ.

ಈ ಹಿಂದೆಯೂ ರಮ್ಯಾಗೆ ಮಂಡ್ಯಾದಲ್ಲಿ ವಿಧಾನ ಸಭಾ ಕ್ಷೇತ್ರಕ್ಕೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದಾಗ ಮಂಡ್ಯಾದ ಎಲ್ಲಾ ಕಾಂಗ್ರೆಸ್ ನಾಯಕರು ಗರಂ ಆಗಿದ್ದರು. ಮಾತ್ರವಲ್ಲದೆ ಯಾವುದೇ ಕಾರಣಕ್ಕೂ ಮಂಡ್ಯಾದಲ್ಲಿ ಸ್ಪರ್ಧಿಸಲು ಅವಕಾಶ ನೀಡಲ್ಲ ಎಂದು ಹಠ ಹಿಡಿದಿದ್ದರು. ನಂತರ ರಮ್ಯಾ ರಾಹುಲ್ ಗಾಂಧಿಯ ಮೊರೆ ಹೋಗಿದ್ದರು. ಈ ವೇಳೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದ ರಾಹುಲ್ ಗಾಂಧಿ ರಾಜ್ಯದ ಯಾವುದಾದರೂ ಒಂದು ವಿಧಾನ ಸಭಾ ಕ್ಷೇತ್ರವನ್ನು ರಮ್ಯಾಗೆ ಬಿಟ್ಟುಕೊಡಬೇಕೆಂದು ಸೂಚಿಸಿದ್ದರು. ಇದನ್ನು ಪಾಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಟಿಕೆಟ್ ಕೊಡುವುದಾಗಿ ಹೇಳಿದ್ದರು.

ನಿನ್ನೆ ರಾಜ್ಯದ ಪ್ರಮುಖ ನಾಯಕರೊಂದಿಗೆ ನಡೆದ ಸಭೆಗೂ ಮುನ್ನ ರಾಹುಲ್ ಗಾಂಧಿ ರಮ್ಯಾರನ್ನು ಭೇಟಿಯಾಗಿ ರಹಸ್ಯ ಮಾತುಕತೆಯನ್ನು ನಡೆಸಿದ್ದರು. ನಂತರ ಸಭೆಗೆ ಬಂಧ ರಾಹುಲ್ ಗಾಂಧಿ ಸಭೆ ಆರಂಭವಾಗುವ ಮುನ್ನವೇ ಸಭೆಯಿಂದ ಎದ್ದು ಹೊರನಡೆದಿದ್ದಾರೆ. ರಮ್ಯಾ ರಾಜ್ಯ ಕಾಂಗ್ರೆಸ್ ನಾಯಕರ ದೂರುಗಳನ್ನು ರಾಹುಲ್ ಬಳಿ ಹೇಳಿ, ಅವರ ಮಧ್ಯೆ ಹುಳಿ ಹಿಂಡಿ ಅವರನ್ನು ಕಡೆಗಣಿಸುವಂತೆ ಮಾಡಿದ್ದಾರೆ ಅನ್ನೋದು ಕಾಂಗ್ರೆಸ್ ನಾಯಕರ ಆರೋಪವಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೊಮ್ಮೆ ಸಾಭೀತಾಗಿದ್ದು ಇದು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆಗಳಿವೆ. ಇತ್ತೀಚೆಗೆ ರಾಜ್ಯದ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವ ರಾಹುಲ್ ಗಾಂಧಿ ಯುವಕರಿಗೆ ಮಣೆ ಹಾಕುತ್ತಿದ್ದಾರೆ. ಇದು ರಾಜ್ಯದ ಹಿರಿಯ ಕಾಂಗ್ರೆಸ್ಸಿಗರಲ್ಲಿ ಮನಸ್ತಾಪ ಭುಗಿಲೇಳುವಂತೆ ಮಾಡಿದ್ದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close