ಪ್ರಚಲಿತ

ರಾಮಸೇತುವನ್ನು ನಿರ್ಮಿಸಲು ಭಗವಾನ್ ಶ್ರೀರಾಮ ಯಾವ ಟೆಕ್ನಾಲಜಿ ಬಳಸಿದ್ದ ಗೊತ್ತೆ? ರಾಮನ ಅಸ್ತಿತ್ವಕ್ಕೆ ನಾಸಾದಿಂದ ಸಿಕ್ಕಿದೆ ಮತ್ತೊಂದು ಪುರಾವೆ!

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹದ್ಕಾವ್ಯವು ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟಿದೆ. ಆದರೆ ಕೆಲವು ಬುದ್ಧಿ ಜೀವಿಗಳು ಈ ರಾಮಾಯಣವನ್ನು ಕೇವಲ ಇದೊಂದು ಮಹಾಕಾವ್ಯ ರಾಮ ಒಬ್ಬ ಕಾಲ್ಪನಿಕ ಮಾತ್ರ ಅದಲ್ಲದೆ ರಾಮ ಸೇತುವೆಯೂ ಮಾನವ ನಿರ್ಮಿತವಲ್ಲ ಇದೊಂದು ಕಾಲ್ಪನಿಕ ಎಂದು ಬೊಬ್ಬೆ ಇಡುತ್ತಿದ್ದ ಕೆಲವರಿಗೆ ಸರಿಯಾಗಿಯೇ ಉತ್ತರ ದೊರಕಿದೆ!!

ರಾಮಸೇತುವಿನ ಅಸ್ತಿತ್ವದ ಕುರಿತ ಪ್ರಶ್ನೆಗೊಂದು ಸಿಹಿ ಉತ್ತರ ಸಿಕ್ಕಿದೆ. ಸದ್ಯ ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುದಲ್ಲ. ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಸಾರಿದ್ದಾರೆ. ಈ ಬಗ್ಗೆ ಅಮೆರಿಕದ ಡಿಸ್ಕವರಿ ಕಮ್ಯುನಿ ಕೇಷನ್‍ನ ಸೈನ್ಸ್ ಚಾನೆಲ್ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದ್ದು, ಇದರಲ್ಲಿ ರಾಮಸೇತುವಿನ ಅಸ್ತಿತ್ವದ ಕುರಿತಂತೆ ವೈಜ್ಞಾನಿಕ ಉತ್ತರಗಳನ್ನು ಪಡೆಯಲಾಗಿದೆ.

ಜಗತ್ತಿನ ವಿಶಿಷ್ಟ ಸಂಗತಿಗಳ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿ ಪ್ರಸಾರ ಮಾಡುವಲ್ಲಿ ಹೆಸರುವಾಸಿಯಾಗಿರುವ ಡಿಸ್ಕವರಿ ಚಾನೆಲ್‍ನಲ್ಲಿ ರಾಮಸೇತುವಿನ ಸಂಗತಿ ಪ್ರಸಾರವಾಗಿದೆ. ರಾಮೇಶ್ವರದಿಂದ ಲಂಕಾದ ಮನ್ನಾರ್‍ವರೆಗಿನ 50 ಕಿ.ಮೀ. ದೂರದ ಸೇತುವೆ ಬಗ್ಗೆ ಮಹತ್ವದ ಸಂಶೋಧನೆ, ಇತರ ಮಾಹಿತಿಗಳು ಈ ಕಾರ್ಯಕ್ರಮದಲ್ಲಿವೆ.

ಇಂಡಿಯಾನಾ ಯೂನಿವರ್ಸಿಟಿ ನಾರ್ತ್ ವೆಸ್ಟ್, ಕೊಲರಾಡೋ ವಿಶ್ವವಿದ್ಯಾಲಯ ಮತ್ತು ಸೌತರ್ನ್ ಆರೆಗಾನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಅಭಿಪ್ರಾಯ, ಸಂಶೋಧನೆಯ ವರದಿಗಳನ್ನು ಈ ಸಾಕ್ಷಚಿತ್ರದಲ್ಲಿ ದಾಖಲಿಸಲಾಗಿದೆ. ಈಗಾಗಲೇ ಅಂತರ್ಜಾಲದಲ್ಲಿ ಕಾರ್ಯಕ್ರಮದ ಪೆÇ್ರೀಮೋ ಬಿಡುಗಡೆ ಮಾಡಲಾಗಿದ್ದು, 16 ಗಂಟೆಯಲ್ಲಿ 11 ಲಕ್ಷ ಜನರು ವೀಕ್ಷಿಸಿದ್ದಾರೆ. ಕೇಂದ್ರ ಸಚಿವೆ ಸ್ಮತಿ ಇರಾನಿ ಕೂಡ ಈ ಕಾರ್ಯಕ್ರಮದ ಪೆÇ್ರೀಮೋವನ್ನು ರಿಟ್ವೀಟ್ ಮಾಡಿದ್ದು, “ಜೈ ಶ್ರೀ ರಾಮ್’ ಎಂದು ಬರೆದುಕೊಂಡಿದ್ದಾರೆ.

ಮಾನವ ನಿರ್ಮಿತವೇ?

ಸೇತುವೆ ಮಾನವ ನಿರ್ಮಿತವೇ ಎಂಬ ಬಗ್ಗೆ ಹಿಂದಿನಿಂದಲೂ ವಾದ ವಿವಾದಗಳಿವೆ. ಇಲ್ಲಿನ ಮರಳಿನ ಪಟ್ಟಿ ನೈಸರ್ಗಿಕ. ಆದರೆ ಇದರ ಕೆಳಗಿರುವ ಸಾಮಗ್ರಿ ನೈಸರ್ಗಿಕವಲ್ಲ ಎಂದು ಸಾಕ್ಷ್ಯಚಿತ್ರದ ಪೆÇ್ರೀಮೋದಲ್ಲಿ ನಿರೂಪಕರು ಹೇಳುತ್ತಾರೆ. ಅಷ್ಟೇ ಅಲ್ಲ, ಇಲ್ಲಿನ ಮರಳಿನ ಪಟ್ಟಿಯ ಕೆಳಗಿರುವ ಕಲ್ಲುಗಳು 7 ಸಾವಿರ ವರ್ಷಗಳ ಹಿಂದಿನದು ಮತ್ತು ಇತರ ಪ್ರದೇಶದಲ್ಲಿನ ಮರಳಿನ ಪಟ್ಟಿ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು ಎಂದು ಸೌತರ್ನ್ ಆರೆಗಾನ್ ಯೂನಿವರ್ಸಿಟಿ ವಿಜ್ಞಾನಿ ಚೆಲ್ಸಿಯಾ ರೋಸ್ ಹೇಳಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆ ಏನು ಮಾಡ್ತಿದೆ?

ಅಮೆರಿಕದ ವಿಜ್ಞಾನಿಗಳು ಹಾಗೂ ಸಂಸ್ಥೆಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದರೆ, ಭಾರತೀಯ ಪುರಾತತ್ವ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಭಾರತೀಯರಲ್ಲಿ ಉಂಟಾಗಿದೆ. ಇದೇ ಪ್ರಶ್ನೆಯನ್ನು ಸಚಿವೆ ಸ್ಮತಿ ಇರಾನಿಗೂ ಜನರು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ, ಕಳೆದ ಮಾರ್ಚ್‍ನಲ್ಲೇ ಐತಿಹಾಸಿಕ ಸಂಶೋಧನೆಯ ಭಾರತೀಯ ಕೌನ್ಸಿಲ್ ಈ ಸಂಬಂಧ ಸಾಗರದಾಳದ ಅಧ್ಯಯನ ನಡೆಸಲು ನಿರ್ಧರಿಸಿತ್ತು. ಅಷ್ಟೇ ಅಲ್ಲ, ಇದರ ವರದಿ ನವೆಂಬರ್‍ನಲ್ಲೇ ಬರಬೇಕಿತ್ತು. ಆದರೆ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕ ಅಲೋಕ್ ತ್ರಿಪಾಠಿ ಹೇಳುವಂತೆ ಈ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ. ಇದಕ್ಕಾಗಿ ಕೆಲವು ಪೂರ್ವ ತಯಾರಿ ಪ್ರಗತಿಯಲ್ಲಿದೆ.

ರಾಮಸೇತು ಮಾನವ ನಿರ್ಮಿಸಿದ್ದು ಎಂದು ಇದುವರೆಗೆ ಹೇಳುತ್ತಲೇ ಬರಲಾಗಿತ್ತು. ಆದರೆ ಕೆಲವು ಸರಕಾರಗಳು ಒಪ್ಪಿರಲಿಲ್ಲ. ಈಗ ಡಿಸ್ಕವರಿ ಚಾನೆಲ್ ವೈಜ್ಞಾನಿಕವಾಗಿ ಉತ್ತರ ಕಂಡುಕೊಂಡಿದೆ. ಹೀಗಾಗಿ ನೆಲದೊಳಗೆ ಹುದುಗಿಹೋಗಿರುವ ಸರಸ್ವತಿ, ಮಹಾಭಾರತದ ಸ್ಥಳಗಳು, ದ್ವಾರಕಾ ಸಹಿತ 34 ನಗರಗಳನ್ನೂ ಹುಡುಕಬೇಕಿದೆ ಎಂದು ಕೆಲವು ಟ್ವಿಟಿಗರು ಆಗ್ರಹಿಸಿದ್ದಾರೆ. ಸದ್ಯದಲ್ಲೇ ರಾಮಸೇತು ಇರುವ ಸ್ಥಳಕ್ಕೆ ಹೋಗುವುದಾಗಿ ಬಿಜೆಪಿ ನಾಯಕ ಸುಬ್ರಹ್ಮಣ್ಯಸ್ವಾಮಿ ಹೇಳಿದ್ದಾರೆ.

ಕೆಲ ಬುದ್ಧಿಜೀವಿಗಳ ಪಾಲಿಗೆ ರಾಮಾಯಣವೆಂಬುದು ಕಂತೆಗಳ ಬೊಂತೆಯಾದರೂ ಅದರ ಕರ್ತೃವಾದ ವಾಲ್ಮೀಕಿಯ ಜಾತಿಯನ್ನು ಅವರು ಶೋಷಿತ ದ್ರಾವಿಡ ರಿಲಿಜನ್ನಿನ ಕೆಟೆಗರಿಯಲ್ಲಿ ದಾಖಲಿಸುವುದರಿಂದ ಒಂದು ಉತ್ತಮ ಕಾವ್ಯದ ಕರ್ತೃವಾಗಿ ವಾಲ್ಮೀಕಿ ವಾಸ್ತವವಾಗಿ ಅಸ್ತಿತ್ವದಲ್ಲಿರುವದು ಬುದ್ಧಿಜೀವಿಗಳಿಗೆ ಅನಿವಾರ್ಯ. ಆದ್ದರಿಂದ ವಾಲ್ಮೀಕಿ ಜಯಂತಿಯನ್ನು ಇವರೆಂದೂ ವಿರೋಧಿಸುವುದಿಲ್ಲ. ಹಾಗೆಯೇ ಮನುವಿನ ಅಸ್ತಿತ್ವಕ್ಕೂ ಹಿಸ್ಟಾರಿಕಲ್ ದಾಖಲೆಗಳಿರದಿದ್ದರೂ, ಇಲ್ಲಿನ ಜನರನ್ನು ಶೋಷಿಸಲು ಮನುಸ್ಮೃತಿಯನ್ನು ಬರೆದುಕೊಂಡರು ಎಂಬುದನ್ನು ಸಾಧಿಸಲು, ಕಥೆಗಳು ಹೇಳುವ, ಇಡೀ ಭೂಮಿಗೆ ಅಧಿಪತಿಯಾಗಿದ್ದನೆಂದು ಹೇಳುವ ಮನುವು ವಾಸ್ತವದಲ್ಲಿ ಇದ್ದ ಹಾಗೂ ಮನುಸ್ಮೃತಿಯನ್ನು ಇಡೀ ಸಮಾಜದ ಮೇಲೆ ಹೇರಿದ ಎಂದು ಬುದ್ಧಿಜೀವಿಗಳು ಹೇಳಬೇಕಾಗಿರುವುದು ಇವರಿಗೆ ಅನಿವಾರ್ಯ.

ಹೊಸಯುಗದ ಚಿಂತಕರಾದ ನಾವು ಈ ಬುದ್ಧಿಜೀವಿಗಳ ಪೌರಾಣಿಕ ಪಾತ್ರಗಳ ಕುರಿತ ಸಂಶೋಧನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು? ನಾವು ಬುದ್ಧಿಜೀವಿಗಳು ಒಡ್ಡುವ ವಾದಗಳನ್ನು ವಿರೋಧಾಭಾಸಗಳ ಸಮೇತ ಪಟ್ಟಿ ಮಾಡಬೇಕು. ಮುನ್ನೂರು ವರ್ಷಗಳ ಹಿಂದೆ ಬ್ರಿಟಿಷರು ಬೇಯಿಸಿಟ್ಟು ಹೋದ ಆರ್ಯ-ದ್ರಾವಿಡವೆಂಬ ಹಳಸಲು ಸಿದ್ಧಾಂತ, ಪೆÇ್ರಟೆಸ್ಟಂಟ್ ಹಾಗೂ ಕ್ಯಾಥೋಲಿಕ ಕ್ರಿಶ್ಚಿಯನ್ ಥಿಯಾಲಜಿಗಳಿಗೆ ಅನುಗುಣವಾಗಿ ಇವರು ಹೇಳುತ್ತಿರುವ ಹೊಸ ಸಂಶೋಧನೆಗಳನ್ನು ಹೊಂದಿಸಿ ಸಮಂಜಸವಾಗಿ ವಿವರಿಸಬೇಕು. ಇವರ ಹೊಸ ಸಂಶೋಧನೆಗಳು ಅದೇ ಬಿದ್ದು ಹೋದ ಹಳೆಯ ಥಿಯರಿಯ ಹೊಸ ರೂಪವಷ್ಟೇ ಹೊರತು ಇನ್ನೇನೂ ಅಲ್ಲ ಎನ್ನುವುದನ್ನು ತೋರಿಸಬೇಕು.

ಬುದ್ಧಿಜೀವಿಗಳು ಪಶ್ಚಿಮದಲ್ಲಿ ಆದ ಪೆÇ್ರಟೆಸ್ಟಂಟ್ ಕ್ರಿಶ್ಚಿಯಾನಿಟಿಯನ್ನೇ ವೈಚಾರಿಕತೆಯೆಂಬ ಹೊಸ ಹೆಸರಿನಲ್ಲಿ ಮಾರಲು ಯತ್ನಿಸುತ್ತಿದ್ದಾರೆ ಹಾಗೂ ಅವರ ಸಂಶೋಧನೆಗಳು ಆರ್ಯ-ದ್ರಾವಿಡವೆಂಬ ಹಳಸಲು ಸಿದ್ಧಾಂತದ ಮೇಲೆ ಅವರೇ ಕಟ್ಟಿಕೊಂಡಿರುವ ಹೆಲ್ಯುಸಿನೇಶನ್ನಿನ ಮುಂದುವರೆದ ಭಾಗವಾಗಿವೆ ಅಷ್ಟೇ. ಅವರು ಸದ್ಯಕ್ಕೆ ದ್ರಾವಿಡ ರಿಲಿಜನ್ನೆಂಬ ಅಸ್ತಿತ್ವದಲ್ಲೇ ಇಲ್ಲದ ರಿಲಿಜನ್ನೊಂದರ ಪ್ರೀಸ್ಟುಗಳಂತೆ ವರ್ತಿಸುತ್ತಿದ್ದಾರೆ. ಇದು ವೈಚಾರಿಕತೆಯೂ ಅಲ್ಲ ಹಾಗೂ ಇವರ ಪೂರ್ವಗ್ರಹಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

ರಾಮಾಯಣದ ನಾಯಕನಾದ ರಾಮ ಹಿಂದೂಗಳಿಂದ ಪೂಜಿಸಲ್ಪಡುವ ಜನಪ್ರಿಯ ದೇವರುಗಳಲ್ಲಿ ಒಬ್ಬ. ರಾಮ ನಡೆದ ದಾರಿಯೆಂದು ಹೇಳಲಾದ ಸ್ಥಳಗಳಿಗೆ ತೀರ್ಥಯಾತ್ರಿಗಳು ಭೇಟಿ ಕೊಡುವುದುಂಟು. ರಾಮಾಯಣ ಕೇವಲ ಸಾಹಿತ್ಯ ಕೃತಿಯಾಗಿರದೆ ಹಿಂದೂ ಧರ್ಮದ ಒಂದು ಭಾಗವೇ ಆಗಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಸಲ್ಲುವ ಗೌರವ ಎಷ್ಟೆಂದರೆ ರಾಮಾಯಣ ಅಥವಾ ಅದರ ಕೆಲವು ಭಾಗಗಳನ್ನು ನಿಷ್ಠೆಯಿಂದ ಓದಿ ಅಥವಾ ಕೇಳಿದಲ್ಲಿ ಪಾಪಗಳಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ, ರಾಮ, ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಅವತಾರ. ರಾಮನ ಅವತಾರದ ಉದ್ದೇಶ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸುವುದು. ರಾಮನನ್ನು ನಂಬಿದವರಿಗೆ ಎಂದೂ ತೊಂದರೆ ಯಾಗದು…

-ಪವಿತ್ರ

Tags

Related Articles

Close