ಪ್ರಚಲಿತ

ರಾಹುಲ್ ಗಾಂಧಿ ಎಂಬ ಅಪ್ಪಟ ಕ್ರೈಸ್ತನಿಂದ ಮತ್ತೊಮ್ಮೆ ಹಿಂದೂತ್ವದ ಜಪ!! ಗದ್ದುಗೆಗಾಗಿ ಯಾವ ನಾಟಕಕ್ಕೂ ರೆಡಿ ಎಂದು ಸಾಬೀತುಪಡಿಸಿದ್ದು ಹೇಗೆ ಗೊತ್ತೇ?!

ಕಾಂಗ್ರೆಸ್ ಪಕ್ಷವೂ ಅದೇನೇನೋ ತಂತ್ರಗಳನ್ನು ಹೂಡಿ, ಕೊನೆಗೆ ಹಿಂದೂಗಳ ಮನವೊಲೈಕೆಗಾಗಿ ದೇವಾಲಯಗಳಿಗೆ ಬೇಟಿ ನೀಡಿ ಮತ ಗಿಟ್ಟಿಸಿಕೊಳ್ಳುವ ತಂತ್ರವನ್ನೂ ಬಳಸುತ್ತಿರುವ ವಿಚಾರವೂ ತಿಳಿದೇ ಇದೆ. ಆದರೆ, ಕಾಂಗ್ರೆಸ್ ಪಕ್ಷವು ಗುಜರಾತ್‍ನಲ್ಲಿ ಯಶಸ್ವಿ ತಂತ್ರವಾಗಿ ಪ್ರಯೋಗಿಸಿದ ಮೃದು ಹಿಂದುತ್ವವನ್ನು ಕರ್ನಾಟಕದಲ್ಲೂ ಪ್ರಯೋಗಿಸಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನವರಿ ತಿಂಗಳಿನಲ್ಲಿ ಕೈಗೊಳ್ಳುವ ರಾಜ್ಯ ಪ್ರವಾಸದ ವೇಳೆ ಹಲವು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ ಎನ್ನುವ ವಿಚಾರ ಇದೀಗ ತಿಳಿದು ಬಂದಿದೆ.

ರಾಹುಲ್ ಗಾಂಧಿಯವರು ಮತ ಪ್ರಚಾರಕ್ಕೋಸ್ಕರ ಗುಜರಾತ್ ನ ಚುನಾವಣೆ ಮುಗಿದ ನಂತರ ಇದೀಗ ಕರ್ನಾಟಕದತ್ತ ದಾಪುಕಾಲು ಇಟ್ಟಿದ್ದು, ಕರ್ನಾಟಕದಲ್ಲೂ ಹಿಂದೂ ದೇವಾಲಯಗಳಿಗೆ, ಪುಣ್ಯಕ್ಷೇತ್ರಗಳಿಗೆ ಬೇಟಿ ನೀಡಲಿದ್ದಾರೆ. ಆದರೆ ಈಗಾಗಲೇ ಭಾಜಪದ ಸಂಸದರಾದ ಡಾ. ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ಹುಟ್ಟಿನಿಂದಲೇ ಕ್ರೈಸ್ತನಾಗಿದ್ದಾರೆ ಎಂಬುದಕ್ಕೆ ನನ್ನ ಬಳಿ ಹಲವಾರು ದಾಖಲೆಗಳಿವೆ ಎಂದು ಪ್ರತಿಪಾದಿಸಿದ್ದಾರೆ.

ಹೌದು….. ರಾಹುಲ್ ಗಾಂಧಿ ಸೋಮನಾಥ ದೇವಾಲಯದ ನಿಯಮದಂತೆ, ಅನ್ಯ ಮತದವರು ದೇವಾಲಯದೊಳಗೆ ಪ್ರವೇಶ ಮಾಡುವ ಮುನ್ನ ನೋಂದಣಿ ಮಾಡುವ ಪುಸ್ತಕದಲ್ಲಿ ನೋಂದಣಿ ಮಾಡಿದ್ದರು. ಈ ನೋಂದಣಿ ಪುಸ್ತಕದಲ್ಲಿ ರಾಹುಲ್ ಮತ್ತು ಶಾಸಕರಾದ ಅಹ್ಮದ ಪಟೇಲ್ ರವರ ನೋಂದಣಿ ಮಾಡಲಾಗಿತ್ತು. ಈ ವಿವಾದದ ಬಗ್ಗೆ ಡಾ. ಸುಬ್ರಮಣಿಯನ್ ಸ್ವಾಮಿಯವರು ಮಾತನಾಡುತ್ತಾ, “ರಾಹುಲ್ ಗಾಂಧಿ ಶಿಕ್ಷಣ ಪಡೆಯುವಾಗ ಅನೇಕ ಸ್ಥಳಗಳಲ್ಲಿ ತಾವು ಕ್ಯಾಥೊಲಿಕ್ ಆಗಿರುವುದಾಗಿ ದಾಖಲಿಸಿದ್ದಾರೆ. ಸೇಂಟ್ ಕೊಲಂಬಾ ಸ್ಕೂಲ್‍ನಲ್ಲಿ ಅವರ ಹೆಸರನ್ನು ಕ್ಯಾಥೊಲಿಕ್ ಕ್ರೈಸ್ತರೆಂದು ದಾಖಲಿಸಲಾಗಿದೆ. ಸೇಂಟ್ ಸ್ಟೀಫನ್ ಕಾಲೇಜ್‍ನಲ್ಲಿ ಕ್ಯಾಥೊಲಿಕ್ ಕ್ರೈಸ್ತರೆಂದು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

ಡಾ. ಸುಬ್ರಮಣಿಯನ್ ಸ್ವಾಮಿಯವರು ಹೇಳುವ ಪ್ರಕಾರ, ರಾಹುಲ್ ಗಾಂಧಿ ಸೇಂಟ್ ಸ್ಟೀಫನ್ ಕಾಲೇಜ್‍ನಲ್ಲಿ ಒಂದು ವರ್ಷ ಶಿಕ್ಷಣ ಪಡೆದು. ಅನಂತರ ಅವರು ಅಮೇರಿಕಾದ ಫೆÇ್ಲೀರಿಡಾದಲ್ಲಿನ ಸೇಂಟ್ ಲ್ಯಾರೆನ್ಸ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಅಲ್ಲಿಯೂ ಸಹ ರಾಹುಲ್ ಗಾಂಧಿ ತಾವು ಕ್ಯಾಥೋಲಿಕ್ ಕ್ರೈಸ್ತರೆಂದು ದಾಖಲಿಸಿದ್ದಾರೆ. ಜಗತ್ಪ್ರಸಿದ್ಧ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅವರು ತಾವು ಕ್ರೈಸ್ತರೆಂದು ಹೇಳಿದ್ದರಿಂದಲೇ ಅಲ್ಲಿ ರಾಹುಲ್ ಗಾಂಧಿಗೆ ಪ್ರವೇಶ ಸಿಕ್ಕಿತು ಎಂದು ಹೇಳಿದ್ದರು.

ಆದರೆ ಇದೀಗ ರಾಹುಲ್ ಗಾಂಧಿಯವರು ದೇವಾಲಯಗಳನ್ನು ಬೇಟಿ ನೀಡುತ್ತಿರುವುದನ್ನು ನೋಡಿದರೆ, ಖಂಡಿತಾವಾಗಿಯೂ ಇದು ಚುನಾವಣೆಯ ಗಿಮಿಕ್ಸ್ ಎಂದೆನಿಸುತ್ತದೆ. ಯಾಕೆಂದರೆ, ಇಷ್ಟರವರೆಗೆ ಇಲ್ಲದ ಧರ್ಮ ಪ್ರೇಮ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಉಕ್ಕಿ ಹರಿದಿದೆ ಎಂದರೆ ಮತ್ತೇನು?? ಗುಜರಾತ್ ನ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಚುನಾವಣೆ ಆರಂಭವಾಗಲಿದ್ದು, ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಳ್ಳುವ ವೇಳೆ ಅನೇಕ ದೇವಾಲಯಗಳನ್ನು ಬೇಟಿ ನೀಡಲಿದ್ದಾರೆ.

ರಾಹುಲ್ ಗಾಂಧಿಯವರ ಪ್ರವಾಸದ ಆರಂಭ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ನಡೆಯುವ ಸಾಧ್ಯತೆಯಿದೆ. ಯಾಕೆಂದರೆ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಶೃಂಗೇರಿಯಿಂದಲೇ ತಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದರು. ಅದೇ ರೀತಿ ರಾಹುಲ್ ಗಾಂಧಿ ಅವರು ಸಹ ತಮ್ಮ ಪ್ರವಾಸದ ವೇಳೆ ಶೃಂಗೇರಿಗೆ ಭೇಟಿ ನೀಡುವ ಸಾಧ್ಯತೆ ದಟ್ಟವಾಗಿದೆ ಎದ್ದು ಕಾಣುತ್ತಿದೆ.

ಇದಲ್ಲದೆ, ಇನ್ನು ಹಲವು ಪ್ರಮುಖ ದೇವಾಲಯ, ಮಸೀದಿ ಹಾಗೂ ಇಗರ್ಜಿಗಳಿಗೆ ಅವರು ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಪ್ರವಾಸ ಕೈಗೊಳ್ಳಲಿರುವ ದಿನಾಂಕ ಇನ್ನೂ ನಿಗದಿಯಾಗಿಲ್ಲ!!

ಈ ವಿಷಯವನ್ನು ದೃಢಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು, ಗುಜರಾತಿನಲ್ಲಿ ರಾಹುಲ್‍ಗಾಂಧಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಬಹಳಷ್ಟು ಶ್ರಮ ಹಾಕಿದ್ದಾರೆ. ರಾಜ್ಯಕ್ಕೆ ಬಂದಾಗಲೂ ಅವರು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಆದರೆ ಚುನಾವಣಾ ಪ್ರಚಾರಕ್ಕೆ ಯಾವಾಗ ಬರುತ್ತಾರೆ? ಯಾವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಎನ್ನುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಹುಲ್ ಅವರಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿದ್ದು ಅವರ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಅದೇನೇ ಇರಲಿ… ಹಿಂದೂಗಳನ್ನು ಸೆಳೆಯುವಲ್ಲಿ ನಿರತರಾಗಿರುವ ಇವರು ಅದೆಷ್ಟು ದಿನ ಈ ನಾಟಕವನ್ನಾಡುತ್ತಾರೋ ಗೊತ್ತಿಲ್ಲ!! ಆದರೆ ಒಂದಂತೂ ನಿಜ. ಜಾತಿ ಜಾತಿಗಳ ಮಧ್ಯೆ ಕಲಹಗಳನ್ನು ತಂದ ಕಾಂಗ್ರೆಸ್ಸಿಗರು, ಧರ್ಮದ ಹೆಸರಲ್ಲಿ ಡೋಂಗಿ ರಾಜಕೀಯ ಮಾಡುವ ಇಂಥವರು ಧರ್ಮದ ಬಗ್ಗೆ ಅದೆಷ್ಟು ತಿಳಿದುಕೊಂಡಿದ್ದಾರೋ ನಾ ಕಾಣೆ!!
– ಅಲೋಖಾ

Tags

Related Articles

Close