ಪ್ರಚಲಿತ

ರಾಹುಲ್ ಗಾಂಧಿ ಚುನಾವಣೆಯಲ್ಲಿ ಗೆದ್ದರೆ ಎಲ್ಲಾ ಗೃಹ ಬಳಕೆಯ ವಸ್ತುಗಳ ಬೆಲೆ ಏರಿಸ್ತಾನಂತೆ‌! ಹೇಗೆ ಗೊತ್ತೇ?

ಅಕಸ್ಮಾತ್ ಕಾಂಗ್ರೆಸ್ ಸರಕಾರವೇನಾದರೂ ಕೇಂದ್ರದಲ್ಲಿ ಬಂದರೆ, ಬಡ ಜನರೆಲ್ಲ ಹಸಿವಿನಿಂದಲೇ ಶಿವನಪಾದ ಸೇರುತ್ತಾರೆನ್ನುವುದು ಬಹುತೇಕ ಖಚಿತ. ಅಷ್ಟೇ
ಅಲ್ಲದೇ, ಶ್ರೀ ಸಾಮಾನ್ಯನ ಬದುಕು ಇನ್ನೂ ದುರ್ಭರವಾಗಲಿದೆ! ಹಣದುಬ್ಬರದಿಂದ ಜನಸಾಮಾನ್ಯರು ಪರದಾಡುವಂತಾಗುತ್ತದೆ! ತಟ್ಟೆಯಲ್ಲಿರುವ ಪ್ರತಿ ಕಾಳೂ ಕೂಡ ರೂಪಾಯಿಗಳಷ್ಟು ಬೆಲೆ ಬಾಳುತ್ತದೆ! ಯಾಕೆಂದರೆ, ರಾಹುಲ್ ಗಾಂಧಿ ‘ನಾನು ಪ್ರಧಾನ ಮಂತ್ರಿಯಾದರೆ ತೆರಿಗೆಯನ್ನು 18% ಗೆ ಏರಿಕೆ ಮಾಡುತ್ತೇನೆ” ಎಂದು ಹೇಳಿದ್ದಾರೆ! ಅಂದರೆ, ಹಾಲು, ಗೋಧಿ, ದ್ವಿದಳ ಧಾನ್ಯ,ತರಕಾರಿ, ಮೊಟ್ಟೆ, ಚೀಸ್,. ಗಳ ಮೇಲೆಯೂ 18% ತೆರಿಗೆ ಬೀಳಲಿದೆ. ಮೋದಿಯ ಸರಕಾರದಲ್ಲಿ ಉಪ್ಪಿಗಿಲ್ಲದ ತೆರಿಗೆ ರಾಹುಲ್ ಗಾಂಧಿಯ ಸರಕಾರದಲ್ಲಿ 18% ಆಗಲಿದೆ! ಬಹುಷಃ ಕಾರುಗಳ ಮೇಲಿನ ತೆರಿಗೆ ಹಾಗೂ ಸಿಗರೇಟ್ ಗಳೊಂದು ಕಡಿಮೆಯಾಗಬಹುದು. ಯಾಕೆಂದರೆ, ಈಗಿರುವ 28% ಕೊನೆಗೆ 18% ಗೆ ಇಳಿಯಲಿದೆ!

ನಾವು ಹೇಳುತ್ತಿಲ್ಲ!!!

ಸ್ಚತಃ ರಾಹುಲ್ ಗಾಂಧಿಯೇ ಇದನ್ನು ಹೇಳಿದ್ದಾರೆ! “ಭಾರತಕ್ಕೆ ಗಬ್ಬರ್ ಸಿಂಗ್ ತೆರಿಗೆಯ ಅವಶ್ಯಕತೆ ಇಲ್ಲ. ಬದಲಾಗಿ, ಸರಳವಾದ ಜಿಎಸ್ಟಿಯ ಅವಶ್ಯಕತೆ ಇದೆ! ಕಾಂಗ್ರೆಸ್ ಮತ್ತು ಜನತೆ ಅದೆಷ್ಟೋ ವಸ್ತುಗಳ ಮೇಲಿದ್ದ 28% ಜಿಎಸ್ಟಿಯನ್ನು ಕಡಿಮೆಗೊಳಿಸಿದೆ. ಈಗ, ಪ್ರತಿ ವಸ್ತುಗಳ ಮೇಲೂ ಸಹ 18% ಜಿಎಸ್ಟಿ ತೆರಿಗೆ ಹಾಕಲು ನಾವು ಹೋರಾಡುತ್ತೇವೆ!”

ಹೀಗೆಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ದೇಶದ ಜನತೆಗೆ ವಚನವನ್ನೂ ನೀಡಿಬಿಟ್ಟಿದ್ದಾರೆ! ಅದೆಷ್ಟೋ ಶ್ರೀಮಂತ ವರ್ಗದವರು ಖುಷಿಯಿಂದ ಕರತಾಡನ ಮಾಡಿದ್ದರೂ., ಮಧ್ಯಮ ವರ್ಗದವರಿಗೆ ಹಾಗೂ ಬಡಬಗ್ಗರಿಗೆ ಉಸಿರಾಡುವುದಕ್ಕೊಂದು ತೆರಿಗೆ ಹಾಕಲಿಲ್ಲವೆಂಬ ಸಮಾಧಾನವೊಂದೇ ಉಳಿಯುತ್ತದೇನೋ! ಅಂದರೆ, ರಾಹುಲ್ ಗಾಂಧಿಯ ಪ್ರಕಾರ, 5%, 2% ಇರುವ ತೆರಿಗೆಯ ಪ್ರಮಾಣವೂ ಕೂಡ 18% ಆಗಲಿದೆ! ಮೋದಿ ಸರಕಾರದಲ್ಲಿ ಮೂಲಭೂತ ಸೌಕರ್ಯಕ್ಕೇನೂ ಜಿಎಸ್ಟಿಯಿಂದ ತೊಂದರೆಯಾಗಿರಲಿಲ್ಲ. ಅದಲ್ಲದೇ, ಎಲ್ಲವನ್ನೂ ಕೂಡ 18% ತೆರಿಗೆಯ ಪ್ರಮಾಣಕ್ಕಿಳಿಸುತ್ತೇನೆ ಎಂದಿರುವ ರಾಹುಲ್ ಗಾಂಧಿಯ ಹೊಸ ಟ್ವೀಟ್ ಸರಳ ಜಿಎಸ್ಟಿಯನ್ನು ಪರಿಚಯಿಸುತ್ತಿದೆಯೆಂದು ಪಪ್ಪುವಿನ ಪಿಡಿ ಟ್ವೀಟು ನೋಡಿ ಪ್ರಚಾರ ಮಾಡುತ್ತಿದೆ!

ರಾಹುಲ್ ಗಾಂಧಿಯ ಜಿಎಸ್ಟಿ ದೇಶದ ಆರ್ಥಿಕತೆಯನ್ನು ಮೇಲೆತ್ತುವುದಲ್ಲ, ಬದಲಾಗಿ. . ,

ಹಾ! ನರೇಂದ್ರ ಮೋದಿ ಸರಕಾರ 5 ತೆರನಾಗಿ ಜಿಎಸ್ಟಿಯನ್ನು ವರ್ಗೀಕರಿಸಿ ತೆರಿಗೆಯ ಮಿತಿಯನ್ನು ಹೇರಿದೆ. ಆದರೆ, ರಾಹುಲ್ ಗಾಂಧಿಯ ಜಿಎಸ್ಟಿಗೆ ಯಾವ ವರ್ಗವೂ ಇಲ್ಲ! ಪ್ರತಿ ವಸ್ತುಗಳ ಮೇಲೆ ಕನಿಷ್ಟ 18% ತೆರಿಗೆ ಹಾಕಲಿದೆ ಕಾಂಗ್ರೆಸ್! ಅಂದರೆ, ಕುಡಿಯುವ ನೀರಿಗೂ 18% ಜಿಎಸ್ಟಿ!!!

1. ಶೇಕಡಾ 0% ತೆರಿಗೆ ವ್ಯಾಪ್ತಿ

ಮೋದಿ ಸರಕಾರದಲ್ಲಿ ಹಾಲು, ಮೊಟ್ಟೆ, ಮೊಸರು, ಬೆಣ್ಣೆ, ಹಿಟ್ಟು, ಧಾನ್ಯ, ಗಿಣ್ಣು, ಜೇನುತುಪ್ಪ, ತಾಜಾ ತರಕಾರಿ, ಉಪ್ಪು,ಶಿಕ್ಷಣ, ಆರೋಗ್ಯ ಹಾಗೂ ಇತರೆಗಳಿಗೆ 0% ತೆರಿಗೆ! ಆದರೆ, ಇವೆಲ್ಲವೂ, 18% ಗೆ ಏರಲಿದೆ ರಾಹುಲ್ ಗಾಂಧಿಯ ಸರಕಾರದಲ್ಲಿ!

2. ಶೇಕಡಾ 5% ತೆರಿಗೆ ವ್ಯಾಪ್ತಿ

ಸಕ್ಕರೆ, ಚಹಾ ಪುಡಿ, ಅಡಿಗೆ ಎಣ್ಣೆ, ಶೇಖರಿಸಿದ ಗಿಣ್ಣು, ಎಲ್ ಪಿ ಜಿ ಗ್ಯಾಸ್, ಗೋಡಂಬಿ, ಕಲ್ಲಿದ್ದಲು, ಔಷಧ, ಕಾಫೀ ಪುಡಿ, ಬಟ್ಟೆ, ಪಾದರಕ್ಷೆಗಳು, ಹಾಲಿನ ಪುಡಿ, ಸೀಮೆಎಣ್ಣೆ, ಮಸಾಲೆ, ಸಿಹಿತಿಂಡಿಗಳು ಹಾಗೂ ಇತರೆಗಳಿಗೆ 2% ತೆರಿಗೆ! ಮುಂದೆ ರಾಹುಲ್ ಗಾಂಧಿಯ ಕೈನಲ್ಲಿ ಇವೆಲ್ಲ 18%!!

3. ಶೇಕಡಾ 12% ತೆರಿಗೆ ವ್ಯಾಪ್ತಿ

ಸಂಸ್ಕರಿಸಿದ ಆಹಾರ ಪದಾರ್ಥಗಳು, ಗಣಕಯಂತ್ರಗಳು, ಮೊಬೈಲು, ಉಪ್ಪಿನಕಾಯಿ, ಪಟಾಕಿಗಳು ಹಾಗು ಇತರೆಗಳಿಗೆ ಈಗಿರುವ 12% ಮುಂದೆ 18% ಗೆ ಏರಿಕೆ!

4. ಶೇಕಡಾ 18% ತೆರಿಗೆ ವ್ಯಾಪ್ತಿ

ಕೂದಲಿಗೆ ಹಾಕುವ ಎಣ್ಣೆ, ಟೂತ್ ಪೇಸ್ಟ್, ಸೋಪು, ಪಾಸ್ತಾ, ಕಾರ್ನ್ ಪ್ಲೆಕ್ಸ್, ಪ್ರಿಂಟರ್, ಐಸ್ ಕ್ರೀಮ್, ಕ್ಯಾಪಿಟಲ್ ಗೂಡ್ಸ್ ಹಾಗೂ ಇತರೆಗಳಿಗೆ 18% ಇದ್ದದ್ದು ಈಗ ಹೇಗಿದೆಯೋ ಮುಂದೆಯೂ ಹಾಗೇ ಇರುತ್ತದೆ!

5. ಶೇಕಡಾ 18% ತೆರಿಗೆಗಿಂತ ಹೆಚ್ಚಿನ ವ್ಯಾಪ್ತಿ

ಕಾರು, ಫ್ರಿಡ್ಜ್, ಬೀಡಿ, ಸಿಗರೇಟ್,. ಹಾಗೂ ಇತರೆಗಳಿಗೆ ಈಗ 28% ಇರುವ ತೆರಿಗೆ ಮುಂದೆ 18% ಗೆ ಇಳಿಯಲಿದೆ!

ವ್ಹಾ! ವ್ಹಾ!!! ಅಂದರೆ, ಬೀಡಿ, ಸಿಗರೇಟ್, ಗುಟ್ಕಾ, ಸೇವಿಸುವವರಿಗಿದು ಖುಷಿಯ ವಿಚಾರವೇ ಬಿಡಿ! ತಿನ್ನಲು ಅನ್ನವಿಲ್ಲದಿದ್ದರೂ ಸಹ, ರಾಹುಲ್ ಗಾಂಧಿಗೆ ಚಿಂತೆಯಿಲ್ಲವಂತೆ! ಪಾಪ! ಆತನ ಮಟ್ಟಕ್ಕೆ ಆತ ಯೋಚಿಸಿದ್ದು ಸರಿಯೇ! ಮುತ್ತಾತನಿಂದಲೂ ಸಿಗರೇಟ್ ಗಳ ಅಂಬಾಸಿಡರ್ ಆಗೇ ಮುಂದುವರೆದಿರುವ ಕುಟುಂಬದಲ್ಲಿ ಇಟಲಿ ಬೆಡಗಿಯನ್ನೂ ಕರೆಸಿ ಎಕ್ಸ್ಟ್ರಾ ಜಾಹೀರಾತು ನೀಡಿದ್ದು ಇದಕ್ಕೇನಾ?! ಅಂತ ಶ್ರೀ ಸಾಮಾನ್ಯ ಗೊಣಗಿ ನಗುತ್ತಿದ್ದಾನಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close