ಪ್ರಚಲಿತ

ವೀಕ್ಷಿಸಿ!!! ದಲಿತರಿಂದ ದಲಿತ ನಾಯಕನಾಗಲು ಹೊರಟ ಪಾಖಂಡಿ ಜಿಗ್ನೇಶ್ ಮೇವಾನಿಗೆ ಧರ್ಮದೇಟು!!

ಆತ ದಲಿತ ನಾಯಕನೆಂಬ ಹೆಸರು ಬಂದಾಗಿದೆ! ಪ್ರತೀ ಸಲವೂ ಕೂಡ, ಒಂದಲ್ಲ ಒಂದು ವಿವಾದ ಮಾಡುತ್ತಲೇ ಇರುವ ಈ ಜಿಗ್ನೇಶ್ ಮೇವಾನಿ ಎಂಬ ದತ್ತು ಪುತ್ರ ಸ್ವತಃ ‘ದಲಿತ ನಾಯಕ’ ನೆಂದು ಬಿರುದು ಕೊಟ್ಟುಕೊಂಡವನಷ್ಟೇ! ತನ್ನ ಕಮ್ಯುನಿಸ್ಟ್ ಬುದ್ಧಿಯ ತೆವಲಿಗೆ ದಲಿತರ ಪ್ರಾಣವನ್ನೂ ಅಡವಿಡುವ ಈತನೊಬ್ಬ ದಲಿತ ನಾಯಕನಂತೆ! ಅಂತಹವನನ್ನು ‘ಪೋಸ್ಟರ್ ಬಾಯ್’ ಮಾಡಿಕೊಂಡಿರುವ ರಾಹುಲ್ ಗಾಂಧಿಯ ಬಗ್ಗೆ ತೀರಾ ವಿವರಣೆ ಬೇಡ ಬಿಡಿ!

ವಾರಗಳ ಹಿಂದಷ್ಟೇ, ಪ್ರಧಾನಿ ಮೋದಿಗೆ ಬೋ* ಮತ್ತು ಬು* ಎಂದು ಅಸಭ್ಯವಾಗಿ ಹೀಯಾಳಿಸಿದ್ದ ಈತ, ಗೌರೀ ಲಂಕೇಶ್ ತೀರಿದಾಗ ಸಂಸ್ಕಾರಕ್ಕೆ ಹೋಗದವನು, ಕುಮ್ಮಿಗಳ ಭಿಕ್ಷೆ ಎತ್ತುವ ಕಾರ್ಯಕ್ರಮದಲ್ಲಿ ಮೈಕ್ ಹಿಡಿದು, ಮೋದಿಯ ತಾಯಿಗೂ ನಿಂದಿಸಿದ್ದ ಈ ನಾಯಿ ಈಗ ಅಂಬೇಡ್ಕರ್ ರವರನ್ನೂ
ಬಿಡದೇ ನಿಂದಿಸತೊಡಗಿದೆ!

ಅಂಬೇಡ್ಕರ್ ರವರ ಸಿದ್ಧಾಂತಗಳನ್ನು ಅವಮಾನಿಸಿದ್ದಲ್ಲದೇ, ದಲಿತ ನಾಯಕರನ್ನೂ ಸಹ ನಿಂದಿಸಿರುವ ಜಿಗ್ನೇಶ್ ಮೇವಾನಿಯನ್ನು ಬಿಟ್ಟರೆ ನಾಲಗೆಯನ್ನು ಇನ್ನೂ ಹರಿಬಿಡುತ್ತಾನೆನ್ನಿಸಿತೋ ಏನೋ, ದಲಿತರೇ ಮೇವಾನಿಗೆ ಹೆಡೆಮುರಿ ಕಟ್ಟಿದ್ದಾರೆ!

ರಾಜ್ ಕೋಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ದಲಿತ ನಾಯಕನೆಂದು ಗುರುತಿಸಿಕೊಂಡಿದ್ದ ಜಿಗ್ನೇಶ್ ಮೇವಾನಿ ಯಾವಾಗ ಮಾಯಾವತಿಯನ್ನು ನಿಂದಿಸಿದನೋ, ಅಲ್ಲೇ ಇದ್ದ ದಲಿತ ನಾಯಕರಿಗೂ ಸಹ ಆತನಿಗೆ ಧರ್ಮದೇಟು ಕೊಡುವುದಕ್ಕೆ ಹಿಂಜರಿಯದೇ, ತಮ್ಮ ಕೆಲಸ ತಾವು ಮಾಡಿದ್ದಾರೆ ಪಾಪ!

‘ರಾಜ್ ಕೋಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲಿತ ನಾಯಕರನ್ನು ನಿಂದಿಸಿದ್ದಲ್ಲದೇ, ಮಾಯಾವತಿಯನ್ನೂ, ಸಂವಿಧಾನ ರಚನೆಕಾರ ಅಂಬೇಡ್ಕರ್ ರವರನ್ನೂ ಸಹ ನಿಂದಿಸಿದ್ದಾನೆ! ಜಿಗ್ನೇಶ್ ನ ಈ ಅಧಿಕಪ್ರಸಂಗಿತನಕ್ಕೆ ಕಾಂಗ್ರೆಸ್ ನ ಉಪಾಧ್ಯಕ್ಷ ಏನು ಹೇಳುತ್ತಾರೆ?! ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕಿದೆ ಅಲ್ಲವೇ?! ಇಂತಹವರನ್ನು ಬೆಂಬಲಿಸಿ, ಸಲಿಗೆ ಕೊಟ್ಟಿ ಜಗುಲಿ ಹತ್ತಿಸಿದ್ದಕ್ಜಾದರೂ ರಾಹುಲ್ ಗಾಂಧಿ ಸ್ಪಷ್ಟ ಪಡಿಸಬೇಕಿದೆ!

ಇದೊಂದೇ ಸಾಕಲ್ಲವಾ?!

ಹೇಳಿಕೊಳ್ಳುವುದು ದಲಿತ ನಾಯಕನೆನ್ನುವುದಾದರೂ ಸಹ, ಅಂಬೇಡ್ಕರ್ ರವರನ್ನೂ ನಿಂದಿಸಿದ್ದಲ್ಲದೇ, ಸಂವಿಧಾನವನ್ನು ಅನುಸರಿಸಬೇಕಾದ ಅಗತ್ಯವಿಲ್ಲ, ಅಂಬೇಡ್ಕರ್ ರವರನ್ನು ಅನುಸರಿಸೋ ಅವಶ್ಯಕತೆ ಇಲ್ಲ ಎಂದ ಜಿಗ್ನೇಶ್ ಗೆ ಸಮಾಜದ ಹಿತದ ಬಗ್ಗೆ ಯೋಚನೆಯಿದೆಯಾ?! ಉಹೂಂ! ಇಂತಹ ಹುಚ್ಚನೊಬ್ಬ ಗುಜರಾತಿನ ಒಬ್ಬ ಎಮ್ ಎಲ್ ಎ ಆಗಿದ್ದಾದರೂ ಹೇಗೆ ಎನ್ನುವುದೇ ಒಂದು ಯಕ್ಷ ಪ್ರಶ್ನೆಯಷ್ಟೇ! ಗೆದ್ದಾದ ಮೇಲೆ, ಈಗ ದಲಿತರನ್ನೇ ವಿರೋಧಿಸುತ್ತಿರುವವನು ಎಂತಹವನು ಹೇಳಿ!

ರಾಹುಲ್ ಗಾಂಧಿ ಸಹ ದಲಿತ ವಿರೋಧಿಯೇ!!!

Related image

ಈ 47 ವರ್ಷದ ‘ಯುವನಾಯಕ’ನ ಮಾತನ್ನು ನಂಬುವುದೇ ಆದರೆ, ರಾಹುಲ್ ಗಾಂಧಿ ಮುಂಚೆ ಹೇಳಿದ್ದೇನು?! ‘ನಾನೊಬ್ಬ ಜನಿವಾರಧಾರಿ ಬ್ರಾಹ್ಮಣ’ ಎಂದು! ಇಲ್ಲಿ ಜಿಗ್ನೇಶ್ ‘ಪ್ರತಿ ಮೇಲ್ವರ್ಗವೂ ಸಹ ದಲಿತರ ಶತ್ರು’ ಎಂದು ನಂಬುತ್ತಾನೆ! ಹಾಗಾದರೆ, ಈ ರಾಹುಲ್ ಗಾಂಧಿಯನ್ನು ಮೇವಾನಿ ಶತ್ರುವೆನ್ನುತ್ತಾನೋ ಅಥವಾ ಮಿತ್ರನೆನ್ನುತ್ತಾನೋ?! ಅದನ್ನೂ ಬಿಡಿ! ಸ್ವತಃ.ರಾಹುಲ್ ಗಾಂಧಿಗೇ ತಾನ್ಯಾರು ಎಂಬುದು ತಿಳಿಯದಂತಾಗಿದೆ! ಒಮ್ಮೆ ಶಿವಭಕ್ತ! ಒಮ್ಮೆ ಮುಸಲ್ಮಾನ! ಒಮ್ಮೆ ನೋಡಿದರೆ ದಲಿತ ನಾಯಕ! ಒಮ್ಮೆ ನೋಡಿದರೆ ಬ್ರಾಹ್ಮಣ! ಈಗ ಜಿಗ್ನೇಶ್ ಗೆ ಬೆಂಬಲ! ಒಂದು ನಿಮಿಷ! ರಾಹುಲ್ ಗಾಂಧಿಯ ತಲೆಗೆ ಪೆಟ್ಟು ಬಿದ್ದು ಯಡವಟ್ಟಾಗಿಲ್ಲವಲ್ಪವೇ?!

ಈಗ,ಜಿಗ್ನೇಶ್ ಸಂವಿಧಾನ ರಚನೆಕಾರ ಅಂಬೇಡ್ಕರ್ ರನ್ನೇ ಅವಮಾನಿಸಿದರೂ, ರಾಹುಲ್ ಗಾಂಧಿ ಮೌನವಹಿಸಿ ಕೂತಿದ್ದಾನೆ! ಇದರರ್ಥ ಏನು?! ಪರೋಕ್ಷವಾಗಿ ದಲಿತ ವಿರೋಧಿ ಸಿದ್ದಾಂತಕ್ಕೆ ಚಾಲನೆ ಕೊಡುತ್ತಿರುವುದಾ ರಾಹುಲ್ ಗಾಂಧಿ?! ಅಥವಾ, ತನ್ನ ಮುತ್ತಜ್ಜನೂ ಅಂಬೇಡ್ಕರ್ ರನ್ನು ವಿರೋಧಿಸಿದ್ದ ಎಂದು ಸುಮ್ಮನೆ ಕೂತಿದ್ದಾನಾ?!

ಒಂದು ಕಡೆ ದಲಿತರನ್ನು ವಿರೋಧಿಸಿ, ಮಗದೊಂದು ಕಡೆ ದಲಿತರುಳಿಯಬೇಕೆಂದರೆ ರಸ್ತೆಗಳಲಿ ಯುದ್ಧಗಳಾಗಬೇಕು ಎನ್ನುವವಗೆ ಇರುವುದು ಕಾಳಜಿಯೋ ಅಥವಾ ಹಿಂದೂ ಧರ್ಮದ ಮೇಲೆ ದ್ವೇಷವೋ?!

“ನಾವು ಪೇಶ್ವೆಗಳ ವಿರುದ್ಧ ಗೆಲ್ಲಬೇಕಾದರೆ, ನಾವು ಭೀಮಾ ಕೋರೆಗಾವೋನ್ ಯುದ್ಧವನ್ನು ಇನ್ನೂ ಮುಂದುವರೆಸಿದರೆ, ಈ ಕಾರ್ಯಕ್ರಮ ಯಾವತ್ತಿಗೂ
ಕೊನೆಗೆ ರಾಜಕೀಯ ಪ್ರೇರಿತವಾಗುವುದಿಲ್ಲ. ಗುಜರಾತ್ ಹಾಗೂ ಮಹಾರಾಷ್ಡ್ರದ ಸಂಸತ್ತುಗಳು ಚರ್ಚಿಸಬಹುದು! ಆದರೆ, ಯುದ್ಧಗಳು ಖಂಡಿತ ರಸ್ತೆಯಲ್ಲಿಯೇ ಆಗುತ್ತವೆ! ಒಂದು ಸಮುದಾಯದ ಮೇಲಾಗುವ ದೌರ್ಜನ್ಯವನ್ನು ತಪ್ಪಿಸಬೇಕಾದರೆ, ಈ ದೇಶದ ರಸ್ತೆಗಳಲ್ಲಿ ಯುದ್ಧಗಳಾಗಬೇಕಿದೆ!” ಎಂದು ವಿಷ ಕಾರಿದ್ದಾನೆ ದತ್ತುಪುತ್ರ!!

Image result for rahul gandhi with jignesh mevani

ಈಗಲಾದರೂ ಅರ್ಥವಾಯಿತಾ?! ಈತನಿಗೆ ಬೇಕಿರುವುದು ಜಾತ್ಯಾತೀತತೆಯಲ್ಲ! ಬದಲಿಗೆ ಅಶಾಂತಿ!! ಹಿಂದೂ ಧರ್ಮದೊಳ ಗಲಭೆ! ದೇಶದೊಳ
ಅಭದ್ರತೆ! ಅಷ್ಟೇ!

ರಾಹುಲ್ ಗಾಂಧಿಯ ಈ ‘ಒಡೆದು ಆಳುವ ನೀತಿ’ಯೊಂದು ಗುಜರಾತ್ ಅನ್ನು ಅಲ್ಲೋಲ ಕಲ್ಲೋಲ ಮಾಡುವುದರಲ್ಲಿತ್ತಷ್ಟೇ! ಆದರೆ, ಇನ್ನು ಮುಂದೆಯೂ ಭಾರತ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ಅಪಾಯ ಕಾದಿರುವುದು ಹಿಂದುತ್ವಕ್ಕೆ ಮಾತ್ರ! ಇನ್ನಾದರೂ ಯೋಚಿಸಬೇಕಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close