ಪ್ರಚಲಿತ

ಸ್ಫೋಟಕ ಸುದ್ದಿ!! ಪ್ರಧಾನಿ ಮೋದಿಯನ್ನು ಗುರಿಯಾಗಿಸಲು ಹೊರಟಿದ್ದ ಸರ್ವೋಚ್ಛ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರ ಕುತಂತ್ರವನ್ನು ಬಯಲು ಮಾಡಿದ ಎಸ್ ಸಿಬಿಎ ಅಧ್ಯಕ್ಷ!!

ಇದ್ದಕ್ಕಿದ್ದಂತೆ ದೇಶದ ತುಂಬಾ ಗೊಂದಲ ಸೃಷ್ಟಿಸಿದ್ದು ಈ ಸರ್ವೋಚ್ಛ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರ ಧಿಢೀರ್ ಸುದ್ದಿಗೋಷ್ಟಿ! ಯಾವುದೇ ಪೂರ್ವ ಸೂಚನೆಯಿಲ್ಲದೇ, ನಾಲ್ವರು ಮುಖ್ಯ ನ್ಯಾಯಾಧೀಶರು ಇದ್ದಕ್ಕಿದ್ದಂತೆ, ಒಂದಷ್ಟು ತಿಂಗಳ ಹಿಂದಷ್ಟೇ ಸಿಜೆಐ ಗೆ ಆಗಿ ನೇಮಕ ಗೊಂಡಿದ್ದ ದೀಪಕ್ ಮಿಶ್ರಾರ ಮೇಲೆ ಆಪಾದನೆ ಹೊರಿಸಿದ್ದರು! ಇಷ್ಟೆಲ್ಲ ಆಗುತ್ತಿದ್ದಂತೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಟ್ವಿಟ್ಟರ್ ಗಳಲ್ಲಿ ಟ್ರೆಂಡ್ ಮಾಡುವಷ್ಟು ದೊಡ್ಡ ಸುದ್ದಿಯಾಗಿ ಬಿಟ್ಟಿತು ಈ ನಾಲ್ವರ ಸುದ್ದಿಗೋಷ್ಟಿ!

SC Bar association to hold a meeting over allegations made by 4 senior judges

ಆದರೆ, ಯಾವಾಗ ಈ ಅಷ್ಟೂ ಸುದ್ದಿಗಳು ಪ್ರಧಾನಿ ನರೇಂದ್ರ ಮೋದಿಯನ್ನು ಸುತ್ತುವರೆಯತೊಡಗಿದವೋ, ಆಗ ಮತ್ತೊಂದಿಷ್ಟು ಗೊಂದಲವಾಯಿತು! ಇಸ್ರೋದ ಸಾಧನೆಯನ್ನೂ ಸಂಭ್ರಮಿಸಲಾಗದಂತೆ ಕಾಂಗ್ರೆಸ್ ನ ಐಟಿ ಸೆಲ್ ಗಳು ಮೋದಿಯಿಂದ ಇಷ್ಟೆಲ್ಲ ಆಗುತ್ತಿದೆ! ಸಂವಿಧಾನ ಅಪಾಯದಲ್ಲಿದೆ ಎಂದೆಲ್ಲ ಊದತೊಡಗಿದವು! ಆದರೆ, ಸುಪ್ರೀಮ್ ಕೋರ್ಟ್ ಬಾರ್ ಅಸೋಸಿಯೇಷನ್ ನ ಅಧ್ಯಕ್ಷರು ಯಾವಾಗ ಈ ನಾಲ್ವರ ಜನ್ಮ ಜಾಲಾಡಿದರೋ,
ಇಲ್ಲಿಯ ತನಕ ಊಳಿಡುತ್ತಿದ್ದವರೆಲ್ಲ ಬಾಯಿ ಮುಚ್ಚಿ ತಣ್ಣಗಾಗಿದ್ದಾರೆ!

ಇದು ಮೋದಿ ಸರಕಾರವನ್ನು ಮೂಲೆಗುಂಪಾಗಿಸಲು ಮಾಡಿದ ಯತ್ನವಾ?!

‘ಅವರೇನಾದರೂ ನಿಜಕ್ಕೂ ಸುದ್ದಿಗೋಷ್ಟಿಗೆ ಬಂದಿದ್ದೇ ಆಗಿದ್ದರೆ, ಅವರೇನಾದರೂ ಇದಃಮಿತ್ಥಂ ಎಂದು ನಿಖರವಾದುದನ್ನು ಹೇಳಲೇಬೇಕಿತ್ತು. ಆದರೆ, ಸುಮ್ಮನೇ ಪ್ರಜೆಗಳ ಮನಸ್ಸಲ್ಲಿ ಅನುಮಾನವೊಂದನ್ನು ಹುಟ್ಟಿಸಿದರು! ಅನುಮಾನ ಹುಟ್ಟಿಸಿಬಿಟ್ಟರೆ ಜನರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಬರುವುದಿಲ್ಲ! ಬದಲಾಗಿ, ನಂಬಿಕೆ ಹೊರಟು ಹೋಗುತ್ತದೆ! ನಾನು ಯೋಚಿಸಿದ ಪ್ರಕಾರ, ಈ ಕುತಂತ್ರದ ಪೂರ್ವ ಯೋಜನೆ ಸರಿಯಾಗಿಲ್ಲವಷ್ಟೇ! ‘

‘ ಅವರೆಲ್ಲರಿಗೂ ಏನಾದರೂ ಹೇಳಲೇಬೇಕೆಂಬುದಿದ್ದಿದ್ದರೆ ಹೇಳುತ್ತಿದ್ದರು ನೇರ ನೇರವಾಗಿ! ಆದರೆ, ಒಂದಷ್ಟು ಗೊಂದಲಮಯ ಹೇಳಿಕೆಗಳನ್ನು ಹೇಳಿ ಜನರಲ್ಲಿ ಅನುಮಾನ ಮೂಡಿಸುತ್ತಿರಲಿಲ್ಲ, ಜೊತೆಗೆ ದೇಶವೇ ನಿರ್ಧರಿಸುತ್ತದೆ ಎಂದು ಜನರಿಗೆ ಹೇಗೆ ಬೇಕೋ ಹಾಗೆ ತಿಳಿದುಕೊಳ್ಳಲೆಂದು ಬಿಡುತ್ತಿರಲೂ ಇಲ್ಲ. ಇದು ನ್ಯಾಯಾಂಗ ವ್ಯವಸ್ಥೆಯ ವಿರುದ್ಧವಾ ಅಭಿಪ್ರಾಯವೊಂದನ್ನು ಹುಟ್ಟು ಹಾಕುತ್ತದೆ!”

ಇದು SCBA ಯ ಅಧ್ಯಕ್ಷರ ಹೇಳಿಕೆ! ಅಕಸ್ಮಾತ್, ಈ ನಾಲ್ವರು ಹೇಳಿದ ಹಾಗೆ ಏನಾದರೂ ಸಮಸ್ಯೆ ಇದ್ದಿದ್ದೇ ಆಗಿದ್ದರೆ, ಈ ನಾಲ್ವರ
ಹೇಳಿಕೆಗಳಿಗೆ ಅಸೋಸಿಯೇಷನ್ ಬೆಂಬಲಿಸುತ್ತಿತ್ತು. ಅಷ್ಟಲ್ಲದೇ, ಈ ನಾಲ್ವರೂ ನ್ಯಾಯಾಧೀಶರಿಗೆ ಸರಿಯಾಗಿ ತರಾಟೆ ತೆಗೆದುಕೊಳ್ಳಲಾಗಿದೆ!

ಹೇಳಲೇಬೇಕೆಂದರೆ. . .

ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಮದನ್ ಬಿ ಲೋಕೂರ್, ಕುರಿಯನ್ ಜೋಸೆಫ್, ರಂಜನ್ ಗೊಗೋಯ್, ಮತ್ತು ಚೆಲಮೇಶ್ವರ್ ಸಿಜೆಐ ದೀಪಕ್ ಮಿಶ್ರಾರನ್ನು ಖಂಡಿಸಿದ್ದಾರೆ ಸರಿ! ಅಕಸ್ಮಾತ್, ಇವರಿಗೆ ದೀಪಕ್ ರಿಂದ ಪ್ರಜಾಪ್ರಭುತ್ವಕ್ಕೆ ತೊಂದರೆಯಾಗಿದ್ದೇ ಹೌದಾಗಿದ್ದರೆ, ಅದನ್ನು ನೇರವಾಗಿ SCBA ಹತ್ತಿರ ತೆಗೆದುಕೊಂಡು ಹೋಗಬಹುದಿತ್ತಲ್ಲವಾ?! ಆಂತರಿಕವಾಗಿಯೇ ಅದನ್ನು ಬಗೆ ಹರಿಸಿಕೊಳ್ಳಬಹುದಿತ್ತು! ಅದನ್ನು ಬಿಟ್ಟು ಸಾರ್ವಜನಿಕರ ಮುಂದೆ ಇಟ್ಟಿದ್ದು ಯಾಕೆ?!

ಇದಕ್ಕಿಂತ ಹೊರತು ಪಡಿಸಿ ಹೇಳುವುದಾದರೆ, ಈ ದಂಗೆ ಎದ್ದ ನ್ಯಾಯಾಧೀಶರು ನ್ಯಾಯಾಂಗ ವ್ಯವಸ್ಥರಯನ್ನು ದೇಶವೇ ನಿರ್ಧರಿಸಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ! ಹಾಗಿದ್ದಲ್ಲಿ, ಇವರು ಯಾರು,?! ತೀರ್ಪನ್ನು ಸಾರ್ವಜನಿಕರ ಮೇರೆಗೆ ನೀಡುತ್ತಾರೆಯೇ,?! ಅಥವಾ, ನ್ಯಾಯಾಧೀಶರನ್ನು ದೇಶವೇ ನೇಮಕ ಮಾಡುತ್ತದೆಯೇ?! ಏನಾದರೂ ಇದ್ದದ್ದೇ ಆಗಿದ್ದರೆ, ನೇರಾನೇರವಾಗಿ ವಿಷಯವನ್ನು ಹೇಳಬಹುದಿತ್ತಾದರೂ, ಹೇಳದೇ, ನಿರ್ಧಾರ ಮಾಡಿ ಎಂದು ಗೊಂದಲ ಸೃಷ್ಟಿಸಿದ್ಯಾಕೆ?!

ಸುದ್ದಿಗೋಷ್ಟಿ ನಡೆದ ನಂತರ, ಚೆಲಮೇಶ್ವರ್ ರಹಸ್ಯವಾಗಿ ಡಿ.ರಾಜಾನನ್ನು ಭೇಟಿ ಮಾಡಿದ್ಯಾಕೆ?! ಅವರೇನಾದರೂ, 1.31 ಬಿಲಿಯನ್ ಭಾರತೀಯರನ್ನು ಪ್ರತಿನಿಧಿಸುತ್ತಾರೆಯೇ?!

ಈ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಯಾರು ಗೊತ್ತಾ?! ಅವರನ್ನು ಯಾಕೆ ಗುರಿಯಾಗಿಸಿ ಆರೋಪ ಮಾಡಲಾಗಿದೆ ಗೊತ್ತೇ?!

Related image

ದೀಪಕ್ ಮಿಶ್ರಾ ಸರಿಯೋ ತಪ್ಪೋ ಎಂದು ನಿರ್ಧರಿಸುವ ಬದಲು ಒಮ್ಮೆ ಕೆಳಗಿನ ವಿಷಯಗಳ ಮೇಲೆ ಕಣ್ಣಾಡಿಸಿ!

ದೀಪಕ್ ಮಿಶ್ರಾರವರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ಮಾಡಿ! ಎದ್ದು ನಿಂತು ಸಲಾಮ್ ಎನ್ನುತ್ತೀರಿ!

ಸಿಜೆಐ ದೀಪಕ್ ಮಿಶ್ರಾರ ಮಧ್ಯಸ್ಥಿಕೆ ಯಾಕೂಬ್ ಮೆಮೂನ್ ಗೆ ಗಲ್ಲಾಗುವ ಹಾಗೆ ಮಾಡಿತ್ತು!1993 ರಲ್ಲಿ ನಡೆದಿದ್ದ ಮುಂಬೈ ಸ್ಫೋಟದ ರೂವಾರಿ ಯಾಕೂಬ್ ಮೆಮೊನ್ ನ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದು ಇದೇ ದೀಪಕ್ ಮಿಶ್ರಾ! ಯಾಕೂಬ್ ಗೆ ಗಲ್ಲಾಗುವ ಹಾಗೆ ಮಾಡಿದರೆ,
ನೀನೆಷ್ಟೇ ಸುರಕ್ಷಿತವಾಗಿದ್ಧರೂ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅನಾಮಿಕರಿಂದ ಮೇಲಿಂದ ಮೇಲೆ ಕರೆ ಬಂದರೂ ಸಹ, ಯಾಕೂಬ್ ಗೆ ಗಲ್ಲಾಗುವ ಹಾಗೆ ಮಾಡಿತ್ತು!

ಇದೇ ದೀಪಕ್ ಮಿಶ್ರಾ ರಾಹುಲ್ ಗಾಂಧಿ ಹಾಗೂ ಕೇಜ್ರಿವಾಲ್ ರನ್ನು ಪರೀಕ್ಷೆಗೊಳಪಡಿಸಿದ್ದರು!

ಇದೇ ದೀಪಕ್ ಮಿಶ್ರಾ ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಬೇಕಾಗಿ ಆಜ್ಞಾಪಿಸಿದ್ದರು!

CJI ದೀಪಕ್ ಮಿಶ್ರಾ 1984 ರ ಸಿಖ್ಖರ ಗಲಭೆಯ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಿದ್ದಾರೆ!

CJI ದೀಪಕ್ ಮಿಶ್ರಾ ರಾಮ ಜನ್ಮಭೂಮಿ ವಿವಾದವನ್ನು ಬಗೆಹರಿಸುತ್ತಿದ್ದಾರೆ! ಅವರ ನೇತೃತ್ವದಲ್ಲಿಯೇ ತನಿಖೆ ನಡೆಯುತ್ತಿರುವುದು!

CJI ದೀಪಕ್ ಮಿಶ್ರಾ ಅವರೊಬ್ಬರೇ ಮೋದಿ ಸರಕಾರದಿಂದ ಆಯ್ಕೆಯಾದವರು!

Image result for cji dipak misra WITH modi

CJI ದೀಪಕ್ ಮಿಶ್ರಾ ಕಳೆದ ತಿಂಗಳಷ್ಟೇ ರಾಮ ಜನ್ಮಭೂಮಿ ತೀರ್ಪನ್ನು 2019 ಜುಲೈಗೆ ಮುಂದೂಡಿ ಎಂದಾಗ ತರಾಟೆಗೆ ತೆಗೆದುಕೊಂಡಿದ್ದರು!

ಈಗ ನಿಮಗೆ ಅರ್ಥವಾಗಬಹುದು! ಯಾಕೆ, CJI ದೀಪಕ್ ಮಿಶ್ರಾರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು!

ನಿವೃತ್ತ ನ್ಯಾಯಾಧೀಶರಾದ ಆರ್ ಎಸ್ ಸೋಧಿ, ‘ಈ ನಾಲ್ವರು ಒಂದುಗೂಡಿದ್ದಾರೆ! ಇವರ ಬಿಟ್ಟು ನ್ಯಾಯಾಲಯದಲ್ಲಿ 23 ನ್ಯಾಯಾಧೀಶರಿದ್ದಾರೆ! ಇದು ಕುತಂತ್ರ! ಈ ನಾಲ್ವರೂ ಸಹ ಸರ್ವೋಚ್ಛ ನ್ಯಾಯಾಲಯದಲ್ಲಿ ಕೂರಲು ಅರ್ಹರಲ್ಲ, ಇವರನ್ನು ಈ ಕೂಡಲೇ ಕರ್ತವ್ಯದಿಂದ ವಜಾಗೊಳಿಸಿ’ ಎಂದು ಆಗ್ರಹಿಸಿದ್ದಾರೆ!

Image result for cji dipak misra WITH modi

ಬಾರ್ ಕೌನ್ಸಿಲ್ ನ ಚೇರ್ ಮನ್ ಕೂಡ ಈ ನ್ಯಾಯಾಧೀಶರನ್ನು ತರಾಟೆಗೆ ತೆಗೆದುಕೊಂಡಿದ‌್ದಾರೆ!

“ಇಂತಹ ಸಣ್ಣ ವಿಷಯಕ್ಕೆ ಸುದ್ದಿಗೋಷ್ಟಿ ಕರೆದು ವಿವಾದ ಮಾಡಿರುವುದು ನಿಜಕ್ಕೂ ವಿಷಾದನೀಯ! ನಮಗೆ ಸಂಜೆ 5 ಕ್ಕೆ ಸಭೆಯಿದೆ ಹಾಗೂ ಈ ನಾಲ್ವರ ಜೊತೆ ನಾಳೆ ಮಾತುಕಥೆ ನಡೆಸಲಿದ್ದೇವೆ ಹಾಗೂ, ಇನ್ನು ಈ ರೀತಿಯಾದ ನಡೆಯನ್ನು ತೆಗೆದು ಕೊಳ್ಳದೇ ಇರಲು ಸೂಚನೆಯನ್ನೂ ನೀಡಲಿದ್ದೇವೆ! ‘ ಎಂದು ಬಾರ್ ಕೌನ್ಸಿಲ್ ನ ಚೇರ್ ಮನ್ ಆದ ಮನನ್ ಕುಮಾರ್ ಮಿಶ್ರಾ ಹೇಳಿದ್ದಾರೆ!

– ಪೃಥು ಅಗ್ನಿಹೋತ್ರಿ

Tags

Related Articles

Close