ಪ್ರಚಲಿತ

ಹುತಾತ್ಮ ಯೋಧರ ಕುಟುಂಬಗಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೀಡಿದ್ದಾರೆ ಬಂಪರ್ ಆಫರ್!! ಮಾನವಿಯತೆ ಮೆರೆದ ಬಿಜೆಪಿಯ ಫೈರ್ ಬ್ರಾಂಡ್!!

ಹಿಂದುತ್ವವೊಂದೇ ನನ್ನ ಸಿದ್ದಾಂತವೆಂದು ಘರ್ಜಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ತವ್ಯದ ಮೇಲಿನ ಬದ್ದತೆ, ರಾಜಕೀಯ ನಿಷ್ಠೆ ಹಾಗೂ ಧರ್ಮದ ಪರಿಪಾಲನೆಯಲ್ಲಿ ಯಶಸ್ಸನ್ನು ಸಾಧಿಸಿರುವಂತಹ ವ್ಯಕ್ತಿ ಎಂದರೆ ತಪ್ಪಾಗಲಾರದು!! ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಎಂದೇ ಪ್ರಖ್ಯಾತಿಯನ್ನು ಗಳಿಸಿರುವ ಯೋಗಿ ಆದಿತ್ಯನಾಥ್ ಅವರು ತನ್ನ ನಾಡಿನ ಜನತೆಗಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯಿಂದಾಗಿ ಜನಮನ್ನಣೆಯನ್ನು ಗಳಿಸಿದ್ದು, ಇದೀಗ ಹುತಾತ್ಮ ಯೋಧರ ಕುಟುಂಬಗಳಿಗೆ ನೆರವನ್ನು ನೀಡಲು ಮುಂದಾಗಿದ್ದಾರೆ.

ಹೌದು… ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿರುವ ಬಿಜೆಪಿ ಪಕ್ಷವು ತನ್ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಉತ್ತರ ಪ್ರದೇಶದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ಅವರನ್ನು ಆರಿಸಿರುವ ವಿಚಾರ ತಿಳಿದೇ ಇದೆ. ನೇರವಾದ ನಡೆ ನುಡಿಗಳಿಂದ ಸಾಮಾಜಿಕ ಕ್ಷೇತ್ರದಲ್ಲಿಯೂ, ಧಾರ್ಮಿಕ ಕ್ಷೇತ್ರದಲ್ಲಿಯೂ, ರಾಜಕೀಯ ಕ್ಷೇತ್ರದಲ್ಲಿಯೂ ಮಿಂಚಿನ ವೇಗದಲ್ಲಿ ಸಂಚರಿಸಿ ಉತ್ತರ ಪ್ರದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿ ಮುಖ್ಯಮಂತ್ರಿ ಗದ್ದುಗೆಯನ್ನು ಏರಿರುವ ಇವರು ಇದೀಗ ತನ್ನ ನಾಡಿನ ಜನತೆಗಾಗಿ ಸದಾ ಸೇವೆಗೆ ಸಿದ್ಧ ಎನ್ನುವ ಮಾತಿನಂತೆ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರ ಕುಟುಂಬದವರಿಗೆ ಸವಲತ್ತು ಒದಗಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಸ್ಥರಿಗೆ ನೆರವು ನೀಡಲು ಮುಂದಾಗಿದ್ದಾರೆ.

ದೇಶಕ್ಕೋಸ್ಕರ ಪ್ರಾಣವನ್ನೇ ಮುಡಿಪಾಗಿಟ್ಟ ಅದೆಷ್ಟೋ ಧೀರ ಯೋದರು ಭಾರತದ ಗಡಿ ಕಾಯುತ್ತಾ, ಹಗಲು ರಾತ್ರಿ ಎನ್ನದೆ, ಸುಡು ಬಿಸಿಲನ್ನು ಕ್ಯಾರೆ ಮಾಡದೇ, ಕೊರೆಯುವ ಚಳಿಯನ್ನೂ ಲೆಕ್ಕಿಸದೇ ನಿಸ್ವಾರ್ಥ ಸೇವೆಯಿಂದ ದೇಶವನ್ನು ಕಾಯುತ್ತಿದ್ದು, ತನ್ನ ದೇಶಕ್ಕೋಸ್ಕರ ಪ್ರಾಣವನ್ನೇ ಅರ್ಪಿಸುವ ಯೋಗಿ ಆದಿತ್ಯನಾಥರ ಕೊಡುಗೆ ನಿಜಕ್ಕೂ ಕೂಡ ಮೆಚ್ಚುವಂತದ್ದು. ಅಷ್ಟೇ ಅಲ್ಲದೇ ಅದೆಷ್ಟೋ ತಾಯಂದಿರುವ ತಮ್ಮ ಮಕ್ಕಳನ್ನು ಕಳೆದುಕೊಂಡು ಒಂದು ತುತ್ತಿನ ಅನ್ನಕ್ಕೋಸ್ಕರ ಒದ್ದಾಡುತ್ತಿರುವಾಗ ಯೋಗಿ ಆದಿತ್ಯನಾಥರ ಈ ಕೊಡುಗೆ ಗಮನಾರ್ಹವಾಗಿದೆ.

ಸಂತರಾಗಿದ್ದರೂ ಕೂಡ ಸಮಾಜದ ಬದಲಾವಣೆಗಾಗಿ ರಾಜಕೀಯದ ಹಾದಿಯನ್ನು ತುಳಿದು ದೇಶದ ಅತಿ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ದೇಶದ ರಕ್ಷಣೆಗಾಗಿ ತಮ್ಮ ಕುಟುಂಬವನ್ನು ಬಿಟ್ಟು ಹೋರಾಡುವಾಗ, ಹುತಾತ್ಮರಾಗುವ ಯೋಧರನ್ನೇ ಆಶ್ರಯಿಸಿದವರ ನೆರವಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೇ, ಹುತಾತ್ಮ ಯೋಧರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಲು ನಿರ್ಧರಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಸಶಸ್ತ್ರ ಸೇನಾ ಪಡೆಯ ಮತ್ತು ಪ್ಯಾರಾ ಮಿಲಿಟರಿ ಪಡೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಕುಟುಂಬದವರಿಗೆ ಸಹಾಯ ನೀಡಲು ನಿರ್ಧರಿಸಿದ್ದಾರೆ. ಈ ಮೂಲಕ ದೇಶಕ್ಕಾಗಿ ಹೋರಾಡಿದ ಯೋದರು ಹುತಾತ್ಮರಾದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಸ್ಥರಿಗೆ ನೆರವು ನೀಡಲು ಮುಂದಾಗಿದ್ದಾರೆ.

ಈ ಹಿಂದೆ ಯೋಗಿ ಆದಿತ್ಯನಾಥ್ ಅವರು, ಉತ್ತರಪ್ರದೇಶದಲ್ಲಿ ಕಬ್ಬು ತಯಾರಿಸುವ ರೈತರಿಗೆ ಸರಿಯಾಗಿ ಮಾರುಕಟ್ಟೆಯ ದರ ದೊರೆಯದೇ ಇದ್ದಾಗ ರೈತರ ಪರ ನಿಂತು ಸಮಸ್ಯೆಗೆ ಪರಿಹಾರ ನೀಡಿದ್ದರಲ್ಲದೇ, ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಮಾಫಿಯಾದ ಬಗ್ಗೆ ತೀವ್ರವಾಗಿ ಹೋರಾಡಿದಂತಹ ಏಕೈಕ ವ್ಯಕ್ತಿಯಾಗಿ ಮಿಂಚಿದ್ದಾರೆ. ಆದರೆ ಇದೀಗ ದೇಶ ಸೇವೆಗೆ ತಮ್ಮನ್ನೇ ತಾವೇ ಮುಡಿಪಾಗಿಸಿಕೊಂಡ ಅದೆಷ್ಟೋ ಸೈನಿಕರು ಕಾರ್ಯನಿರ್ವಹಿಸುತ್ತಿರುವ ವೇಳೆ ಹುತಾತ್ಮರಾದರೆ ಅಂತಹ ಯೋಧರ ಕುಟುಂಬದವರಿಗೆ ಸರ್ಕಾರಿ ನೌಕರಿ ನೀಡಲು ಯೋಗಿ ಆದಿತ್ಯನಾಥ್ ನಿರ್ಧರಿಸಿರುವುದು ಹೆಮ್ಮೆಯ ವಿಚಾರವಾಗಿದೆ.

ಈಗಾಗಲೇ ಸಹೃದಯಿ ಸಂತ ಎನ್ನುವ ಖ್ಯಾತಿಯನ್ನು ಗಳಿಸಿರುವ ಇವರು ಪೂರ್ವ ಉತ್ತರ ಪ್ರದೇಶದಲ್ಲಿ ಯೋಗಿಯ ಸಾರಥ್ಯದ 10ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರಲ್ಲದೇ ಕಡಿಮೆ ಶುಲ್ಕದಲ್ಲಿ ಅದೆಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಯೋಗಿಯ ಸಾರಥ್ಯದಲ್ಲಿ ಅದೆಷ್ಟೋ ಆಸ್ಪತ್ರೆಗಳು ಬಡವರಿಗೆ ಉಚಿತ ಸೇವೆಯನ್ನು ಕೂಡ ನೀಡುತ್ತಿದೆ.

ಇನ್ನು, ಪ್ರತಿದಿನ ಗೋರಖ್ ಪುರದ ಸಾವಿರಾರು ಬಡ ನಾಗರಿಕರಿಗೆ ಉಚಿತ ಆಹಾರವನ್ನು ಒದಗಿಸಲಾಗುತ್ತಿದ್ದು, ಪ್ರತಿದಿನವೂ ನಡೆಯುವ ‘ಜನತಾ ದರ್ಬಾರ್’ ನಲ್ಲಿ ಭಾಗವಹಿಸುವ ಯೋಗಿ ಜನರ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರವನ್ನೂ ಒದಗಿಸಿಕೊಡುತ್ತಾರೆ. ಆದರೆ ಇದೀಗ ಉತ್ತರ ಪ್ರದೇಶ ಮೂಲದ ಸಶಸ್ತ್ರ ಸೇನಾ ಪಡೆಯ ಮತ್ತು ಪ್ಯಾರಾ ಮಿಲಿಟರಿ ಪಡೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಹುತಾತ್ಮರಾದ ಯೋಧರ ಕುಟುಂಬದವರಿಗೆ ಸಹಾಯ ಹಸ್ತ ನೀಡಲು ನಿರ್ಧರಿಸಿದ್ದಾರಲ್ಲದೇ, ಈ ಮೂಲಕ ದೇಶಕ್ಕಾಗಿ ಹೋರಾಡಿದ ಯೋಧರು ಹುತಾತ್ಮರಾದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಸ್ಥರಿಗೆ ನೆರವನ್ನು ನೀಡಿದ್ದಾರೆ.

“ಇದು ಯೋಧರಿಗೆ ನಾವು ಸಲ್ಲಿಸುತ್ತಿರುವ ಗೌರವ ಸಮರ್ಪಣೆಯಾಗಿದ್ದು, ಇದರಿಂದ ಯೋಧರ ಕುಟುಂಬಕ್ಕೆ ನೆರವಾಗುತ್ತದೆ. ಅಷ್ಟೇ ಅಲ್ಲದೇ ಈ ಒಂದು ವಿಚಾರವು ಯೋಧರಿಗೆ ಸ್ಫೂರ್ತಿ ನೀಡಿದಂತಾಗುತ್ತದೆಯಲ್ಲದೇ, ಹೊಸದಾಗಿ ಸೇನೆ ಸೇರುವವರಿಗೆ ಪ್ರೇರಣೆ ಯೂ ದೊರೆಯುತ್ತದೆ. ಆದ್ದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ” ಎಂದು ಉತ್ತರ ಪ್ರದೇಶದ ರಾಜ್ಯ ಖಾತೆ ಸಚಿವ ಶ್ರೀಕಾಂತ ಶರ್ಮಾ ತಿಳಿಸಿದ್ದಾರೆ.

– ಅಲೋಖಾ

Tags

Related Articles

Close