ಪ್ರಚಲಿತ

SDPI ಬೆಂಬಲದೊಂದಿಗೆ ಮುಂದುವರೆಯುತ್ತಿರುವ ಪಕ್ಷ ಕಾಂಗ್ರೆಸ್: ಅಮಿತ್ ಶಾ ಕಿಡಿ

ದೇಶದ ಸಂವಿಧಾನವನ್ನು ಉಲ್ಲಂಘನೆ ಮಾಡುವ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾಗ್ದಾಳಿ‌ ನಡೆಸಿದ್ದಾರೆ.

ಕುಚುಂಬವಾದವನ್ನೇ ಮುಖ್ಯವಾಗಿಸಿಕೊಂಡ ಕಾಂಗ್ರೆಸ್ ಪಕ್ಷ ಬೇಕೇ? ಅಥವಾ ದೇಶದ ಪರಂಪರೆ ಕಾಪಾಡುವ ಬಿಜೆಪಿ ಬೇಕೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳ ಕಾಲ ದೇಶದ ಅಭಿವೃದ್ಧಿ ನಡೆಸಲು ಪ್ರೊ ದಾನಿ ಮೋದಿ ಅವರಿಗೆ ಅವಕಾಶ ನೀಡಿದ್ದೀರಿ ಎಂದು ಹೇಳಿದ್ದಾರೆ. ಅಲ್ಲದೆ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಬಗೆಗೂ ಅವರು ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ.

ಕಾಂಗ್ರೆಸ್ ಪಕ್ಷ ವಿಶ್ವದ ಬಹು ಕೋಟಿ ಜನರ ಅಯೋಧ್ಯೆಯ ಶ್ರೀರಾಮ ಮಂದಿರದ ವಿಷಯದಲ್ಲಿ ವಿಳಂಬ ನೀತಿಯ ಮೂಲಕ ರಾಜಕೀಯ ಮಾಡಿತು. ಆದರೆ ದೇಶದಲ್ಲಿ ಪ್ರಧಾನಿ ಮೋದಿ ಅವರು ಸರ್ಕಾರ ರಚನೆ ಮಾಡಿದ ಬಳಿಕ ಅಯೋಧ್ಯೆಯ ಪ್ರಕರಣವನ್ನು ನ್ಯಾಯಾಲಯದಲ್ಲಿ ಗೆದ್ದು, ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ಕೊನೆಗೆ ಪ್ರಾಣ ಪ್ರತಿಷ್ಟೆ ಸಹ ಮಾಡಿದರು ಎಂದಿದ್ದಾರೆ.

ಇನ್ನು ಈ ರಾಷ್ಟ್ರದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮೊದಲಾಗಿ ಹಲವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರೆಲ್ಲರೂ ಈ ಕಾರ್ಯಕ್ರಮವನ್ನು ತಿರಸ್ಕರಿಸಿದರು. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಈ ಪುಣ್ಯ ಕಾರ್ಯಕ್ರಮ ತಿರಸ್ಕರಿಸಿದ್ದು, ಇಂತಹವರಿಗೆ ನಾವು ಮತ ನೀಡಬೇಕೇ ಎಂದು ಕೇಳಿದ್ದಾರೆ.

ಔರಂಗಜೇಬ ಕಾಶಿಯ ವಿಶ್ವನಾಥನ ಮಂದಿರವನ್ನು ಹಾಳು ಮಾಡಿದ್ದ. ಕಾಶಿ ಕಾರಿಡಾರ್, ಸೋಮನಾಥ ಮಂದಿರ ಮೊದಲಾದ ಕೆಲಸಗಳನ್ನು ಪ್ರಧಾನಿ ಮೋದಿ ಅವರು ಸಾಧಿಸಿ ತೋರಿಸಿದ್ದಾರೆ. ಆದರೆ ತುಷ್ಟೀಕರಣದ ಪರಾಕಾಷ್ಟೆಯಲ್ಲಿ ಕಾಂಗ್ರೆಸ್ ಪಕ್ಷ ತಮ್ಮ ಆಡಳಿತಾವಧಿಯಲ್ಲಿ ಈ ಎಲ್ಲಾ ವಿಷಯಗಳನ್ನು ಮೂಲೆ ಗುಂಪು ಮಾಡಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ನಮ್ಮದು. ಆದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮಗೆ ಕಾಶ್ಮೀರದ ಜೊತೆಗೆ ಏನು ಸಂಬಂಧ ಎಂದು ಕೇಳುತ್ತಾರೆ. ಆದರೆ ಭಾರತದ ಜನರು ನಮ್ಮ ಕಾಶ್ಮೀರಕ್ಕಾಗಿ ನಾವು ಪ್ರಾಣವನ್ನು ಕೊಡಲೂ ಸಿದ್ಧ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷ ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರದ್ದು ಮಾಡಿದೆ. ಜೊತೆಗೆ ಅಲ್ಲಿನ ಬಹುದೊಡ್ಡ ಸಮಸ್ಯೆಯಾದ ಭಯೋತ್ಪಾದನೆ, ಆತಂಕವಾದ ಸಹ ಈಗ ಇಲ್ಲವಾಗಿದೆ ಎಂದು ಅವರು ಹೇಳಿದ್ದಾರೆ.

ಆ ಸಂದರ್ಭದಲ್ಲಿ ರಾಹುಲ್ ಬಾಬಾ ಸಂಸತ್ತಿನಲ್ಲಿ ಮಾತನಾಡಿದ್ದು, ಆರ್ಟಿಕಲ್ 370 ನೇ ವಿಧಿ ತೆಗೆದು ಹಾಕಿದರೆ ಅಲ್ಲಿ ರಕ್ತದೋಕುಳಿ ನಡೆಯುತ್ತದೆ ಎಂದು ಹೇಳಿದ್ದರು. ಆದರೆ ಅದಾಗಿ ಐದು ವರ್ಷಗಳಾದರೂ ಈ ವರೆಗೆ ಯಾವುದೇ ಹಿಂಸಾತ್ಮಕ ಸಮಸ್ಯೆ ಆಗಿಲ್ಲ. ಪ್ರಧಾನಿ ಮೋದಿ ಅವರು ದೇಶಕ್ಕೆ ಕಂಟಕವಾಗಿದ್ದ ಭಯೋತ‌್ಪಾಪಾದನೆಗೆ ಮುಕ್ತಿ ನೀಡಿದ್ದಾರೆ. ಪಿ ಎಫ್ ಐ ನಿಷೇಧ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗೆಯೇ ಕಾಂಗ್ರೆಸ್ ಪಕ್ಷ ಎಸ್ ಡಿ ಪಿ ಐ ಬೆಂಬಲದ ಜೊತೆಗೆ ಮುಂದುವರಿಯುತ್ತಿದೆ ಎಂದು ಅವರು ಟೀಕೆ ಮಾಡಿದ್ದಾರೆ.

Tags

Related Articles

Close