ಪ್ರಚಲಿತ

ರಮ್ಯಾಳಿಗೆ ಬಹಿರಂಗ ಸವಾಲು! ನಿನ್ನಲ್ಲಿ ತಾಕತಿದ್ದರೆ ನನ್ನ ಮೇಲೆ ಕೇಸು ಹಾಕಿ ಬಂಧಿಸುವಂತೆ ಟ್ವಿಟ್ಟರ್ ನಲ್ಲಿ ರಮ್ಯನಿಗೆ ಚಾಲೆಂಜ್ ಮಾಡಿದವರು ಯಾರು ಗೊತ್ತೇ ?

ರಾಜಕೀಯ ಲಾಭಕ್ಕಾಗಿ ಯಾವ ರೀತಿಯ ನಾಟಕ ಆಡಬಹುದು ಎಂಬುದು ಕಾಂಗ್ರೆಸ್ ನಾಯಕರಿಗಿಂತ ಉತ್ತಮವಾಗಿ ಬಲ್ಲವರು ಯಾರೂ ಇಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಡ್ರಾಮಾ ಶುರುಮಾಡಿಕೊಂಡಿದ್ದಾರೆ.

ತಾನು ಎಲ್ಲರಿಗಿಂತ ಭಿನ್ನವಾಗಿರಬೇಕೆಂಬ ಚಪಲ ಹೊಂದಿರುವ ಮಾದಕ ನಟಿ‌ ಕಮ್ ಕಾಂಗ್ರೆಸ್ ಪಕ್ಷದ ನಾಯಕಿ ಎಂದೆನಿಸಿಕೊಳ್ಳಲು ಹೊರಡಿರುವ ರಮ್ಯಾ ಸದ್ಯ ಸಾಮಾಜಿಕ‌ ಜಾಲತಾಣಗಳಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿದ್ದಾರೆ. ತನ್ನ ಹೆಸರು ಚಾಲ್ತಿಯಲ್ಲಿರಬೇಕೆಂಬ ಆಲೋಚನೆ ಹೊಂದಿರುವ ರಮ್ಯಾ ಪದೇ ಪದೇ ವಿವಾದಾತ್ಮಕವಾಗಿ ನಡೆದುಕೊಳ್ಳುತ್ತಿದ್ದಾರೆ..!

ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಜವಾಬ್ದಾರಿ ಹೊಂದಿರುವ ರಮ್ಯಾ ತನ್ನ ತಂಡದ ಕಾರ್ಯಕರ್ತರಿಗೆ ‘ಫೇಕ್ ಅಕೌಂಟ್’ ಮಾಡಲು ಸೂಚಿಸಿದ್ದಾಳೆ. ಸಾಮಾಜಿಕ‌ ಜಾಲತಾಣಗಳಲ್ಲೇ ಸದಾ ಸುದ್ದಿ ಮಾಡುತ್ತಿರುವ ರಮ್ಯಾ ಇದೀಗ ಮತ್ತೆ ತನ್ನ ಕಪಟ ಬುದ್ದಿಯನ್ನು ತೋರಿಸಿದ್ದಾರೆ. ರಮ್ಯಾ ತನ್ನ ಸಾಮಾಜಿಕ‌ ಜಾಲತಾಣದ ಕಾರ್ಯಕರ್ತರ ಜೊತೆ ಮಾತನಾಡುತ್ತಾ ‘ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಫೇಸ್‌ಬುಕ್‌ ಅಥವಾ ಟ್ವಿಟರ್ ಖಾತೆ ಹೊಂದಿರುತ್ತೀರಿ.ಆದರೆ ಎಲ್ಲರೂ ೨-೩ ಫೇಕ್ ಅಕೌಂಟ್ ಹೊಂದಿರಬೇಕೆಂದು ಸೂಚಿಸಿದ್ದಾರೆ.’ ಈ ಬಗ್ಗೆ ಸಭೆಯಲ್ಲಿ ಒಬ್ಬರು ಇದು ತಪ್ಪಲ್ಲವೇ ಎಂದು ಪ್ರಶ್ನಿಸಿದಾಗ , ‘ಹೇಗೆ ತಪ್ಪಾಗುತ್ತದೆ,ನಾನೂ ಕೂಡ ಈ ತರಹದ ಫೇಕ್ ಅಕೌಂಟ್ ಹೊಂದಿದ್ದೇನೆ,ಇದರಿಂದ ನಮ್ಮ ಪಕ್ಷದ ಪ್ರಚಾರವನ್ನೂ ಮಾಡಬಹುದು, ಬೇರೆಯವರ ಬಗ್ಗೆ ಕೀಳಾಗಿಯೂ ಮಾತನಾಡಬಹುದು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಉಪಾಯ ನೀಡಿದ್ದಾರೆ.ರಮ್ಯಾಳ ಈ ಹೇಳಿಕೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾಳ ಬಗ್ಗೆ ಟೀಕೆಗಳ ಪ್ರಹಾರವೇ ಆರಂಭವಾಗಿತ್ತು.

ರಮ್ಯಾಳ ಈ ವೀಡಿಯೋ ವನ್ನು ಸ್ವತಃ ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ‘ಪೋಸ್ಟ್‌ ಕಾರ್ಡ್’ ಕಛೇರಿಗೆ ಕರೆ ಮಾಡಿ ವಿಷಯ ತಿಳಿಸಿ ವೀಡಿಯೋ ಕಳುಹಿಸಿದ್ದಾರೆ.

ಇದನ್ನು ಟ್ವಿಟರ್ ನಲ್ಲಿ ಹಾಕಿದ ಮಹೇಶ್ ವಿಕ್ರಮ್ ಹೆಗ್ಡೆ ರಮ್ಯಾಳ ಈ ವೀಡಿಯೋ ವನ್ನು ವೈರಲ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವೀಡಿಯೋ ವೈರಲ್ ಆಗುತ್ತಿದ್ದಂತೆ ಮುಜುಗರಕ್ಕೀಡಾದ ರಮ್ಯಾ ‘ಇದು ಕೇವಲ ಯಾರೋ ಎಡಿಟ್ ಮಾಡಿರುವ ವೀಡಿಯೋ, ಇದನ್ನು ವೈರಲ್ ಮಾಡಿ ಖುಷಿಪಡುವವರು ಪಡಲಿ’ ಎಂದು ಹೇಳಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದರು.

ನಿನ್ನೆ ತಾನೇ ಬಹಿರಂಗವಾಗಿದ್ದ ರಮ್ಯಾಳ ಹೊಸ ಅವತಾರ ದೇಶಾದ್ಯಂತ ಸುದ್ಧಿ ಮಾಡಿತ್ತು. ನಕಲಿ ಮುಖವನ್ನೇ ಹೊತ್ತುಕೊಂಡಿದ್ದ ರಮ್ಯಾ ತನ್ನ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಕಾರ್ಯಗಾರದಲ್ಲಿ ಕಾರ್ಯಕರ್ತರಿಗೆ ನಕಲಿ ಖಾತೆಗಳನ್ನು ಸೃಷ್ಟಿಸುವುದು ಹೇಗೆ ಎಂಬ ಮಾಹಿತಿಯನ್ನು ನೀಡಿದ್ದ ವೀಡಿಯೋ ವೈರಲ್ ಆಗಿತ್ತು. ಇದು ರಮ್ಯಾಳಿಗೆ ಭಾರೀ ಮುಜುಗರವನ್ನೇ ತಂದಿಟ್ಟಿತ್ತು. ಸ್ವತಃ ಕಾಂಗ್ರೆಸ್ ನಾಯಕರೇ ರಮ್ಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದು ರಮ್ಯಾಗೆ ಮತ್ತಷ್ಟು ಸಂಕಷ್ಟವನ್ನು ತಂದಿಟ್ಟಿತ್ತು.

ಮೊದಲು ನ್ಯೂಸ್ ಮಾಡಿದ್ದು ನಾವೇ…

ಕಾಂಗ್ರೆಸ್ ಕಾರ್ಯಕರ್ತನೊಬ್ಬ ರಮ್ಯಾಳ ಈ ವೀಡಿಯೋವನ್ನು ಪೋಸ್ಟ್ ಕಾರ್ಡ್ ಮಾಧ್ಯಮ ಸಂಸ್ಥೆಗೆ ನೀಡಿ ಬಹಿರಂಗಪಡಿಸಲು ಹೇಳಿದ್ದು, ಪೋಸ್ಟ್ ಕಾರ್ಡ್ ಅದನ್ನು ಪರಿಶೀಲಿಸಿಯೇ ಬಹಿರಂಗಪಡಿಸಿದೆ. ಮಾತ್ರವಲ್ಲದೆ ಇಂಗ್ಲಿಷ್‍ನ ಈ ವಿಷಯಕ್ಕೆ ಸಂಬಂಧಿಸಿದ ಸುದ್ಧಿಯನ್ನು ಮಹೇಶ್ ವಿಕ್ರಮ್ ಹೆಗ್ಡೆಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಳ್ಳುತ್ತಾರೆ. ಇದನ್ನು ರೀಟ್ವೀಟ್ ಮಾಡಿದ ಮಾದಕ ನಟಿ “ತಮಗೆ ಬೇಕಾದ ಹಾಗೆ ಎಡಿಟ್ ಮಾಡಲಾಗಿದೆ, ಎಂಜಾಯ್ ಮಾಡಿ” ಎಂದು ಟ್ವೀಟ್ ಮಾಡಿದ್ದಾಳೆ. ಈ ನ್ಯೂಸ್ ಶುದ್ಧ ಸುಳ್ಳು, ಇದರಲ್ಲಿ ಯಾವುದೇ ಪುರಾವೆ ಇಲ್ಲ. ತಮಗೆ ಬೇಕಾದ ಹಾಗೆ ಸಂಪಾದಿಸಿಕೊಂಡಿದ್ದಾರೆ ಎಂದು ರಮ್ಯಾ ಆರೋಪಿಸುತ್ತಾಳೆ.

 

ಓಪನ್ ಛಾಲೆಂಜ್ ಹಾಕಿದ ಮಹೇಶ್ ವಿಕ್ರಮ್ ಹೆಗ್ಡೆ…

ರಮ್ಯಾ ಟ್ವೀಟ್‍ಗೆ ಮರು ಟ್ವೀಟ್ ಮಾಡಿದ ಮಹೇಶ್ ವಿಕ್ರಮ್ ಹೆಗ್ಡೆಯವರು ರಮ್ಯಾಗೆ ಓಪನ್ ಛಾಲೆಂಜ್ ಹಾಕಿದ್ದಾರೆ. “ಓಪನ್ ಛಾಲೆಂಜ್, ಇಫ್ ಇಟ್ ಇಸ್ ಎ ಫೇಕ್ ವನ್, ವೈ ಡೋಂಟ್ ಯೂ ಫೈಲ್ ಎ ಕೇಸ್ ಅಗೆಯಿನ್ಸ್ಟ್ ಮಿ? ಐ ಆಮ್ ವೈಟಿಂಗ್…” ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.

“ಬಹಿರಂಗ ಸವಾಲು ಹಾಕುತ್ತೇನೆ, ಒಂದು ವೇಳೆ ಇದು ನಕಲಿ ಆಗಿದ್ದರೆ ನೀವು ಯಾಕೆ ನನ್ನ ವಿರುದ್ಧ ಕೇಸು ದಾಖಲಿಸಿಲ್ಲ. ನಾನೂ ಕಾಯುತ್ತಿದ್ದೇನೆ…” ಎಂದು ರಮ್ಯಾಳಿಗೆ ಮರು ಉತ್ತರ ನೀಡಿದ್ದರೆ.

ನಾಪತ್ತೆಯಾದ ರಮ್ಯಾ..!

ಆವರೆಗೂ ಸಾಮಾಜಿಕ ಜಾಲತಾಣದಲ್ಲಿ ತಾನೇ ಎಲ್ಲ ಎಂಬಂತೆ ಮೆರೆಯುತ್ತಿದ್ದ ರಮ್ಯಾ ಅದ್ಯಾವಾಗ ಮಹೇಶ್ ವಿಕ್ರಮ್ ಹೆಗ್ಡೆಯವರು ಟ್ವೀಟ್ ಮಾಡಿದ್ದರೋ ಆ ಸಮಯದಿಂದ ಟ್ವಿಟ್ಟರ್‍ನಿಂದ ನಾಪತ್ತೆಯಾಗಿದ್ದಾಳೆ. ಒಂದೊಮ್ಮೆ ಮಹೇಶ್ ವಿಕ್ರಮ್ ಹೆಗ್ಡೆಯವರು ಬಿತ್ತರಿಸಿದ್ದ ಈ ಸುದ್ಧಿ ಹಾಗೂ ವೀಡಿಯೋ ಸುಳ್ಳು ಎಂದು ಆಗಿದ್ದಿದ್ದರೆ ಪ್ರಕರಣವನ್ನು ದಾಖಲಿಸಿ ಎದುರಿಸಬಹುದಿತ್ತು. ಆದರೆ ರಮ್ಯಾ ಕೇವಲ ಟ್ವಿಟ್ಟರ್‍ನಲ್ಲಿ ಬೊಬ್ಬೆ ಹೊಡೆದು, ಎಂಜಾಯ್ ಮಾಡಿ ಎಂದು ಪರಾರಿಯಾಗಿದ್ದಾಳೆ. ಪ್ರಕರಣ ದಾಖಲಿಸಿದರೆ ಎಲ್ಲಿ ತನ್ನ ಮಾನ ಮರ್ಯಾದೆ ಹರಾಜಾಗುತ್ತೋ ಎಂಬ ಭಯದಿಂದ ಬಿಲದಲ್ಲಿ ಅಡಗಿ ಕುಳಿತ ಇಲಿಯಂತೆ ಮನೆಯಲ್ಲೇ ಕುಳಿತುಕೊಂಡಿದ್ದಾರೆ.

ಮಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಈ ಮಾದಕ ನಟಿಗೆ ಇನ್ನು ಸಾಮಾಜಿಕ ಜಾಲತಾಣದ ದಿಗ್ಗಜರನ್ನು ಬೀಟ್ ಮಾಡುವುದು ಸಾಧ್ಯವೇ.
ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನೇ ಸೃಷ್ಟಿಸಿ ರಾಹುಲ್ ಗಾಂಧಿಯನ್ನು ಹೀರೋ ಮಾಡಲು ಹೋಗಿ ಪೇಚಿಗೆ ಸಿಲುಕಿಕೊಂಡು ಬುದ್ಧಿ ಬಾರದ ಈಕೆ ಮತ್ತೆ ತನ್ನ ಕುತಂತ್ರಿ ಬುದ್ಧಿಯನ್ನು ತೋರಿಸಿದ್ದು ಮಾತ್ರ ವಿಪರ್ಯಾಸ…

  • Sunil Arjun
Tags

Related Articles

Close