ಪ್ರಚಲಿತ

ಆಸ್ಟ್ರೇಲಿಯಾದಲ್ಲೂ ಮಾರ್ಧನಿಸಿತು ಹಿಂದೂ ಶಕ್ತಿ!!! 1,60,000 ಡಾಲರ್ ಹಣವನ್ನು ವಿಕ್ಟೋರಿಯನ್ ಸರ್ಕಾರ ಬಿಡುಗಡೆಗೊಳಿಸಿದ್ದೇಕೆ?!

ಹಿಂದೂ ಧರ್ಮ ಭಾರತದ ಪ್ರಾಚೀನ ಧರ್ಮವಾಗಿದ್ದು ಇದನ್ನು ಅನುಸರಿಸುವವರು ವಿಶಾಲ ಮನೋಭಾವವನ್ನು, ಕ್ಷಮಾಗುಣವನ್ನೂ, ಶೃದ್ಧೆ, ತನ್ಮಯತೆಗಳನ್ನು ಹೊಂದಿರಬೇಕೆಂದು ಬೋಧಿಸುತ್ತದೆ. ಕೆಲವರ ದೃಷ್ಟಿಯಲ್ಲಿ ಇದೊಂದು ತತ್ವಜ್ಞಾನವೂ ಹೌದು. ಆದರೆ ವಿದೇಶಿಗರೇ ಹಿಂದೂ ಧರ್ಮಕ್ಕೆ ಆಕರ್ಷಿತರಾಗುತ್ತಿದ್ದು, ಹಿಂದೂ ಧರ್ಮದ ಆಚಾರ ವಿಚಾರಗಳೊಂದಿಗೆ ಸನಾತನ ಧರ್ಮವನ್ನು ಅಪ್ಪುತ್ತಿರುವವರ ಸಾಲಿಗೆ ಇದೀಗ ಆಸ್ಟ್ರೇಲಿಯಾ ಕೂಡ ಸೇರುತ್ತಿದೆ ಎಂದರೆ ನಂಬ್ತೀರಾ??

ಶೇಕಡಾ 64ರಷ್ಟು ಕ್ರಿಶ್ಚಿಯನ್ನರೇ ತುಂಬಿ ತುಳುಕಾಡುತ್ತಿರುವ ಆಸ್ಟ್ರೇಲಿಯಾದಲ್ಲಿ ಹಿಂದೂ ಧರ್ಮದ ರಣಕಹಳೆ ಮೊಳಗಿದೆ ಅಂದರೆ ಅದು ನಿಜಕ್ಕೂ ಕೂಡ ಅಚ್ಚರಿಯ ಸಂಗತಿ. ಯಾಕೆಂದರೆ ಹಿಂದೂ ರಾಷ್ಟ್ರವೇ ಅಲ್ಲದ ಈ ಬೃಹತ್ ರಾಷ್ಟ್ರದಲ್ಲಿ ಹಿಂದೂ ಧರ್ಮದ ದೇವರುಗಳಿಗೆ ಅಲ್ಲಿನ ಸರ್ಕಾರವೇ ಮಾರು ಹೋಗಿದೆ ಎಂದರೆ ಅದು ನಂಬಲಸಾಧ್ಯ!!

ಈಗಾಗಲೇ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಯ ಹಿತ ದೃಷ್ಟಿಯಿಂದ ವಿದೇಶಿ ಪ್ರವಾಸವನ್ನು ಕೈಗೊಳ್ಳುತ್ತಿದ್ದು, ಈ ವೇಳೆ ಅಲ್ಲಿನ ಅಧ್ಯಕ್ಷರಿಗೆ ಭಗವದ್ಗೀತೆಯನ್ನು ನೀಡುವ ಮೂಲಕ ತಮ್ಮ ಸಂಸ್ಕøತಿಯನ್ನು ಎತ್ತಿ ಹಿಡಿಯುತ್ತಿದ್ದರೆ ಇತ್ತ ಅದೆಷ್ಟೋ ಮಂದಿ ವಿದೇಶಿಗರು ಭಾರತೀಯ ಸಂಸ್ಕøತಿಗೆ ಮಾರು ಹೋಗಿ ಸನಾತನ ಧರ್ಮವನ್ನು ಅಪ್ಪಿ ಹಿಡಿಯುತ್ತಿದ್ದು, ಇದೀಗ ಆಸ್ಟ್ರೇಲಿಯಾದಲ್ಲಿ ಹಿಂದೂ ಧರ್ಮದ ದೇವರುಗಳಿಗೆ ಸರ್ಕಾರವೂ ಹಣ ನೀಡುತ್ತಿರುವುದು, ಹಿಂದು ಧರ್ಮಕ್ಕೆ ಹೊಸ ಚೈತನ್ಯ ಮೂಡಿದಂತಾಗಿದೆ.

ಮೋದಿ ಅವರು 2015ರಲ್ಲಿ ಮೊದಲ ಬಾರಿ ಭೇಟಿ ನೀಡಿದ್ದಾಗ ಯುಎಇ ಸರಕಾರ ಅಬುಧಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡುವುದಾಗಿ ಘೋಷಿಸಿತ್ತು. ಅದರಂತೆಯೇ ಇತ್ತೀಚೆಗಷ್ಟೆ ಬೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಶ್ಚಿಮ ಏಷ್ಯಾ ಪ್ರವಾಸದ ವೇಳೆ ಅಬುಧಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಆದರೆ ಮತ್ತೊಂದು ಬಾರಿ ಹಿಂದು ಧರ್ಮದ ವಸುದೈವ ಕುಟುಂಬದ ತತ್ವ ಇದೀಗ ಸಾಕಾರವಾಗುತ್ತಿದ್ದು ಆಸ್ಟ್ರೇಲಿಯಾದ ವಿಕ್ಟೋರಿಯನ್ ಸರ್ಕಾರ ಶಿವ ವಿಷ್ಣು ದೇವಾಲಯ ನಿರ್ಮಿಸಲು 160,000 ಡಾಲರ್ ಹಣವನ್ನು ಸಹಾಯಧನ ನೀಡಿದೆ. ಅಷ್ಟೇ ಅಲ್ಲದೇ, ವಿಕ್ಟೋರಿಯಾದಲ್ಲಿರುವ ಹಿಂದೂ ಸೊಸೈಟಿಯ ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ಮತ್ತು ಶಿವ ವಿಷ್ಣು ದೇವಾಲಯದ ಅಭಿವೃದ್ಧಿಗೆ ವಿಕ್ಟೋರಿಯನ್ ಸರ್ಕಾರ ಹಣ ನೀಡುವುದಾಗಿ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೇ, 1994ರಲ್ಲಿ ಆರಂಭಿಸಲಾಗಿದ್ದ ಶಿವ ಮತ್ತು ವಿಷ್ಣು ದೇವಾಲಯ ಕಾಮಗಾರಿಗೆ ಹಣ ನೀಡಲು ವಿಕ್ಟೋರಿಯನ್ ಸರ್ಕಾರ ನಿರ್ಧರಿಸಿರುವುದೇ ಹೆಮ್ಮೆಯ ವಿಚಾರವಾಗಿದೆ.

ಈಗಾಗಲೇ ರಷ್ಯನ್ ಮಹಿಳೆಯೋರ್ವರು ಚರ್ಚ್‍ನಲ್ಲಿ ಹಿಂದೂ ಸಂಪ್ರದಾಯಕ್ಕೆ ಸಂಬಂಧಿಸಿದ ಓಂ ನಮಃ ಶಿವಾಯ ಮತ್ತು ಓಂ ಗನ್ ಗಣಪತಿಯಿ ನಮಃ. ಎನ್ನುವ ಮಂತ್ರವನ್ನು ಹಾಡಿನ ಶೈಲಿಯಲ್ಲಿ ಹಾಡಿ ದೊಡ್ಡ ಮಟ್ಟದಲ್ಲಿ ಜನರನ್ನು ತನ್ನೆಡೆಗೆ ಸೆಳೆದಿದ್ದರು. ರಷ್ಯನ್ ಚರ್ಚ್‍ನಲ್ಲಿ ಯಾವಾಗ ಈ ಮಹಿಳೆ ಓಂ ನಮಃ ಶಿವಾಯ ಮತ್ತು ಓಂ ಗನ್ ಗಣಪತಿಯಿ ನಮಃ ಎನ್ನುವ ಪ್ರಾರ್ಥನೆಯನ್ನು ಹಾಡಲು ಶುರು ಮಾಡಿದ್ರೋ ಈಡೀ ಚರ್ಚ್‍ನಲ್ಲಿದ್ದ ಜನರು ಆಕೆಯ ಧ್ವನಿಗೆ ಧ್ವನಿಯಾಗಿದ್ದಲ್ಲದೇ ಚಪ್ಪಾಳೆ ಸುರಿಮಳೆಯನ್ನೇ ಹರಿಸಿ ಆಕೆಯನ್ನು ಪೆÇ್ರೀತ್ಸಾಹಿಸಿದ್ದರು. ಪ್ರಾಯಶಃ ಹಿಂದೂ ಪ್ರಾರ್ಥನೆಯನ್ನು ಚರ್ಚ್‍ನಲ್ಲಿ ಹಾಡಿದ್ದು ಇದೇ ಮೊದಲು ಎಂದೆನಿಸುತ್ತೆ.

ಈ ಒಂದು ಹಿಂದೂ ಪ್ರಾರ್ಥನೆಯನ್ನು ವಿದೇಶಿಯರು ಹಾಡಿರುವುದು ಕೇಳಿದರೆ “ವಸುಸೈವ ಕುಟುಂಬಕಂ” ಅಂದರೆ ವಿಶ್ವವೇ ಒಂದು ಕುಂಟುಂಬ ಎಂದು ಭಾಸವಾಗುತ್ತೇ ಅಲ್ವೇ. ಅದೇ ರೀತಿ ಇದೀಗ ದೇವಸ್ಥಾನವನ್ನು ಕಟ್ಟಲು ಮುಂದಾಗಿರುವ ಮುಸ್ಲಿಂ ರಾಷ್ಟ್ರವಾದ ಅಬುಧಾಬಿಯ ಸಾಲಿಗೆ ಆಸ್ಟ್ರೇಲಿಯಾ ಸರ್ಕಾರವು ಸೇರಿದ್ದು, ಸ್ವತಃ ಆಸ್ಟ್ರೇಲಿಯಾದ ವಿಕ್ಟೋರಿಯನ್ ಸರ್ಕಾರವೇ ಶಿವ ವಿಷ್ಣು ದೇವಾಲಯ ನಿರ್ಮಿಸಲು 160,000 ಡಾಲರ್ ಹಣವನ್ನು ಸಹಾಯಧನ ನೀಡಿರುವುದು ವಿಶೇಷವಾಗಿದೆ.

ವಿಕ್ಟೋರಿಯನ್ ಸರ್ಕಾರದ ಬಹುಸಂಸ್ಕೃತಿ ಸಚಿವ ರಾಬಿನ್ ಸ್ಕಾಟ್ ಇತ್ತೀಚೆಗೆ ಶಿವ ವಿಷ್ಣು ದೇವಾಲಯಕ್ಕೆ ಕುಟುಂಬ ಸಮೇತ ಭೇಟಿಯಾಗಿ, ದೇವರ ದರ್ಶನ ಪಡೆದುಕೊಂಡು, ವಿಕ್ಟೋರಿಯನ್ ಹಿಂದೂ ಸಮಾಜದವರಿಗೆ ಶಿವ ವಿಷ್ಣು ದೇವಾಲಯದ ಕಾಮಗಾರಿಗೆ 160,000 ಡಾಲರ್ ಹಣ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಸರ್ಕಾರ ವಿಕ್ಟೋರಿಯಾದಲ್ಲಿ ವಾಸಿಸುವ ಪ್ರತಿ ನಾಗರೀಕರಿಗೂ ಸಂಸ್ಕೃತಿ, ರಕ್ಷಣೆಗೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.

ವಿಕ್ಟೋರಿಯನ್ ಸರ್ಕಾರದ ಈ ನಿರ್ಧಾರ ಆಸ್ಟ್ರೇಲಿಯಾದಲ್ಲಿರುವ ಹಿಂದೂಗಳಿಗೆ ಪ್ರೇರಣೆ ನೀಡಿದ್ದು, ಶೀಘ್ರದಲ್ಲಿ ಪ್ರಮುಖ ಸಮಸ್ಯೆಯಾಗಿದ್ದ ಕಾರ್ ಪಾರ್ಕಿಂಗ್ ವ್ಯವಸ್ಥೆಯನ್ನು ನೀಗಿಸಲು 300 ಕಾರ್ ನಿಲ್ಲುವ ಸಾಮರ್ಥ್ಯದ ಪಾರ್ಕಿಂಗ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಸರ್ಕಾರ ಹಿಂದೂ ಸಮುದಾಯದವರಿಗೆ ಪೆÇ್ರೀತ್ಸಾಹ ನೀಡುತ್ತಿರುವುದಕ್ಕೆ ವಿಕ್ಟೋರಿಯನ್ ಹಿಂದೂ ಸೊಸೈಟಿಯ ರಾಮ್ ಪ್ರಸಾದ್ ವೇಮುಲಾ ಧನ್ಯವಾದ ಸಲ್ಲಿಸಿದ್ದಾರೆ.

ಕೇವಲ 2.1 ಶೇಕಡಾದಷ್ಟು ಹಿಂದೂಗಳು ವಾಸಿಸುತ್ತಿರುವ ಆಸ್ಟ್ರೇಲಿಯಾದಲ್ಲಿ ಶಿವ ವಿಷ್ಣು ದೇವಾಲಯಕ್ಕೆ ಅಲ್ಲಿರುವ ಸರ್ಕಾರವೇ ಸಹಾಯ ಧನ ನೀಡಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ!! ಆದರೆ ಹಿಂದೂಸ್ತಾನ ದಲ್ಲಿರುವಂತಹ ಅಗಾಧವಾದ ಮತ್ತು ಸಂಪದ್ಭರಿತವಾದ ಕಲೆ, ಸಂಸ್ಕøತಿಯು ಬೇರೆಲ್ಲೂ ಕಾಣಸಿಗುವುದಿಲ್ಲ. ಬೇರೆ ಯಾವ ಧರ್ಮದಲ್ಲಿ ಇರದ ಅದ್ಭುತ ಸಂಸ್ಕøತಿಯು ಹಿಂದೂ ಧರ್ಮದಲ್ಲಿ ಇದೆ ಅಂದರೆ ಹಿಂದೂ ಧರ್ಮ ಕೇವಲ ಒಂದು ಧರ್ಮವಲ್ಲ, ಬದಲಾಗಿ ಸರಿಯಾದ ಜೀವನ ಹಾದಿಯಲ್ಲಿ ಬದುಕಲು ಯೋಗ್ಯವಾದಂತಹ ಧರ್ಮ. ಇಂಹದ ಧರ್ಮದ ಪರಿಪಾಲನೆಯನ್ನು ವಿದೇಶಿಗರು ಮಾಡ ಹೊರಟಿದ್ದಾರೆ ಎಂದರೆ ಅದಕ್ಕಿಂತಲೂ ದೊಡ್ಡದಾದ ಸಂತೋಷ ಬೇರೋಂದಿಲ್ಲ!!

ಇಂತಹ ಪ್ರಬುದ್ಧ ಧರ್ಮ ವಿದೇಶೀಗರನ್ನು ಆಕರ್ಷಿಸುತ್ತಿರುವಾಗ ನಮ್ಮವರೇ ನಮ್ಮತನವನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕøತಿಗೆ ವಾಲುತ್ತಿದ್ದಾರಲ್ಲದೇ ಹೋದಲೆಲ್ಲಾ ಹಿಂದೂ ಧರ್ಮವನ್ನು ದೂಷಿಸುತ್ತಿದ್ದು, ಅವಮಾನ ಮಾಡುತ್ತಿರುವ ಕೆಲ ಎಡಬಿಡಂಗಿಗಳು ತಮಗೆ ಧರ್ಮವೇ ಇಲ್ಲ ಎಂದು ಹೇಳುತ್ತಾರೆ. ಆದರೆ ತಮ್ಮ ಸರ್ಟಿಫಿಕೇಟ್ ನಲ್ಲಿ ಮಾತ್ರ ತಾವೋಬ್ಬ ಹಿಂದೂ ಎಂದು ಹೆಮ್ಮೆಯಿಂದಲೇ ಬರೆದುಕೊಂಡು ಹಿಂದೂ ಧರ್ಮವನ್ನು ದೂಷಿಸುತ್ತಾ, ಹಿಂದೂ ದೇವತೆಗಳನ್ನು ಅವಮಾನ ಮಾಡುತ್ತಾ, ಪವಿತ್ರವಾದ ಹಿಂದೂ ಗ್ರಂಥಗಳನ್ನು ಸುಟ್ಟು ಹಾಕುತ್ತೇನೆ ಎಂದು ಹೇಳುವವರು ಅನ್ಯಧರ್ಮದ ಬಗ್ಗೆ ಮಾತ್ರ ತುಟಿಕ್ ಪಿಟಿಕ್ ಎನ್ನುವುದೇ ಇಲ್ಲ.

ಅದೇನೇ ಇರಲಿ….. ನಮ್ಮ ಸಂಸ್ಕøತಿಯನ್ನು ವಿದೇಶಿಯರು ಆಚರಣೆ ಮಾಡುತ್ತಿದ್ದು, ಅದೆಷ್ಟೋ ಮಂದಿ ವಿದೇಶಿಗರು ಭಾರತದಲ್ಲಿ ನೆಲೆಯೂರಲು ಇಷ್ಟಪಡುತ್ತಿದ್ದಾರಲ್ಲದೇ ಸನಾತನ ಧರ್ಮವನ್ನು ಪಾಲಿಸುತ್ತಾ ಹಿಂದೂ ಸಂಸ್ಕøತಿಯನ್ನೇ ಕಲಿಯುತ್ತಿದ್ದಾರೆ. ಆದರೆ ಹಿಂದೂ ರಾಷ್ಟ್ರವಾದ ಭಾರತದಲ್ಲಿ ಹಿಂದುತ್ವವನ್ನೇ ಕೆಲ ಬುದ್ದಿಜೀವಿಗಳು ಕಡೆಗಾಣಿಸುತ್ತಿದ್ದರೆ, ಇತ್ತ ಆಸ್ಟ್ರೇಲಿಯಾದ ವಿಕ್ಟೋರಿಯನ್ ಸರ್ಕಾರ ಹಿಂದೂ ದೇವಾಲಯಕ್ಕೆ ಹಣ ಬಿಡುಗಡೆ ಮಾಡಿ, ಹಿಂದೂ ಧರ್ಮದ ಬಗ್ಗೆ ಗೌರವವನ್ನು ನೀಡುತ್ತಿರುವುದನ್ನು ನೋಡಿದರೆ ಹಿಂದೂ ಸಂಸ್ಕೃತಿಯೂ ವಿಶ್ವವ್ಯಾಪಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದೆನಿಸುತ್ತದೆ.

– ಅಲೋಖಾ

 

Tags

Related Articles

Close