ಪ್ರಚಲಿತ

ಅಯೋಧ್ಯೆ ಶ್ರೀರಾಮನ ಗರ್ಭಗುಡಿ ಹೇಗಿದೆ ಗೊತ್ತಾ?

ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ಇನ್ನು ತಿಂಗಳಷ್ಟೇ ಬಾಕಿ ಉಳಿದಿದೆ. ನೂತನ ಮಂದಿರದ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಲೋಕಾರ್ಪಣೆಗೆ ಸರ್ವ ಸಿದ್ಧತೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಷ್ಟ್ರ ಮಂದಿರ ರಾಮ ಮಂದಿರದ ಗರ್ಭಗುಡಿಯ ಚಿತ್ರವನ್ನು ಹಂಚಿಕೊಂಡಿದೆ.

ಶ್ರೀರಾಮ ಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ರಾಯ್ ಅವರು ಎಕ್ಸ್ ಖಾತೆಯಲ್ಲಿ ಬಹುತೇಕ ಪೂರ್ಣಗೊಂಡಿರುವ ಮಂದಿರದ ಗರ್ಭಗೃಹದ ಚಿತ್ರವನ್ನು ಹಂಚಿಕೊಂಡಿದ್ದು, ಭಗವಾನ್ ಶ್ರೀ ರಾಮಲಲ್ಲಾ ಅವರ ಗರ್ಭಗುಡಿ ಬಹುತೇಕ ಪೂರ್ಣವಾಗಿದೆ. ಇದರ ಲೈಟಿಂಗ್ ಫಿಟ್ಟಿಂಗ್ ಕೆಲಸ ಸಹ ಪೂರ್ಣಗೊಂಡಿದೆ. ಇದರ ಕೆಲವು ಚಿತ್ರಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಹಾಗೆಯೇ ಪ್ರತಿಷ್ಠಾಪಿಸಲ್ಪಡುವ ಪ್ರಭು ಶ್ರೀರಾಮನ ವಿಗ್ರಹದ ಕುರಿತಾಗಿಯೂ ಚಂಪತ್ ರಾಯ್ ಅವರು ಮಾಹಿತಿ ನೀಡಿದ್ದು, ಈ ವಿಗ್ರಹ ನಿರ್ಮಾಣ ಕಾರ್ಯಗಳು 90% ಗಳಷ್ಟು ಪೂರ್ಣಗೊಂಡಿರುವುದಾಗಿ ಹೇಳಿದ್ದಾರೆ. 

ಶ್ರೀ ರಾಮ ಮಂದಿರದಲ್ಲಿ ಅಯೋಧ್ಯೆ ಮೂರು ಜಾಗಗಳಲ್ಲಿ ಪ್ರಭು ಶ್ರೀರಾಮನ ಐದು ವರ್ಷದ ಬಾಲಕನಿದ್ದಾಗಿನ ರೂಪವನ್ನು ಬಿಂಬಿಸುವ ಮೂರು ವಿಗ್ರಹಗಳ ನಿರ್ಮಾಣ ಕಾರ್ಯ ಸಹ ನಡೆಯುತ್ತಿದೆ. ಇದನ್ನು ಮೂವರು ಕುಶಲಕರ್ಮಿಗಳು ನಿರ್ಮಾಣ ಮಾಡುತ್ತಿದ್ದು, ಬೇರೆ ಬೇರೆ ಕಲ್ಲುಗಳನ್ನು ಬಳಸಿ ಇದನ್ನು ಕೆತ್ತನೆ ಮಾಡಲಾಗುತ್ತಿದೆ. ಇದರಲ್ಲಿನ ಒಂದು ವಿಗ್ರಹವನ್ನು ದೇವರು ಸ್ವೀಕರಿಸುತ್ತಾನೆ. ಈ ಕೆತ್ತನೆಗಳ ಕಾರ್ಯ ಸುಮಾರು ತೊಂಬತ್ತು ಪ್ರತಿಶತ ಮುಕ್ತಾಯವಾಗಿದ್ದು, ಸಂಪೂರ್ಣವಾಗಲು ಸುಮಾರು ಒಂದು ವಾರಗಳ ಸಮಯ ಬೇಕಾಗಬಹುದು ಎಂದೂ ರಾಯ್ ತಿಳಿಸಿದ್ದಾರೆ.

ಕಳೆದ ಶುಕ್ರವಾರವಷ್ಟೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂದಿರದ ಕಾಮಗಾರಿ ಪೂರ್ಣಗೊಳ್ಳುತ್ತಿರುವ ‌ಚಿತ್ರಗಳನ್ನು ಹಂಚಿಕೊಂಡಿತ್ತು. ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯ ನಿರ್ಮಾಣದ ಕಾಮಗಾರಿಗಳು ವೇಗವಾದ ಪ್ರಗತಿ ಸಾಧಿಸುತ್ತಿವೆ. ಇದು ದೇವಾಲಯದ ಒಳಾಂಗಣದ ಸಂಕೀರ್ಣ ಕೆತ್ತನೆಗಳ ಚಿತ್ರ ಎಂದು ಹೇಳಿತ್ತು. 

Tags

Related Articles

Close