ಪ್ರಚಲಿತ

ಭಾರತೀಯರು ಕೊಟ್ಟ ಟಕ್ಕರ್‌ಗೆ ಮಾಲ್ಡೀವ್ಸ್ ಗಡಗಡ

ಮಾಲ್ಡೀವ್ಸ್ ಸಚಿವರು ಭಾರತ ಮತ್ತು ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡ ಹಾಗಾಗಿದೆ.

ಮಾಲ್ಡೀವ್ಸ್‌ಗೆ ಭಾರತದ ಜನರು ತಕ್ಕ ತಿರುಗೇಟು ನೀಡುತ್ತಿದ್ದಾರೆ. ಮಾಲ್ಡೀವ್ಸ್‌ನ ಸಚಿವರ ಧೋರಣೆಗೆ ಭಾರತೀಯರು ನೀಡುತ್ತಿರುವ ಪ್ರತಿಕ್ರಿಯೆ ಅವರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಬಿಸಿ ಮುಟ್ಟಿಸುತ್ತಿದೆ ಎಂದರೂ ತಪ್ಪಾಗಲಾರದು. ಇನ್ನೊಮ್ಮೆ ಸತ್ತರೂ ನಾವು ಭಾರತದ, ಭಾರತೀಯರ ವಿಷಯದಲ್ಲಿ ಜಾಗರೂಕತೆಯಿಂದ ವರ್ತಿಸಬೇಕು ಎನ್ನುವುದನ್ನು ಈ ಘಟನೆ ಕಾಲ‌ಕಾಲಕ್ಕೂ ಮಾಲ್ಡೀವ್ಸ್‌ಗೆ ನೆನಪಿಸಿಕೊಳ್ಳುವಂತಿದೆ ಎನ್ನುವುದು ಸತ್ಯ.

ಪ್ರಸ್ತುತ ಭಾರತೀಯರು ಮಾಲ್ಡೀವ್ಸ್ ಮೇಲೆ ತೆಗೆದುಕೊಂಡಿರುವ ಕ್ರಮ ಅವರ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಹೊಡೆತವನ್ನೇ ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಆಗಿ ಮಾರ್ಪಾಡಾಗಿದೆ. ಭಾರತದ ವಿರುದ್ಧ, ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನ ಮಾಡಿದ ಮಾಲ್ಡೀವ್ಸ್ ಸದಸ್ಯರ ಕಾರಣದಿಂದ ಅಲ್ಲಿ ಬುಕ್ಕಿಂಗ್ ಆಗಿದ್ದ ಹೊಟೇಲ್‌ಗಳು, ವಿಮಾನ ಟಿಕೆಟ್ ‌ಗಳು ರದ್ದಾಗಿ (ಭಾರತೀಯರು ರದ್ದು ಮಾಡಿದ ಪರಿಣಾಮ) ಆರ್ಥಿಕತೆಯ ಮೇಲೆಯೂ ದೊಡ್ಡ ಮಟ್ಟದ ಹೊಡೆತವನ್ನೇ ನೀಡಿದೆ ಎಂದರೆ ಅತಿಶಯವಾಗಲಾರದೇನೋ.

ಮಾಲ್ಡೀವ್ಸ್ ಘಟನೆಯ ನಂತರ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷ ದ್ವೀಪಕ್ಕೆ ತೆರಳಿ ಅಲ್ಲಿನ ಸೌಂದರ್ಯವನ್ನು ವರ್ಣಿಸಿ, ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅವರು ಮಾಲ್ಡೀವ್ಸ್ ಬಗ್ಗೆ ಯಾವುದೇ ಸಂಗತಿಯನ್ನು ಎತ್ತಿರದೇ ಹೋದರೂ, ಇದು ಮಾಲ್ಡೀವ್ಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಧಾನಿ ಮೋದಿ ಅವರು ಲಕ್ಷ ದ್ವೀಪದ ಬಗ್ಗೆ ಸುಂದರವಾಗಿ ಬಣ್ಣಿಸಿ ಬರೆದಿದ್ದು, ಮಾಲ್ಡೀವ್ಸ್‌ನಲ್ಲಿ ರಚನೆಯಾಗಿರುವ ಚೀನಾದ ಕೈ ಗೊಂಬೆ ಸರ್ಕಾರಕ್ಕೆ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲಿನ ಸರ್ಕಾರದ ಪ್ರಧಾನಿ ಮೋದಿ ಮತ್ತು ಭಾರತದ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ. ಭರತ ಮಾಲ್ಡೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ. ಬೀಚ್ ಪ್ರವಾಸೋದ್ಯಮ ವಿಷಯದಲ್ಲಿ ಮಾಲ್ಡೀವ್ಸ್ ಜೊತೆಗೆ ಭಾರತ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅಹಂಕಾರ ಪ್ರದರ್ಶನ ಮಾಡಿದ್ದರು.

ಇದು ಭಾರತೀಯ ನಾಗರಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ಮಾಲ್ಡೀವ್ಸ್ ವಿರುದ್ದ #Boycottmaldivs ಎಂಬ ಹ್ಯಾಷ್ ಟ್ಯಾಗ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಟಾಪ್ ಟೆನ್ ಸಾಮಾಜಿಕ ಜಾಲತಾಣ ಟ್ರೆಂಡ್ ಆಗಿದ್ದು, ಹೆಚ್ಚು ವೇಗವಾಗಿ ವೈರಲ್ ಆಗಿದೆ. ಭಾರತೀಯರು ಮಾಲ್ಡೀವ್ಸ್ ನಲ್ಲಿ ಬಕ್ ಮಾಡಿದ್ದ ಹೊಟೇಲ್ ರೂಮ್ ‌ಗಳು, ವಿಮಾನ ಟಿಕೆಟ್ ‌ಗಳು ಸಹ ರದ್ದಾಗಿ ಆ ದ್ವೀಪರಾಷ್ಟ್ರಕ್ಕೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ.

ನಮ್ಮ ದೇಶದ ಕ್ರಿಕೆಟ್ ಆಟಗಾರರು, ಸ್ಟಾರ್ ನಟರು ಸೇರಿದಂತೆ ಜನಸಾಮಾನ್ಯರು ಸಹ ಭಾರತದಲ್ಲಿನ ಅದ್ಬುತ ಬೀಚ್ ತಾಣಗಳ ಸೌಂದರ್ಯದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಾಲ್ಡೀವ್ಸ್‌ಗೆ ಟಕ್ಕರ್ ನೀಡುತ್ತಿದ್ದು, ಇದು ಮಾಲ್ಡೀವ್ಸ್‌ಗೆ ದೊಡ್ಡ ಮಟ್ಟದ ಹೊಡೆತ ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close