ಪ್ರಚಲಿತ

ಪ್ರತಿಪಕ್ಷಗಳು ಒಟ್ಟಾದರೂ ದೇಶದ ನಂಬಿಕೆ ಗಳಿಸುವುದು ಅಸಾಧ್ಯ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ, ರಾಷ್ಟ್ರವಾಸಿಗಳ ಅಭ್ಯುದಯದ ಹಿನ್ನೆಲೆಯಲ್ಲಿ ರಾತ್ರಿ, ಹಗಲೆನ್ನದೆ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಪ್ರಪಂಚವೇ ಇಂದು ಗೌರವಯುತವಾಗಿ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಪಟ್ಟದಲ್ಲಿ ಕುಳಿತು ದೇಶದ ಹಿತ ಕಾಣುತ್ತಿರುವ ಪ್ರಧಾನಿ ಮೋದಿ ಅವರು ಎಂದರೆ ಅತಿಶಯವಾಗಲಾರದು.

ದೇಶದ ಅಭಿವೃದ್ಧಿ, ಜನರ ಜೀವನ ಮಟ್ಟದ ಸುಧಾರಣೆ, ದೇಶದ ಆರ್ಥಿಕತೆ ಚೇತರಿಕೆಯಾಗಿರುವುದು, ಸಾಮಾಜಿಕ ಅಭಿವೃದ್ಧಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ಇಂದು ಸಶಕ್ತವಾಗಿದೆ ‌ಎಂದರೆ ದೇಶ ಓರ್ವ ಸಮರ್ಥ ನಾಯಕನ ಕೈಯಲ್ಲಿ ಮುನ್ನಡೆಯುತ್ತಿದೆ ಎನ್ನಬಹುದು. ಆದರೆ ದೇಶದ ಅಭಿವೃದ್ಧಿಯ ನಾಗಾಲೋಟದ ವಿರುದ್ಧ, ಪ್ರಧಾನಿ ಮೋದಿ ವಿರುದ್ದ, ಬಿಜೆಪಿ ವಿರುದ್ದ, ರಾಷ್ಟ್ರೀಯತೆಯ ವಿರುದ್ಧ ಕೆಲವು ನಾಲಾಯಕುಗಳು ಅಸಮಾಧಾನ ಹೊಂದಿದ್ದು, ಇದು ಸಮಾಜದ ಸ್ವಾಸ್ಥ್ಯ ಕೊಡುವ ಕೆಲಸಕ್ಕೆ ವಿರೋಧಿಗಳು ಇಳಿದಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ವಿರೋಧ ಪಕ್ಷಗಳು ತಮ್ಮ ದುರಹಂಕಾರ, ನಿರಾಸೆ, ಸುಳ್ಳು, ಅಜ್ಞಾನ ಇತ್ಯಾದಿಗಳಿಂದ ಮುಕ್ತರಾಗಬೇಕು. ಪ್ರಸ್ತುತ ಈ ಎಲ್ಲವುಗಳಿಂದ ಅವರು ಸಂತೋಷ ಪಡುತ್ತಿದ್ದಾರೆ. ಪ್ರತಿ ಪಕ್ಷಗಳ ವಿಭಜನೆಯ ತಂತ್ರವನ್ನು ಜನರು ಅರಿಯಬೇಕು. ಈ ಬಗ್ಗೆ ಜನತೆ ಎಚ್ಚರದಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ.

ವಿರೋಧ ಪಕ್ಷಗಳ ಕಳೆದ ಎಪ್ಪತ್ತು ವರ್ಷಗಳ ಹಳೆಯ ಅಭ್ಯಾಸ ಇದಾಗಿದ್ದು, ಇದು ಸುಲಭವಾಗಿ ಅವರಿಂದ ನಾಶವಾಗುವುದು ಸಾಧ್ಯವಿಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳ ಒಲವು ಬಿಜೆಪಿ ಕಡೆಗೆ ಇದ್ದು, ವಿರೋಧ ಪಕ್ಷಗಳು ಭವಿಷ್ಯದಲ್ಲಿ ಇಂತಹ ಹಲವಾರು ಸೋಲುಗಳಿಗೆ ಸಿದ್ಧರಾಗಬೇಕು ಎಂಬುದಾಗಿಯೂ ಪ್ರಧಾನಿ ಹೇಳಿದ್ದಾರೆ. ಹಾಗೆಯೇ ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದ ಬಗೆಗೂ ಮಾತನಾಡಿ, ಒಂದು ಹಂತದಲ್ಲಿ ಒಟ್ಟಾಗಿ ಬಂದರೂ, ಎಷ್ಟೇ ಸುಂದರವಾಗಿ ಫೋಟೋ ತೆಗೆದುಕೊಂಡರೂ ಜನರ ನಂಬಿಕೆಯನ್ನು ಗಳಿಸುವುದು ಅಸಾಧ್ಯ ಎಂದು ಅವರು ಕುಟುಕಿದ್ದಾರೆ.

ಈ ಚುನಾವಣೆ ಗಳಲ್ಲಿನ ಸೋಲು ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ದುರಹಂಕಾರಕ್ಕೆ ಸಿಕ್ಕ ತಕ್ಕ ಪಾಠವಾಗಿದೆ. ಕೆಲವು ವಂಶಾಡಳಿತ ಪಕ್ಷಗಳು ಒಂದು ಸಂದರ್ಭದಲ್ಲಿ ಒಟ್ಟಾದರೂ, ಅವರಿಗೆ ಗೆಲುವು ಸಿಗುವುದು, ದೇಶದ ನಂಬಿಕೆ ಗೆಲ್ಲುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

Tags

Related Articles

Close