ಪ್ರಚಲಿತ

ಬಿಗ್ ಬ್ರೇಕಿಂಗ್: ರಮ್ಯಾಗೆ ಶಾಕ್ ನೀಡಿದ ಸಿದ್ದರಾಮಯ್ಯ! ರಮ್ಯಾಳ “ನಶೆ” ಟ್ವೀಟ್‍ಗೆ ಮುಖ್ಯಮಂತ್ರಿ ಏನಂದರು ಗೊತ್ತಾ?! ಹಳೇ ಸೇಡು ತೀರಿಸಿಕೊಂಡರಾ ಸಿಎಂ ಸಾಹೇಬ್ರು?

ನಿನ್ನೆ ತಾನೇ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ನಟಿಮಣಿ ರಮ್ಯಾ ಇಂದು ಅಕ್ಷರಷಃ ಕಂಗೆಟ್ಟು ಹೋಗಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕರ ದಾಳಿಗೆ ಪೇಚಿಗೆ ಸಿಲುಕಿರುವ ನಟಿ ರಮ್ಯಾ ಇಂದು ಮನೆಯಿಂದ ಹೊರಗೆ ಬಾರದೆ ತನ್ನ ಅಸಹಾಯಕತೆಯನ್ನು ಮೆರೆಯುತ್ತಿದ್ದಾರೆ. ಯಾಕಪ್ಪಾ ಮೋದಿ ವಿರುದ್ಧ ಮಾತನಾಡಿದೆ ಎಂದು ಪರಿತಪಿಸುತ್ತಿದ್ದಾರೆ.

ಪ್ರಧಾನಿಯನ್ನು ಹಿಯಾಳಿಸಿದ್ದ ರಮ್”ಯಾ”…

ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಆಗಮಿಸಿ ಭಾರತೀಯ ಜನತಾ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದರು. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆಡೆದಿತ್ತು. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯೇ ಆಕರ್ಷನೀಯ ಕೇಂದ್ರ ಬಿಂದು. ಪ್ರಧಾನಿ ಮೋದಿಯನ್ನು ನೋಡಲೆಂದೇ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಮಂದಿ ಕಮಲ ಯಾತ್ರೆಗೆ ಆಗಮಿಸಿದ್ದರು. ಮೋದಿ ಆಗಮಿಸುತ್ತಲೇ ನಮೋ ಝೇಂಕಾರ ಮುಗಿಲು ಮುಟ್ಟಿತ್ತು. ಸೇರಿದ್ದ ಲಕ್ಷಾಂತರ ಜನರ ಬಾಯಲ್ಲಿ ಭಾರತ್ ಮಾತಾ ಕೀ ಜೈ ಬಿಟ್ಟರೆ ಇದ್ದದ್ದು ಒಂದೇ ಒಂದು ಪದ. ಅದು “ಮೋದಿ ಮೋದಿ ಮೋದಿ”…

ಮೋದಿ ಎಂದಿನಂತೆ ಕರ್ನಾಟಕದಲ್ಲಿ ಅಬ್ಬರಿಸಿಬಿಟ್ಟಿದ್ದರು. ನಮೋ ಆರ್ಭಟಕ್ಕೆ ಕಾಂಗ್ರೆಸ್ ಚಿಂದಿಯಾಗಿ ಹೋಗಿ ಬಿಟ್ಟಿತ್ತು. ಮೋದಿಯ ಸಂಪೂರ್ಣ ಭಾಷಣವನ್ನು ಆಲಿಸಿದ ಕಾಂಗ್ರೆಸ್ ನಾಯಕರು ಮೋದಿ ದೆಹಲಿಗೆ ತೆರಳುತ್ತಿದ್ದಂತೆ ಮಾಧ್ಯಮಗಳ ಎದುರು ಬಂದು ಮೋದಿ ಭಾಷಣವನ್ನು ಟೀಕಿಸುವಲ್ಲಿ ನಿರತರಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಅನೇಕ ರಾಜ್ಯ ಕಾಂಗ್ರೆಸ್ ನಾಯಕರು ಮೋದಿ ಬಗ್ಗೆ ವಿನಾಕಾರಣವಾಗಿ ಮಾತನಾಡುತ್ತಾರೆ.

ಇದರ ಮಧ್ಯೆ ಸ್ಯಾಂಡಲ್ ವುಡ್‍ನ ಮಾದಕ ನಟಿ ಕಮ್ ಪಾರ್ಟ್ ಟೈಮ್ ಪೊಲಿಟಿಶಿಯನ್ ರಮ್ಯಾ ಮೋದಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ನಿನ್ನೆ ಆದಿತ್ಯವಾದ ಕಾರಣ ಪಾರ್ಟಿಯಲ್ಲಿ ಮಗ್ನರಾಗಿದ್ದ ರಮ್ಯಾಗೆ ಸಂಜೆಯಾದರೂ ಕಡಿತದ ಅಮಲು ಇಳಿದಿರಲಿಲ್ಲ. ಹೀಗಾಗಿ ಮೋದಿ ಬಗ್ಗೆ ವಾಚಾಮಗೋಚರವಾಗಿ ನಿಂದಿಸಿದ್ದಾರೆ. “ಮೋದಿಗೆ ನಶೆಯೇರಿದೆ” ಎಂದು ಬೇಕಾಬಿಟ್ಟಿಯಾಗಿ ಮಾತನಾಡಿ ತನಗಿದ್ದ ಗೌರವವನ್ನೇ ಕಳೆದುಕೊಂಡಿದ್ದಾರೆ. ತನಗೆ ಇರುವ ಡ್ರಗ್ಸ್ ಸೇವಿಸುವ ಚಟವನ್ನು ಜಗದ್ಜಾಹೀರುಗೊಳಿಸಿರುವ ರಮ್ಯಾ ಅದಕ್ಕಾಗಿ ಮೋದಿಯವರನ್ನು ಅಸ್ತ್ರವಾಗಿ ಉಪಯೋಗಿಸಿಕೊಂಡಿದ್ದಾರೆ.

ರಮ್ಯಾಗೆ ಶಾಕ್ ಕೊಟ್ಟ ಸಿದ್ದರಾಮಯ್ಯ…

ಇನ್ನು ರಮ್ಯಾಳ ನಶೆಯ ಹೇಳಿಕೆಯ ಬಗ್ಗೆ ಕಿಡಿಕಾರಿರುವ ಭಾರತೀಯ ಜನತಾ ಪಕ್ಷದ ನಾಯಕರು ರಮ್ಯಾಳನ್ನು ಹಿಗ್ಗಾಮುಗ್ಗ ಝಾಡಿಸಿದ್ದಾರೆ. ಈ ಮಧ್ಯೆ ತನ್ನ ಪಕ್ಷದ ನಾಯಕಿಯನ್ನು ಸಮರ್ಥಿಸಬೇಕಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ರಮ್ಯಾ ನೆರವಿಗೆ ಬಾರಲೇ ಇಲ್ಲ. “ರಮ್ಯಾ ಹೇಳಿಕೆ ತಪ್ಪಾಗಿದೆ. ಪ್ರಧಾನಿ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಅವರು ದೇಶಕ್ಕೆ ಪ್ರಧಾನಿ. ಹೀಗಾಗಿ ನಾನು ಕೂಡಾ ಅಷ್ಟೊಂದು ಕೆಳ ಮಟ್ಟಕ್ಕೆ ಇಳಿಯೋದಿಲ್ಲ. ಇಳಿಯೋದು ಕೂಡಾ ತಪ್ಪು. ನಾನು ರಮ್ಯಾಳ ಈ ಹೇಳಿಕೆಯನ್ನು ಒಪ್ಪಿಕೊಳ್ಳೋದಿಲ್ಲ. ತಮ್ಮ ನಡತೆಯನ್ನು ರಮ್ಯಾ ಸರಿ ಪಡಿಸಿಕೊಳ್ಳಬೇಕು” ಎಂದು ಕಿಡಿ ಕಾರಿದ್ದಾರೆ. ಸದಾ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸ್ವಪಕ್ಷದ ರಮ್ಯಾ ವಿರುದ್ಧವೇ ಕಿಡಿಕಾರಿದ್ದಾರೆ.

ಸೇಡು ತೀರಿಸಿಕೊಂಡರಾ ಸಿದ್ದರಾಮಯ್ಯ?

ರಮ್ಯಾ ಬಗ್ಗೆ ಹಿಂದಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಗೊಳಗೇ ಮಸಲತ್ತು ಮಾಡಿಕೊಂಡು ಬರುತ್ತಿದ್ದು, ಈಗ ಬಹಿರಂಗವಾಗಿಯೇ ಸೇಡು ತೀರಿಸಿಕೊಂಡಿದ್ದಾರೆ. ತನ್ನ ಬಗ್ಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ದೂರುಗಳನ್ನು ಹೇಳುತ್ತಿದ್ದ ರಮ್ಯಾ ವಿರುದ್ಧ ಮಾತನಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊಸ ಅಸ್ತ್ರವೊಂದು ಲಭಿಸಿದ್ದು, ಅದನ್ನು ಮುಖ್ಯಮಂತ್ರಿಗಳು ಸಮರ್ಥವಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಈ ಮೂಲಕ ತಮಗಿದ್ದ ರಮ್ಯಾ ಮೇಲಿನ ಹಗೆಯನ್ನು ಸರಿಯಾಗಿಯೇ ತೀರಿಸಿಕೊಂಡಿದ್ದಾರೆ.

ಕಮಲ ಪಡೆಗಳಿಂದ ತೀವ್ರ ವಾಗ್ದಾಳಿ..!!!

ಪ್ರಧಾನಿ ಮೋದಿ ನಶೆಯೇರಿಸಿ ಮಾತನಾಡಿದ್ದಾರೆ ಎಂಬ ಡ್ರಗ್ಸ್ ಎಡಿಕ್ಟ್ ರಮ್ಯಾ ಹೇಳಿಕೆಗೆ ಭಾರತೀಯ ಜನತಾ ಪಕ್ಷದ ನಾಯಕರು ಮಾಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿತ್ರನಟ ಜಗ್ಗೇಶ್ ಕೂಡಾ ರಮ್ಯಾ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ರಮ್ಯಾಗೆ ಪಲ್ಲಂಗದಾಟವಾಡಿ ಮಾತ್ರವೇ ಅಭ್ಯಾಸವಿದೆ. ಕಷ್ಟ ಪಟ್ಟು ಮೇಲೆ ಬಂದು ಆಕೆಗೆ ಗೊತ್ತಿಲ್ಲ. ಯಾರದೋ ಕೃಪೆಯಿಂದ ಮೇಲೆ ಬಂದ ರಮ್ಯಾಗೆ ಮೋದಿ ಬಗ್ಗೆ ಮಾತನಾಡುವ ಹಕ್ಕಿಲ್ಲ” ಎಂದು ಕಿಡಿ ಕಾರಿದ್ದಾರೆ.

ಇನ್ನು ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿಟಿ ರವಿ ಮಾತನಾಡಿ, “ಯದ್ಭಾವಂ ತದ್ಭವತಿ, ಯಾರು ಹೇಗೆ ಇರುತ್ತಾರೋ ಅದೇ ರೀತಿ ಮಾತನಾಡುತ್ತಾರೆ. ಇಡೀ ದಿನ ಡ್ರಗ್ಸ್ ಜೊತೆಗೆ ಗುದ್ದಾಡುತ್ತಿರುವ ರಮ್ಯಾಗೆ ಪ್ರಧಾನಿ ಬಗ್ಗೆ ಮಾತನಾಡಲು ಯಾವ ಹಕ್ಕೂ ಇಲ್ಲ” ಎಂದಿದ್ದಾರೆ.

ಒಟ್ಟಾರೆ ರಮ್ಯಾಳ ನಶೆಯೇರಿದ ಮಾತಿನಿಂದ ಭಾರೀ ಚರ್ಚೆಗಳು ನಡೆಯುತ್ತಿದ್ದು, ಭಾರತೀಯ ಜನತಾ ಪಕ್ಷದ ನಾಯಕರು, ಚಲನ ಚಿತ್ರ ನಟರು ಸಹಿತ ಎಲ್ಲರೂ ರಮ್ಯಾಗೆ ಟಾಂಗ್ ಮೇಲೆ ಟಾಂಗ್ ನೀಡಿಕೊಂಡೇ ಬರುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿರುವ ರಮ್ಯಾ ಮತ್ತೆ ರಾಹುಲ್ ಗಾಂಧಿಯ ಬಳಿಗೆ ಅತ್ತುಕೊಂಡು ಓಡಿಹೋಗುವ ಸೂಚನೆಯೂ ದೊರಕಿದೆ.

-ಸುನಿಲ್ ಪಣಪಿಲ

Tags

Related Articles

Close