ಪ್ರಚಲಿತ

ಹೆಚ್ಚಿನ ಕಾರ್ಯಕರ್ತರನ್ನು ವೇಗವಾಗಿ ತಲುಪಲು ಬಿಜೆಪಿ ಬಳಸಲಿದೆ ‘ಸರಳ’ ತಂತ್ರಜ್ಞಾನ

2024 ರ ಸಾರ್ವತ್ರಿಕ ಚುನಾವಣೆಗೂ ‌ಮುಂಚಿತವಾಗಿ ಭಾರತೀಯ ಜನತಾ ಪಕ್ಷ ತಳ ಮಟ್ಟದ ಮತದಾರರನ್ನು ತಲುಪುವ ನಿಟ್ಟಿನಲ್ಲಿ ಮಹತ್ವದ ತಂತ್ರಜ್ಞಾನವೊಂದನ್ನು ಬಲಶಾಲಿಯಾಗಿ ಬಳಕೆ ಮಾಡಲು ಸಿದ್ಧತೆ ಮಾಡಿದೆ.

ಮುಂದಿನ ಲೋಕಸಭಾ ಚುನಾವಣೆಗೂ ಮೊದಲೇ ಪ್ರತಿ ನಿತ್ಯ ಸುಮಾರು ಅರವತ್ತು ಲಕ್ಷ ಬೂತ್ ಮಟ್ಟದ ಕಾರ್ಯಕರ್ತರಿಗೆ ಎಐ ಕಾಲಿಂಗ್ ಮತ್ತು ಚಾಟ್ ಮೂಲಕ ತನ್ನ ಇನ್ ಹೌಸ್ ಇಆರ್‌ಪಿ ಪ್ಲ್ಯಾಟ್ಫಾರ್ಮ್, SARAL ಭಾಷೆಯಾದ್ಯಂತ ಡಯಲ್ ಆಪ್ ಮಾಡಲು ಚಿಂತನೆ ನಡೆಸಿದೆ.

ಈ ಬಗ್ಗೆ ಭಾರತೀಯ ಜನತಾ ಪಕ್ಷದ ಮಾಹಿತಿ ಮತ್ತು ತಂತ್ರಜ್ಞಾನದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವಿಯ ಮಾಹಿತಿ ನೀಡಿದ್ದಾರೆ. ಚುನಾವಣಾ ವೇಳೆಗೆ ನಮ್ಮ ಪಕ್ಷ ಮೂವತ್ತು ಸಾವಿರ ಜನರ ಕಾಲ್ ಸೆಂಟರ್ ಅನ್ನು ನಿರ್ವಹಣೆ ಮಾಡಲಿದೆ. ಇದು ಭಾರತದ ಈ ವರೆಗಿನ ಎಲ್ಲಾ ರೀತಿಯ ಕಾರ್ಯಾಚರಣೆಗಳಿಗಿಂತ ದೊಡ್ಡ ಮಟ್ಟದಲ್ಲಿ ಇರಲಿದೆ ಎಂದೂ ಅವರು ತಿಳಿಸಿದ್ದಾರೆ.

ಎಐ ಮತ್ತು ಚಾಟ್‌ಗಳ ಮೂಲಕ ಕರೆಯನ್ನು ವಿವಿಧ ಭಾಷೆಗಳಲ್ಲಿ ಮಾಡಲಾಗುತ್ತದೆ. ಒಂದು ವೇಳೆ ಆ ಕರೆ ಕನೆಕ್ಟ್ ಆಗದೇ ಇದ್ದ ಸಂದರ್ಭದಲ್ಲಿ ಅದು ಮತ್ತೆ ಕಾಲ್ ಸೆಂಟರ್‌ಗೆ ತಿರುಗಲಿದೆ ಎಂದು ಅವರು ಹೇಳಿದ್ದಾರೆ. ಪಕ್ಷವು ಡೇಟಾ ಲೇಕ್ ಅನ್ನು ರಚನೆ ಮಾಡಲಿದ್ದು, ಇದನ್ನು ಕಳೆದ ಹತ್ತು ಚುನಾವಣಾ ಸಂದರ್ಭದಲ್ಲಿ ಸಂಗ್ರಹ ಮಾಡಿರುವುದಾಗಿದೆ. ಸಂಗ್ರಹ ಮಾಡಲಾದ ದತ್ತಾಂಶ ಮತ್ತು ಮ್ಯಾಪಿಂಗ್ ಅನ್ನು ನಿರಂತರವಾಗಿ ಇಟ್ಟುಕೊಳ್ಳುತ್ತದೆ. ಬೀಚ್ ಮಟ್ಟದಲ್ಲಿ ಸುಮಾರು ಐವತ್ತು ಕೋಟಿ ಜನರಿರಲಿದ್ದಾರೆ. ಅವರ ವಿಳಾಸಗಳನ್ನೂ ‌ಸಂಗ್ರಹ ಮಾಡಲಾಗಿದ್ದು, ಇದೊಂದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಮಾಳವಿಯಾ ಮಾಹಿತಿ ನೀಡಿದ್ದಾರೆ.

ಚುನಾವಣೆಯನ್ನು ಗೆಲ್ಲುವ ಯಂತ್ರ ಸರಳ್ ಎಂದು ಮಾಳವಿಯಾ ತಿಳಿಸಿದ್ದಾರೆ. ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರೂ ‌ಸಹ ತಂತ್ರಜ್ಞಾನ ಬಳಸುವಲ್ಲಿ ಪ್ರವೀಣರಾಗಿದ್ದು, ಈ ಹಿನ್ನೆಲೆಯಲ್ಲಿ ಸರಳ್ ತಂತ್ರಜ್ಞಾನ ಸುಲಭವಾಗಿ ಜನರನ್ನು ತಲುಪಲು ಸಹಾಯ ಮಾಡಲಿದೆ.

ಚುನಾವಣೆಯ ಗೆಲುವು ಕಷ್ಟಪಟ್ಟು ಕೆಲಸ ಮಾಡಿ ಪಡೆಯಬೇಕಾದದ್ದು. ಈ ನಿಟ್ಟಿನಲ್ಲಿ ಸರಳ್ ಆ್ಯಪ್ ಬಳಕೆಯ ಬಗ್ಗೆ ಕಾರ್ಯಕ್ರತರಿಗೆ ತರಬೇತಿ ನೀಡಲಾಗುತ್ತದೆ. ಈ ಆ್ಯಪ್ ಮೂಲಕ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಗುತ್ತದೆ. ಸರಳ್ ಅಪ್ಲಿಕೇಶನ್ ಸ್ಟಾರ್ಟ್‌ಅಪ್‌ಗಳಿಂದ ಹಿಡಿದು ಬಿಗ್ ಫೋರ್ ವರೆಗೆ ಪಾಲುದಾರಿಕೆ ಹೊಂದಿರುವುದಾಗಿ ಮಾಳವಿಯಾ ಮಾಹಿತಿ ನೀಡಿದ್ದಾರೆ.

Tags

Related Articles

Close