ಪ್ರಚಲಿತ

ಬ್ರೇಕಿಂಗ್! ಡಿಕೆಶಿ ವಿರುದ್ಧವೇ ತಿರುಗಿಬಿದ್ದ ಕೈ ಶಾಸಕರು..! ರೆಸಾರ್ಟ್‌ನಿಂದ ಹೊರ ನಡೆಯಲು ನಿರ್ಧಾರ..!

ಒಂದೆಡೆ ಪ್ರಮಾಣವಚನ ಸ್ವೀಕರಿಸಿ ಸಿಎಂ ಕುರ್ಚಿ ಅಲಂಕರಿಸಿರುವ ಬಿ ಎಸ್ ಯಡಿಯೂರಪ್ಪ ನವರು, ಇನ್ನೊಂದೆಡೆ ಮೈತ್ರಿ ಮಾಡಿಕೊಂಡರೂ ಸರಕಾರ ರಚನೆ ಮಾಡಲಾಗದೆ ಪರದಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್. ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದರೂ ಯಾವುದೇ ಪಕ್ಷ ಸರಕಾರ ರಚಿಸಲಾಗದ ಸ್ಥಿತಿ ಎದುರಾಗಿದೆ. ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಶಾಸಕರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದರೆ, ಬಿಜೆಪಿ ತಮಗೆ ಸರಕಾರ ರಚಿಸಲು ಬೇಕಾದ ಸ್ಥಾನ ತುಂಬಲು ಆಪರೇಷನ್ ಕಮಲದ ಮುಖಾಂತರ ಭಾರೀ ತಂತ್ರ ರೂಪಿಸಿ , ಡಿಕೆಶಿ ಕೋಟೆಯಲ್ಲಿರುವ ಕೈ ಶಾಸಕರನ್ನು ತಮ್ಮತ್ತ ಸೆಳೆಯಲು ತಯಾರಿ ನಡೆಸಿದ್ದಾರೆ..!

ರೆಸಾರ್ಟ್ ನಿಂದ ಹೊರ ನಡೆಯಲು ಕೈ ಶಾಸಕರ ನಿರ್ಧಾರ..!

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಎಲ್ಲೂ ಹೋಗದಂತೆ ರೆಸಾರ್ಟ್ ನಲ್ಲಿ ಕೂಡಿಹಾಕಿರುವ ಡಿಕೆಶಿ ನೇತ್ರತ್ವದ ತಂಡ ಶಾಸಕರನ್ನು ಕರ್ನಾಟಕದಿಂದ ಹೈದರಾಬಾದ್ ಗೆ ಕರೆದುಕೊಂಡು ಹೋಗಿದ್ದಾರೆ. ಗೆದ್ದು ತಮ್ಮ ಕ್ಷೇತ್ರದಲ್ಲಿ ಇರಬೇಕಾದ ಶಾಸಕರು ಈ ರೀತಿ ರೆಸಾರ್ಟ್ ನಲ್ಲಿ ಇರುವುದರಿಂದ ಈಗಾಗಲೇ ಆಯಾ ಕ್ಷೇತ್ರದ ಜನರು ಆಕ್ರೋಶಗೊಂಡಿದ್ದು, ಇದೀಗ ಅದರ ಬೆನ್ನಲ್ಲೇ ಸ್ವತಃ ಶಾಸಕರೇ ಡಿಕೆಶಿ ವಿರುದ್ದ ಆಕ್ರೋಶಗೊಂಡಿದ್ದಾರೆ.

Related image

ನಾವು ಗೆದ್ದು ನಮ್ಮ ಕ್ಷೇತ್ರದ ಜನರ ಜೊತೆಗಿರಬೇಕಾದವರು, ಈ ರೀತಿ ರೆಸಾರ್ಟ್ ನಲ್ಲಿ ಕಾಲಹರಣ ಮಾಡಲು ನಮಗಿಷ್ಟವಿಲ್ಲ , ನಾವು ಪಕ್ಷ ಬಿಟ್ಟು ಹೋಗುತ್ತೇವೆ ಎಂಬ ಸಂಶಯ ನಿಮಗಿದೆ , ಅವೆಲ್ಲವನ್ನೂ ಬಿಟ್ಟು ನಮ್ಮನ್ನು ಹೊರ ಹೋಗಲು ಬಿಡಿ ಎಂದು ಡಿಕೆಶಿಗೆ ಹೇಳಿದ್ದಾರೆ. ಒಂದೆಡೆ ಶಾಸಕರನ್ನು ಕಾಯುವ ಕೆಲಸ ಡಿಕೆಶಿ ಮೇಲಿದ್ದರೆ , ಇತ್ತ ಶಾಸಕರು ರೆಸಾರ್ಟ್ ನಲ್ಲಿ ಇನ್ನು ಮುಂದೆ ನಿಲ್ಲುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಮೊದಲೇ ಆತಂಕ ಇರುವುದರಿಂದ ಇದೀಗ ಶಾಸಕರ ಆಕ್ರೋಶದಿಂದ ಮತ್ತಷ್ಟು ಕಂಗೆಡುವಂತಾಗಿದೆ..!

ಕಾಂಗ್ರೆಸ್ ಸಭೆಯಲ್ಲಿ ಅಸಮಧಾನ ಸ್ಫೋಟ..!

ತರಾತುರಿಯಲ್ಲಿ ಈಗಲ್‌ಟನ್ ರೆಸಾರ್ಟ್ ನಿಂದ ಹೈದರಾಬಾದ್ ಹೋಟೆಲ್ ಒಂದಕ್ಕೆ ಕೈ ಶಾಸಕರನ್ನು ಕರೆದುಕೊಂಡು ಹೋದ ಡಿಕೆ ಶಿವಕುಮಾರ್ ಕಾಂಗ್ರೆಸ್ ಸಭೆ ಏರ್ಪಡಿಸಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಆಕ್ರೋಶಗೊಂಡ ಶಾಸಕರು ಸಭೆ ದಿಕ್ಕರಿಸಿ ಹೊರ ನಡೆದು ನಾವು ನಮ್ಮ ಕ್ಷೇತ್ರಗಳಿಗೆ ಹೋಗುತ್ತೇವೆ. ನಮ್ಮನ್ನು ಕೂಡಿಹಾಕಿ ಏನು ಮಾಡುತ್ತಿದ್ದೀರಿ ಎಂದು ಡಿಕೆ ಶಿವಕುಮಾರ್ ವಿರುದ್ದವೇ ರೊಚ್ಚಿಗೆದ್ದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಇನ್ನೂ ಹೊರಬಿದ್ದಿಲ್ಲ, ಅಲ್ಲಿಯವರೆಗೂ ಕಾಯೋಣ , ನಾವೇನು ಓಡಿ ಹೋಗುತ್ತೇವಾ ಎಂದು ಪ್ರಶ್ನಿಸಿದ ಶಾಸಕರು ಹೊಟೇಲ್ ನಿಂದ ಹೊರಬರಲು ನಿರ್ಧರಿಸಿದ್ದರು..!

Related image

ಒಟ್ಟಾರೆಯಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿಯೇ ಸಿದ್ದ ಎಂದು ಪಣತೊಟ್ಟಿದ್ದರೆ, ಇತ್ತ ಸ್ವತಃ ತಮ್ಮ ವಶದಲ್ಲಿರುವ ಶಾಸಕರೇ ಹೊರಹೋಗುತ್ತಿದ್ದು, ಕಾಂಗ್ರೆಸ್ ನಾಯಕರಿಗೆ ಏನೂ ಮಾಡಲಾಗದ ಸ್ಥಿತಿ ಎದುರಾಗಿದೆ..!

–ಅರ್ಜುನ್

Tags

Related Articles

Close