ಪ್ರಚಲಿತ

ಸಾವಯವ ಉತ್ಪನ್ನಗಳ ರಫ್ತು ಹೆಚ್ಚಳಕ್ಕೆ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ‌ಕೇಂದ್ರದ ಮೋದಿ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆಡಳಿತ ಚುಕ್ಕಾಣಿ ವಹಿಸಿಕೊಂಡ ಮೇಲೆ ಸಕಾರಾತ್ಮಕ ರೀತಿಯಲ್ಲಿ ಭಾರತ‌ ಬೆಳವಣಿಗೆಯಾಗುತ್ತಿದೆ. ಭಾರತದ ಅಭಿವೃದ್ಧಿಯ ನಾಗಾಲೋಟಕ್ಕೆ ಇಡೀ ಜಗತ್ತೇ ಬೆರಗುಗಣ್ಣುಗಳಿಂದ ನೋಡುತ್ತಿದೆ. ಭಾರತದ ಕೃಷಿ ಜಗತ್ತು ಸಹ‌ ಪ್ರಪಂಚದೆದುರು ತೆರೆದುಕೊಂಡಿದ್ದು, ವಿಶ್ವದ ಪ್ರಮುಖ ರಫ್ತುದಾರ ರಾಷ್ಟ್ರವಾಗಿಯೂ ಹೊರಹೊಮ್ಮಿದೆ.

ಈ ಸಂಬಂಧ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿದ್ದು, ಭಾರತವು ಸಾವಯವವಾಗಿ ಮತ್ತು ನೈಸರ್ಗಿಕ ಉತ್ಪನ್ನಗಳ ಮಾರುಕಟ್ಟೆಗೆ ಸಂಬಂಧಿಸಿದ ಹಾಗೆ ಮುಖ್ಯ ಕೊಡುಗೆದಾರನಾಗಿ ‌ಹೊರಹೊಮ್ಮಿರುವುದಾಗಿ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಮಾರುಕಟ್ಟೆಗಳಲ್ಲಿ ಭಾರತದ ಪಾಲು 17,853 ಕೋಟಿ ರೂ. ಆಗಿರುವುದಾಗಿ ‌ತಿಳಿಸಿದ್ದಾರೆ. ಸಾವಯವ‌ ಕೃಷಿ ಅಂಕಿ ಅಂಶಗಳು ಮತ್ತು ಉದಯೋನ್ಮುಖ ಪ್ರವೃತ್ತಿಗಳು ಈ ವರ್ಷ ವರದಿ ನೀಡಿದ್ದು, ವಿಶ್ವದೆಲ್ಲೆಡೆಯಿಂದ ಸಾವಯವ ಉತ್ಪನ್ನಗಳಿಗಾಗಿ ಬೇಡಿಕೆ ಹೆಚ್ಚಾಗಿರುವುದು ಗಮನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

2001 – 2021 ರ ಅವಧಿಯಲ್ಲಿ 21 ಯು ಎಸ್ ಡಾಲರ್‌ಗಳಿಂದ 135.50 ಬಿಲಿಯನ್ ಯು ಎಸ್ ಡಾಲ‌‌ರ್‌ಗಳಿಗೆ‌ ಸಾವಯವ ಕೃಷಿ ಉತ್ಪನ್ನಗಳ ಮಾರುಕಟ್ಟೆ ಅಭಿವೃದ್ಧಿ ಕಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ರಾಗಿ, ಸಂಸ್ಕರಣೆ ಮಾಡಿದ ಆಹಾರ ಪದಾರ್ಥಗಳು, ಚಹಾ, ಮಸಾಲೆಗಳು, ಧಾನ್ಯಗಳು, ಒಣ ಹಣ್ಣುಗಳು, ಕಾಂಡಿಮೆಂಟ್ಸ್, ಔಷಧೀಯ ಸಸ್ಯೋತ್ಪನ್ನಗಳು, ಕಾಳುಗಳು, ಕಾಫಿ, ಕಡ್ಡಿ, ಎಣ್ಣೆ ಬೀಜ ಇತ್ಯಾದಿಗಳಲ್ಲದೆ ಇನ್ನೂ ಹಲವಾರು ತರದ ಸಾವಯವ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ಭಾರತ‌ ರಫ್ತು ಮಾಡುತ್ತಿದೆ.

ಭಾರತವು ತನ್ನ ಹವಾಮಾನ ವೈವಿಧ್ಯತೆಯ ಕಾರಣದಿಂದ ತರಹೇವಾರಿ ಉತ್ಪನ್ನಗಳನ್ನು ಬೆಳೆಯುವ ವಿಶೇಷ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಸಾವಯವ ವಸ್ತುಗಳನ್ನು ಉತ್ಪಾದನೆ ಮಾಡುವವರಿಗೆ ದೇಶೀಯ ಮಾರುಕಟ್ಟೆ ಮತ್ತು ವಿದೇಶಿ ಮಾರುಕಟ್ಟೆಗಳಿಗೆ ಸಂಬಂಧಿಸಿದ ಹಾಗೆ ರಫ್ತು ವಲಯದಲ್ಲಿ ಸ್ಥಿರವಾಗಿ ಬೆಳೆಯುತ್ತಿರುವ ಮಾರುಕಟ್ಟೆಯನ್ನು ಸೆಳೆಯುವ, ಹಿಡಿತದಲ್ಲಿ ಇರಿಸಿಕೊಳ್ಳುವ ಭರವಸೆ ಹೆಚ್ಚಾಗಿದೆ. ಜೊತೆಗೆ ರಫ್ತು ಪ್ರಮಾಣ ಹೆಚ್ಚಿಸಲು‌ ಕೇಂದ್ರ ಸರ್ಕಾರವೂ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Tags

Related Articles

Close