ಪ್ರಚಲಿತ

ತಡವಾಗಿ ಬಂದ ಸಿದ್ದರಾಮಯ್ಯನವರ ವಿರುದ್ಧ ಭುಗಿಲೆದ್ದ ಆಕ್ರೋಶ.! ಕಾರ್ಯಕರ್ತರು ಡಿಜೆ ಹಾಕಿ ಕುಣಿದದ್ದೇಕೆ?!

ಕಾಂಗ್ರೆಸ್ ಗೆ ಕಾಂಗ್ರೆಸ್ಸೇ ಸಾಟಿ ಎಂಬೂದು ಮತ್ತೊಮ್ಮೆ ಸಾಬೀತಾಯಿತು. ಯಾಕೆಂದರೆ ಈ ಪಕ್ಷಕ್ಕೆ ಯಾವುದೇ ಒಂದು ಶಿಸ್ತಿನ ನಿಯಮವೇ ಇಲ್ಲ. ರಾಷ್ಟ್ರೀಯ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್ ಹೋದಲ್ಲೆಲ್ಲಾ ತನ್ನ ಮರ್ಯಾದೆಯನ್ನು ಹರಾಜು ಹಾಕುತ್ತಲೇ ಬಂದಿದೆ‌. ಇದೀಗ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಟಕ ಜೋರಾಗಿಯೇ ನಡೆಯುತ್ತಿದೆ. ಅದರಲ್ಲೂ ಈ ಕಾಂಗ್ರೆಸ್ ಅದ್ಯಾವ ರೀತಿಯ ಡ್ರಾಮಾ ಆರಂಭಿಸಿದೆ ಎಂದರೆ ಸ್ವತಃ ಪಕ್ಷದ ಕಾರ್ಯಕರ್ತರೇ ಇದರ ವಿರುದ್ಧ ತಿರುಗಿಬಿದ್ದಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಕಾರ್ಯಕರ್ತರ ಅಸಮಧಾನ..!

ಸಿದ್ದರಾಮಯ್ಯನವರ ಜನ ವಿರೋಧಿ ನೀತಿಗೆ ಇಡೀ ರಾಜ್ಯವೇ ಮುನಿಸಿಕೊಂಡಿದೆ ಎಂದರೆ ತಪ್ಪಾಗದು. ಯಾಕೆಂದರೆ ಸದಾ ಒಂದಿಲ್ಲೊಂದು ನಿರ್ಧಾರಗಳಿಂದ ರಾಜ್ಯದ ಜನರ ಅಶಾಂತಿಗೆ ಕಾರಣವಾದ ಸಿದ್ದರಾಮಯ್ಯನವರ ವಿರುದ್ಧ ನಿನ್ನೆ ದಾವಣಗೆರೆಯಲ್ಲಿ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ರೊಚ್ಚಿಗೆದ್ದಿದ್ದಾರೆ. ಸಿದ್ದರಾಮಯ್ಯನವರು ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಬಾರದೆ ಕಾರ್ಯಕರ್ತರನ್ನು ಸಭೆಯಲ್ಲಿ ಕಾಯುವಂತೆ ಮಾಡಿ, ಬೇಜವಾಬ್ದಾರಿತನ ತೋರಿದ ಕಾರ್ಯಕರ್ತರು ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದು ಮಾತ್ರವಲ್ಲದೆ, ತಾವೇ ಸಭೆಯಲ್ಲಿ ಧ್ವನಿವರ್ಧಕ ಅಳವಡಿಸಿ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ.!

ಬಿಜೆಪಿ ಕಾರ್ಯಕರ್ತರಿಂದಲೂ ಮುತ್ತಿಗೆ..!

ಸಿದ್ದರಾಮಯ್ಯನವರು ತಾನು ಮುಖ್ಯಮಂತ್ರಿ ಆಗುತ್ತಲೇ ಹಿಂದೂಗಳ ವಿರುದ್ಧ ಒಂದೊಂದೇ ನಿರ್ಧಾರ ಕೈಗೊಳ್ಳುತ್ತಾ ಬಂದಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಈಗಾಗಲೇ ಪ್ರತಿಭಟನೆ ಮತ್ತು ಹೋರಾಟಗಳು ನಡೆದಿದ್ದರೂ, ಅಧಿಕಾರದ ಅಹಂಕಾರದಿಂದ ಸರ್ವಾಧಿಕಾರದ ಆಡಳಿತ ನಡೆಸುತ್ತಾ ಬಂದರು. ಆದರೆ ನಿನ್ನೆ ಕಾಂಗ್ರೆಸ್ ಪಕ್ಷದ ಸಮಾರಂಭವೊದಕ್ಕೆ ದಾವಣಗೆರೆಗೆ ಆಗಮಿಸಿದ ಸಿದ್ದರಾಮಯ್ಯನವರು ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ನೇರವಾಗಿ ಹೆಲಿಪ್ಯಾಡ್ ಗೆ ನುಗ್ಗಿ ಸಿದ್ದರಾಮಯ್ಯನವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇದರಿಂದ ಕಂಗಾಲಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೊಲೀಸರ ಸಹಾಯದಿಂದ ಸ್ಥಳದಿಂದ ಪಲಾಯನಗೈದರು.

ಡಿಜೆ ಹಾಡಿಗೆ ಕುಣಿದ ಕಾಂಗ್ರೆಸ್ ಕಾರ್ಯಕರ್ತರು..!

ಸಮಾವೇಶಕ್ಕೆ ಸೇರಿದ್ದ ಜನರು ಕಾರ್ಯಕ್ರಮ ಪ್ರಾರಂಭ ಆಗದೇ ಇದ್ದರಿಂದ ಆಕ್ರೋಷಗೊಂಡು ಬೊಬ್ಬೆ ಹೊಡೆಯಲು ಪ್ರಾರಂಭಿಸಿದ್ದಾರೆ. ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರು ಎಷ್ಟೇ ಸಮಾಧಾನ ಪಡಿಸಿದರು , ತಣ್ಣಗಾಗದ ಕಾರ್ಯಕರ್ತರು ಸಭೆಯಲ್ಲಿ ಡಿಜೆ ಹಾಡುಗಳನ್ನು ಅಳವಡಿಸಿ ಕುಣಿದಿದ್ದಾರೆ. ನೋಡುಗರಿಗೆ ಇದು ಕಾಂಗ್ರೆಸ್ ನ ಸಮಾವೇಶವೋ ಅಥವಾ ಯಾವುದೋ ಗುಂಡು ಪಾರ್ಟಿಯೋ ಎಂಬ ಸಂಶಯ ವ್ಯಕ್ತವಾಗಿತ್ತು. ಸ್ವತಃ ಕಾಂಗ್ರೆಸ್ ನಾಯಕರೇ ಕಂಗಾಲಾಗಿದ್ದು, ಕಾರ್ಯಕರ್ತರನ್ನು ಸಮಾಧಾನಪಡಿಸಲೆಂದೇ ನಾನಾ ರೀತಿಯ ಪ್ರಯತ್ನ ಪಡಬೇಕಾಯಿತು.

ಕಾಂಗ್ರೆಸ್ ನ ಬೇಜವಾಬ್ದಾರಿಗೆ ಸ್ವತಃ ಪಕ್ಷದ ಕಾರ್ಯಕರ್ತರೇ ಅಸಮಧಾನಗೊಂಡು ರೊಚ್ಚಿಗೆದ್ದಿದ್ದು , ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಗೆ ಏಟಿನ ಮೇಲೆ ಏಟು ಬೀಳುತ್ತಲೇ ಇದೆ. ಈಗಾಗಲೇ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯನವರ ವಿರುದ್ಧ ತಿರುಗಿ ಬಿದ್ದಿದ್ದು , ಇದೀಗ ಪಕ್ಷದ ಕಾರ್ಯಕರ್ತರೂ ಕೂಡಾ ರಾಜ್ಯ ಸರಕಾರದ ಮತ್ತು ಸಿದ್ದರಾಮಯ್ಯನವರ ವಿರುದ್ಧ ವಿರುದ್ಧ ರೊಚ್ಚಿಗೆದ್ದಿದ್ದಾರೆ.!

–ಅರ್ಜುನ್ ಭಾರದ್ವಾಜ್

 

Tags

Related Articles

Close