ಪ್ರಚಲಿತ

ಜಾತಿ ಆಧಾರದಲ್ಲಿ ಜನರನ್ನು ಒಡೆಯುವವರ ಸಂಚಿಗೆ ಸೋಲಾಗಿದೆ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಹೆಸರು, ಅವರ ಕೆಲಸಗಳು ಜನರನ್ನು ಮೋಡಿ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದ ಮೋದಿ ವಿರೋಧಿಗಳಿಗೆ ‌ನಿನ್ನೆಯ ದಿನ ಅತ್ಯಂತ ದುಃಖದ ದಿನ ಎನ್ನಬಹುದೇನೋ. ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಘಡದಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿ ಬಿಜೆಪಿ ಗೆಲುವಿನ ನಗೆ ಬೀರಿರುವುದು ಪ್ರಧಾನಿ ಮೋದಿ ಮತ್ತು ದೇಶ ವಿರೋಧಿ ಶಕ್ತಿಗಳಿಗೆ ‌ನುಂಗಲಾರದ ತುತ್ತಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ತೆಲಂಗಾಣ ಹೊರತಾದಂತೆ ಉಳಿದ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯದ ನಗೆ ಬೀರಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಜೆಪಿಯ ಗೆಲುವಿಗಾಗಿ ಮತಗಳನ್ನು ನೀಡಿ ಸಹಕರಿಸಿದ ಜನತೆಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಜೊತೆಗೆ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರ ಶ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಗೆಲುವು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಉತ್ತಮ ಆಡಳಿತಕ್ಕೆ ಸಂದ ಜಯವಾಗಿದೆ. ಈ ಚುನಾವಣಾ ಫಲಿತಾಂಶ ಬಿಜೆಪಿ ಪರ ಬಂದಿದ್ದು, ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿದ ಮತದಾರರಿಗೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. 

ಇಂದು ಗೆಲುವು ಸಿಕ್ಕಿರುವುದು ನಮ್ಮ ಸಬ್ಕಾ‌ ಸಾತ್, ಸಬ್ಕಾ ವಿಕಾಸ್ ಎನ್ನುವ ಪರಿಕಲ್ಪನೆಗೆ. ಜಾತಿಯ ಆಧಾರದಲ್ಲಿ ಸಮಾಜವನ್ನು, ದೇಶವನ್ನು ಒಡೆಯುವ ಸಂಚು ವಿಪಕ್ಷಗಳಿಂದ ನಡೆದಿತ್ತು. ಆ ಸಂಚು ಸೋತಿದೆ. ಬಿಜೆಪಿಯ ಪ್ರಕಾರ ಇರುವುದು ನಾಲ್ಕೇ‌ ಜಾತಿಗಳು. ರೈತರು, ಬಡವರು, ಮಹಿಳೆಯರು ಮತ್ತು ಪುರುಷರು‌. ಈ ಜಾತಿಗಳ ಸಬಲೀಕರಣದಿಂದ‌ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಡಬ್ಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಿಳಾ ಶಕ್ತಿ ಬಿಜೆಪಿಯ ಗೆಲುವನ್ನು ಪಡೆಯುವಲ್ಲಿ ಸಹಕರಿಸಿತು. ಈ ಗೆಲುವು ಮಹಿಳೆಯರಲ್ಲಿ‌ ಭರವಸೆ ಮೂಡಿಸಿದೆ. ಈ ಗೆಲುವಿನಲ್ಲಿ ಮಹಿಳೆಯರು ತಮ್ಮ ಗೆಲುವು ಕಾಣುತ್ತಿದ್ದಾರೆ. ರೈತರಿಗೂ ಇದು ತಮ್ಮ ಗೆಲುವೆಂದೇ ಆಗಿದೆ. ಮೊದಲ ಮತದಾನ ಮಾಡಿದ ಯುವಜನರೂ ಇದನ್ನು ತಮ್ಮ ಗೆಲುವೆಂದೇ ಭಾವಿಸಿದ್ದಾರೆ. ಇದನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಗೆಲುವಿನಂತೆಯೇ ಸಂಭ್ರಮಿಸುತ್ತಿರುವುದಾಗಿ ಪ್ರಧಾನಿ ಹೇಳಿದ್ದಾರೆ.

ಕಾಂಗ್ರೆಸ್ ಜನರ ಆಕಾಂಕ್ಷೆಗಳಿಗೆ ಮನ್ನಣೆ ನೀಡಲಿಲ್ಲ. ಆದರೆ ಬಿಜೆಪಿ ಅದನ್ನು ಅರಿತು ನಡೆಯುವ ಕೆಲಸ ಮಾಡುತ್ತಿದೆ. ಅವುಗಳ ಈಡೇರಿಕೆಗೆ ಕ್ರಮ ಕೈಗೊಳ್ಳುತ್ತಿದೆ‌. ಯುವ ಜನರ ಕಲ್ಯಾಣ, ದೇಶದ ಹಿತಕ್ಕಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಜನರ ಕಾಳಜಿ ವಹಿಸಿಲ್ಲ. ಆದ್ದರಿಂದಲೇ ಕಾಂಗ್ರೆಸ್ ನಿರ್ಮೂಲನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close