ಪ್ರಚಲಿತ

ಸಾವಿನ ಮನೆ ರಾಜಕೀಯ: ಪಿಎಂ ಮೋದಿ ಅವರ ಸುದ್ದಿ ಮಾಡಲು ಹೋಗಿ ತಾನೆ ಸುದ್ದಿಯಾದ ಕಾಂಗ್ರೆಸ್

ಬಿಜೆಪಿಯ ಹಾಲಿ ದಲಿತ ಸಂಸದರೊಬ್ಬರ ಪ್ರಾರ್ಥಿವ ಶರೀರಕ್ಕೆ ಗೌರವ ಸೂಚಿಸುವ ಕನಿಷ್ಠ ಸೌಜನ್ಯವೂ ಪ್ರಧಾನಿ ಮೋದಿಗಿಲ್ಲವೇ?

ಇಲ್ಲಿದೆ ಫ್ಯಾಕ್ಟ್ ಚೆಕ್

ಚಾಮರಾಜನಗರ ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಸಂಸದರು, ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ನಾಯಕರೂ, ಮಾಜಿ ಸಚಿವರೂ ಆದ ವಿ. ಶ್ರೀನಿವಾಸ್ ಪ್ರಸಾದ್ ಅವರು ನಿಧನ ಹೊಂದಿದರು.

ಆದರೆ, ಅದನ್ನೇ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳಲು ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ (ಟ್ವಿಟ್ಟರ್ ) ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದೆ. ಆ ಮೂಲಕ ಪ್ರಧಾನಿ ಮೋದಿ ಅವರನ್ನು ಸಾರ್ವಜನಿಕ ವಲಯದಲ್ಲಿ ದಲಿತ ವಿರೋಧಿ ಎಂದು ಬಿಂಬಿಸಲು ಹೊರಟಿದೆ.

ಪ್ರಧಾನಿ ಮೋದಿಯವರು ನಿನ್ನೆ ಕರ್ನಾಟಕದಲ್ಲೇ ಇದ್ದರು, ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಿಣಿ, ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರು ತೀರಿಕೊಂಡಿದ್ದು ಪ್ರಧಾನಿಯಯವರಿಗೂ ತಿಳಿದಿತ್ತು,,

ಶ್ರೀನಿವಾಸ್ ಪ್ರಸಾದ್ ಅವರು ಮೋದಿಯವರ ಸಂಸತ್ ಸಹೋದ್ಯೋಗಿ ಹಾಗೂ ಅವರದ್ದೇ ಪಕ್ಷದ ಹಾಲಿ ಸಂಸದ,
ಹೀಗಿದ್ದೂ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರ ನೋಡಿ ಗೌರವ ಸೂಚಿಸುವ ಕನಿಷ್ಠ ಸೌಜನ್ಯ ತೋರಲಿಲ್ಲ ಮೋದಿ.

ಇದು ಮೋದಿಯವರಿಗೆ ಶೋಷಿತ ಸಮುದಾಯಗಳ ಬಗ್ಗೆ ಇರುವ ತಾತ್ಸಾರವೋ, ಅಥವಾ ನಾಯಕರನ್ನು ಬಳಸಿ ಬಿಸಾಡುವ ಕುಯುಕ್ತಿಯ ಬುದ್ಧಿಯೊ? ಶ್ರೀನಿವಾಸ್ ಪ್ರಸಾದ್ ಅವರ ಸೈದ್ದಂತಿಕ ಬಿನ್ನತೆಯ ಕಾರಣಕ್ಕೆ ತೋರಿದ ದ್ವೇಷವೋ?

ಬಿಜೆಪಿ ಶ್ರೀನಿವಾಸ್ ಪ್ರಸಾದ್ ರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಮೂಲೆಗುಂಪು ಮಾಡಿತ್ತು, ಈಗ ಮೋದಿಯವರು ನಿರ್ಲಕ್ಷ್ಯ ಮಾಡಿದ್ದಾರೆ.

ಒಬ್ಬ ಹಿರಿಯ ಮುತ್ಸದ್ದಿ ನಾಯಕನಿಗೆ ಬಿಜೆಪಿ ಮತ್ತು ಮೋದಿ ಕೊಡುವ ಗೌರವ ಇದೇನಾ?

ಎಂದು ಟ್ವೀಟ್ ಮಾಡಿದ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.

ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಡಿರುವ ಆರೋಪಕ್ಕೆ ಉತ್ತರ ಇಲ್ಲಿದೆ

ಪ್ರಧಾನಿ ಮೋದಿ ಅವರು ನಿನ್ನೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾತ್ರವಲ್ಲದೆ, ನಿನ್ನೆ ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿಯೂ ಶ್ರೀನಿವಾಸ್ ಪ್ರಸಾದ್ ಅವರಿಗೆ ಸಂತಾಪ ವ್ಯಕ್ತಪಡಿಸಿದ್ದರು.

ಇನ್ನು ಹೀಗೆಲ್ಲಾ ತಪ್ಪು ವಿಚಾರಗಳನ್ನು ಹರಡಿ ಸಾರ್ವಜನಿಕ ವಲಯದಲ್ಲಿ ವಿಷ ಬೀಜ ಬಿತ್ತುವ ಕಾಂಗ್ರೆಸ್ ತನ್ನ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡಲ್ಲಿ ಉತ್ತಮ. ಏಕೆಂದರೆ, ಪ್ರಿಯಾಂಕಾ ಗಾಂಧಿಯೂ ನಿನ್ನೆ ಕರ್ನಾಟಕದಲ್ಲೇ ಇದ್ದರು. ಹಾಗೆ ನೋಡಿದರೆ ಶ್ರೀನಿವಾಸ್ ಪ್ರಸಾದ್ ಅವರು ಒಂದು ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿದ್ದವರು. ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಣಿ, ಶೋಷಿತ ಸಮುದಾಯಗಳ ಗಟ್ಟಿ ಧ್ವನಿಯಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರ ಸಾವಿಗೆ ಪ್ರಿಯಾಂಕಾ ಗಾಂಧಿ ಏಕೆ ಸಂತಾಪ ಸೂಚಿಸಲಿಲ್ಲ? ಕನಿಷ್ಠ ಟ್ವೀಟ್ ಮಾಡುವ ವ್ಯವಧಾನವೂ ಏಕೆ ಇರಲಿಲ್ಲ? ತಮ್ಮದು ಮೇಲ್ವರ್ಗ ಎಂದು ಹೇಳಿಕೊಳ್ಳುವ ಇವರಿಗೆ ಶೋಷಿತ ಸಮುದಾಯದ ಮೇಲೆ ತಾತ್ಸರವೋ?

ಗೊತ್ತಿಲ್ಲ! ಪತ್ರಕರ್ತರ ಮುಖವಾಡ ಹಾಕಿಕೊಂಡ ಕಾಂಗ್ರೆಸ್ಸಿನ ನಕಲಿ ಫ್ಯಾಕ್ಟ್ ಚೆಕರ್‌ಗಳು ಇದರ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ!

Tags

Related Articles

Close