ಪ್ರಚಲಿತ

ಕಾಂಗ್ರೆಸ್ ಶಾಸಕನ ಸಹೋದರನೇ ಬಿಜೆಪಿಗೆ ಜಂಪ್..! ಸಹೋದರರ ಸವಾಲಾಗಲಿದೆ ಈ ವಿಧಾನಸಭಾ ಕ್ಷೇತ್ರ.!

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಗೆ ಒಂದರ ಮೇಲೊಂದು ಹೊಡೆತ ಬೀಳುತ್ತಿದೆ. ಈಗಾಗಲೇ ಸಿದ್ದರಾಮಯ್ಯನವರ ಆಡಳಿತಕ್ಕೆ ಬೇಸತ್ತ ರಾಜ್ಯದ ಜನತೆ ಹೊಸ ಆಡಳಿತಕ್ಕೆ ಕಾಯುತ್ತಿದ್ದರೆ, ಇತ್ತ ಸ್ವತಃ ಕಾಂಗ್ರೆಸ್ ನಲ್ಲೇ ಭಿನ್ನಮತ ಸ್ಫೋಟಗೊಂಡು ಕಾಂಗ್ರೆಸ್ ತನ್ನ ಬಲ ಕಳೆದುಕೊಳ್ಳುತ್ತಿದೆ‌. ದೇಶಾದ್ಯಂತ ಸೋಲು ಅನುಭವಿಸಿಕೊಂಡು ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ ಗೆ ಇಂದು ಪ್ರಾದೇಶಿಕ ಪಕ್ಷದ ಅವಸ್ಥೆ ಎದುರಾಗಿದೆ. ರಾಜ್ಯ ಕಾಂಗ್ರೆಸ್ ನಲ್ಲೂ ಭ್ರಷ್ಟ ಅಧಿಕಾರಗಳನ್ನೇ ನೇಮಿಸಿಕೊಂಡಿರುವ ಸಿದ್ದರಾಮಯ್ಯ , ತಮಗೆ ಬೇಕಾದ ರೀತಿಯ ಆಡಳಿತ ನಡೆಸುತ್ತಿದ್ದಾರೆ.

ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಈಗಾಗಲೇ ಇಡೀ ದೇಶವೇ ಬಿಜೆಪಿಯತ್ತ ಮುಖ ಮಾಡಿದ್ದರೆ, ಇದೀಗ ಕರ್ನಾಟಕ ಕಾಂಗ್ರೆಸ್ ನಾಯಕರೂ ಕೂಡಾ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ಬಿಗ್ ಶಾಕ್ ನೀಡುತ್ತಿದ್ದಾರೆ. ಸದ್ಯ ಕರ್ನಾಟಕ ವಿಧಾನಸಭಾ ಚುನಾವಣಗೆ ತಯಾರಿ ನಡೆಯುತ್ತಿದೆ, ಆದರೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಧಾನಗೊಂಡ ಕಾಂಗ್ರೆಸ್ ಮುಖಂಡರು ಬಿಜೆಪಿಯ ಕಡೆ ಒಲವು ತೋರಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ಸಹೋದರರ ಸವಾಲ್..!

ಕಾಂಗ್ರೆಸ್ ನಾಯಕರಾಗಿದ್ದ ಜಾರಕಿಹೊಳಿ ಸಹೋದರರು , ಕಾಂಗ್ರೆಸ್ ನ ಮುಂದಿನ ಅಭ್ಯರ್ಥಿಗಳು ಎಂದೇ ಬಿಂಬಿತರಾಗಿದ್ದರು. ಆದರೆ ಇದೀಗ ಸಿದ್ದರಾಮಯ್ಯನವರ ನೇತ್ರತ್ವದ ಅಭ್ಯರ್ಥಿ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಲಖನ್ ಜಾರಕಿಹೊಳಿ ಗೆ ಕಾಂಗ್ರೆಸ್ ನಲ್ಲಿ ಟಿಕೆಟ್ ಅವಕಾಶ ಇಲ್ಲ ಎಂಬ ಮಾತು ಹೊರಬೀಳುತ್ತಿದ್ದಂತೆ , ಯಮಕನಮರಡಿ ಕ್ಷೇತ್ರಕ್ಕಾಗಿ ಸತೀಶ್ ಮತ್ತು ಲಖನ್ ನಡುವೆ ತೀವ್ರ ತಿಕ್ಕಾಟ ಆರಂಭವಾಗಿದೆ. ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ವಿಫಲರಾದ ಲಖನ್ ಜಾರಕಿಹೊಳಿ , ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತಾ ಶೀಘ್ರವೇ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.!

ಒಡೆದ ಮನೆಯಾಯ್ತು ಜಾರಕಿಹೊಳಿ ಫ್ಯಾಮಿಲಿ.!

ಲಖನ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ಟಿಕೆಟ್ ಪಡೆಯಲು ಭಾರೀ ಪ್ರಯತ್ನ ಪಟ್ಟಿದ್ಷರು. ಕಾಂಗ್ರೆಸ್ ಕೂಡಾ ಜಾರಕಿಹೊಳಿಯನ್ನು ತಮ್ಮ ರಾಜಕೀಯ ಆಟಕ್ಕೆ ಬಳಸಿಕೊಂಡಿತೇ ವಿನಃ , ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇವರ ಹೆಸರನ್ನು ಕೈಬಿಟ್ಟಿದೆ. ಇದರಿಂದ ಕೋಪಗೊಂಡ ಲಖನ್ ಜಾರಕಿಹೊಳಿ ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಸಹೋದರರಿಬ್ಬರ ಮಧ್ಯೆ ಬಿರುಕು ಉಂಟಾಗಿದ್ದು ಜಾರಕಿಹೊಳಿ ಮನೆಯಲ್ಲಿ ರಾಜಕೀಯ ಕಿಚ್ಚು ಹೊತ್ತಿ ಉರಿಯುತ್ತಿದೆ.

ಬಿಜೆಪಿ ವರಿಷ್ಠರ ಜೊತೆ ಮಾತುಕತೆ..!

ಕಾಂಗ್ರೆಸ್ ನಲ್ಲಿ ಭಾರೀ ಅವಮಾನಕ್ಕೊಳಗಾದ ಲಖನ್ ಜಾರಕಿಹೊಳಿ ಸದ್ಯವೇಚ ಬಿಜೆಪಿ ಸೇರಲಿದ್ದು, ಈಗಾಗಲೇ ರಾಜ್ಯ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ನ ಒಂದೊಂದೇ ನಾಯಕರು ಬಿಜೆಪಿ ಪಾಲಾಗುತ್ತಿದ್ದು, ಕಾಂಗ್ರೆಸ್ ಗೆ ಸೋಲಿನ ಭೀತಿ ಹೆಚ್ಚಾಗಿದೆ. ಇತ್ತ ಬಿಜೆಪಿಯೂ ಚುನಾವಣಾ ತಂತ್ರ ರೂಪಿಸಿದ್ದು, ಕಾಂಗ್ರೆಸ್ ನ ನಾಯಕರಿಗೆ ತಮ್ಮ ಪಕ್ಷಕ್ಕೆ ಸೇರಲು ಮುಕ್ತ ಆಹ್ವಾನ ನೀಡಿದ್ದಾರೆ.!

ಕಾಂಗ್ರೆಸ್ ದೇಶಾದ್ಯಂತ ಈಗಾಗಲೇ ಸೋಲಿನ ಮಾಲೆಯನ್ನು ಕೊರಳಿಗೆ ಹಾಕಿಕೊಂಡು ತಿರುಗುತ್ತಿದ್ದೆ , ಇತ್ತ ಕರ್ನಾಟಕದಲ್ಲೂ ಪಕ್ಷಕ್ಕೆ ಹೊಡೆತ ಬೀಳುತ್ತಿದ್ದು ಮುಖ್ಯ ನಾಯಕರನ್ನೇ ಕಳೆದುಕೊಂಡು ತನ್ನ ಬಲ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ಈ ನಡೆ ಬಿಜೆಪಿಗೆ ವರದಾನವಾಗಲಿದ್ದು ಇದರ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಹೊರಬೀಳಲಿದೆ.!

–ಅರ್ಜುನ್ ಭಾರದ್ವಾಜ್

 

Tags

Related Articles

Close