ಪ್ರಚಲಿತ

ಬ್ರೇಕಿಂಗ್! ಕಾಂಗ್ರೆಸ್‌ನಿಂದ ಮತ್ತೊಬ್ಬ ಶಾಸಕ ರಾಜೀನಾಮೆ.? ಮಗುಚಿ ಬೀಳುತ್ತಾ ಸಮ್ಮಿಶ್ರ ಸರಕಾರ..?

ದಿನ ಕಳೆದಂತೆ ಮೈತ್ರಿ ಸರಕಾರದ ಭಿನ್ನಾಭಿಪ್ರಾಯ ಹೆಚ್ಚಾಗುತ್ತಲೇ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡ ದಿನದಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಮನಸ್ತಾಪ ಉಂಟಾಗುತ್ತಲೇ ಇದೆ. ಪಕ್ಷಣ ಮುಖಂಡರು ಅಸಮಧಾನಗೊಂಡ ಶಾಸಕರನ್ನು ಸಮಾಧಾನಗೊಳಿಸಿದರೂ ಕೂಡ ದಿನೇ ದಿನೇ ಈ ಎರಡೂ ಪಕ್ಷಗಳ ಕಿತ್ತಾಟ ಜೋರಾಗುತ್ತಲಿದೆ. ಇದೀಗ ಸಚಿವ ಸಂಪುಟ ರಚನೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಾಸಕರು ಪಕ್ಷ ಬಿಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಮೈತ್ರಿ ಸರಕಾರದಲ್ಲಿ ಕೋಲಾಹಲ ಎದ್ದಿದೆ. ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರೂ ಕೂಡ ಕಾಂಗ್ರೆಸ್ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಿತ್ತು. ಆದರೆ ಇದೀಗ ಕಾಂಗ್ರೆಸ್ ಊಹಿಸಿದಂತೆ ನಡೆಯದೇ ಇದ್ದಾಗ ಶಾಸಕರು ಆಕ್ರೋಷಗೊಂಡು ನೇರವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.!

ಪಕ್ಷ ಬಡುವ ಬಗ್ಗೆ ಗಂಭೀರ ಚಿಂತೆನೆ ನಡೆಸಿದ ಜಾರಕಿಹೊಳಿ..!

ಯಮಕ್ಕನಮರಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವಂತಹ ಸತೀಶ್ ಜಾರಕಿಹೊಳಿ ಅವರಿಗೆ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಗುವ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಇದೀಗ ಸಚಿವ ಸಂಪುಟದ ರಚನೆಯಾಗಿದ್ದು, ಜಾರಕಿಹೊಳಿ ಅವರ ಹೆಸರನ್ನೇ ಕೈಬಿಡಲಾಗಿದೆ. ಆದ್ದರಿಂದ ಆಕ್ರೋಷಗೊಂಡ ಜಾರಕಿಹೊಳಿ ಅವರು ಇಂದು ಸಂಜೆಯೊಳಗೆ ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್‌‌ನಿಂದ ಹೊರ ಬರಲು ತಯಾರಾದ ಎಂಬಿ ಪಾಟೀಲ್ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದು, ಅದರ ಬೆನ್ನಲ್ಲೇ ಇದೀಗ ಜಾರಕಿಹೊಳಿ ಅವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

 

ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನ ಪ್ರಭಾವಿ ಶಾಸಕರಾಗಿದ್ದು ಖಂಡಿತವಾಗಿ ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ತಾವು ಹಾಕುದ ಎಲ್ಲಾ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದ್ದು, ಸಚಿವ ಸಂಪುಟದ ಪಟ್ಟಿ ಹೊರ ಬೀಳುತ್ತಿದ್ದಂತೆ ಕೆಂಡಾಮಂಡಲವಾಗಿದ್ದಾರೆ.!

ಅಂತ್ಯಗೊಳ್ಳುತ್ತಾ ಮೈತ್ರಿ ಸರಕಾರ..?

ಜೆಡಿಎಸ್‌ ಮತ್ತು ಕಾಂಗ್ರೆಸ್ ಮಾಡಿಕೊಂಡಿರುವುದು ಅಪವಿತ್ರ ಮೈತ್ರಿ ಎಂದು ಎಲ್ಲರಿಗೂ ಗೊತ್ತಿದೆ. ಮೈತ್ರಿಯ ವಿಚಾರವಾಗಿ ಸ್ವತಃ ಎರಡೂ ಪಕ್ಷಗಳ ಶಾಸಕರಲ್ಲೇ ಅಸಮಧಾನವಿದ್ದು, ಇದೀಗ ಸಂಪುಟ ರಚನೆಯಾಗುತ್ತಿದ್ದಂತೆ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದೇ ರೀತಿ ಸಾಲು ಸಾಲು ಶಾಸಕರು ರಾಜೀನಾಮೆ ನೀಡಿದ್ದೇ ಆದಲ್ಲಿ ಮೈತ್ರಿ ಸರಕಾರ ಹೆಚ್ಚುದಿನ ಮುಂದುವರಿಯಲು ಸಾಧ್ಯವಿಲ್ಲ. ಯಾಕೆಂದರೆ ಎರಡೂ ಪಕ್ಷಗಳ ಶಾಸಕರ ಒಮ್ಮತದಿಂದಲೇ ಮೈತ್ರಿ ನಡೆದಿತ್ತು, ಅದೇ ರೀತಿ ಕೇವಲ ಮೈತ್ರಿಗಾಗಿ ಶಾಸಕರನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ ಅಸಮಧಾನಗೊಂಡ ಶಾಸಕರು , ತಮ್ಮ ಪಕ್ಷದ ವಿರುದ್ಧವೇ ಕೆಂಡಕಾರಿದ್ದಾರೆ.!
ಆದ್ದರಿಂದ ಸಚಿವ ಸ್ಥಾನಕ್ಕಾಗಿಯೇ ಕಾಯುತ್ತಿದ್ದ ಶಾಸಕರಿಗೆ ನಿರಾಸೆ ಉಂಟಾಗಿದ್ದು, ಪಕ್ಷದಿಂದ ಹೊರ ನಡೆಯುತ್ತಾರೋ ಅಥವಾ ಪಕ್ಷದಲ್ಲೇ ಇದ್ದು ಸುಮ್ಮನಾಗುತ್ತಾರೋ ಎಂದು ನೋಡಬೇಕಾಗಿದೆ..!

–ಅರ್ಜುನ್

Tags

Related Articles

Close