ಪ್ರಚಲಿತ

ಬ್ರೇಕಿಂಗ್! ರೈತರ ಸಾಲಮನ್ನಾ ವಿಚಾರವಾಗಿ ಮತ್ತೆ ಉಲ್ಟಾ ಹೊಡೆದ ದೇವೇಗೌಡರು.! ಅಪ್ಪ-ಮಗನ ನಾಟಕಕ್ಕೆ ಕೊನೆ ಎಂದು..?

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಪಟ್ಟ ಏರಿರುವ ಕುಮಾರಸ್ವಾಮಿ ಅವರು, ಚುನಾವಣೆಗೂ ಮೊದಲು ಯಾವ ರೀತಿ ದ್ವಂದ್ವ ಹೇಳಿಕೆ ನೀಡುತ್ತಿದ್ದರೋ , ಅದೇ ರೀತಿ ಇದೀಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ ನಡೆದುಕೊಳ್ಳುತ್ತಿದ್ದಾರೆ. ಯಾಕೆಂದರೆ ಚುನಾವಣೆಗೂ ಮುನ್ನ ನನ್ನ ಕೈಗೆ ಅಧಿಕಾರ ಕೊಟ್ಟು ನೋಡಿ , ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದ ಕುಮಾರಸ್ವಾಮಿ ಅವರು ಇದೀಗ ಮುಖ್ಯಮಂತ್ರಿಯಾಗಿ ಇಷ್ಟು ದಿನವಾದರೂ ಕೂಡ ಸಾಲಮನ್ನಾದ ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಳ್ಳದೆ ಉಡಾಫೆಯಿಂದ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಬಗ್ಗೆ ಕಾಳಜಿ ವಹಿಸಿಕೊಂಡಿದ್ದು ಕೇವಲ ಅಧಿಕಾರದ ಆಸೆಗಾಗಿ ಎಂಬುದು ಸದ್ಯ ಎಲ್ಲರಿಗೂ ಅರ್ಥವಾಗಿದೆ. ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲವೇ ದಿನಗಳಲ್ಲಿ ಸಾಲಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಸಿಎಂ ಕುಮಾರಸ್ವಾಮಿ ಮಾತ್ರವಲ್ಲದೆ ಜೆಡಿಎಸ್ ವರಿಷ್ಟ , ಕುಮಾರಸ್ವಾಮಿ ಅವರ ಅಪ್ಪ ಎಚ್.ಡಿ.ದೇವೇಗೌಡರು ಕೂಡ ಮಗನ ಬೆಂಬಲಕ್ಕೆ ನಿಂತು ತಮಗೆ ರಾಜ್ಯದ ಬಗೆಗಿರುವ ನಿಜವಾದ ಕಾಳಜಿ ಏನೆಂಬುವುದನ್ನು ಸಾರಿದ್ದಾರೆ..!

ಮೈತ್ರಿ ಸರಕಾರದಲ್ಲಿ ಇದೆಲ್ಲಾ ಕಷ್ಟಸಾಧ್ಯ..!

ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡಿತೇ ವಿನಃ, ರಾಜ್ಯದ ಅಭಿವೃದ್ಧಿಗಾಗಿ ಅಲ್ಲ. ಯಾಕೆಂದರೆ ಇದೀಗ ದೇವೇಗೌಡರು ಕೂಡ ತನ್ನ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ಪರವಾಗಿಯೇ ಬ್ಯಾಟಿಂಗ್ ನಡೆಸಿದ್ದಾರೆ. ಕುಮಾರಸ್ವಾಮಿ ಹೇಳಿರುವುದರಲ್ಲಿ ಯಾವುದೇ ಗೊಂದಲ ಬೇಡ, ಯಾಕೆಂದರೆ ಸಮ್ಮಿಶ್ರ ಸರಕಾರ ಆಡಳಿತದಲ್ಲಿದೆ , ಆದ್ದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಎರಡೂ ಪಕ್ಷಗಳ ಒಪ್ಪಿಗೆ ಅಗತ್ಯ. ಆದ್ದರಿಂದ ಸಾಲಮನ್ನಾ ಸದ್ಯಕ್ಕಿಲ್ಲ ಎಂದ ಕಡಾಖಂಡಿತವಾಗಿ ಹೇಳಿಕೊಂಡಿದ್ದಾರೆ.

ಈಗಾಗಲೇ ಕುಮಾರಸ್ವಾಮಿ ಅವರೂ ಕೂಡ ಈ ಬಗ್ಗೆ ಹೇಳಿಕೊಂಡಿದ್ದರು. ಮುಖ್ಯಮಂತ್ರಿಯಾದ ೨೪ ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡು , ಜನರಲ್ಲಿ ನಂಬಿಕೆ ಹುಟ್ಟಿಸಿ ಕನಿಕರದಿಂದ ಅಧಿಕಾರ ಗಿಟ್ಟಿಸಿಕೊಂಡಿದ್ದರು. ಆದರೆ ಇದೀಗ ಈ ಬಗ್ಗೆ ಏನೂ ನಿರ್ಧಾರ ಕೈಗೊಳ್ಳದೆ , ದಿನದಿಂದ ದಿನಕ್ಕೆ ಒಂದೊಂದು ಹೇಳಿಕೆ ನೀಡಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.!

ಮೈತ್ರಿಗೂ ಮೊದಲೇ ಇವೆಲ್ಲಾ ಗೊತ್ತಿರಲಿಲ್ಲವೇ..?

ದೇವೇಗೌಡರು ಇದೀಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಈ ರೀತಿ ಹೇಳಿಕೆ ನೀಡುವುದರಲ್ಲಿ ಯಾವುದೇ ಹುರುಳಿಲ್ಲ. ಯಾಕೆಂದರೆ ಮೈತ್ರಿ ಸರಕಾರ ರಚನೆಯಾದರೆ ಯಾವ ರೀತಿ ತೊಂದರೆಗಳು ಎದುರಿಸಬೇಕಾಗುತ್ತದೆ ಎಂಬುದು ದೇವೇಗೌಡರಿಗೆ ಚೆನ್ನಾಗಿ ಗೊತ್ತಿರುವ ವಿಚಾರ. ಆದರೂ ಇದೀಗ ತಮ್ಮ ಮಗನ ಕೈಗೆ ಅಧಿಕಾರ ಬಂದ ನಂತರ ಈ ರೀತಿ ಬೇಜಾವಾಬ್ದಾರಿಯಿಂದ ಹೇಳಿಕೆ ನೀಡುವುದಲ್ಲದೆ, ತಮ್ಮ ಮಗನ ಉಡಾಫೆಯ ಮಾತಿಗೂ ಬೆಂಬಲ ನೀಡುತ್ತಿದ್ದಾರೆ.!

ಆದ್ದರಿಂದ ರೈತರ ಸಾಲ ಮನ್ನಾ ಎಂಬುದು ಕೇವಲ ಒಂದು ಹೇಳಿಕೆಯಷ್ಟೇ. ಅದನ್ನು ಕಾರ್ಯರೂಪಕ್ಕೆ ತರಲು ಮುಖ್ಯಮಂತ್ರಿ ಕುಮಾರಸ್ವಾಮಿಗೂ ಇಚ್ಛೆಯಿಲ್ಲ ಎಂಬುದು ಸದ್ಯ ಸ್ಪಷ್ಟವಾಗಿ ತಿಳಿಯುತ್ತಿದೆ. ರೈತರ ಹೆಸರಿನಲ್ಲಿ ಅಧಿಕಾರ ವಹಿಸಿಕೊಂಡು ಇದೀಗ ರೈತರ ಕಷ್ಟಗಳಿಗೆ ಕ್ಯಾರೇ ಅನ್ನದೆ ಕೇವಲ ತಮ್ಮ ಸಚಿವ ಸಂಪುಟ ರಚನೆಯ ಬಗ್ಗೆಯೇ ಚರ್ಚಿಸುತ್ತಿದ್ದು ಬೇಜವಾಬ್ದಾರಿತನದ ಸರಕಾರ ನಡೆಸುತ್ತಿದ್ದಾರೆ..!

  • ಅರ್ಜುನ್
Tags

Related Articles

Close