ಪ್ರಚಲಿತ

ಬಿಗ್ ನ್ಯೂಸ್! ಹವಾಲ ಕೇಸ್‍ನಲ್ಲಿ ಸಿಕ್ಕಿಬಿದ್ದ ಡಿಕೆಶಿ! ಖತರ್ನಾಕ್ ಪ್ಲಾನ್ ನೋಡಿದ್ರೆ ಬೆಚ್ಚಿ ಬೀಳ್ತೀರಾ! ಪವರ್ ಪುಲ್ ಮಿನಿಸ್ಟರ್ ಬಂಧನಕ್ಕೆ ಕ್ಷಣಗಣನೆ!

ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂತಾರಲ್ಲ ಹಾಗೆ ತಪ್ಪು  ಮಾಡಿದವರು ಒಂದಲ್ಲಾ ಒಂದು ದಿನ ಸಿಕ್ಕಿ ಹಾಕಿಕೊಂಡು ಶಿಕ್ಷೆ ಅನುಭವಿಸಲೇಬೇಕಾಗುತ್ತದೆ. ಅದೂ ಈಗಿನ ಕಾಲದಲ್ಲಂತೂ ತಪ್ಪಿಸಿಕೊಳ್ಳೋಕ್ಕೆ ನೋ ಛಾನ್ಸ್. ಇದು ಈಗ ಮತ್ತೆ ಸಾಭೀತಾಗಿದೆ. ಕರ್ನಾಟಕದ ಅತ್ಯಂತ ಪವರ್ ಫುಲ್ ಸಚಿವ ಡಿಕೆ ಶಿವಕುಮಾರ್‍ಗೆ ಇದೀಗ ಬಂಧನದ ಭೀತಿ ಆರಂಭವಾಗಿದೆ. ಒಂದರ್ಥದಲ್ಲಿ ಕೆಲವೇ ಕ್ಷಣಗಳಲಿ ಸಚಿವ ಡಿಕೆಶಿಯ ಬಂಧನವಾಗುತ್ತದೆ ಎಂದೇ ಹೇಳಲಾಗುತ್ತಿದೆ.

ಹವಾಲ ಕೇಸ್‍ನಲ್ಲಿ ಸಿಕ್ಕಿಬಿದ್ದ ಡಿಕೆಶಿ..!

ಎಸ್… ಇದೀಗ ಬಂದ ಶಾಕಿಂಗ್ ನ್ಯೂಸ್ ಇದು. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲೇ ಗಮನ ಸೆಳೆದಿದ್ದ ಕಾಂಗ್ರೆಸ್ ಪಕ್ಷದ ನಾಯಕ ಡಿಕೆ ಶಿವಕುಮಾರ್ ಅವರು ಭಾರತದ ಪಾಲಿಗೆ ಅತ್ಯಂತ ಘೋರ ಅಪರಾಧವಾಗಿರುವ ಹವಾಲ ಕೇಸ್‍ನಲ್ಲಿ ಸಿಕ್ಕಿಹಾಕೊಂಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಕೇಸ್ ದಾಖಲಿಸಿಕೊಂಡಿರುವ ಐಟಿ ಇಲಾಖೆ ಡಿಕೆಶಿಯನ್ನು ಬಂಧಿಸಲು ಕೋರ್ಟ್ ಅನುಮತಿಗಾಗಿ ಕಾಯುತ್ತಿದ್ದಾರೆ. ಇಂದು ಬಯಲಾದ ಡಿಕೆ ಶಿವಕುಮಾರ್ ಅವರ ವಂಚನೆಯ ರಹಸ್ಯ ಕಂಡು ಸ್ವತಃ ಐಟಿ ಇಲಾಖೆಯೇ ಬೆಚ್ಚಿ ಬಿದ್ದಿದೆ.

ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ಆಪ್ತ ರಾಜೇಂದ್ರ ಎನ್ನುವವನ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ಸಿಕ್ಕಿದ್ದ ಡೈರಿಯಲ್ಲಿ ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ. ಶರ್ಮಾ ಟ್ರಾನ್ಸ್‍ಪೋರ್ಟ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ರಾಜೇಂದ್ರ ಎಂಬವನೇ ಡಿಕೆಶಿ ಆಪ್ತ. ಈತನ ಮನೆ ಹಾಗೂ ಅಪಾರ್ಟ್‍ಮೆಂಟ್ ಸಹಿತ ಕಛೇರಿಯ ಮೇಲೂ ಐಟಿ ಇಲಾಖೆ ದಾಳಿ ನಡೆಸಿದೆ.

ಕೆಜಿಗಳಲ್ಲಿ ಹಣ..?

ಡಿಕೆಶಿ ಆಪ್ತ ರಾಜೇಂದ್ರ ಎಂಬವನ ಮನೆಯಲ್ಲಿ ಸಿಕ್ಕಿದ್ದ ಡೈರಿಯಲ್ಲಿ ಹಣಗಳನ್ನು ಕೆಜಿಗಳ ಲೆಕ್ಕದಲ್ಲಿ ಬರೆದಿದ್ದ ಅಂಶಗಳು ಪತ್ತೆಯಾಗಿದ್ದವು. ಒಂದು ಲಕ್ಷ ಹಣಗಳನ್ನು ಒಂದು ಕೆಜಿ ಎಂಬ ಕೋಡ್‍ವರ್ಡ್ ಮೂಲಕ ಬರೆದಿತ್ತು. ಇದು ಹವಾಲ ವ್ಯವಹಾರದ ಗುಟ್ಟು. ಹವಾಲ ವ್ಯವಹಾರದಲ್ಲಿ ಇಂತಹಾ ಕೋಟ್‍ವರ್ಡ್‍ಗಳನ್ನೇ ಬಳಸಲಾಗುತ್ತಿದೆ. ಹೀಗಾಗಿ ಲಕ್ಷ ಹಣವನ್ನು ಕೆಜಿ ಎಂದು ನಮೂದಿಸಲಾಗಿದೆ.

ಎಐಸಿಸಿಗೆ 5 ಕೋಟಿ..!

ಪತ್ತೆಯಾದ ಡೈರಿಯಲ್ಲಿ ಎಐಸಿಸಿಗೆ ನೀಡಲಾಗಿದ್ದ ಹಣದ ಬಗ್ಗೆಯೂ ಬರೆಯಲಾಗಿದೆ. ಎಐಸಿಸಿಗೆ 5 ಕೋಟಿ ನೀಡುವಂತೆ ವಿ.ಮುಳಗುಂದ್ ಎಂಬಾತನಿಗೆ 5 ಕೋಟಿಗಳಷ್ಟು ಹಣಗಳನ್ನು ನೀಡಿದ್ದ ಬಗ್ಗೆ ಈ ಡೈರಿಯಲ್ಲಿ ದಾಖಲಾಗಿದೆ. ಇನ್ನು ಕೆಲ ಫ್ಲಾಟ್‍ಗಳಲ್ಲಿ ಡಿಕೆಶಿಯ ಅಕ್ರಮ ಹಣಗಳನ್ನು ಕೂಡಿಟ್ಟಿದ್ದ ಮಾಹಿತಿಯೂ ಈ ಡೈರಿ ಹೊರ ಹಾಕಿದೆ ಎಂದು ಐಟಿ ಇಲಾಖೆ ನಮೂದಿಸಿಕೊಂಡಿದೆ.ಸಫ್ದರ್ ಜಂಗ್‍ನ 3 ಫ್ಲಾಟ್‍ಗಳು ಅಘೋಷಿತ ಹಣ ಸಂಗ್ರಹಣೆಗೆ ಬಳಕೆಯಾದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮಾತ್ರವಲ್ಲದೆ ದೆಹಲಿಯ 4 ಫ್ಲಾಟ್‍ಗಳ ಮೇಲೆ ಐಟಿ ದಾಳಿ ನಡೆಸಿದ್ದ ವೇಳೆಯೂ 8.59 ಕೋಟಿಗಳಷ್ಟು ಹಣ ಪತ್ತೆಯಾಗಿತ್ತು. ಈ ಹಣಕ್ಕೆ ಯಾವುದೇ ದಾಖಲೆಗಳೂ ಇರಲಿಲ್ಲ. ಮಾತ್ರವಲ್ಲದೆ ಡಿಕೆಶಿಯ ಮತ್ತೋರ್ವ ಆಪ್ತ ಆಂಜನೇಯಗೂ 3.24 ಕೋಟಿ ಹಣಗಳನ್ನು ರಾಜೇಂದ್ರ ನೀಡಿದ್ದ ಎಂಬ ಬಗ್ಗೆ ಸಾಕ್ಷ್ಯಗಳನ್ನು ಐಟಿ ಸಿದ್ದಪಡಿಸಿದೆ. ಇದನ್ನು ಸ್ವತ ಈ ಈರ್ವರು ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್‍ಗೆ ಕೋಟ್ಯಾಂತರ ರೂಪಾಯಿಗಳಷ್ಟು ಹಣಗಳನ್ನು ನೀಡಿದ್ದ ಡಿಕೆ ಶಿವಕುಮಾರ್ ಅವರ ಅಕ್ರಮ ಚಟುವಟಿಕೆಗಳು ಕೂಡಾ ಬಯಲಾಗಿದೆ. ಈ ಹಣ ಯಾರಿಗೆ ತಲುಪಿದೆ, ಎಷ್ಟು ತಲುಪಿದೆ ಎಂಬುವುದರ ಬಗ್ಗೆಯೂ ಸ್ಪಷ್ಟ ದಾಖಲೆಯನ್ನು ಐಟಿ ಹಾಗೂ ಇಡಿ ಸಿದ್ದಪಡಿಸಿಕೊಂಡಿದೆ. ಅಘೋಷಿತ ಹಣಗಳನ್ನು ಸಂಗ್ರಹದಲ್ಲಿ ಡಿಕೆಶಿವಕುಮಾರ್ ನಿರತರಾಗಿದ್ದ ಬಗ್ಗೆಯೂ ಐಟಿ ಮಾಹಿತಿ ಕಲೆ ಹಾಕಿದೆ. ಈ ಬಗ್ಗೆ ಆಂಜನೇಯ ಹಾಗೂ ರಾಜೇಂದ್ರ ವಿರುದ್ಧ ಐಟಿ ಇಲಾಖೆ ತನಿಕೆ ನಡೆಸಿದ್ದು ಈ ವೇಳೆ ಈ ಇಬ್ಬರೂ ತಪ್ಪೊಪ್ಪಿಕೊಂಡಿದ್ದದು ಇದೀಗ ಉಲ್ಟಾ ಹೊಡೆದಿದ್ದಾರೆ. “ಹೌದು, ನನ್ನ ಬಳಿತಿದ್ದ ಅಷ್ಟೂ ಹಣ ಡಿಕೆಶಿಯದ್ದು” ಎಂದು ಆಂಜನೇಯ ನೀಡಿದ್ದ ಹೇಳಿಕೆಯನ್ನು ಐಟಿ ಇಲಾಖೆ ದಾಖಲಿಸಿಕೊಂಡಿತ್ತು.

ಯಾರು ಈ ಆಂಜನೇಯ..?

ಆಂಜನೇಯ ಡಿಕೆಶಿವಕುಮಾರ್ ಅವರ ಅತ್ಯಂತ ಆಪ್ತ ಸ್ನೇಹಿತ. ಇದೀಗ ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರದ ಕೇಸ್‍ನಲ್ಲಿ 4ನೇ ಆರೋಪಿ. ಮೂಲತಃ ಬೆಂಗಳೂರು ನಿವಾಸಿಯಾಗಿದ್ದ ಈತ ಆರಂಭದಲ್ಲಿ ವಿಧಾನ ಸೌಧಾದಲ್ಲಿ ಸರ್ಕಾರಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಇದು ಡಿಕೆಶಿಯ ಪವರ್‍ನಿಂದ ಅನ್ನೋದು ಗುಟ್ಟಾಗಿ ಉಳಿದಿಲ್ಲ. ನಂತರ ಈತನನ್ನು ದೆಹಲಿಯ ಕರ್ನಾಟಕ ಭವನಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಆಂಜನೇಯ ಡಿಕೆಶಿ ದೆಹಲಿಗೆ ಬಂದಾಗಲೆಲ್ಲಾ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಡಿಕೆಶಿ ಸಹೋದರ ಹಾಗೂ ಸಂಸದ ಡಿಕೆ ಸುರೇಶ್ ವಾಸವಿರುವ ದೆಹಲಿಯ ಸರ್ಕಾರಿ ಭವನದ ಸಂಪೂರ್ಣ ಉಸ್ತುವಾರಿಯನ್ನು ಸ್ವತಃ ಆಂಜನೇಯನೇ ನೋಡೊಕೊಳ್ಳುತ್ತಿದ್ದ. ಇದೀಗ ಈತ ಡಿಕೆಶಿಯ ಕೇಸ್‍ನಲ್ಲಿ 4ನೇ ಆರೋಪಿಯಾಗಿ ಸಿಕ್ಕಿಹಾಕಿಕೊಂಡಿದ್ದಾನೆ.

 

ಒಟ್ಟಾರೆ ಈ ಬಾರಿ ಡಿಕೆಶಿ ಮೇಲೆ ಹವಾಲಾ ಕೇಸ್ ದಾಖಲಾಗಿದ್ದು ಈ ಕೇಸ್‍ನಿಂದ ಡಿಕೆಶಿ ತಪ್ಪಿಕೊಳ್ಳೋಕ್ಕೆ ಸಾಧ್ಯನೇ ಇಲ್ಲ ಎನ್ನಲಾಗುತ್ತಿದೆ. ದೇಶಕ್ಕೇ ದ್ರೋಹ ಬಗೆಯುವ ಕೆಲಸ ಮಾಡಿದ್ದ ಈ ಡಿಕೆ ಶಿವಕುಮಾರ್ ಕಂಬಿ ಎಣಿಸುವ ದಿನ ಹತ್ತಿರ ಬಂದಿದೆ ಎಂದು ಹೇಳಲಾಗುತ್ತಿದೆ. ಕಳೆದ ಮೂರು ಪ್ರಕರಣದಲ್ಲೂ ಜಾಮೀನು ಪಡೆದುಕೊಂಡಿರುವ ಡಿಕೆಶಿ ಈ ಕೇಸ್‍ನಲ್ಲಿ ತಪ್ಪಿಸಿಕೊಳ್ಳಲು ನೋ ಚಾನ್ಸ್ ಎಂದೇ ಹೇಳಲಾಗುತ್ತಿದೆ.ಈ ಕೇಸ್‍ನಲ್ಲಿ ಜಾಮೀನು ಮಂಜೂರು ಆಗದೇ ಇದ್ದಲ್ಲಿ ಡಿಕೆಶಿ ಜೈಲು ಪಾಲಾಗುವುದು ಶತಸಿದ್ಧ ಎಂದು ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close