ಪ್ರಚಲಿತ

ಭಾರತವನ್ನು “ವಿಕಾಸ” ಮಾಡಿದ್ದೇ ತಾವೆನ್ನುವ ಕಾಂಗ್ರೆಸಿನ ಯುವರಾಜ ವಿಮಾನದಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದರೆ ಇಸ್ರೋ ಸೈಕಲ್ಲಿನಲ್ಲಿ ರಾಕೆಟ್ ನ ಬಿಡಿ ಭಾಗಗಳನ್ನು ಸಾಗಿಸುತ್ತಿತ್ತು. 

ಭಾರತದ ಅಂತರಿಕ್ಷದ ಬಾಹುಬಲಿಯೆಂದೇ ಖ್ಯಾತಿವೆತ್ತ ಪಿ.ಎಸ್.ಎಲ್.ವಿ ಉಪಗ್ರಹ ಉಡ್ಡಕ ಯಂತ್ರದ ಯಶೋಗಾಥೆಯ ಹಿಂದೆ ಎಂತಹ ಮನ ಕಲಕುವ ಸಂಘರ್ಷವಿದೆ ಗೊತ್ತೆ? ಇವತ್ತು ದೇಶ ವಿದೇಶದ ನೂರು ಉಪಗ್ರಹಗಳನ್ನು ತನ್ನ ಬೆನ್ನ ಮೇಲೆ ಎತ್ತಿಕೊಂಡು ಹೋಗಿ ಅಂತರಿಕ್ಷದ ಕಕ್ಷೆಯಲ್ಲಿ ಕರಾರುವಕ್ಕಾಗಿ ಬಿಟ್ಟು ಬಂದ ಪಿ.ಎಸ್.ಎಲ್.ವಿ ಇಸ್ರೋದ ಹೆಮ್ಮೆ ಆದರೆ, ಒಂದೇ ನೆಗೆತಕ್ಕೆ ಮಂಗಳನ ಅಂಗಳಕ್ಕೆ ನೆಗೆದ ಇಸ್ರೋ ಸಾಧನೆ ಭಾರತದ ಹೆಮ್ಮೆ. ಒಂದು ಕಾಲದಲ್ಲಿ ಸೈಕಲಿನಲ್ಲಿ ರಾಕೆಟ್ ಬಿಡಿ ಭಾಗಗಳನ್ನು ಥುಂಬಾ ಉಡ್ಡಯನ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು ಮತ್ತು ಉಪಗ್ರಹಗಳನ್ನು ಎತ್ತಿನ ಬಂಡಿಯಲ್ಲಿ ಸಾಗಿಸಲಾಗುತ್ತಿತ್ತೆಂದರೆ ನಾಚಿಕೆ ಮತ್ತು ರೋಷ ಎರಡೂ ಉಕ್ಕಿ ಬರುವುದು.
ನಾಚಿಕೆ ಏಕೆಂದರೆ ನಮ್ಮ ವಿಜ್ಞಾನಿಗಳಿಗೆ ಒಂದು ವಾಹನವನ್ನೂ ಒದಗಿಸುವ ಸಾಮರ್ಥ್ಯ ತಥಾಕಥಿತ ‘ವಿಕಾಸ ಪುರುಷರ’ ಪಕ್ಷವಾದ ಕಾಂಗ್ರೆಸ್ಸಿಗೆ ಇರಲಿಲ್ಲವಲ್ಲಾ ಎಂದು. ರೋಷ ಏಕೆಂದರೆ ಯಾವ ಸಮಯದಲ್ಲಿ ಇಸ್ರೋ ತನ್ನ ರಾಕೆಟ್ ಮತ್ತು ಉಪಗ್ರಹದ ಬಿಡಿಭಾಗಗಳನ್ನು ಸೈಕಲ್ ಮತ್ತು ಎತ್ತಿನ ಗಾಡಿಗಳಲ್ಲಿ ಸಾಗಿಸುತ್ತಿತ್ತೋ ಆ ಕಾಲದಲ್ಲಿ  ಇಂದಿರಾಗಾಂಧಿ ತನ್ನ ಮೊಮ್ಮಗ ಮಂದಬುದ್ದಿ ಯುವರಾಜನ ಹುಟ್ಟು ಹಬ್ಬವನ್ನು ಖಾಸಗಿ ವಿಮಾನದಲ್ಲಿ ಆಚರಿಸುತ್ತಿದ್ದರು. ಎಂತಹ ದೌರ್ಭಾಗ್ಯ ನಮ್ಮ ದೇಶದ್ದು, ಎಂತಹ ಅವಮಾನ ನಮ್ಮ ವಿಜ್ಞಾನಿಗಳಿಗೆ. ಇಂತಹ ಪಕ್ಷದ ಧುರೀಣರು ಇಂದು ಭಾರತವನ್ನು ನಾವು ವಿಕಾಸ ಮಾಡಿದ್ದೇವೆ, ನೆಹರೂ ಇಸ್ರೋ ಅನ್ನು ವಿಕಾಸ ಮಾಡಿದ್ದು ಎಂದು ರೀಲು ಬಿಡುತ್ತಾರೆ.
ಇಸ್ರೋವನ್ನು ಸ್ಥಾಪಿಸಿದ್ದು ಬಿಟ್ಟರೆ ನೆಹರೂ ಒಂದು ಕವಡೆ ಕಾಸಿನ ಸಹಾಯವನ್ನು ಇಸ್ರೋಗೆ ಮಾಡಲಿಲ್ಲ. ಇಸ್ರೋ ಈ ಮಟ್ಟಕ್ಕೆ ಬೆಳೆದಿದ್ದರೆ ಅದರ ಹಿಂದಿನ ಕರ್ತೃ ವಿಕ್ರಂ ಸಾರಾಭಾಯಿ. ಭಾರತೀಯ ಬಾಹ್ಯಾಕಾಶ ಅಭಿಯಾನ ಪಿತಾಮಹ, ಡಾ ವಿಕ್ರಮ್ ಸಾರಾಭಾಯ್ ಅವರು ತಮ್ಮದೆನ್ನುವ ಎಲ್ಲವನ್ನೂ ಇಸ್ರೋ ಬೆಳವಣಿಗೆಗೆ ಧಾರೆ ಎರೆದರು. ಅಬ್ದುಲ್ ಕಲಾಂನಂತಹ ಶ್ರೇಷ್ಠ ವಿಜ್ಞಾನಿಗೆ ಸಂಪೂರ್ಣ ಸಹಾಯ ನೀಡಿ ಭಾರತದಂತಹ “ಬಡ” ದೇಶ ಅಂತರಿಕ್ಷದ ಕನಸು ಕಾಣುವಂತೆ ಮಾಡಿದ ಕೀರ್ತಿ ಸಾರಾಭಾಯ್ ಅವರಿಗೆ ಸಲ್ಲುತ್ತದೆ. ಲಾಲ್ ಬಹಾದುರ್ ಶಾಸ್ತ್ರಿ, ಪಿ.ವಿ.ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿಯಂತಹ ಪ್ರಧಾನಿಗಳು ಸಿಕ್ಕಿರದೆ ಹೋಗಿದ್ದಿದ್ದರೆ ಭಾರತದ ಅಂತರಿಕ್ಷದ ಕನಸು ಕಮರಿಯೇ ಹೋಗುತ್ತಿತ್ತು.
ಭಾರತದ ಅಣುಶಕ್ತಿ ಇಲಾಖೆಯ ಪಿತಾಮಹ ಹೋಮಿ ಭಾಬಾ ಅವರ ಕೊಡುಗೆ ಏನು ಕಮ್ಮಿ ಇಲ್ಲ. ಇಂತಹ ಅಪ್ಪಟ ದೇಶ ಪ್ರೇಮಿಗಳ ನಿಸ್ವಾರ್ಥ ಸೇವೆಯ ಮನೋಭಾವವೇ ಇಂದು ಇಸ್ರೋದ ಯಶೋಗಾಥೆಗೆ ಅಡಿಗಲ್ಲಾಗಿದೆ. ಭಾರತದ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು 1969 ರಲ್ಲಿ ಸ್ಥಾಪಿಸಲಾಯಿತು. 1975 ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ರಷ್ಯಾದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. 1980 ರಲ್ಲಿ ರೋಹಿಣಿ ಎಂಬ ಉಪಗ್ರಹವನ್ನು ಭಾರತದಲ್ಲಿ ಯಶಸ್ವಿಯಾಗಿ ಉಡಾಯಿಸಲಾಯಿತು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ ಇಸ್ರೋ. ಇವತ್ತು ದೊಡ್ಡಣ್ಣ-ಚಿಕ್ಕಣ್ಣಗಳೂ ಮೂಗಿನ ಮೇಲೆ ಬೆರಳಿಟ್ಟು ನಿಬ್ಬೆರಾಗಿ ನೋಡುತ್ತಿರುವ ಇಸ್ರೋ ಸಂಸ್ಥೆಯನ್ನು ಅಂದು ವಿದೇಶೀ ಪತ್ರಿಕೆಯೊಂದು ತುಚ್ಛವಾಗಿ ಚಿತ್ರೀಕರಿಸಿ ಅವಮಾನ ಮಾಡಿತ್ತು.
 
ಒಂದು ಕಾಲದಲ್ಲಿ ತನ್ನ ತಂತ್ರಜ್ಞಾನವನ್ನು ಭಾರತಕ್ಕೆ ಕೊಡಲು ನಿರಾಕರಿಸಿದ ಅಮೆರಿಕಾದಂತಹ ದೇಶಗಳೇ ಇಂದು ತಮ್ಮ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಂತೆ ಇಸ್ರೋಗೆ ದಂಬಾಲು ಬೀಳುತ್ತಿವೆ. ಇಂದು ಇಸ್ರೋ ಸ್ವದೇಶೀ ನಿರ್ಮಿತ ಕ್ರಯೋಜೆನಿಕ್ ತಂತ್ರಜ್ಞಾನ ಒಳಗೊಂಡ ಜಿ.ಎಸ್.ಎಲ್.ವಿ ಯಂತಹ ಉಡ್ಡಕಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ ಎನ್ನಲು ಭಾರತೀಯನಿಗೆ ಹೆಮ್ಮೆ ಎನಿಸುತ್ತದೆ. ಶೀಘ್ರದಲ್ಲೇ ಚಂದ್ರನ ಅಂಗಳಕ್ಕೆ ಇಳಿಯುವ ‘ಚಂದ್ರಯಾನ’ ಮತ್ತು ಶುಕ್ರ ಗ್ರಹದ ವೈಜ್ಞಾನಿಕ ಅಧ್ಯಯನಕ್ಕೆ ‘ಶುಕ್ರ ಯಾನ’ ಯೋಜನೆ ಕಾರ್ಯ ರೂಪಕ್ಕೆ ಬರಲಿದೆ.  ಹೈಪರ್ ಸಾನಿಕ್, ಸೂಪರ್ ಸಾನಿಕ್ ವೇಗದ ಇಂಜಿನ್ ಗಳನ್ನು ತಯಾರಿಸುವಲ್ಲಿಯೂ ಇಸ್ರೋ ಕಾರ್ಯ ನಿರ್ವಹಿಸುತ್ತಿದೆ.  ಪ್ರಸ್ತುತ ಮೋದಿ ಸರಕಾರ ಇಸ್ರೋಗೆ ತನ್ನೆಲ್ಲಾ ಬೆಂಬಲ ನೀಡಿ ಅಂತರಿಕ್ಷದಲ್ಲೂ ಭಾರತದ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುವಲ್ಲಿ ವಿಷೇಶ ಕಾಳಜಿ ವಹಿಸುತ್ತಿದೆ.
ವಿದೇಶಿಗರಿಂದ ಹಾವಾಡಿಸುವವರ ದೇಶವೆಂದು ಜರೆಸಿಕೊಂಡಿದ್ದ ಭಾರತವೀಗ ಅಂತರಿಕ್ಷದ ಬಾಹುಬಲಿಯಾಗಿದೆ. ಇದರಲ್ಲಿ ಇಸ್ರೋದ ವಿಜ್ಞಾನಿಗಳ ಪಾಲು ಬಹಳಷ್ಟಿದೆ. ಕಾಂಗ್ರೆಸ್ ನ ರಾಜ ಪರಿವಾರ ತಾನು ದೇಶದ ವಿಕಾಸ ಮಾಡಿದ್ದು, ತಾನು ಇಸ್ರೋದ ವಿಕಾಸ ಮಾಡಿದ್ದೆಂದು ಹೇಳಿದರೆ ಇಲ್ಲಿ ನಂಬುವವರು ಯಾರೂ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ನೋಡುವ ಬರಗೆಟ್ಟ ಮನಸ್ಥಿತಿ ಪರಿವಾರದ ಗುಲಾಮರಿಗೆ ಹೊರತು ಅಪ್ಪಟ ಭಾರತೀಯರಿಗಿಲ್ಲ. ಹಾಗೆ ನೋಡಿದರೆ ಯೂಪಿಎ 1-2 ಆಡಳಿತಾವಧಿಯಲ್ಲಿ(2006 ಮತ್ತು 2010) ಇಸ್ರೋ ತನ್ನ ಪ್ರಯತ್ನದಲ್ಲಿ ಸೋತ ನೆನಪು ಇನ್ನೂ ಹಸಿ ಹಸಿಯಾಗಿದೆ. ತದನಂತರ ಈವರೆಗೆ ಕೇವಲ ಒಂದೇ ಬಾರಿ ಸೋತಿರುವ ಇಸ್ರೋವನ್ನು  ಅಜೇಯನೆಂದು ಹೇಳಿದರೆ ತಪ್ಪಾಗಲಾರದು.
ಅಂತರಿಕ್ಷದಲ್ಲಿ ಇನ್ನಷ್ಟು ಮತ್ತಷ್ಟು ಸಾಧನೆ ಮಾಡಿ ವಿಶ್ವದೆದುರು ಭಾರತವನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿದ ಇಸ್ರೋ ಮತ್ತು ಅದರ ವಿಜ್ಞಾನಿಗಳಿಗೆ ಹೃದಯ ಪೂರ್ವಕ ನಮನ ಮತ್ತು ಮುಂದಿನ ಸಾಧನೆಗಳಿಗೆ ಶುಭಕಾಮನೆಗಳು.
-ಶಾರ್ವರಿ
Tags

Related Articles

Close