ಪ್ರಚಲಿತ

ಕರ್ನಾಟಕದಲ್ಲೂ ಆಗುತ್ತಾ ರಾಹುಲ್ ಗಾಂಧಿಗೆ ಸೋಲಿನ ಸ್ವಾಗತ!! ರಾಹುಲ್ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತಿರುವುದೇಕೆ?!

ಕರ್ನಾಟಕದ ವಿಧಾನಸಭೆ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ,ರಾಜಕೀಯ ಪಕ್ಷಗಳ ಪ್ರಚಾರವೂ ಭರ್ಜರಿಯಾಗಿ ನಡೆಯುತ್ತಿದೆ.ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯಿಂದಾಗಿ ರಾಜ್ಯದಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ..! ಚುನಾವಣೆಗಾಗಿ ಬಿಜೆಪಿ ಕಾಂಗ್ರೆಸ್ ನಂತಹ ರಾಷ್ಟ್ರೀಯ ಪಕ್ಷಗಳು ತೀವ್ರ ಪೈಪೋಟಿಗೆ ಇಳಿದಿದ್ದು, ಜೆಡಿಎಸ್ ಕೂಡ ಮ್ಯಾಜಿಕ್ ಮಾಡಲು ಯತ್ನಿಸುತ್ತಿದೆ.

ಈಗಾಗಲೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ದೇಶದಲ್ಲಿ ತನ್ನ ಪ್ರಾಬಲ್ಯ ಕಳೆದುಕೊಂಡಿದ್ದು ತನ್ನ ನೆಲೆ ಕಂಡುಕೊಳ್ಳಲು ಪರದಾಡುತ್ತಿದೆ.ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮತ್ತು ದೇಶದ ಜನರ ಹಿತಕ್ಕಾಗಿ ಜಾರಿಗೆ ತರುತ್ತಿರುವ ಯೋಜನೆಗಳಿಂದಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಜನತೆ ಮೆಚ್ಚಿಕೊಂಡಿದೆ.ಕರ್ನಾಟಕದಲ್ಲಿ ಮತ್ತೆ ಅಧಿಕಾರ ಮುಂದುವರೆಸಲು ಹರಸಾಹಸ ಪಡುತ್ತಿರುವ ಕಾಂಗ್ರೆಸ್ ತನ್ನ ಪಕ್ಷದ ರಾಷ್ಟ್ರೀಯ ನಾಯಕರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ.

ರಾಜ್ಯ ಬಿಜೆಪಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನವರ ನೇತ್ರತ್ವದಲ್ಲಿ ನಡೆದ ಪರಿವರ್ತನಾ ಯಾತ್ರೆಯು ರಾಜ್ಯ ಬಿಜೆಪಿ ಗೆ ಹೊಸ ಹುರುಪು ನೀಡಿತ್ತು.ಕರ್ನಾಟಕದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸಾಗಿದ ಈ ಯಾತ್ರೆಯು ಯಶಸ್ವಿಯಾಗಿ ಪ್ರಚಾರ ನಡೆಸಿತ್ತು.ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ನ ಎಲ್ಲಾ ಭ್ರಷ್ಟಾಚಾರ, ಹಗರಣ,ಹಿಂದೂ ವಿರೋಧಿ ನೀತಿ, ಇವೆಲ್ಲವನ್ನೂ ಜನರ ಮುಂದಿಟ್ಟ ಬಿಜೆಪಿ ಕಾಂಗ್ರೆಸ್ ನ ಎಲ್ಲಾ ಅವ್ಯವಹಾರಗಳನ್ನು ರಾಜ್ಯದ ಜನತೆಗೆ ತಿಳಿಸಿದರು.ಇದರಿಂದಾಗಿ ಕಂಗಾಲಾದ ಕಾಂಗ್ರೆಸ್ ಇದೀಗ ತನ್ನ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕರ್ನಾಟಕಕ್ಕೆ ಕರೆಸುತ್ತಿದ್ದು ಪ್ರಚಾರ ನಡೆಸಲು ಸಿದ್ಧವಾಗಿದೆ..!

ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದು ಮುಂದಿನ ವಿಧಾನಸಭಾ ಚುನಾವಣೆಗೆ ಶಂಖನಾದ ಹೊರಡಿಸಿದ್ದರು.ರಾಜ್ಯ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ನ ಎಲ್ಲಾ ಹಗರಣಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ನೋಡಿ ಕಾಂಗ್ರೆಸ್ ಬೆಚ್ಚಿಬಿದ್ದಿತ್ತು..!

ನರೇಂದ್ರ ಮೋದಿಯವರು ಸಮಾವೇಶದಲ್ಲಿ ಮಾಡಿದ ಭರ್ಜರಿ ಭಾಷಣದ ನಂತರ ಬಿಜೆಪಿ ಯಲ್ಲಿ ಉತ್ಸಾಹ ನೂರ್ಮಡಿಗೊಂಡಿತ್ತು.ರಾಜ್ಯ ನಾಯಕರು ಬಹಳ ಕುತೂಹಲದಿಂದ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜಯಭೇರಿ ಸಾದಿಸಲು ತಯಾರಾಗುತ್ತಿದ್ದಾರೆ..!

ನರೇಂದ್ರ ಮೋದಿಯವರ ಸಮಾವೇಶದ ಬಳಿಕ ರಾಜ್ಯ ಬಿಜೆಪಿ ಯಲ್ಲಿ ಹೊಸ ಚೈತನ್ಯ ಕಂಡುಬರುತ್ತಿರುವುದರಿಂದಲೇ ಇದೀಗ ಕಾಂಗ್ರೆಸ್ ಕೂಡ ಭರ್ಜರಿ ಪ್ರಚಾರಕ್ಕೆ ಸಜ್ಜಾಗಿದೆ.ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ಕರ್ನಾಟಕ ಪ್ರವಾಸ ಆರಂಭಿಸಿದ್ದು ,ನಾಲ್ಕು ದಿನಗಳ ಕಾಲ ಕರ್ನಾಟಕದಲ್ಲಿ ಪ್ರಚಾರ ನಡೆಸಲಿರುವ ರಾಹುಲ್ ಗಾಂಧಿಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ವಿಶೇಷ ಬಸ್ ತಯಾರಾಗಿದೆ.ಯಡಿಯೂರಪ್ಪ ನವರ ಮಾದರಿಯಲ್ಲೇ ಪ್ರಚಾರ ನಡೆಸಲು ರಾಹುಲ್ ಗಾಂಧಿ ಎಲ್ಲಾ ತಯಾರಿ ನಡೆಸಿದ್ದಾರೆ..!

ಈಗಾಗಲೇ ದೇಶದ ಎಲ್ಲಾ ಕಡೆಗಳಲ್ಲೂ ಸೊರಗಿ ಹೋಗಿರುವ ಕಾಂಗ್ರೆಸ್ ಗೆ ಕರ್ನಾಟಕ ಮಾತ್ರ ಉಳಿದಿದ್ದು ,ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲೇಬೇಕೆಂದು ಕಾಂಗ್ರೆಸ್ ನಿರ್ಣಯಿಸಿದ್ದು ಪ್ರಚಾರ ಆರಂಭಿಸಿದೆ.ನಾಲ್ಕು ದಿನಗಳ ಕಾಲ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಲಿದ್ದು , ದೊಡ್ಡ ಪ್ರಮಾಣದಲ್ಲಿ ರ್ಯಾಲಿಗಳನ್ನು ಆಯೋಜಿಸುವ ಬದಲು ಜನರೊಂದಿಗೆ ನೇರವಾಗಿ ಬೆರೆಯುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ರಾಜ್ಯದಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಇರುವುದರಿಂದ ಮತದಾರರಿಗೆ ಹತ್ತಿರವಾಗುವುದು ಬಹಳ ಮುಖ್ಯವಾದುದರಿಂದ ಕಾಂಗ್ರೆಸ್ ತಂತ್ರ ರೂಪಿಸಿದೆ..! ಆಡಳಿತ ಪಕ್ಷದ ವಿರೋಧಿ ಅಲೆ ರಾಜ್ಯದಲ್ಲಿ ಹೆಚ್ಚಾಗಿರುವುದರಿಂದ ರಾಹುಲ್ ಪ್ರಚಾರ ಕಾಂಗ್ರೆಸ್ ಗೆ ಮುಖ್ಯವಾಗಿದೆ.

ಉತ್ತರಪ್ರದೇಶ ,ಗುಜರಾತ್, ಹಿಮಾಚಲ ಪ್ರದೇಶ ಹೀಗೆ ಸಾಲು ಸಾಲಾಗಿ ೧೯ ರಾಜ್ಯಗಳನ್ನು ತನ್ನ ತೆಕ್ಕೆಗೆ ತಡಗೆದುಕೊಂಡಿರುವ ಬಿಜೆಪಿ ಕರ್ನಾಟಕವನ್ನು ಈ ಬಾರಿ ತನ್ನ ಬುಟ್ಟಿ ಗೆ ಹಾಕಿಕೊಳ್ಳಲಿದೆ.ಈಗಾಗಲೇ ನರೇಂದ್ರ ಮೋದಿ ಮತ್ತು ಬಿಜೆಪಿ ರಾಜಕೀಯ ಚಾಣಾಕ್ಯ ಅಮಿತ್ ಷಾ ತಂತ್ರ ರೂಪಿಸಿದ್ದು ಕರ್ನಾಟಕದಲ್ಲಿ ಕೇಸರಿ ಪತಾಕೆ ಹಾರಿಸಲು ಸಿದ್ಧತೆ ನಡೆಸಿದ್ದಾರೆ.ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಷಾ ಸೂಚನೆ ನೀಡಿದ್ದು ಕರ್ನಾಟಕದಲ್ಲೂ ಗೆಲುವು ಸಾಧಿಸಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ..! ದೇಶದಲ್ಲಿ ಮೋದಿ – ಷಾ ಜೋಡಿಗೆ ತತ್ತರಿಸಿರುವ ಕಾಂಗ್ರೆಸ್ ಕರ್ನಾಟಕವನ್ನು ಉಳಿಸುವ ಸಲುವಾಗಿ ಪರದಾಡುತ್ತಿದೆ.

ಕರ್ನಾಟಕದಲ್ಲೂ ಗುಜರಾತ್ ತಂತ್ರ ರೂಪಿಸಲು ಸಜ್ಜಾದ ರಾಹುಲ್…!

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಹಿಂದೂಗಳ ಓಲೈಕೆ ಮಾಡುವ ಸಲುವಾಗಿ ದೇವಾಲಯಗಳ ಭೇಟಿ ಮಾಡಿ ಹಿಂದೂ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ ಕಾಂಗ್ರೆಸ್ ಮಹಾರಾಜ ನ ತಂತ್ರ ಫಲ ನೀಡಿರಲಿಲ್ಲ‌. ಕೇವಲ ಚುನಾವಣೆಗಾಗಿ ಹಿಂದೂಗಳ ಓಲೈಕೆ ಮಾಡುವ ಕಾಂಗ್ರೆಸ್ ನ ಎಲ್ಲಾ ತಂತ್ರಗಳಿಗೂ ಮತದಾರರು ಸರಿಯಾದ ಉತ್ತರವನ್ನೇ ನೀಡಿದ್ದಾರೆ.

ಇದೀಗ ಕರ್ನಾಟಕದಲ್ಲೂ ರಾಹುಲ್ ಪ್ರಮುಖ ದೇವಾಲಯಗಳ ಭೇಟಿ ಮಾಡಲು ಯೋಜನೆ ರೂಪಿಸಿದ್ದು ಚುನಾವಣಾ ಡ್ರಾಮಾ ಆರಂಭಿಸಿದ್ದಾರೆ.ಸಿದ್ದರಾಮಯ್ಯನವರ ಆಡಳಿತದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ‌.ಕಾಂಗ್ರೆಸ್ ನ ಅಲ್ಪಸಂಖ್ಯಾತರ ಅತೀಯಾದ ಓಲೈಕೆಯಿಂದಾಗಿ ರಾಜ್ಯದಲ್ಲಿ ಹಿಂದೂ ವಿರೋಧಿ ನೀತಿ ಜಾರಿಯಲ್ಲಿದೆ..!ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ದೇವಾಲಯಗಳ ಭೇಟಿ ಮಾಡುತ್ತಿದ್ದು ,ರಾಜ್ಯದ ಹಿಂದೂಗಳ ಮತ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಗುಜರಾತ್ ನಲ್ಲಿ ಪ್ರತೀ ರ್ಯಾಲಿಗೂ ಮೊದಲು ದೇವಾಲಯಗಳ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ರಾಹುಲ್ ಸ್ವಲ್ಪ ಮಟ್ಟಿಗೆ ಹಿಂದೂಗಳ ಮತ ಗಳಿಸಿದ್ದರು.ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಸಂಪೂರ್ಣವಾಗಿ ಹಿಂದೂಗಳನ್ನು ಮತ್ತು ಹಿಂದೂ ದೇವಸ್ಥಾನಗಳ ವಿರೋಧವಾಗಿ ನಿರ್ಧಾರ ಕೈಗೊಳ್ಳುತ್ತಿದ್ದು ಮುಂದಿನ ಚುನಾವಣೆಗೆ ಕಾಂಗ್ರೆಸ್ ಗೆ ತೊಂದರೆಯಾಗಲಿದೆ.ಅದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಕರ್ನಾಟಕದಲ್ಲಿ ನಾಟಕ ಶುರುಮಾಡಿಕೊಂಡಿದ್ದಾರೆ..! ತಾನು ಜನಸಾಮಾನ್ಯರ ಪರ ಎಂದು ಹೇಳಿಕೊಂಡು ಬರುತ್ತಿರುವ ರಾಹುಲ್ ಗಾಂಧಿ ಮತದಾರರನ್ನು ನೇರವಾಗಿ ಬೆರೆಯುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.ಆದರೆ ರಾಹುಲ್ ಪ್ರವಾಸಕ್ಕೆ ತಯಾರಿಸಿದ ಬಸ್ ಗೆ ಲಕ್ಷ ಲಕ್ಷ ಖರ್ಚು ಮಾಡಿ ಎಲ್ಲಾ ರೀತಿಯ ಐಶಾರಾಮಿ ಸವಲತ್ತುಗಳನ್ನು ಒದಗಿಸಲಾಗಿದೆ..!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈಗಾಗಲೇ ೩-೪ ಬಾರಿ ರಾಜ್ಯ ಪ್ರವಾಸ ಮಾಡಿದ್ದು , ರಾಹುಲ್ ಗಾಂಧಿಯ ಪ್ರವಾಸ ದ ಬೆನ್ನಲ್ಲೇ ಮತ್ತೆ ಕರ್ನಾಟಕಕ್ಕೆ ಲಗ್ಗೆ ಇಡಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದು ,ಇನ್ನೂ ಅನೇಕ ಸಮಾವೇಶ ನಡೆಸಲು ಸಜ್ಜಾಗಿದ್ದಾರೆ..!
ನರೇಂದ್ರ ಮೋದಿಯವರ ಆಡಳಿತಕ್ಕೆ ಮೆಚ್ಚಿ ಈಗಾಗಲೇ ನಡದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಬಹುಮತದಿಂದ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರ್ನಾಟಕವನ್ನೂ ಸೇರಿಸಲು ಸಜ್ಜಾಗಿದ್ದಾರೆ..!

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಪ್ರಚಾರ ಜೋರಾಗಿ ನಡೆಸುತ್ತಿದ್ದು , ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಎಲ್ಲಾ ರೀತಿಯಲ್ಲೂ ದೇಶದ ಜನರನ್ನು ತನ್ನತ್ತ ಸೆಳೆಯುತ್ತಿದೆ..!

–ಅರ್ಜುನ್

Tags

Related Articles

Close