ಪ್ರಚಲಿತ

ಬ್ರೇಕಿಂಗ್! ಪ್ರಧಾನಿ ಮೋದಿ ವಿರುದ್ದ ದೂರು ನೀಡಿದ ಮಾಜಿ ಪ್ರಧಾನಿ..! ಮಾತನಾಡಿದ ಮೌನಿ ಪ್ರಧಾನಿ…!

ಮೌನಿ ಪ್ರಧಾನಿ, ರಿಮೋಟ್ ಕಂಟ್ರೋಲ್ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಚುನಾವಣೆ ಸಂದರ್ಭ ಮಾತನಾಡೋದು ಇದೀಗ ರೂಢಿಯಾಗಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಂಕುಶದಲ್ಲಿ ಅಧಿಕಾರ ನಡೆಸುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇದೀಗ ಪ್ರಧಾನಿ ಮೋದಿ ವಿರುದ್ಧ ದೂರು ನೀಡಿದ್ದಾರೆ. ಅಧಿಕಾರ ನಡೆಸುತ್ತಿದ್ದಾಗ ಬಾಯಿಗೆ ಬೀಗ ಹಾಕಿಕೊಂಡು ಆಡಳಿತ ನಡೆಸುತ್ತಿದ್ದ ಮನಮೋಹನ್ ಸಿಂಗ್ ಇದೀಗ ಮತ್ತೆ ಮಾತನಾಡಿದ್ದಾರೆ.

ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಮಾಜಿ ಪಿಎಂ..!

ಮಾತನಾಡದ ಮೌನಿ ಪ್ರಧಾನಿಯೆಂಬ ಕೀರ್ತಿಗೆ ಪಾತ್ರರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದೀಗ ಕರ್ನಾಟಕ ರಾಜ್ಯ ವಿಧಾನ ಸಾಭ ಚುನಾವಣೆಯಲ್ಲಿ ಮಾತನಾಡಿದ್ದರೆ. ಕಳೆದ ಬಾರಿಯ ಗುಜರಾತ್ ಚುನಾವಣೆಯಲ್ಲೇ ಸಾರ್ವಜನಿಕವಾಗಿ ಕಡೇ ಬಾರಿ ಮಾತನಾಡಿದ್ದ ಮಾಜಿ ಪ್ರಧಾನಿ ಇದೀಗ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಮಾತನಾಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ವಿಧಾನ ಸಭಾ ಚುನಾವಣೆಯ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿದ್ದರು. ಈ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯೇ ಕೇಳಿ ಬಂದಿತ್ತು. ಆದರೆ ಇದೀಗ ಬಂದ ಸುದ್ದಿಯಿಂದ ಸ್ವತಃ ಮೋದಿ ಅಭಿಮಾನಿಗಳೇ ಮಾಜಿ ಮೌನಿ ಪ್ರಧಾನಿಯ ವಿರುದ್ಧ ಕೆಂಡ ಕಾರುವಂತಾಗಿದೆ.

ಮೋದಿ ವಿರುದ್ಧ ರಾಷ್ಟ್ರಪತಿಗೆ ದೂರು ನೀಡಿದ ಮಾಜಿ ಪ್ರಧಾನಿ..!

ಇದೀಗ ಮಾಜಿ ಪ್ರಧಾನಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯ ವಿರುದ್ದ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಅತಿರೇಕದ ಭಾಷೆಗಳನ್ನು ಬಳಸಿದ್ದಾರೆ ಎಂದು ಆರೋಪ ಮಾಡಿ ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ.

Image result for modi with manmohan singh

“ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆದರಿಕೆಯ ಭಾಷಣಗಳನ್ನು ಮಾಡಿದ್ದಾರೆ. ಪ್ರಧಾನ ಮಂತ್ರಿ ಅಲಂಕರಿಸಿದವರು ಇಂತಹಾ ಬೆದರಿಕೆ ಒಡ್ಡುವ ರೀತಿಯ ಪದಗಳನ್ನು ಪ್ರಯೋಗಿಸುವುದು ಸರಿಯಲ್ಲ. ಜತೆಗೆ ಮೋದಿ ಅವರು ಸಾರ್ವಜನಿಕವಾಗಿಯೇ ಕಾಂಗ್ರೆಸ್‍ನ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಪ್ರಧಾನಿ ಮೋದಿ ಅವರ ಬೆದರಿಕೆ ಕಾಂಗ್ರೆಸ್‍ನ ನಾಯಕರಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲೀ ಬೆದರುವುದಿಲ್ಲ” ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ದೂರಲಾಗಿದೆ.

ಮೇ 6 ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್‍ಗೆ ಎಚ್ಚರಿಕೆಯ ಭಾಷಣ ಮಾಡಿದ್ದರು. “ಕಾಂಗ್ರೆಸ್ ನಾಯಕರೇ ಕಿವಿಗೊಟ್ಟು ಕೇಳಿ. ನೀವು ನಿಮ್ಮ ಎಲ್ಲೆಯನ್ನು ಮೀರಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾದೀತು” ಎಂದು ಹೇಳಿದ್ದರು ಅಷ್ಟೆ. ಅಷ್ಟಕ್ಕೆ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೂರು ನೀಡಿದ್ದಾರೆ.

ಒಟ್ಟಾರೆ ಸತತ ಸೋಲಿನಿಂದ ಹತಾಶರಾಗಿರುವ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು ಇದೀಗ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಧಾರ ರಹಿತವಾದ ಸಣ್ಣ ಪ್ರಕರಣವನ್ನು ಮುಂದಿಟ್ಟುಕೊಂಡು ದೂರು ನೀಡಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಚುನಾವಣೆಯಿಂದ ಪ್ರಧಾನಿಯನ್ನು ಎದುರಿಸೋದು ಸಾಧ್ಯವಿಲ್ಲ ಎಂಬುವುದನ್ನು ಮನಗಂಡ ಕಾಂಗ್ರೆಸ್ ನಾಯಕರು ಇಂತಹ ನಡೆಗೆ ಮುಂದಾಗಿರುವುದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close