ಪ್ರಚಲಿತ

ಬಿಜೆಪಿಯಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ ಅಡ್ವಾಣಿ.! ವಿಜಯ ಮಾಲೆ ಹಾಕಲು ತಯಾರಾದ ನಮೋ..!

೨೦೧೪ರ ಲೋಕಸಭಾ ಚುನಾವಣೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನರೇಂದ್ರ ಮೋದಿ ನೇತ್ರತ್ವದ ಭಾರತೀಯ ಜನತಾ ಪಕ್ಷ, ಇದೀಗ ೨೦೧೯ರ ಲೋಕಸಭಾ ಚುನಾವಣೆಯಲ್ಲೂ ಅಭೂತಪೂರ್ವ ಯಶಸ್ಸು ಕಂಡುಕೊಳ್ಳಲು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಯಾಕೆಂದರೆ ನರೇಂದ್ರ ಮೋದಿಯವರ ಪಾಲಿಗೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಅತ್ಯಂತ ಮಹತ್ತರವಾದ ಘಟ್ಟವಾಗಿದ್ದು, ಗೆಲ್ಲಲೇಬೇಕಾದ ಅನಿವಾರ್ಯ ಎದುರಾಗಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಮೋದೀಜೀ ಮುಂದಿನ‌ ಬಾರಿಯೂ ಪ್ರಧಾನಿ ಪಟ್ಟ ಉಳಿಸಿಕೊಳ್ಳಲೇಬೇಕು.‌ ಯಾಕೆಂದರೆ ಕಾಂಗ್ರೆಸ್ ಆಡಳಿತದಲ್ಲಿ ಮಂಡಯೂರಿದ್ದ ಭಾರತವನ್ನು ಮತ್ತೆ ಎದ್ದು ನಿಲ್ಲಿಸಿದ ಮೋದೀಜೀ ಈಗಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ..!

ಇತ್ತ ಕರ್ನಾಟಕದಲ್ಲೂ ಬಿಜೆಪಿ ಬಹುಮತ ಸಾಧಿಸಲು ಸಾಧ್ಯವಾಗದೆ ಅಧಿಕಾರದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು.‌ ವಿರೋಧಿ ಬಣಗಳು ಒಟ್ಟಾಗಿ ನರೇಂದ್ರ ಮೋದಿ ವಿರುದ್ಧ ತೊಡೆ ತಟ್ಟಿದರ, ಇತ್ತ ಮೋದಿ ಒಬ್ಬಂಟಿಯಾಗಿ ವಿರೋಧಿಗಳ ಬೇಟೆಗೆ ಸಜ್ಜಾಗಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಇದೂಗ ಸರಕಾರ ನಡೆಸುತ್ತಿದ್ದು, ದೇಶದ ಎಲ್ಲಾ ವಿರೋಧ ಪಕ್ಷಗಳು ಒಂದಾಗುವ ಮುನ್ಸೂಚನೆ ದೊರಕಿದೆ. ಆದ್ದರಿಂದ ೨೦೧೯ ರ ಲೋಕಸಭಾ ಚುನಾವಣೆ ನರೇಂದ್ರ ಮೋದೀಜೀ ಅವರಿಗೆ ಒಂದು ಸವಾಲಾಗಿದ್ದು, ಈ ಸವಾಲಿನಲ್ಲಿ ಗೆಲ್ಲಲು ಮೋದೀಜಿ ಭರ್ಜರಿ ಮಾಸ್ಟರ್ ಪ್ಲಾನ್ ಒಂದನ್ನು ಹೂಡಿದ್ದಾರೆ..!

Image result for modi

ಹಿರಿಯ ನಾಯಕರಿಗೆ ಬಿಜೆಪಿ ಮಣೆ…!

ಭಾರತೀಯ ಜನತಾ ಪಕ್ಷ ಈವರೆಗೂ ಪಕ್ಷದ ಹಿರಿಯರ ಮಾರ್ಗದರ್ಶನದಂತೆ ನಡೆದುಕೊಂಡು ಬಂದ ಪಕ್ಷ. ‌ಆದ್ದರಿಂದಲೇ ರಾಜಕೀಯ ದ್ರೋಣ ಎಂದು ಕರೆಯಲ್ಪಡುವ ಎಲ್.ಕೆ.ಅಡ್ವಾಣಿ ಅವರನ್ನು ಮೋದಿ ಸರಕಾರದ ಮಾರ್ಗದರ್ಶಕರ ಟೀಂನಲ್ಲಿ‌ ಸೇರಿಸಲಾಗಿತ್ತು. ಅಡ್ವಾಣಿ ಸೇರಿದಂತೆ ಮುರಳಿ ಮನೋಹರ ಜೋಶಿ ಅವರನ್ನೂ ಕಣಕ್ಕಿಳಿಸಲು ತಯಾರಿ ನಡೆಸಿದ ಮೋದಿ – ಷಾ ಈಗಾಗಲೇ ಅಡ್ವಾಣಿ ಅವರ ಬಳಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ೨೦೧೯ರ ಲೋಕಸಭಾ ಚುನಾವಣೆ ಬಹಳ ಪ್ರಮುಖ ಘಟ್ಟವಾಗಿದ್ದು, ಒಂದೆಡೆ ಮೋದಿ ಹವಾ ಇರುವುದರ ಬಗ್ಗೆ ಉತ್ತರ ಸಿಕ್ಕರೆ, ಮತ್ತೊಂದೆಡೆ ಮೋದಿ ವಿರೋಧಿಗಳೆಲ್ಲಾ ಒಗ್ಗಟ್ಟಾಗಿದ್ದರೂ ಕ್ಯಾರೇ ಅನ್ನದ ಕೇಂದ್ರ ಸರಕಾರದ ಘನತೆಯ ಪ್ರಶ್ನೆಯಾಗಿದೆ. ಆದ್ದರಿಂದ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಡ್ವಾಣಿ ಮತ್ತು ಮನೋಹರ ಜೋಶಿ ಅವರು ಹೆಚ್ಚು ರಾಜಕೀಯ ಅನುಭವ ಉಳ್ಳವರು ಆದ್ದರಿಂದ ಬಿಜೆಪಿಗೆ ವರದಾನವಾಗಲಿದ್ದು ಬಿಜೆಪಿ ಅಂದುಕೊಂಡಂತೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು. ‌ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರು ಮೋದಿ – ಷಾ ಮಾತಿಗೆ ಒಪ್ಪಿದ್ದೇ ಆದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಇಬ್ಬರೂ ಕಣಕ್ಕಿಳಿಯಲಿದ್ದಾರೆ..!

Related image

ವಯಸ್ಸಿನ ನಿರ್ಬಂಧ ಸಡಿಲಗೊಳಿಸಿದ ಬಿಜೆಪಿ..!

ಬಿಜೆಪಿ ತನ್ನ ಸಂಸದರು ಹಾಗೂ ಶಾಸಕರಿಗೆ ವಿಧಿಸಿದ್ದ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿಲು ನಿರ್ಧರಿಸಿದ್ದು, ಲೋಕಸಭಾ ಚುನಾವಣೆಗೆ ಅತೀ ಹೆಚ್ಚು ಹಿರಿಯರಿಗೆ ಮಣೆ ಹಾಕಲು ಮುಂದಾಗಿದೆ. ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೊಸ ಹೊಸ ಮುಖಗಳಿಗೆ ಅವಕಾಶ ಕೊಟ್ಟ ಭಾರತೀಯ ಜನತಾ ಪಕ್ಷ, ಇದೀಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅನುಭವಸ್ತರಿಗೆ ಅವಕಾಶ ನೀಡಲು ಮುಂದಾಗಿದ್ದು, ಬಿಜೆಪಿಯಲ್ಲಿ ಹಿರಿಯರಾಗಿರುವ ಅಡ್ವಾಣಿ ಮತ್ತು ಮನೋಹರ ಜೋಶಿ ಅವರಿಗೆ ಅವಕಾಶ ನೀಡುವುದು ಬಹುತೇಕ ಖಚಿತವಾಗಿದೆ. ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ಅವರು ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದ್ದರಿಂದ ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.

ಅದೇನೇ ಆದರೂ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮತ್ತೆ ವಿಜಯ ಪತಾಕೆ ಹಾರಿಸಲು ಈಗಿಂದಲೇ ತಯಾರಿ ನಡೆಸುತ್ತಿರುವ ಪ್ರಧಾನಿ ಮೋದಿ ಮತ್ತು ಟೀಂ ಸಕಲ ಸಿದ್ಧತೆಯೊಂದಿಗೆ ಭರ್ಜರಿಯಾಗಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ. ಮೋದಿ ಮತ್ತೆ ಬಹುಮತ ಸಾಧಿಸಿ ಪಟ್ಟ ಉಳಿಸಿಕೊಳ್ಳುತ್ತಾರಾ ಎಂಬುದು ೧೦೨೯ರ ಚುನಾವಣೆಯವರೆಗೂ ಕಾದು ನೋಡಬೇಕಾಗಿದೆ..!

–ಸಾರ್ಥಕ್

Tags

Related Articles

Close