ಪ್ರಚಲಿತ

ಮುಂದಿನ 7 ವರ್ಷಗಳಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ ಭಾರತ

ಭಾರತವನ್ನು ಮುಂದಿನ ದಿನಗಳಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಕನಸನ್ನು ಪ್ರಧಾನಿ ಮೋದಿ ಅವರು ಇರಿಸಿಕೊಂಡಿದ್ದಾರೆ. ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಭಾರತದ ಸರ್ವಾಂಗೀಣ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ.

ದೇಶದ ಆರ್ಥಿಕತೆಗೆ ಸಂಬಂಧಿಸಿದ ಹಾಗೆ ಕೇಂದ್ರ ಸರ್ಕಾರದ ಶ್ರಮಕ್ಕೆ ಫಲ ದೊರಕುವ ಎಲ್ಲಾ ಅವಕಾಶಗಳು ನಿಚ್ಚಳವಾಗಿವೆ. ಇದಕ್ಕೆ ಪುಷ್ಟಿ ನೀಡುವ ಅಂಶವೊಂದು ಇಲ್ಲಿದೆ.

2030 ರ ಹೊತ್ತಿಗೆ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಗುರುತಿಸಿಕೊಳ್ಳಲಿದೆ ಎಂದು ಎಸ್ ಆಂಡ್ ಪಿ ಗ್ಲೋಬಲ್ ರೇಟಿಂಗ್ಸ್ ತಿಳಿಸಿದೆ. ಪ್ರಸ್ತುತ ನಮ್ಮ ದೇಶವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಯುಎಸ್, ಚೀನಾ, ಜಪಾನ್, ಜರ್ಮನಿ ದೇಶಗಳು ಭಾರತಕ್ಕಿಂತ ಮೊದಲ ಶ್ರೇಣಿಯಲ್ಲಿ ಗುರುತಿಸಿಕೊಂಡಿವೆ.

ತನ್ನ ಗ್ಲೋಬಲ್ ಕ್ರೆಡಿಟ್‌ ಔಟ್‌ಲುಕ್ 2024ರಲ್ಲಿ 2026-27 ರ ಅವಧಿಯಲ್ಲಿ ಭಾರತದ ಆಂತರಿಕ ಉತ್ಪನ್ನ ಪ್ರಮಾಣ 7% ಗಳಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇರುವುದಾಗಿಯೂ ತಿಳಿಸಲಾಗಿದೆ. ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಮಾರುಕಟ್ಚೆಯಾಗಿ ಭಾರತ ಬೆಳೆಯುತ್ತಿರುವುದಾಗಿಯೂ ಇದು ಮಾಹಿತಿ ನೀಡಿದೆ.

ಮುಂದಿನ ಆರು ವರ್ಷಗಳಲ್ಲಿ ಭಾರತದ ಆರ್ಥಿಕತೆ‌ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆ ವಾಗುತ್ತದೆ. ಹಾಗೆಯೇ, ಮುಂದಿನ ಮೂರೇ ಮೂರು ವರ್ಷಗಳಲ್ಲಿ ಅತ್ಯಂತ ಕ್ಷಿಪ್ರವಾಗಿ ಬೆಳಯುವ ಆರ್ಥಿಕತೆಯಾಗಲಿದೆ ಎನ್ನುವ ಭವಿಷ್ಯವನ್ನು ಸಹ ಈ ರೇಟಿಂಗ್ಸ ತಿಳಿಸಿದೆ. ಸೇವಾ ಪ್ರಾಬಲ್ಯದ ಆರ್ಥಿಕತೆಗಗಳ ಕಾರಣದಿಂದ ಉತ್ಪಾದನಾ ಪ್ರಾಬಲ್ಯದ ಆರ್ಥಿಕತೆಯಾಗಿ ಬದಲಾಯಿಸುವಲ್ಲಿ‌ ಗಟ್ಟಿಯಾದ ಲಾಜಿಸ್ಟಿಕ್ ‌ಚೌಕಟ್ಚು ಮುಖ್ಯ ಎಂಬುದಾಗಿಯೂ ಈ ರೇಟಿಂಗ್ಸ್ ತಿಳಿಸಿದೆ.

Tags

Related Articles

Close