ಪ್ರಚಲಿತ

ಕತ್ತೆಗೂ ತಹಶೀಲ್ದಾರನಾಗುವ ಭಾಗ್ಯ!! ಪರೀಕ್ಷೆ ಬರೆಯಲು ತುದಿಗಾಲಿನಲ್ಲಿ ನಿಂತಿದೆ ಕಾಶ್ಮೀರದ ಕತ್ತೆ!!

ವಿದ್ಯಾವಂತರಾಗಬೇಕು ಎನ್ನುವ ಹಂಬಲವನ್ನು ಹೊತ್ತು ಕಷ್ಟಪಟ್ಟು ಓದಿ ಒಂದು ಒಳ್ಳೆಯ ಹುದ್ದೆಯನ್ನು ಗಿಟ್ಟಿಸಿಕೊಳ್ಳಲೇಬೇಕು ಎನ್ನುವ ಹಿತದೃಷ್ಟಿಯಿಂದ ಸರ್ಕಾರ ಉದ್ಯೋಗಗಳನ್ನೇ ಹರಸಿಕೊಂಡು ನಾನಾ ಪರೀಕ್ಷೆಗಳನ್ನು ಬರೆಯುತ್ತಾ ತನ್ನ ಕನಸನ್ನು ನನಸಾಗಿಸಲು ಪಡುವಪಾಡು ನಿಜಕ್ಕೂ ಕೂಡ ಬಲು ಕಷ್ಟಕರವಾದದ್ದಂತಹದ್ದು!! ಹೀಗಿರಬೇಕಾದರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೊದಲು ಅದರ ಪೂರ್ವಸಿದ್ಧತೆಯೇ ಬಲು ಜೋರಾಗಿರುತ್ತೆ. ಅದರಲ್ಲೂ ಪ್ರವೇಶ ಪತ್ರಕ್ಕಾಗಿ ಅಲೆದಾಡುವ ಪಾಡು ಯಾರಿಗೂ ಬೇಡವೇ ಬೇಡ ಎಂದೂ ಅನಿಸುವುದುಂಟು.

ಆದರೆ, ಮನುಷ್ಯರಿಗೆ ಪ್ರವೇಶ ಪತ್ರ ಸಿಗುವುದೇ ಕಷ್ಟಕರವಾಗಿರುವಾಗ ಪ್ರಾಣಿಗಳಿಗೆ ಪ್ರವೇಶ ಪತ್ರ ಸಿಗುತ್ತಿದೆ ಎಂದರೆ ನಂಬ್ತೀರಾ?? ಆದರೆ ಅದನ್ನು ನಂಬಲೇಬೇಕು!! ಭಾರತದ ಮುಕುಟ ಮಣಿಯಾಗಿರುವಂತಹ ಜಮ್ಮು ಕಾಶ್ಮೀರವು ಭಯೋತ್ಪಾದಕರ ಅಡಗು ತಾಣಗಳಲ್ಲಿ ಒಂದಾಗಿ ಹೋಗಿರುವ ವಿಚಾರ ತಿಳಿದೇ ಇದೆ!! ಅಷ್ಟೇ ಅಲ್ಲದೇ ಭಾರತದದಿಂದ ಜಮ್ಮು- ಕಾಶ್ಮೀರವನ್ನು ಬೇರ್ಪಡಿಸುವ ಪ್ರಯತ್ನ ನಡೆಯುತ್ತಲೇ ಇದ್ದು, ಉಗ್ರರ ಅಟ್ಟಹಾಸವು ಮಿತಿ ಮೀರಿ ಹೋಗಿದೆ!! ಸದಾ ಬೆನ್ನು ಬಿಡದೆ ಕಾಡುತ್ತಿರುವ ಕಾಶ್ಮೀರದ ಸಮಸ್ಯೆ ಭಾರತಕ್ಕೆ ಬಗೆ ಹರಿಯದ ತಲೆನೋವಾಗಿ ಕಾಡಿದೆ!!

ಇಂತಹ ಜಮ್ಮು ಕಾಶ್ಮೀರದಲ್ಲಿ ಒಂದು ಸಾಮಾನ್ಯ ಕತ್ತೆಯೂ ಸರ್ಕಾರಿ ಕೆಲಸಕ್ಕಾಗಿ ಹಪಾಹಪಿಸುತ್ತಿದೆ!! ಹೌದು……. ಕೆಲಸಕ್ಕೆ ಬಾರದ ವ್ಯಕ್ತಿಗಳನ್ನು ಕತ್ತೆಗೆ ಹೋಲಿಸುತ್ತೇವೆ. ಆದರೆ, ಕಾಶ್ಮೀರದಲ್ಲಿ ತಹಶೀಲ್ದಾರ್ ಹುದ್ದೆಗೆ ಪರೀಕ್ಷೆ ಬರೆಯಲು ಕತ್ತೆಯೊಂದಕ್ಕೆ ಹಾಲ್ ಟಿಕೆಟ್ ನೀಡಲಾಗಿದೆ. ಮನುಷ್ಯರಿಗೆ ಪರೀಕ್ಷೆ ಬರೆಯಲು ನೂರೊಂದು ದಾಖಲೆಗಳನ್ನು ಕೇಳುವ ಅಧಿಕಾರಿಗಳು ಇದೀಗ ಕತ್ತೆಗೆ ಅದ್ಯಾವ ದಾಖಲೆಯನ್ನು ಕೇಳಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆಯೋ ಗೊತ್ತಿಲ್ಲ. ಆದರೆ, ಕಾಶ್ಮೀರದಲ್ಲಿ ತಹಶೀಲ್ದಾರ್ ಹುದ್ದೆಗೆ ಪರೀಕ್ಷೆ ಬರೆಯಲು ಕತ್ತೆಯೊಂದಕ್ಕೆ ಹಾಲ್ ಟಿಕೆಟ್ ನೀಡಿರುವುದಂತೂ ಅಕ್ಷರಶಃ ನಿಜ.

ಹೌದು, ನಂಬಲಸಾಧ್ಯವಾದರೂ ಇದು ಸತ್ಯ ಸಂಗತಿ!! ಕುಚೇಷ್ಟೆಯ ಪರಮಾವಧಿ ಎಂಬಂತೆ ಜಮ್ಮು- ಕಾಶ್ಮೀರ ಸೇವಾ ಆಯ್ಕೆ ಮಂಡಳಿ ಕಚುರ್ ಖಾರ್ (ಕಂದು ಕತ್ತೆ)ಯ ಹೆಸರಿನಲ್ಲಿ ಪ್ರವೇಶ ಪತ್ರ ಹೊರಡಿಸಿದ್ದು ಇದೀಗ ಎಲ್ಲೆಡೆ ವೈರಲ್ ಆಗಿದೆ!! ಸಾಮಾನ್ಯವಾಗಿ ಮನುಷ್ಯರ ಪರೀಕ್ಷಾ ಪತ್ರಗಳು ಅದಲು ಬದಲಾಗುವುದನ್ನು ಕಂಡಿದ್ದೇವೆ. ಅಥವಾ ಪ್ರವೇಶ ಪತ್ರದಲ್ಲಿ ಸಾಕಷ್ಟು ತಪ್ಪುಗಳು ಇರುವುದನ್ನೂ ಕಂಡಿದ್ದೇವೆ. ಅಷ್ಟೇ ಯಾಕೆ?? ನೂರೊಂದು ದಾಖಲಾತಿಗಳನ್ನು ಕೇಳುವ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಕತ್ತೆಯೂ ಪರೀಕ್ಷೆ ಬರೆಯುತ್ತೆ ಎಂದರೆ ಅದು ನಿಜಕ್ಕೂ ಕೂಡ ಪರಮಾಶ್ಚರ್ಯ!!

ಆದರೆ ಕತ್ತೆಯ ಫೆÇೀಟೋ ಇರುವ ಹಾಲ್ ಟಿಕೆಟ್ ಇದೀಗ ಟ್ವೀಟರ್ ಮತ್ತು ಫೇಸ್‍ಬುಕ್‍ನಲ್ಲಿ ವೈರಲ್ ಆಗಿದೆ. ಅಂದಹಾಗೆ ಕತ್ತೆಯೂ ಇನ್ನುಮುಂದೆ ತಹಶೀಲ್ದಾರ್ ಆಗಲಿದೇಯೋ ಏನೋ ಗೊತ್ತಿಲ್ಲ!! ಆದರೆ ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಎರಡು ವರ್ಷದ ಹಿಂದೆ ಹಸುವೊಂದಕ್ಕೆ ಹಾಲ್ ಟಿಕೆಟ್ ನೀಡಿ ಜಮ್ಮು ಕಾಶ್ಮೀರ ಆಡಳಿತ ನಗೆಪಾಟಲಿಗೀಡಾಗಿತ್ತು. ಆದರೆ ಇದೀಗ ನೈಬ್ ತಹಶೀಲ್ದಾರ್ ನೇಮಕಾತಿ ಪರೀಕ್ಷೆ ಬರೆಯಲು ಕತ್ತೆಗೆ ಹಾಲ್ ಟಿಕೆಟ್ ನೀಡುವ ಮೂಲಕ ಮತ್ತೊಂದು ಬಾರಿ ನಗೆಪಾಟಲೀಗೆ ಗುರಿಯಾಗಿದೆ!!

ಅಷ್ಟೇ ಅಲ್ಲದೇ ಕತ್ತೆಯ ಪೋಟೋ ಇರುವ ಹಾಲ್ ಟಿಕೆಟ್ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದ ಬಳಕೆದಾರರು ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ!! 2015ರಲ್ಲಿ ಡಿಪ್ಲೋಮೋ ಇನ್ ಪಾಲಿಟೆಕ್‍ನಿಕ್ ಪರೀಕ್ಷೆ ಬರೆಯಲು ಹಸುವಿಗೆ ಹಾಲ್ ಟಿಕೆಟ್ ಬಿಒಪಿಇಇ(ಬೋರ್ಡ್ ಆಫ್ ಪ್ರೊಫೆಶನಲ್ ಎಂಟ್ರೆನ್ಸ್ ಎಕ್ಸಾಮಿನೇಷನ್) ನೀಡಲಾಗಿತ್ತು ಎನ್ನಲಾಗಿದೆ!!

ಅಂತೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದ್ದು, ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರಮಾದದ ಬಗ್ಗೆ ಅರಿವಿದ್ದರೂ ಅದನ್ನು ಸರಿಪಡಿಸಲಾಗದ ಅಧಿಕಾರಿಗಳ ವಿರುದ್ಧ ಟೀಕೆ ಮಾಡಿದ್ದಾರೆ!! ಒಟ್ಟಿನಲ್ಲಿ ಕಾಶ್ಮೀರದಲ್ಲಿ ಕತ್ತೆಗೂ ತಹಶೀಲ್ದಾರನಾಗುವ ಭಾಗ್ಯ ಇದೆ ಎಂಬುವುದನ್ನು ಈ ಮೂಲಕ ಅಧಿಕಾರಿಗಳು ನಿರೂಪಿಸಿದ್ದಾರೆ!!

ಮೂಲ: http://indianexpress.com/article/trending/trending-in-india/after-cow-donkey-issued-hall-ticket-to-write-exam-in-jammu-and-kashmir-5154224/

– ಅಲೋಖಾ

Tags

Related Articles

Close