ಪ್ರಚಲಿತ

ಕಾಶ್ಮೀರದಲ್ಲಿ ಆಪರೇಷನ್ ಆಲೌಟ್! ಕಣಿವೆ ರಾಜ್ಯಕ್ಕೆ ಕಾಲಿಟ್ಟಿವೆ ಬ್ಲ್ಯಾಕ್ ಕಮಾಂಡೋಗಳು! ಮೋದಿ ಸರ್ಕಾರದ ನಿರ್ಧಾರಕ್ಕೆ ದೇಶದ್ರೋಹಿಗಳು ಧಿಕ್ಕಾಪಾಲು..!

ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ. ಕಮಾಂಡೋಸ್). ಈ ಹೆಸರು ಕೇಳುವಾಗಲೇ ಜಮ್ಮು ಕಾಶ್ಮೀರದಲ್ಲಿರುವ ಪ್ರತ್ಯೇಕವಾದಿಗಳು ಹಾಗೂ ಪಾಕಿಸ್ಥಾನಿ ಉಗ್ರರು ಬೆವರುತ್ತಾರೆ. ಕಪ್ಪು ಬಟ್ಟೆಯ ಸೈನಿಕರು ಬರ್ತಾರೆಂದರೆ ಈ ದೇಶದ್ರೋಹಿಗಳ ಅಟ್ಟಹಾಸ ಕೊನೆಗೊಳ್ಳುತ್ತದೆ. ತನ್ನದೇ ಆದ ತಂತ್ರಗಾರಿಕೆಯಿಂದ ವಿರೋಧಿಗಳನ್ನು ಮಟ್ಟ ಹಾಕುವ ಈ ಕಮಾಂಡೋಗಳು ಇದೀಗ ಜಮ್ಮು ಕಾಶ್ಮೀರಕ್ಕೆ ಲಗ್ಗೆ ಇಟ್ಟಿವೆ.

ದೇಶದ ಭದ್ರತಾ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಭಾರತೀಯ ಜನತಾ ಪಕ್ಷ ಜಮ್ಮು-ಕಾಶ್ಮೀರದ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದಿತ್ತು. ಈ ಮೂಲಕ 3 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಪಿಡಿಪಿ ಪಕ್ಷದ ನಾಯಕಿ ಮೆಹಬೂಬ ಮುಫ್ತಿ ರಾಜೀನಾಮೆ ನೀಡುವಂತಾಯಿತು. ನಂತರ ಜಮ್ಮು ಕಾಶ್ಮೀರದಲ್ಲಿ ಯಾವೊಬ್ಬನೂ ಸರ್ಕಾರ ರಚಿಸಲು ಮುಂದಾಗದ ಕಾರಣ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿದೆ.

ಯಾವಾಗ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂತೋ ಅಂದಿನಿಂದ ಕಣಿವೆ ರಾಜ್ಯದ ಚಿತ್ರಣವೇ ಬದಲಾಗಿ ಹೋಗಿದೆ. ರಾಜ್ಯಪಾಲರು ಅಧಿಕಾರ ವಹಿಸಿದ ಮರುದಿನವೇ ಆವರೆಗೆ ನಾಯಕರಾಗಿ ಬಿಂಬಿಸಿಕೊಳ್ಳುತ್ತಿದ್ದ ಪ್ರತ್ಯೇಕವಾದಿ ನಾಯಕರೆಲ್ಲಾ ಜೈಲು ಪಾಲಾಗಿದ್ದರು. ಯಾಸಿನ್ ಮಲ್ಲಿಕ್, ಉಮರ್ ಫಾರೂಕ್, ಹಿಲಲ್ ವಾರ್ ಸೇರಿದಂತೆ ಪ್ರತ್ಯೇಕವಾದಿ ನಾಯಕರನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದರು. ಅಂದಿನವರೆಗೂ ಪಿಡಿಪಿ ಸರ್ಕಾರದ ಕೃಪಾ ಕಟಾಕ್ಷದಿಂದ ಮೆರೆಯುತ್ತಿದ್ದ ನಾಯಕರೆಲ್ಲಾ, ಸರ್ಕಾರ ಬಿದ್ದ ಎರಡೇ ದಿನದಲ್ಲಿ ಪೊಲೀಸ್ ನೆಂಟರಾಗಿದ್ದಾರೆ.

ಇತ್ತ ಪೊಲೀಸರ ಆಟ ಶುರುವಾಗಿದ್ದರೆ ಅತ್ತ ಗಡಿಯಲ್ಲಿ ಸೈನಿಕರ ಆಟವೂ ಭಜಧರಿಯಾಗಿ ನಡೆಯುತ್ತಿತ್ತು. ಗುಂಡಿನ ಸುರಿಮಳೆ ಗೈಯುವ ಮೂಲಕ ಪಾಕಿಸ್ಥಾನಿ ಉಗ್ರರನ್ನು ಹೆಡೆಮುರಿ ಕಟ್ಟಿ ಬಿಸಾಕಿದ್ದರು. ಪಾಕ್ ಉಗ್ರರು ಅಡಗಿ ಕುಂತಿದ್ದ ಮನೆಯನ್ನೇ ಉಡೀಸ್ ಮಾಡಿ ಬಿಟ್ಟಿದ್ದರು. ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ಕೂಡಲೇ ತಮ್ಮ ಆಟವನ್ನು ಶುರುವಿಟ್ಟುಕೊಂಡಿದ್ದಾರೆ.

ಇದೀಗ ಮತ್ತೆ ದೇಶದ್ರೋಹಿಗಳಿಗೆ ನಡುಕ ಹುಟ್ಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಸಜ್ಜಾಗಿದೆ. ಇದರ ಮೊದಲ ಹಂತವಾಗಿ ಜಮ್ಮು-ಕಾಶ್ಮೀರಕ್ಕೆ ದೇಶದ ಅತ್ಯಂತ ಉನ್ನತ ಭದ್ರತಾ ಪಡೆಯಾದ ರಾಷ್ಟ್ರೀಯ ಭದ್ರತಾ ಪಡೆಯನ್ನು ಕಾಶ್ಮೀರಕ್ಕೆ ನೇಮಿಸಿದೆ. ಈ ಮೂಲಕ ಮುಂಬರುವ ಯಾವುದೇ ದುಷ್ಕ್ರತ್ಯಗಳನ್ನು ಎದುರಿಸಲು ಸೈನ್ಯ ಸಮರ್ಥವಾಗಿದೆ ಎಂಬುವುದನ್ನು ಮೋದಿ ಸರ್ಕಾರ ಸಾಭೀತುಪಡಿಸಲು ಮುಂದಾಗಿದೆ.

ಇನ್ನೇನು ಅಮರನಾಥ ಯಾತ್ರೆಯೂ ಆರಂಭವಾಗಲಿದೆ. ಈ ಯಾತ್ರೆಗೆ ಕಳೆದ ಬಾರಿ ಉಗ್ರರ ಕರಿ ನೆರಳು ಬಿದ್ದಿತ್ತು. ಆದರೆ ಈ ಬಾರಿ ಉಗ್ರರ ನೆರಳು ಯಾವುದೇ ಕಾರಣಕ್ಕೂ ಬೀಳಕೂಡದು ಎಂಬ ಖಡಕ್ ಆದೇಶವನ್ನು ಸರ್ಕಾರ ನೀಡಿದೆ. ಅಮರನಾಥ ಯಾತ್ರೆಗೆ ಯಾವುದೇ ಅಪಾಯವಾಗಬಾರದು. ಉಗ್ರರು ನುಸುಳಲು ಪ್ರಯತ್ನಿಸಿದ್ದರೆ ವರನ್ನು ಗುಂಡಿಟ್ಟು ಕೊಲ್ಲಬೇಕು. ಪ್ರತ್ಯೇಕವಾದಿಗಳನ್ನೂ ಮಟ್ಟಹಾಕಿ ಎಂದು ಕೇಂದ್ರ ಸರ್ಕಾರ ಆರ್ಡರ್ ಮಾಡಿದೆ. ಹೀಗಾಗಿ ಇನ್ನು ಜಮ್ಮು ಕಾಶ್ಮೀರದಲ್ಲಿ ನಡೆಯುವ ಎಲ್ಲಾ ಚಲನವಲನಗಳ ಮೇಲೆ ರಾಷ್ಟ್ರೀಯ ಭದ್ರತಾ ಪಡೆ ಹದ್ದಿ ಕಣ್ಣಿಡಲಿದೆ.

ಎನ್.ಎಸ್.ಜಿ.ಯಾಕೆ ಪವರ್ ಫುಲ್..?

ರಾಷ್ಟ್ರೀಯ ಭದ್ರತಾ ಪಡೆಗಳು ಅತ್ಯಂತ ಶಕ್ತಿ ಶಾಲಿಯಾದ ಭದ್ರತಾ ಪಡೆಗಳಾಗಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸುವ ಜವಾನರಲ್ಲಿ ಕೆಲವೇ ಸೈನಿಕರನ್ನು ಆಯ್ದು ರಾಷ್ಟ್ರೀಯ ಭದ್ರತಾ ಪಡೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸೈನ್ಯದಲ್ಲಿದ್ದ ಸೈನಿಕರ ಉತ್ತಮ ದೇಹದಾಡ್ರ್ಯವನ್ನು ಪರಿಗಣಿಸಿ ಅವರಿಗೆ 90 ದಿನಗಳ ವಿಶೇಷ ತರಭೇತಿ ನೀಡಿ ಅದರಲ್ಲಿ ಯಶಸ್ವಿಯಾದವರನ್ನು ರಾಷ್ಟ್ರೀಯ ಭದ್ರತಾ ಪಡೆಗೆ ನೇಮಿಸಲಾಗುತ್ತದೆ. ಯಾವುದೇ ತುರ್ತು ಸಂದರ್ಭದಲ್ಲಿ ಈ ಪಡೆ ಕಾರ್ಯಪ್ರವೃತ್ತವಾಗುತ್ತದೆ. ಇದರಲ್ಲಿ 25 ವರ್ಷದಿಂದ 35 ವರ್ಷದ ವಯಸ್ಸಿನ ಯುವಕರು ಮಾತ್ರವೇ ಸೇವೆ ಅಲ್ಲಿಸಲು ಸಾಧ್ಯ. 5 ವರ್ಷ ಈ ಪಡೆಯಲ್ಲಿ ಸೇವೆ ಸಲ್ಲಿಸಬಹುದಾಗಿದೆ.

ಪ್ರಧಾನ ಮಂತ್ರಿ, ರಾಷ್ಟ್ರಪತಿ ಸಹಿತ ಪ್ರಮುಖ ರಾಜಕಾರಣಿಗಳಿಗೆ ಭದ್ರತಾ ಜವಬ್ಧಾರಿಯನ್ನು ಕೂಡಾ ನೀಡೋದು ಇದೇ ರಾಷ್ಟ್ರೀಯ ಭದ್ರತಾ ಪಡೆಗಳು. ಕಳೆದ ಬಾರಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿದ್ದ ಅಂದಿನ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮರಿಗೂ ಭದ್ರತೆಯನ್ನು ನೀಡಿದ್ದು ಇದೇ ರಾಷ್ಟ್ರೀಯ ಭದ್ರತಾ ಪಡೆಗಳು. ಇದೀಗ ಜಗತ್ತಿನಲ್ಲೇ ಅತಿ ಹೆಚ್ಚು ಉಗ್ರರ ಬೆದರಿಕೆಯನ್ನು ಎದುರಿಸುತ್ತಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಗೂ ಭದ್ರತೆ ನೀಡೋದೂ ಇದೇ ರಾಷ್ಟ್ರೀಯ ಭದ್ರತಾ ಪಡೆಗಳು.

ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಫೀಲ್ಡಿಗಿಳಿದರೆ ಈ ಭದ್ರತಾ ಪಡೆಗಳ ಕೋಟೆಗೆ ಒಂದು ಇರುವೇ ಕೂಡಾ ಒಳನುಗ್ಗಲು ಸಾಧ್ಯವಿಲ್ಲ. ಅಂತಹಾ ಭದ್ರತೆಯನ್ನು ನೀಡೋದ್ರಲ್ಲಿ ಈ ರಾಷ್ಟ್ರೀಯ ಭದ್ರತಾ ಪಡೆಗಳು ಎತ್ತಿದ ಕೈ. ಈ ಪಡೆಗಳನ್ನು ಇದೀಗ ಜಮ್ಮು ಕಾಶ್ಮೀರದ ಭದ್ರತೆಗೆ ನೇಮಿಸಿದ್ದು ಉಗ್ರರು ಹಾಗೂ ಪ್ರತ್ಯೇಕವಾದಿಗಳಿಗೆ ನಡುಕ ಹುಟ್ಟಿಸಿದೆ.

ಉಗ್ರ ಸಂಹಾರಕ್ಕೆ 4 ಸೂತ್ರಗಳು…

ಇನ್ನು ಉಗ್ರರ ದಾಳಿಗಳನ್ನು ತಪ್ಪಿಸಲು ಹಾಗೂ ಗಡಿ ನುಸುಳುವ ಪಾಕ್ ಪ್ರೇರಿತ ಉಗ್ರರನ್ನು ಮಟ್ಟಹಾಕಲು ಪ್ರಮುಖ 4 ಸೂತ್ರಗಳನ್ನು ಬಳಸಲು ಚಿಂತಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಈ ಸೂತ್ರಗಳು ಇದೀಗ ವಿದ್ರೋಹಿಗಳ ಕಣ್ಣು ಕುಕ್ಕುವಂತೆ ಮಾಡುತ್ತಿವೆ. ಆ 4 ಸೂತ್ರಗಳು ಯಾವುದೆಂದರೆ,

1.ಉಗ್ರರ ಬಗ್ಗೆ ಯಾವುದೇ ಕಾಳಜಿ ತೋರುವಂತಿಲ್ಲ.

2.ಸ್ಥಳೀಯರ ಜೊತೆ ಉತ್ತಮ ಭಾಂದವ್ಯ ಹೊಂದುವುದು.

3.ವ್ಯಾಪಾರಿಗಳು ಉಧ್ಯಮಿಗಳ ಜೊತೆ ಸಂಪರ್ಕ ಸಾಧಿಸುವುದು.

4.ಅಭಿವೃದ್ಧಿ ಕಾಮಗಾರಿಗಳ ಮೂಲಕ ಬದಲಾವಣೆ ತರುವುದು.

ಈ ಹಿಂದೆ ಕಾಶ್ಮೀರದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ಹೊರಟರೆ ಪ್ರತ್ಯೇಕವಾದಿಗಳು ಗುರ್ ಎನ್ನುತ್ತಿದ್ದವು. ಆದರೆ ಇನ್ನು ಮುಂದೆ ಹಾಗೆ ಹಾಗೆ ಮಾಡುವ ಪ್ರಶ್ನೆಯೇ ಇಲ್ಲ. ರಾಷ್ಟ್ರಪತಿ ಆಳ್ವಿಕೆಯ ಮೂಲಕ ನೇರವಾಗಿ ಎಲ್ಲಾ ಅಭಿವೃದ್ಧಿಗಳನ್ನೂ ಕೇಂದ್ರ ಸರ್ಕಾರವೇ ಮಾಡಲಿದೆ.

ಇದೀಗ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಜಮ್ಮು ಕಾಶ್ಮೀರದಲ್ಲಿ ಎಲ್ಲವೂ ಸೈನಿಕರ ಹಗೂ ಪೊಲೀಸರ ಬೂಟ್‍ಗಳದ್ದೇ ಸದ್ದು. ಈ ಬಾರಿ ಖತರ್ನಾಕ್ ಬುದ್ದಿಯನ್ನು ಪ್ರದರ್ಶಿಸಿದ್ದೇ ಆದಲ್ಲಿ ಉಡೀಸ್ ಆಗೊದ್ರಲ್ಲಿ ನೋ ಡೌಟ್…

-ಸುನಿಲ್ ಪಣಪಿಲ

Tags

Related Articles

Close