ಪ್ರಚಲಿತ

ಶ್ರೀರಾಮ ಮಂದಿರ ಲೋಕಾರ್ಪಣೆಯಂದು ಅಯೋಧ್ಯೆಯಲ್ಲಿ ಮೊಳಗಲಿದೆ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’

ಪ್ರಭು ಶ್ರೀರಾಮನನ್ನು ಅಯೋಧ್ಯೆಯ ಆತನ ಜನ್ಮಭೂಮಿಯ ಪುಣ್ಯ ಕ್ಷೇತ್ರದಲ್ಲಿ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಜನರು ಕಾತರದಿಂದ ಕಾಯುತ್ತಿದ್ದಾರೆ. ಭಾರತದ ಬಹುಕೋಟಿ ಜನರು ಹಲವಾರು ವರ್ಷದಿಂದ ಶಬರಿಯ ಹಾಗೆ ಶ್ರೀರಾಮನನ್ನು ಕಾಣಲು ಹಂಬಲಿಸುತ್ತಿದ್ದು, ಕೊನೆಗೂ ಅವರೆಲ್ಲರ ಆಸೆ ಈಡೇರುವ ಪುಣ್ಯ ಸಮಯ ಸನ್ನಿಹಿತವಾಗುತ್ತಿದೆ.

ಅದರೊಂದಿಗೆ ಕನ್ನಡಿಗರಿಗೆ ಸಂಭ್ರಮವನ್ನು ಹೆಚ್ಚಿಸುವ ಮತ್ತೊಂದು ವಿಚಾರವಿದೆ. ಕನ್ನಡಿಗರೋರ್ವರು ರಚನೆ ಮಾಡಿರುವ ಶ್ರೀರಾಮನ ಹಾಡೊಂದನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೆಗೆದುಕೊಂಡಿದ್ದು, ಇದನ್ನು ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಪ್ರಸಾರ ಮಾಡುವುದಾಗಿ ತಿಳಿಸಿದೆ.

ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ಅಯೋಧ್ಯೆಯಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿವೆ. ಜನವರಿ 22 ರಂದು ಪ್ರಭು ಶ್ರೀರಾಮನು ಮಂದಿರದ ಗರ್ಭ ಗುಡಿಯಲ್ಲಿ ವಿರಾಜಮಾನನಾಗುವ ಸಮಯದಲ್ಲಿ, ಉತ್ತರ ಕನ್ನಡದ ಹೊನ್ನಾವರ ಮೂಲದ, ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಡಾ. ಗಜಾನನ ಶರ್ಮ ಅವರು ರಚಿಸಿರುವ ಶ್ರೀರಾಮ ಗೀತೆ ಪ್ರಸಾರವಾಗಲಿದೆ. ಡಾ. ಗಜಾನನ ಶರ್ಮ ಅವರು ರಚಿಸಿದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಗೀತೆಯನ್ನು ಪ್ರಾಣ ಪ್ರತಿಷ್ಠೆಯ ಸಮಯದಲ್ಲಿ ಪ್ರಸಾರ ಮಾಡುವುದಾಗಿ ಟ್ರಸ್ಟ್ ಹೇಳಿದೆ.

ಈ‌ಸಂಬಂಧ ಅಯೋಧ್ಯೆ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕವೂ ದೃಫಡಿಸಿದೆ. ಗೀತಾ ರಚನೆಕಾರ ಡಾ. ಗಜಾನನ ಶರ್ಮ ಅವರೂ ಈ ಬಗ್ಗೆ ಮಾತನಾಡಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನವರು ನನ್ನ ಹಾಡನ್ನು ಆಯ್ಕೆ ಮಾಡಿರುವುದಕ್ಕೆ ಅತೀವ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.

ಡಾ‌. ಗಜಾನನ ಶರ್ಮ ಅವರು ರಾಮ ಕಥಾ ಮೂಲಕವೇ ದೇಶಕ್ಕೆ ಪರಿಚಿತರಾಗಿದ್ದಾರೆ. ಈ ಹಾಡನ್ನು ‘ಎ ದಿಲ್ ಮಾಂಗೇ ಮೋರ್’ ಎಂದು ತಂಪು ಪಾನೀಯದಲ್ಲಿ ಬರೆದಿದ್ದ ಜಾಹೀರಾತು ಇವರಿಗೆ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ರಚನೆ ಮಾಡಲು ಪ್ರೇರಣೆ ಅಂದು ಅವರೇ ಹೇಳಿಕೊಂಡಿದ್ದಾರೆ. ಕಾರ್ಯ ನಿಮಿತ್ತ ಕೇರಳಕ್ಕೆ ತೆರಳಿದ್ದಾಗ ತಂಪು ಪಾನೀಯದ ಬಾಟಲಿ ಮೇಲೆ ಬರೆದಿದ್ದ ವಾಕ್ಯಗಳು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡಿನ ಸೃಷ್ಟಿಗೆ ಕಾರಣ.

ಒಟ್ಟಿನಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ಕನ್ನಡಿಗರಿಗೆ ಹಲವು ವಿಷಯಗಳಲ್ಲಿ ನಂಟಿದ್ದು, ಸದ್ಯ ಕನ್ನಡದ ಹಾಡಿಗೂ ಶ್ರೀರಾಮ ಪ್ರತಿಷ್ಠಾ ದಿನದಂದು ಮೊಳಗುವ ಭಾಗ್ಯ ದೊರಕಿರುವುದು ಅದೃಷ್ಟವೇ ಸರಿ.

Tags

Related Articles

Close